nata

ttm

adweb

udgharsha

"ಕೆಲವು ದಿನಗಳ ನಂತರ" ಬಂದ ಹಾರರ್ ಸಿನಿಮಾ :

ಈಗಿನ ಕಾಲದ ಯುವಕರು ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ನಿರ್ದೇಶಕ ಶ್ರೀನಿ ಸಿನಿಮಾಡಿ ಅದಕ್ಕೆ "ಕೆಲವು ದಿನಗಳ ನಂತರ" ಎಂದು ಹೆಸರಿಟ್ಟಿದ್ದಾರೆ. ಇದು ಹಾರರ್ ಥ್ರಿಲ್ಲರ್‌ ಸಿನಿಮಾವಾಗಿದೆ.
.
ಇಂದಿನ ಕಾಲದ ಹುಡುಗರು ಅನುಭವಿಸುತ್ತಿರುವ ಕಷ್ಟಗಳಿಗೆ ಅವರೇ ಮಾಡಿಕೊಂಡಿರುವ ತಪ್ಪುಗಳು ಕಾರಣ ಎನ್ನುವುದನ್ನು ಈ ಸಿನಿಮಾ ಹೇಳುತ್ತದೆ. ಈ ಚಿತ್ರದಲ್ಲಿ ನಟಿ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
.
ಬೆಂಗಳೂರು,ಚಿಕ್ಕಮಗಳೂರು, ಸಾವನದುರ್ಗದಲ್ಲಿ ಚಿತ್ರೀಕರಣ ನಡೆದಿರುವ ಈ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೊಕೇಶ್‌ ನಟಿಸಿದ್ದಾರೆ. ಜಗದೀಶ್‌ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸೋನುಪಾಟೀಲ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇಲ್ಲಿ ಕಥೆಯೇ ಹೀರೋ ಮತ್ತು ಹಿರೋಯಿನ್‌ ಎನ್ನುತ್ತಾರೆ ಅವರು.
.
ಎಚ್‌.ಪಿ. ಮುತ್ತುರಾಜ,ಬಿ.ಎಂ. ವಸಂತ್‌ ಕುರ್ಮಾ ಹಾಗೂ ಚಂದ್ರಕುಮಾರ್‌ ಈಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುರಳೀಧರ್‌ ಹಾಗೂ ನವೀನ್‌ ಕುಮಾರ್‌ ಸಿನಿಮಾಟೋಗ್ರಫರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಆರು ತಿಂಗಳ ಮಗುವೊಂದನ್ನು 3ಡಿ ಮೂಲಕ ಚಿತ್ರಿಸಲಾಗಿದೆ.
.
ಚಿತ್ರವು ಇದೆ ಜೂನ್ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
#KelavuDinagalaNantara #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top