IB anigif

Ayugya Gif

adweb

udgharsha

"ಕೆಜಿಎಫ್‌" ಹಕ್ಕು ಖರೀದಿಸಿದ ರವೀನಾ ಟಂಡನ್‌ ಪತಿ

 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ "ಕೆಜಿಎಫ್‌" ನ್ನು ಬಾಲಿವುಡ್‌ ನಟಿ ರವೀನಾ ಟಂಡನ್‌ ಪತಿ ಅನಿಲ್‌ ತಡಾನಿ ಕೊಂಡುಕೊಂಡಿದ್ದಾರೆ.
.

ಹೌದು ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಹಿಂದಿ ಅವತರಿಣಿಕೆಯ ಡಿಸ್ಟ್ರಿಬ್ಯೂಷನ್‌ ಈಗ ಅನಿಲ್‌ ತಡಾನಿ ಪಾಲಾಗಿದೆ. 'ಕೆಜಿಎಫ್‌' ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದರ ಹಿಂದಿ ಅವತರಿಣಿಕೆಯನ್ನು ಅನಿಲ್‌ ತಡಾನಿ ಪಡೆದುಕೊಂಡಿದ್ದಾರೆ. ಈ ಅನಿಲ್‌ ತಡಾನಿ ನಟಿ ರವಿನಾ ಟಂಡನ್‌ ಅವರ ಪತಿ.
.
ಇಡೀ ಸಿನಿಮಾವನ್ನು 80ರ ದಶಕದ ವಾತಾವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೇ ಒಂದು ಟೀಸರ್‌ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಚಿತ್ರತಂಡ ನೀಡುವ ಮಾಹಿತಿ ಪ್ರಕಾರ ಕೆಜಿಎಫ್‌ ದಾಖಲೆ ಮಟ್ಟದಲ್ಲಿ ಪ್ರದರ್ಶನ ಕಾಣಲಿದೆಯಂತೆ.
.
ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉಗ್ರಂ ಖ್ಯಾತಿ ಪ್ರಶಾಂತ್‌ ನೀಲ್‌ ಇದರ ನಿರ್ದೇಶಕರು.

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top