nata

ttm

adweb

udgharsha

ಸಸ್ಪೆನ್ಸ್‌ ಆಗಿ ಟ್ರಕ್ಕಿಂಗ್‌ ಕರೆದುಕೊಂಡು ಹೋಗುವ "6 ನೇ ಮೈಲಿ" :

 
ಇತ್ತೀಚಿನ ದಿನಗಳಲ್ಲಿ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಕನ್ನಡದಲ್ಲಿ ಜಾಸ್ತಿಯಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ 6 ನೇ ಮೈಲಿ.
.
ಸಂಚಾರಿ ವಿಜಯ್‌ ಮುಖ್ಯ ಭೂಮಿಕೆಯ ‘6ನೇ ಮೈಲಿ’ ಚಿತ್ರ ತನ್ನ ಟ್ರೇಲರ್‌ ಮತ್ತು ಒಂದೇ ಒಂದು ಹಾಡಿನಿಂದಾಗಿ ಗಮನ ಸೆಳೆದಿದೆ. ಸಿನಿಮಾದ ಫಸ್ಟ್‌ಲುಕ್‌ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಜಯ್‌ ಮೊದಲ ಬಾರಿಗೆ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
.
ನಡು ರಾತ್ರಿಯಲ್ಲಿ ಪಶ್ಚಿಮ ಘಟ್ಟಗಳಿಗೆ ಟ್ರೆಕ್ಕಿಂಗ್‌ ಹೋಗಿ ಕಾಣೆಯಾಗುವ ಎರಡು ತಂಡಗಳ ಕಥೆಯನ್ನು ನಿರ್ದೇಶಕ ಸೀನಿ ಇಲ್ಲಿ ಹೇಳುತ್ತಿದ್ದಾರಂತೆ. ಈ ಸಿನಿಮಾದಲ್ಲಿ ನಕ್ಸಲ್‌, ಡಕಾಯಿತರು ಹೀಗೆ ಅನೇಕ ಪಾತ್ರಗಳು ಬಂದು ಹೋಗುತ್ತವೆ.
.
ಸಂಚಾರಿ ವಿಜಯ್‌ ಜತೆ ಆರ್‌ಜೆ ನೇತ್ರ, ಹೇಮಂತ್‌ಕುಮಾರ್‌, ಮೈತ್ರಿ ಜಗ್ಗಿ, ಜಾನ್ಹವಿ ಹೀಗೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಆರು ಮಂದಿ ಕನ್ನಡದ ರೇಡಿಯೋ ಆರ್‌ಜೆಗಳು ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಕೂಡ ಇದಾಗಿದೆ. ಡಾ. ಶೈಲೇಶ್‌ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
.
 
ಚಿತ್ರ ಇದೇ ಜುಲೈ 6 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
.
#6neMaili #Cineloka #SanchariVijay
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top