nata

ttm

adweb

udgharsha

7 ಭಾಷೆಗಳಲ್ಲಿ ಕಿಚ್ಚ ಸುದೀಪರ “ಪೈಲ್ವಾನ್” ??

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ “ಪೈಲ್ವಾನ್” ಚಿತ್ರದ ಚಿತ್ರೀಕರಣ ಕಳೆದ 2 ವಾರಗಳಿಂದ ಹೈದರಾಬಾದ್ ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಎಸ್. ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

.

ಇದೀಗ ಚಿತ್ರತಂಡದಿಂದ ಬಂದಿರೋ ಹೊಸ ಸುದ್ದಿ ಏನೆಂದರೆ, ಚಿತ್ರದ ಬೇರೆ ಭಾಷೆಗಳ ಡಬ್ಬಿಂಗ್ ರೈಟ್ಸ್ ಗೆ ಭರ್ಜರಿ ಬೇಡಿಕೆ ಬರುತ್ತಿದು, ಚಿತ್ರವೂ 7 ಭಾಷೆಗಳಿಗೆ ಬಿಡುಗಡೆಯಾಗಲಿದೆಯಂತೆ.ಚಿತ್ರವೂ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಮರಾಠಿ, ಭೋಜಪುರಿ,ಬಂಗಾಳಿ ಮತ್ತು ಪಂಜಾಬಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ.

.

ಈ ವಿಷಯವನ್ನು ಖಚಿತ ಪಡಿಸಿದ ಚಿತ್ರದ ನಿರ್ದೇಶಕ ಕೃಷ್ಣ ಅವರು ಚಿತ್ರಕ್ಕೆ ಬರುತ್ತಿರುವ ಬೇಡಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

" ಹೌದು, ಪೈಲ್ವಾನ್ ಕನ್ನಡ ಹೊರೆತು ಪಡಿಸಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಎಲ್ಲಾ ಭಾಷೆಯ ರೈಟ್ಸ್ ವಿಚಾರವಾಗಿ 2-3 ಸುತ್ತು ಮಾತುಕತೆ ನಡೆದಿದ್ದು, ಇನ್ನೆರಡು ಮೂರು ವಾರಗಳಲ್ಲಿ ಅದರ ಸಂಪೂರ್ಣ ವಿವರವನ್ನು ಅಧಿಕೃತವಾಗಿ ನಾನೇ ನೀಡುತ್ತೇನೆ. ಸದ್ಯಕ್ಕೆ ಮರಾಠಿಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರು ಬಿಡುಗಡೆ ಮಾಡುವುದು ಪಕ್ಕಾ ಆಗಿದೆ. ನಾನು ಈ ಚಿತ್ರಕ್ಕೆ  ನಿರ್ಮಾಪಕನೂ ಆಗಿರೋದ್ರಿಂದ ಸಹಜವಾಗಿಯೇ ಡಬಲ್ ಸಂತೋಷವಿದೆ" ಎಂದು ತಿಳಿಸುತ್ತಾರೆ ನಿರ್ದೇಶಕರು.

ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಗೂ ಸಕ್ಕತ್ ಬೇಡಿಕೆ ಇದ್ದು, ದಾಖಲೆಯ ಮೊತ್ತಕ್ಕೆ ಸೇಲಾಗೋದು ಖಚಿತ. ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಿದೆ ಎನ್ನುತ್ತಾರೆ ಅವರು.

.

ನಾಳೆಯಿಂದ ಚಿತ್ರದ ಬಾಕ್ಸಿಂಗ್ ಫೈಟ್ ದೃಶ್ಯವನ್ನು ಹಾಲೀವುಡ್ ಸ್ಟಂಟ್ ಮಾಸ್ಟರ್ ಲಾರ್ನೆಲ್ ಸ್ಟೋವಲ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಲಿದ್ದಾರೆ ಚಿತ್ರತಂಡ.
ಚಿತ್ರಕ್ಕಾಗಿ 20ಕ್ಕೂ ಹೆಚ್ಚು ಸೆಟ್ ಗಳನ್ನು ರಾಮೋಜಿ ಫಿಲಂ ಸಿಟಿಯಲ್ಲಿ ಹಾಕಲಿದೆಯಂತೆ.

.

ಪೈಲ್ವಾನ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅವರು ದೈಹಿಕವಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಚಿತ್ರಕ್ಕಾಗಿ ಲೀನ್ ಬಾಡಿ ಕೂಡ ಮಾಡಿಕೊಂಡಿದ್ದಾರಂತೆ. ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಗೊಂಡಿದ್ದ ಟೀಸರ್ ನೋಡಿದ ಸಿನಿಮಾ ಅಭಿಮಾನಿಗಳು ಸುದೀಪ್ ಅವರ ಶ್ರಮವನ್ನು ಮೆಚ್ಚಿಕೊಂಡಿದ್ದರು.

.

Rate this item
(8 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top