DKD Gif

Shatayu

adweb

Raambo 2 gIF

ಕಷ್ಟಪಟ್ಟು ರೋಚಕತೆ ಉಳಿಸಿಕೊಂಡ 'ವೆನಿಲ್ಲಾ' - ಚಿತ್ರ ವಿಮರ್ಶೆ

ಮರ್ಡರ್‌ ಮಿಸ್ಟರಿ ಸಿನಿಮಾಗಳಿಗೆ ರೋಚಕತೆ ಬಹಳ ಮುಖ್ಯ, ಅದಿದ್ದರೆ ಮಾತ್ರ ಪ್ರೇಕ್ಷಕರು ಸಿನಿಮಾವನ್ನು ನೋಡುತ್ತಾರೆ. ಈ ವಾರ ಬಿಡುಗಡೆಯಾಗಿರುವ ವೆನಿಲ್ಲಾ ಚಿತ್ರ ಕೂಡಾ ಮರ್ಡರ್‌ ಮಿಸ್ಟರಿ ಆದರೆ, ರೋಚಕತೆಯನ್ನು ಉಳಿಸಿಕೊಳ್ಳುವಲ್ಲಿ ನಿರ್ದೇಶಕ ಜಯತೀರ್ಥ ಕೊಂಚ ಸೋತಿದ್ದಾರೆ.
.
ಒಂದು ಕೊಲೆ ನಾಯಕ ಮತ್ತು ನಾಯಕಿಗೆ ಸುತ್ತಿಕೊಳ್ಳುತ್ತದೆ. ಈ ಸಮಯದಲ್ಲಿ ನಾಯಕಿ ದೇಶ ಬಿಟ್ಟು ಹೊರಡುತ್ತಾಳೆ. ಅದು ನಾಯಕನಿಗೆ ತಿಳಿಯುವುದಿಲ್ಲ, ಆದರೆ ಪೊಲೀಸರು ಆ ಕೊಲೆಯ ಹಿಂದೆ ಬಿದ್ದು, ಅದಕ್ಕೂ ನಾಯಕನಿಗೂ ಲಿಂಕ್‌ ಇದೆ ಎಂದು ತಿಳಿದು ಅವನ ಹಿಂದೆ ಬೀಳುತ್ತಾರೆ. ಹೀಗೆ ಒಂದು ಕೊಲೆಯನ್ನು ತನಿಖೆ ಮಾಡಲು ಹೊರಟ ಪೊಲೀಸರಿಗೆ ಮತ್ತೆರೆಡು ಕೊಲೆಗಳು ತಿಳಿಯುತ್ತವೆ. ಕೊಲೆಗಳ ಸುತ್ತ ಹೆಣೆಯುವ ಸಸ್ಪೆನ್ಸ್‌ ಕಥೆಯನ್ನು ಸಮಾಜದಲ್ಲಿ ಸಭ್ಯತೆಯ ಪೋಷಾಕು ತೊಟ್ಟು ಜನರನ್ನು ವಂಚಿಸಿ ಲಾಭಮಾಡಿಕೊಳ್ಳುವವರ ಕಥೆ ಜತೆ ಹೇಳಿದ್ದಾರೆ ನಿರ್ದೇಶಕ ಜಯತೀರ್ಥ.
.
ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್‌ ಕಥೆಗಳು ಸಾಧಾರಣವಾಗಿದ್ದರೂ, ಬಿಗಿಯಾದ ನಿರೂಪಣೆಯಿಂದ ಗಮನ ಸೆಳೆಯುತ್ತವೆ. ಅಲ್ಲದೆ, ಇಂತಹ ಕಥೆಯಲ್ಲಿ ಜನ ಒಬ್ಬರ ಮೇಲೆ ಅನುಮಾನ ಬರುವಂತೆ ಮಾಡಿದ್ರೆ, ಅದು ಯಶಸ್ವಿಯಾಗುತ್ತದೆ. ನಿರ್ದೇಶಕರು ಸಿನಿಮಾದಲ್ಲಿ ಸಾಕಷ್ಟು ಜನರ ಮೇಲೆ ಅನುಮಾನ ಮೂಡುವಂತಹ ದೃಶ್ಯಗಳನ್ನು ಪೋಣಿಸಿ, ಒಂದಷ್ಟು ಕನ್‌ಫ್ಯೂಸ್‌ ಮಾಡಿದ್ದಾರೆ.
.
ಈ ಕನ್‌ಫ್ಯೂಸ್‌ನಿಂದಾಗಿ ಸೀಟಿನ ತುದಿಗೆ ಕುಳಿತುಕೊಳ್ಳಬೇಕಾಗಿದ್ದ ಜನ, ಆರಾಮಾಗಿ ಕುಳಿತು ಸಿನಿಮಾ ನೋಡುತ್ತಾರೆ. ಚಿತ್ರದ ಮೊದಲರ್ಧ ಸಪ್ಪೆ ಎನಿಸುತ್ತದೆ, ದ್ವಿತೀಯಾರ್ಧದ ಕೊನೆಯ 30 ನಿಮಿಷ ಚಿತ್ರದ ಜೀವಾಳ. ಥ್ರಿಲ್ಲರ್‌ ಚಿತ್ರಗಳಿಗೆ ಬ್ಯಾಗ್ರೌಂಡ್‌ ಮ್ಯೂಸಿಕ್‌ ಬಹಳ ಮುಖ್ಯವಾಗುತ್ತದೆ. ಆದರೆ ವೆನಿಲ್ಲಾದಲ್ಲಿ ಅದು ಸಾಧಾರಣ ಎನಿಸುತ್ತದೆ. ಈ ಹಿಂದೆ ಗಮನ ಸೆಳೆದಿದ್ದ, ಬಿ ಜೆ ಭರತ್‌ ಇಲ್ಲಿ ಕೊಂಚ ನೀರಸ ಎನಿಸುತ್ತಾರೆ.
.
ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕರು ಎಡವಿದ್ದಾರೆ. 2-3 ಪಾತ್ರಗಳನ್ನು ಬಿಟ್ಟರೆ ಬಹುಕೇತ ಹೊಸಬರೆ ಇರೋದ್ರಿಂದ ಅಭಿನಯದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ.
ಸಿನಿಮಾದಲ್ಲಿ ಪೊಲೀಸರು ಬಹಳ ಬೇಜವಬ್ದಾರಿಯಿಂದ ವರ್ತನೆ ಮಾಡುತ್ತಾರೆ. ನಾಯಕ ಅವಿನಾಶ್‌ ತಮ್ಮ ಮೊದಲ ಪ್ರಯತ್ನವನ್ನು ಸ್ವಲ್ಪ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಅವರ ಅಭಿನಯ ಇನ್ನಷ್ಟು ಮಾಗಬೇಕಿದೆ. ನಾಯಕಿ ಸ್ವಾತಿ ಕೊಂಡೆ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳು ಯಾವು ಇಲ್ಲ.
.
'ವೆನಿಲ್ಲಾ' ಎಂದರೇನು ಎಂಬುದು ತಿಳಿಯುವುದಕ್ಕೆ ನೀವು ಸಿನಿಮಾ ನೋಡಬೇಕು. ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ. ಅದನ್ನು ಕಮರ್ಷಿಯಲ್ ಚಿತ್ರದಲ್ಲಿ ಹೇಳೊ ಪ್ರಯತ್ನ ಮಾಡಿರುವ ಜಯತೀರ್ಥ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು.
.
ಒಟ್ಟಿನಲ್ಲಿ ಚಿತ್ರಕಥೆಯಲ್ಲಿ ಮತ್ತಷ್ಟು ಶ್ರಮ ಹಾಕಿದ್ದರೆ, ಈ ಚಿತ್ರ ರೋಚಕ ಮರ್ಡರ್ ಮಿಸ್ಟರಿ ಸಿನಿಮಾವಾಗುತ್ತಿತ್ತು,ಆದರೂ ಒಮ್ಮೆ ನೋಡಲಡ್ಡಿಯಿಲ್ಲ.
ರೇಟಿಂಗ್ - 2.75/5
#Vanilla #Cineloka
Rate this item
(0 votes)
Login to post comments

Amma Gif Running S

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top