tarakaasura

ttm

adweb

udgharsha

ತ್ರಿಕೋನ ಪ್ರೇಮಕಥೆಯ "ಪ್ರಸ್ತ" ಹಾಡುಗಳ ಅನಾವರಣ :

 

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಣ, ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ವಿತರಣೆ ಹೀಗೆ ಚಿತ್ರ ನಿರ್ಮಾಣದ ಹಲವಾರು ವಿಭಾಗಗಳಲ್ಲಿ ನಿರ್ದೇಶಕರೊಬ್ಬರೇ ತೊಡಗಿಕೊಂಡು ಕೆಲಸ ಮಾಡುವುದು ಬೆಳೆದು ಬಂದಿದೆ. ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್, ಎಸ್. ನಾರಾಯಣ್‍ರಂಥ ತಂತ್ರಜ್ಞರು ಇದನ್ನು ಮಾಡಿ ತೋರಿಸಿದ್ದಾರೆ. ಈ ಸಾಲಿಗೆ ಈಗ ಮತ್ತೊಬ್ಬ ಪ್ರತಿಭೆ ಸೇರಿದ್ದಾರೆ. ಅವರ ಹೆಸರು ರವಿ ಶತಭಿಷ. ಇವರ ನಿರ್ಮಾಣ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದ ಹೆಸರು ಪ್ರಸ್ತ. ಈ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಅಶ್‍ಬೆಲ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಮೋಹನ್, ಛಾಯಾಂಕ್ ಹಾಗೂ ಶಿವರಾಜ್ ಗುಬ್ಬಿ ಸಾಹಿತ್ಯ ರಚಿಸಿದ್ದಾರೆ.
.
ಪಕ್ಕಾ ಹಳ್ಳಿ ಲವ್ ಸ್ಟೋರಿ ಎಂಬ ಟ್ಯಾಗ್‍ಲೈನ್ ಹೊಂದಿರುವ ಈ ಚಿತ್ರದಲ್ಲಿ ಗ್ರಾಮೀಣ ಪರಿಸರದಲ್ಲಿ ನಡೆಯುವ ಒಂದು ತ್ರಿಕೋನ ಪ್ರೇಮಕಥಾನಕವನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕ ರವಿ ಶತಭಿಷ ಅವರು ಮಾಡಿದ್ದಾರೆ. ಹಳ್ಳಿ ಪರಿಸರದಲ್ಲೇ ಬೆಳೆದು ಪ್ರೀತಿ ಅಂದ್ರೆ ತಮಾಷೆ ಅಂದುಕೊಂಡಿದ್ದ ನಾಯಕನಿಗೆ ಪ್ರೀತಿಯ ಮಧುರ ಅನುಭವ ಹಾಗೂ ಅದರ ಮಹತ್ವವನ್ನು ಚಿತ್ರದ ನಾಯಕಿ ತಿಳಿಸಿಕೊಡುತ್ತಾಳೆ. ಚಿತ್ರದ ಕೊನೆಯ ಭಾಗದ ಕಥೆ ನಡೆಯುವುದು ಪ್ರಸ್ತ ಎಂಬ ವಿಷಯದ ಮೇಲೆಯೇ, ಹಾಗಾಗಿ ಚಿತ್ರಕ್ಕೆ ಆ ಶೀರ್ಷಿಕೆಯನ್ನು ಇಟ್ಟಿರುವುದಾಗಿ ನಿರ್ದೇಶಕ ರವಿ ಶರಭಿಷ ಅವರ ಹಾಡುಗಳ ಸಿಡಿ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೊಂಡರು. ರವಿ ಶರಭಿಷ ಕಳೆದ ಏಳೆಂಟು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಭಿಜ್ಞ ಕ್ರಿಯೇಶನ್ಸ್ ಆರಂಭಿಸಿ ಅದರ ಮೂಲಕ ಒಂದಷ್ಟು ಕಿರುಚಿತ್ರಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ, ಆ ಮೂಲಕ ಒಂದಷ್ಟು ಹೊಸ ಪ್ರತಿಭೆಗಳಿಗೆ ಅವಕಾಶವನ್ನೂ ನೀಡಿದ್ದಾರೆ.
.

ಇದೇ ಮೊದಲಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ ಪ್ರಸ್ತ ಚಿತ್ರವನ್ನು ಹೊರತರುತ್ತಿದ್ದಾರೆ. ಈ ಚಿತ್ರದಲ್ಲಿ ವಿಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ವರ್ಷಾ ಹಾಗೂ ಯಾದ್ವಿಕಾ ನಟಿಸಿದ್ದಾರೆ. ಅಲಂಕಾರ್ ಚಂದ್ರು ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ನಾಯಕ ವಿಶ್ ಮಾತನಾಡಿ ಈ ಹಿಂದೆ ನಾನು ಸ್ಟೈಲ್‍ರಾಜಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ನಿರ್ದೇಶಕರು ಬಂದು ಈ ಕಥೆ ಹೇಳಿದರು, ಚಿತ್ರದಲ್ಲಿ ಯಾವುದೇ ಡಬಲ್ ಮೀನಿಂಗ್ ಡೈಲಾಗ್ ಇಲ್ಲ. ಕಥೆ ತುಂಬಾ ಚೆನ್ನಾಗಿದೆ. ಅಲ್ಲದೆ ಅಷ್ಟೇ ಸೊಗಸಾಗಿ ತೆರೆ ಮೇಲೆ ಕೂಡ ಮೂಡಿಬಂದಿದೆ. ಚಿತ್ರದ ಶೀರ್ಷಿಕೆಯ ಕಾರಣದಿಂದಲೇ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಟೈಟಲ್ ಛೇಂಜ್ ಮಾಡಿಕೊಂಡರೆ ಯುಎ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಮಾತನ್ನು ಹೇಳಿಕೊಂಡರು.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top