IB anigif

Ayugya Gif

adweb

udgharsha

‘ನಡುವೆ ಅಂತರವಿರಲಿ’ ಚಿತ್ರದಲ್ಲಿದೆ ಹದಿಹರೆಯದ ಭಾವನೆಗಳು :

 

ಪ್ರಿಮೆಚ್ಯೂರ್ ಪ್ರೇಮ ಕತೆ ಹೊಂದಿರುವ ‘ನಡುವೆ ಅಂತರವಿರಲಿ’ ಚಿತ್ರವನ್ನು 12 ವರ್ಷದಿಂದ 50 ವರ್ಷದ ವಯೋಮಾನದವರಿಗೆ ಟೆಸ್ಟ್ ಚೆಕ್ ಎಂದು ತೋರಿಸಿದ್ದಾರೆ. 55 ನೋಡುಗರಲ್ಲಿ 38 ಮಂದಿ ಕಣ್ಣೀರು ಹಾಕಿದ್ದಾರೆ. ಅಂದರೆ ಎಷ್ಟರಮಟ್ಟಿಗೆ ಸಿನಿಮಾ ಆವರಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗಿದೆ. ಓದುವ ವಯಸ್ಸಿನಲ್ಲಿ ಓದಬೇಕು. ಅದು ಬಿಟ್ಟು ಪ್ರೀತಿ, ಪ್ರೇಮ ಅಂತ ಹಿಂದೆ ಹೋದರೆ ಅವರು ನೋವು ಅನುಭವಿಸುವುದು ಅಲ್ಲದೆ ಮನೆಯವರು ಕೂಡ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. 18-20 ವಯಸ್ಸಿನ ಯುವಜನತೆಯ ಮನಸ್ಸು ಚಂಚಲವಾಗಿರುತ್ತದೆ. ಇದೇ ಅಂತರದಲ್ಲಿ ತಪ್ಪುಗಳು ಆಗುತ್ತದೆ. ಅದಕ್ಕೆ ಈ ವಯಸ್ಸುನಲ್ಲಿ ಅಂತರವಿರುವುದು ಒಳ್ಳೇದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ.

.
ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ರವೀನ್‍ಕುಮಾರ್ ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರಿಗೆ ಜೊತೆಯಾಗಿ ನಾಗರಾಜ್ ಪಾಲುದಾರರು.
.
ರಂಗಭೂಮಿ ನಟ, ಸದ್ಯ ಇಂಜನಿಯರಿಂಗ್ ಓದುತ್ತಿರುವ ಪ್ರಖ್ಯಾತ್‍ಪರಮೇಶ್ ಸಂಭಾóಷಣೆ,ನಿರ್ದೇಶಕ ಮಂಜುಮಾಂಡವ್ಯ ಇವರ ಶೋಧದಿಂದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಶಾನಿಶೆಟ್ಟಿ ನಾಯಕಿ. ಇಬ್ಬರು ಮೇಕಪ್‍ರಹಿತ ನಟನೆ ಮಾಡಿರುವುದು ವಿಶೇಷ. ಉಳಿದಂತೆ ನಾಯಕಿಯ ಪೋಷಕರಾಗಿ ಅಚ್ಯುತಕುಮಾರ್-ತುಳಸಿಶಿವಮಣಿ, ನಗಿಸಲು ಚಿಕ್ಕಣ್ಣ , ಉದಯ್‍ಮೆಹ್ತಾ ನಟಿಸಿದ್ದಾರೆ. ಮಣಿಕಾಂತ್ ಖದ್ರಿ ಹಾಡುಗಳಲ್ಲಿ ‘ಶಕುಂತ್ಲೆ ಬಂದಳು’ ಗೀತೆ ಹಿಟ್ ಆಗಿದೆ. ಸದರಿ ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬೆಳಿಗ್ಗೆ ಆರು ಗಂಟೆಯಲ್ಲಿ ಕೇವಲ ಐದು ನಿಮಿಷದಲ್ಲಿ ರಚಿಸಿದ್ದಾರಂತೆ.
.

ವಿತರಕ ಕಾರ್ತಿಕ್‍ಗೌಡ ಮುಖಾಂತರ ಸುಮಾರು 100 ಕೇಂದ್ರಗಳಲ್ಲಿ ಅಕ್ಟೋಬರ್ 5ರಂದು ರಾಜ್ಯದ್ಯಂತ ತೆರೆ ಕಾಣಲಿದೆ.

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top