IB anigif

Ayugya Gif

adweb

udgharsha

ಸರಿಗಮಪ ಸೀಸನ್ 15 ಶುರು :

 

ಸಂಗೀತ ಅಂದ್ರೆ ಹಬ್ಬ, ಸಂಗೀತ ಅಂದ್ರೆ ಸೌರಭ, ಸಂಗೀತ ಅಂದ್ರೆ ಸಂತೋಷ, ಖುಷಿ.. ಈ ರೀತಿಯ ಎಲ್ಲಾ ಖುಷಿ, ನಗು, ಸಂತೋಷವನ್ನು ಹೊತ್ತು ತರುತ್ತಿದೆ ಜೀ ಕನ್ನಡದ ಐತಿಹಾಸಿಕ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15. ಕನ್ನಡ ಕಿರುತೆರೆಯಲ್ಲೇ ದಾಖಲೆ ಎಂಬಂತೆ ತನ್ನ 14 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಸರಿಗಮಪ ಈಗ ಹದಿನೈದನೇ ಆವೃತ್ತಿಯಮೂಲಕ ಸೀನಿಯರ್ ಗಾಯಕರ ಜೊತೆ ಕನ್ನಡಿಗರ ಮನೆಗಳಲ್ಲಿ ಸಂಗೀತ ಸುಧೆ ಹರಿಸಲು ಸಜ್ಜಾಗಿ ಬರುತ್ತಿದೆ.

.

ಪ್ರತಿ ಭಾರಿಯೂ ಹೊಸತನ, ಹೊಸ ಪ್ರತಿಭೆಗಳನ್ನ ತರುವ ಸರಿಗಮಪ ವೇದಿಕೆ ಕನ್ನಡ ಗಾಯನ ಪ್ರತಿಭೆಗಳಿಗೆ ದೈವೀಸಮಾನ.. ಈ ವೇದಿಕೆಯ ಘನತೆ ಹೆಚ್ಚಿಸಿರುವವರು ಸಂಗೀತ ಮುಕುಟದ ರತ್ನಗಳಂತಿರುವ ತೀರ್ಪುಗಾರರು.. ಸರಿಗಮಪ ಕಾರ್ಯಕ್ರಮದ ಪ್ರಮುಖ ಜಡ್ಜ್ ಕನ್ನಡ ಚಂದನವನದ ಚಿತ್ರಸಂಗೀತ ಲೋಕಕ್ಕೆ ಹೊಸತನದ ಸಂಗೀತದ ಜೊತೆ, ಹಸನಾದ ಪದಗಳ ಮೂಲಕ ದಶಕಗಳಿಂದ ಅಭಿಮಾನಿಗಳನ್ನ ಆವರಿಸಿಕೊಂಡು ನಾದದಿಂದ ಅನಂತವಾಗಿ ಬೆಳೆದ ನಾದಬ್ರಹ್ಮ ಶ್ರೀಯುತ ಹಂಸಲೇಖರವರು ಮಹಾಗುರುಗಳ ಪಟ್ಟ ಅಲಂಕರಿಸಲಿದ್ದಾರೆ.. ಇವರ ಜೊತೆಗೆ ತೀರ್ಪುಗಾರರಾಗಿ ಮುಂದುವರೆಯುತ್ತಿರುವುದು ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ, ಪ್ರಪಂಚದೆಲ್ಲೆಡೆ ತಮ್ಮ ದೊಡ್ಡ ಧನಿಯ ಮೂಲಕ ಅತಿದೊಡ್ಡ ಹೆಸರು ಮಾಡಿ ಹೆಮ್ಮೆಯ ಕನ್ನಡಿಗನಾಗಿ ಮೆರೆಯುತ್ತಿರುವ ಶ್ರೀ ವಿಜಯ್ ಪ್ರಕಾಶ್ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮ ಮ್ಯೂಸಿಕ್ ಮೂಲಕ ಮ್ಯಾಜಿಕ್ ಮಾಡುತ್ತಿರುವ ಪ್ರಸ್ತುತ ಅಚ್ಚು ಮೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ.

.

ಇನ್ನೂ ಈ ಭಾರಿಯ ಸರಿಗಮಪ ಸೀಸನ್ ಹದಿನೈದರ ವಿಶೇಷತೆ ಸರಿಗಮಪ ಇಷ್ಟು ವರ್ಷಗಳ ಪಯಣದಲ್ಲಿ ಅತಿ ಹೆಚ್ಚು ಭಾರಿ ತೀರ್ಪುಗಾರರಾಗಿ ಕಾರ್ಯಕ್ರಮ ಮುನ್ನಡೆಸಿದ, ಕನ್ನಡ ಚಿತ್ರರಂಗದ ಸುಶ್ರಾವ್ಯ ಧನಿಯ ಸುರದ್ರೂಪಿ ಗಾಯಕ ಶ್ರೀ ರಾಜೇಶ್ ಕೃಷ್ಣನ್.. ಈ ಭಾರಿ ರಾಜೇಶ್ ಕೃಷ್ಣನ್ ಆಗಮನ ಎಲ್ಲಾ ಕನ್ನಡಿಗರಿಗೆ, ಸಂಗೀತ ಪ್ರೇಮಿಗಳಿಗೆ ಸಂತಸ ತಂದಿದ್ದಲ್ಲದೆ, ಸರಿಗಮಪ ಕಾರ್ಯಕ್ರಮಕ್ಕಾಗಿ ಕಾದು ಕೂರುವಂತೆ ಮಾಡಿದೆ.
ಜೊತೆಗೆ ಇಡೀ ಸಂಗೀತ ಕಾರ್ಯಕ್ರಮಕ್ಕೆ ಕಳೆ ಕಟ್ಟುವುದು ಮುದ್ದು ನಗುವಿನ ಚಂದದ ಮಾತಿನ ಲವಲವಿಕೆಯ ನಿರೂಪಕಿ ಅನುಶ್ರೀಯವರ ನಿರಾಯಾಸವಾದ ನಿರೂಪಣೆ.

.

ಇಷ್ಟೆಲ್ಲಾ ವಿಶೇಷತೆ ಇರುವ ವಿಶೇಷ ಸಂಗೀತ ಕಾರ್ಯಕ್ರಮ, ಸರಿಗಮಪ ಸೀಸನ್ 15 ಇದೆ ಶನಿವಾರ ಅಂದರೆ ಸೆಪ್ಟೆಂಬರ್ 29 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.. ಕನ್ನಡ ಕಿರುತೆರೆಯ ಏಕೈಕ ಸಂಗೀತ ಹಬ್ಬವನ್ನ ತಪ್ಪದೆ ವೀಕ್ಷಿಸಿ ಸಾಕ್ಷೀಕರಿಸಿ..

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top