IB anigif

Ayugya Gif

adweb

udgharsha

ಇಂದಿನಿಂದ ಜೀ ವಾಹಿನಿಯಲ್ಲಿ "ಶ್ರೀ ವಿಷ್ಣು ದಶಾವತಾರ" :

 

ವಿಭಿನ್ನ ರಿಯಾಲಿಟಿ ಶೋಗಳು ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ಜೀ ಕನ್ನಡ ವಾಹಿನಿ ಈಗ ಪೌರಾಣಿಕ ಧಾರಾವಾಹಿಗಳತ್ತ ಮುಖ ಮಾಡಿದೆ. ಇತ್ತೀಚೆಗಷ್ಟೇ “ಉಘೇ ಉಘೇ ಮಾÀದೇಶ್ವರ” ಎಂಬ ಪೌರಾಣಿಕ ಧಾರಾವಾಹಿಯನ್ನು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ. ಅದೇ ರೀತಿ ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯನ್ನು ಆರಂಭಿಸಲು ಅಣಿಯಾಗಿದೆ. “ಶ್ರೀ ವಿಷ್ಣು ದಶಾವತಾರ” ಎಂಬ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಪೌರಾಣಿಕ ಧಾರಾವಾಹಿಯ ಮೂಲಕ ಶ್ರೀ ಮಹಾವಿಷ್ಣುವಿನ 10 ಅವತಾರಗಳನ್ನು ಜೀ ವಾಹಿನಿಯಲ್ಲಿ ವೀಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಅದ್ಧೂರಿ ವೆಚ್ಚದ ವೈಕುಂಠದ ಸೆಟ್ ಹಾಗೂ ಇತರ ಆಕರ್ಷಣೆಗಳೊಂದಿಗೆ ಶ್ರೀ ವಿಷ್ಣು ದಶಾವತಾರ ಕನ್ನಡ ಪ್ರೇಕ್ಷಕರ ಮುಂದೆ ಬರಲಿದೆ.
.

ಒಂದು ಸಿನಿಮಾ ಶೈಲಿಯಲ್ಲೇ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದ್ಧೂರಿ ಸೆಟ್‍ಗಳ ಗ್ರಾಫಿಕ್ಸ್ ಈ ಸೀರಿಯಲ್‍ನ ವಿಶೇಷವಾಗಿದೆ. ಮುಂಬೈ ಮೂಲದ ಕ್ರಿಯೇಟಿವ್ ಐ ಸಂಸ್ಥೆಯ ಧೀರಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯನ್ನು ಸಂತೋಷ್ ಬಾದಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ಯ ಸೂರ್ಯ, ಕಾವ್ಯ ಮಹದೇವ್, ಹರ್ಷ, ಅರ್ಜುನ್, ವಂದನ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
.

ಅಕ್ಟೋಬರ್ 15 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.00 ಗಂಟೆಗೆ ಶ್ರೀ ವಿಷ್ಣು ದಶಾವತಾರ ಪ್ರಸಾರವಾಗಲಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹೀಗೆ ಯುಗಯುಗಾದಿಗಳಿಂದಲೂ ಲೋಕಕಲ್ಯಾಣಕ್ಕಾಗಿ ಶ್ರೀ ಮಹಾವಿಷ್ಣು ಎತ್ತುವ 10 ಅವತಾರಗಳ ಕಥೆಯೇ ಶ್ರೀ ವಿಷ್ಣು ದಶಾವತಾರ. ಅಮಿತ್ ಕಷ್ಯಪ್ ಮಹಾವಿಷ್ಣುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಸೊಗಡು ಖ್ಯಾತಿಯ ನಿಷಾ ಇಲ್ಲಿ ಮಹಾಲಕ್ಷ್ಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
.

ನಿರ್ಮಾಪಕ ಧೀರಜ್‍ಕುಮಾರ್ ಮಾತನಾಡಿ ಭಾಷೆಗೆ ಯಾವುದೇ ಗಡಿಯಿಲ್ಲ. ಒಂದು ಒಳ್ಳೆಯ ಧಾರಾವಾಹಿಯನ್ನು ಮಾಡಿದ್ದೇವೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದು, ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸುವುದು ಸವಾಲಾಗಿತ್ತು. ಮುಂಬೈನಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಹೇಳಿದರು. ನಂತರ ರಾಘವೇಂದ್ರ ಹುಣಸೂರು ಮಾತನಾಡುತ್ತಾ ಈವರೆಗೆ ರಿಮೇಕ್ ಧಾರಾವಾಹಿಗಳೇ ಕಿರುತೆರೆಯಲ್ಲಿ ಹೆಚ್ಚಾಗಿ ಮೂಡಿಬರುತ್ತಿದ್ದವು. ಆದರೆ ಜೀ ಕನ್ನಡ ವಾಹಿನಿ ಸ್ವಮೇಕ್ ಧಾರಾವಾಹಿಗಳತ್ತ ಹೆಚ್ಚು ಗಮನ ಹರಿಸಿದೆ. ವಿಷ್ಣು ದಶಾವತಾರ ಕನ್ನಡ ಹಾಗೂ ತಮಿಳಿನಲ್ಲಿ ಚಿತ್ರೀಕರಣವಾಗುತ್ತಿದೆ. ಈಗಾಗಲೇ 50 ಎಪಿಸೋಡ್‍ಗಳನ್ನು ರೆಡಿ ಇಟ್ಟುಕೊಂಡಿದ್ದೇವೆ. ಕನಿಷ್ಠ 400 ರಿಂದ 500 ಕಂತುಗಳನ್ನು ಮಾಡುವ ಉದ್ದೇಶವಿದೆ. ಎಲ್ಲಾ ಕಲಾವಿದರನ್ನು ಇಲ್ಲಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದು. ಅಲ್ಲೇ ಅವರಿಗೆ ವಸತಿ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದೇವೆ. ನಮ್ಮ ಬಹುತೇಕ ಕಲಾವಿದರು ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಜೆಟ್ ಹೆಚ್ಚು ಎನ್ನುವ ಕಾರಣಕ್ಕಾಗಿ ತಮಿಳಿನಲ್ಲಿ ಕೂಡ ಒಮ್ಮೆಗೆ ನಿರ್ಮಾಣ ಮಾಡಲಾಗುತ್ತಿದೆ.

ವಿಷ್ಣು ಪಾತ್ರಧಾರಿ ಅಮಿತ್ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಈ ಧಾರಾವಾಹಿಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ.

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top