DKD Gif

6ne maili release gif

adweb

Raambo 2 gIF

“ ಜೂನ್ 24 ಭಾನುವಾರ ಸಂಜೆ 6 ಕ್ಕೆ ಕಾಮಿಡಿ ಕಿಲಾಡಿಗಳು ಸೀಸನ್ 2 ಗ್ರ್ಯಾಂಡ್ ಫಿನಾಲೆ ”

 

ಕನ್ನಡ ದೃಶ್ಯ ಮಾಧ್ಯಮದಲ್ಲಿ ಜೀ ಕನ್ನಡ ವಾಹಿನಿಯು ಇಲ್ಲಿಯವರೆಗೂ ರಿಯಾಲಿಟಿ ಶೋಗಳ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ, ಸಾಮಾಜಿಕ ಬದ್ದತೆಯನ್ನು ಏಕಕಾಲಕ್ಕೆ ಉಳಿಸಿಕೊಳ್ಳುತ್ತಾ ಹೆಜ್ಜೆ ಹಾಕುತ್ತಿದೆ. ಹೀಗೆ ಆರಂಭವಾದ ಕಾರ್ಯಕ್ರಮಗಳಲ್ಲಿ “ಸರಿಗಮಪ, ಡ್ರಾಮಾ ಜ್ಯೂನಿಯರ್ಸ್, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಿಲಾಡಿ ಕುಟುಂಬ” ಪ್ರಮುಖ ಕಾರ್ಯಕ್ರಮಗಳಾಗಿ ರೂಪುಗೊಂಡು ಅದ್ಭುತ ಯಶಸ್ಸನ್ನು ಕಂಡಿವೆ.
.

ವಾಹಿನಿಯ ಈ ಕಾರ್ಯಕ್ರಮಗಳಲ್ಲಿ ಹಾಸ್ಯಕ್ಕೆ ಮನೆಮಾತಾದ ಮತ್ತು ಅತಿ ಹೆಚ್ಚು ಜನಮನ್ನಣೆ ಗಳಿಸಿದ “ಕಾಮಿಡಿ ಕಿಲಾಡಿಗಳು sಸೀಸನ್ 2” ಫಿನಾಲೆ ಕಳೆದ “ಭಾನುವಾರ ದಿನಾಂಕ 17.06.2018 ರಂದು ವಿಜಯಪುರದ ಡಾ: ಬಿ,ಆರ್ ಅಂಬೇಡ್ಕರ್ ಕ್ರೀಡಾಂಗಣ” ದಲ್ಲಿ ಸಾವಿರಾಕ್ಕು ಹೆಚ್ಚು ನೆರೆದಂತ ವೀಕ್ಷಕರಿಗೆ ತಮ್ಮ ಎಂಟ್ರಿ ಡ್ಯಾನ್ಸ್ ಮೂಲಕ ರಂಜಿಸಿದ ನಿರೂಪಕ ಮಾಸ್ಟರ್ ಆನಂದ್ ಹಾಗು ತ್ರಿವಳಿ ಜೆಡ್ಜಸ್ ಜಗ್ಗೇಶ್, ರಕ್ಷಿತ ಹಾಗು ನಿರ್ದೇಶಕ ಯೋಗರಾಜ್ ಭಟ್‍ರವರು ತಮ್ಮ ಕಾವ್ಯಶೈಲಿಯ ಮಾತುಗಳಿಂದ ಅಲ್ಲಿನ ಕಲೆ, ಸಂಸ್ಕøತಿ, ಮತ್ತು ಕಲಾವಿದರುಗಳಿಗೆ ಆ ಮಣ್ಣಿನಲ್ಲಿ ಸಿಗುತ್ತಿರುವ ಪ್ರೋತ್ಸಾಹ, ಅಭಿಮಾನಗಳ ಬಗ್ಗೆ ವೆರ್ಣಿಸಿದ್ದು ಅವರ ಆನಂದವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.
.

ಇಡೀ “ಕಾಮಿಡಿ ಕಿಲಾಡಿಗಳು ಸೀಸನ್ 2” ಪ್ರಯಾಣದ ಬಗ್ಗೆ ಮತ್ತು ಕಿಲಾಡಿಗಳ ಪ್ರತಿಭೆಯ ಬಗ್ಗೆ ತೀರ್ಪುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಕಿಲಾಡಿಗಳು ತಮ್ಮ ಬದುಕಿಗೊಂದು ಉತ್ತಮ ವೇದಿಕೆಯನ್ನು ಜೀ ಕನ್ನಡ ವಾಹಿನಿ ಈ “ಕಾಮಿಡಿ ಕಿಲಾಡಿಗಳು” ವೇದಿಕೆಯಿಂದ ಮಾಡಿಕೊಟ್ಟಿದೆ ಎಂದು ಸಂತೋಷ ಮತ್ತು ಭಾವಾನಾತ್ಮಕವಾಗಿ ಹಂಚಿಕೊಂಡು ಎಲ್ಲರನ್ನು ಕೆಲಕ್ಷಣ ಭಾವುಕರನ್ನಾಗಿ ಮಾಡಿಸಿದ್ದು ಒಂದು ಅವಿಸ್ಮರಣೀಯ.
.

ಪ್ರತಿಯೊಂದು ಆರಂಭಕ್ಕು ದೀಪ ಬೆಳಗಿಸುವುದು ಸಾಂಕೇತಿಕ, ಅದರಂತೆ ಕ್ರೀಡಾಂಗಣದಲ್ಲಿ ನೆರೆದ ಸಾವಿರಾರು ವೀಕ್ಷಕರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡುವುದರ ಮೂಲಕ ಇಡೀ ನಕ್ಷತ್ರಲೋಕವೇ ಧರೆಗಿಳಿದಂತೆ ಕಾಣಿಸುತ್ತ ವೇದಿಕೆಗೆ ದೃಷ್ಟಿ ಚುಕ್ಕಿಯಿಟ್ಟಂತೆ ವಿಸ್ಮಯಗೊಳಿಸಿತು.
.

ಫಿನಾಲೆಗೆಂದೆ ಸಜ್ಜುಗೊಂಡಿದ್ದ “ಪುಂಗಿನಾದ, ವಾಯ್ಸ್ ಪ್ರಾಬ್ಲಮ್, ದಿ ವಿಲನ್” ಸ್ಕಿಟ್ ಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಿಗೆ ಕರೆದೊಯ್ದ ನಮ್ಮ ಕಿಲಾಡಿಗಳು ಅಲ್ಲಿನ ಸ್ಥಳೀಯ “ವೃತ್ತಿ ರಂಗಭೂಮಿ ಮತ್ತು ಚಿತ್ರನಟರಾದ ಶ್ರೀಯುತ ರಾಜು ತಾಳಿಕೋಟೆ” ರವರು ಬರೆದು ನಿರ್ದೇಶಿಸಿ ಸಾವಿರಾರು ಪ್ರದರ್ಶನ ಕಂಡಂತಹ “ಕಲಿಯುಗದ ಕುಡುಕ” ನಾಟಕವನ್ನು ಅಭಿನಯಿಸಿದ್ದು ವಿಶೇಷವಾಗಿತ್ತು ಹಾಗು ರಾಜು ತಾಳಿಕೋಟೆರವರು ತಮ್ಮ ಮ್ಯಾನರಿಸಂ ಹಾಗು ಪಂಚ್ ಮೂಲಕ ಜನರನ್ನು ರಂಜಿಸಿದ್ದಲ್ಲದೇ ಜಗ್ಗೇಶ್ ರವರ ಜೊತೆ ಜುಗಲ್ಬಂಧಿ ಗೆ ನಿಲ್ಲುತ್ತ ಪಂಚ್ ಮೇಲೆ ಪಂಚ್ ನೀಡಲು ವೀಕ್ಷಕರು ಹುಚ್ಚೆದ್ದು ಕುಣಿಯುತ್ತ ತಮ್ಮ ಹರ್ಷ ವ್ಯಕ್ತಪಡಿಸಿದರು.
ಈ ಎಲ್ಲ ಸಂಭ್ರಮಗಳ ಜೊತೆಗೆ ನಿರ್ದೇಶಕ ಯೋಗರಾಜ್ ಭಟ್ ರವರ “ಪಂಚತಂತ್ರ” ಚಿತ್ರದ ನಾಯಕ ವಿಹಾನ್ ತಮ್ಮ ಡ್ಯಾನ್ಸ್ ಮೂಲಕ ವೀಕ್ಷಕರನ್ನು ರಂಜಿಸಿದ್ದು ವಿಶೇಷವಾಗಿತ್ತು.
.

ವರ್ಣರಂಜಿತ ಸಂಜೆಯಲ್ಲಿ ಆರಂಭಗೊಂಡ ಕಿಲಾಡಿ ವೇದಿಕೆಯ ಆರ್ಭಟ ಮರುದಿನ ಮುಂಜಾನೆ ವೇಳೆಗೆ “ಕಾಮಿಡಿ ಕಿಲಾಡಿಗಳು ಸೀಸನ್ 2” ಕಿಲಾಡಿ ಪಟ್ಟ ಯಾರ ಪಾಲಿಗೆ” ಎಂಬುದನ್ನು ಘೋಷಣೆ ಮಾಡುವುದರ ಮೂಲಕ ಮುಕ್ತಾಯಗೊಂಡಿತು.
.

“ಕಾಮಿಡಿ ಕಿಲಾಡಿಗಳು ಸೀಸನ್ 2 ವಿನ್ನರ್” ಯಾರು ಎಂಬ ಕುತೂಹಲದ ನಿಮ್ಮ ಪ್ರಶ್ನೆಗೆ ಉತ್ತರ ಇದೇ ದಿನಾಂಕ 24 ಭಾನುವಾರ ಸಂಜೆ 6 ಕ್ಕೆ ಪ್ರಸಾರವಾಗುವ ಗ್ರ್ಯಾಂಡ್ ಫಿನಾಲೆಯನ್ನು ತಪ್ಪದೇ ವೀಕ್ಷಿಸಿ.

Rate this item
(0 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top