nata

ttm

adweb

udgharsha

ಹಿಟ್‌ ಆದ ಧ್ರುವ ಸರ್ಜಾ ಬಿಡುಗಡೆಗೊಳಿಸಿದ "ಎಂ ಎಲ್‌ ಎ" ಹಾಡು :

 

ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ ನಟನೆಯ ಎಂಎಲ್‌ಎ ಚಿತ್ರದ ವಿಡಿಯೋ ಹಾಡನ್ನು ಇತ್ತೀಚೆಗೆ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಬಿಡುಗಡೆ ಮಾಡಿದರು.
.
ಅರಳೋ ತಾವರೆಯೇ ಎಂಬ ರೊಮ್ಯಾಂಟಿಕ್‌ ಹಾಡು ಇದಾಗಿದ್ದು, ವಿಕ್ರಂ ಸುಬ್ರಹ್ಮಣ್ಯ ಇದನ್ನು ಕಂಪೋಸ್‌ ಮಾಡಿದ್ದಾರೆ. ಈ ಹಾಡು ಈಗಾಗಲೇ 90 ಸಾವಿರಕ್ಕೂ ಹೆಚ್ಚು ಮಂದಿಯಿಂದ ನೋಡಲ್ಪಟ್ಟಿದೆ.
.

ಎಂಎಲ್‌ಎ ಚಿತ್ರವನ್ನು ಮಯೂರ ನಿರ್ದೇಶನ ಮಾಡಿದ್ದಾರೆ. ಆಗುಂಬೆ, ಕಳಸ, ಕುದುರೆಮುಖ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ಪ್ರಥಮ್‌, ಸೂಟ್‌ ಬೂಟ್‌ ಧರಿಸಿ ಟಿಪ್‌ ಟಾಪ್‌ ಆಗಿ ಕಾಣುತ್ತಾರೆ.
.
ಎಂಎಲ್‌ಎ ಚಿತ್ರದಲ್ಲಿ ಸ್ಪರ್ಶ ರೇಖಾ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದ್ದು, ನೆಗೆಟಿವ್‌ ಇಮೇಜ್‌ ಇರುವ ಪಾತ್ರವಂತೆ. ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top