nata

ttm

adweb

udgharsha

ಭಾರತೀಯ ಚಿತ್ರರಂಗದ ಗಣ್ಯರ ಮೆಚ್ಚುಗೆಗೆ ಪಾತ್ರವಾದ ಬಾದ್‌ಷಾ ಕಿಚ್ಚ ಸುದೀಪರ "ಪೈಲ್ವಾನ್‌" ಟೀಸರ್‌

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಪೈಲ್ವಾನ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ವೈರಲ್‌ ಆಗಿದೆ, ವೈರಲ್‌ ಆಗುವುದರ ಜತೆಗೆ ಇದು ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ನ್ನು ಮುಟ್ಟಿದ್ದು, ಅಲ್ಲಿಯೂ ಸಂಚಲನ ಎಬ್ಬಿಸಿದೆ.

.

ಹಿಂದಿಯ ಸಲ್ಮಾನ್‌ ಖಾನ್‌,ರಾಮ್ ಗೋಪಾಲ್ ವರ್ಮ,ರಿತೇಶ್ ದೇಶ್‌ಮುಖ್,ಸೋನು ಸೂದ್, ಸುನಿಲ್ ಶೆಟ್ಟಿ ತಮಿಳಿನ ಧನುಷ್‌,ಆರ್ಯ,ಸಿದ್ಧಾರ್ಥ್, ಪ್ರಭುದೇವ ತೆಲುಗಿನ ಪೂರಿ ಜಗನ್ನಾಥ್‌,ಕಾರ್ತಿಕೇಯ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್,ಮಾಲಾಶ್ರೀ, ಶ್ರೀಮುರುಳಿ, ನಿರೂಪ್ ಭಂಡಾರಿ,ಪಾರುಲ್‌ ಯಾದವ್‌, ರಶ್ಮಕಾ ಮಂದಣ್ಣ, ಹರಿಪ್ರಿಯಾ,ಸಂತೋಷ್ ಆನಂದ್ ರಾಮ್ ಸೇರಿದಂತೆ ಬಹಳಷ್ಟು ಸೆಲೆಬ್ರಿಟಿಗಳು  ಟೀಸರ್‌ನ್ನು ತಮ್ಮ ಟ್ವೀಟರ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡು ಟೀಸರ್ಗೆ ಮುಚ್ಚುಗೆ ವ್ಯಕ್ತಪಡಿಸಿ ಕಿಚ್ಚ ಸುದೀಪ್‌ ಅವರಿಗೆ ಬೆಸ್ಟ್‌ ಆಫ್‌ ಲಕ್‌ ಹೇಳಿದ್ದಾರೆ.

.

ಇನ್ನು ದಾವಣಗೆರೆಯಲ್ಲಿ ಅಭಿಮಾನಿಗಳು "ಪೈಲ್ವಾನ್‌" ಪೋಸ್ಟರ್‌ಗೆ ಕಾಯಿ ಒಡೆದಿದ್ದಾರೆ.  ತಮಿಳಿನ ಧನುಷ್‌ ಅಂತೂ ಸುದೀಪ್‌ ಅವರು ನನ್ನ ಗೆಳೆಯ ಎಂದು ಹೇಳಿಕೊಂಡಿದ್ದಾರೆ.

.

ಭೋಜ್‌ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಕೂಡ ಟ್ವೀಟ್ ಮಾಡಿ, ಈ ಚಿತ್ರವನ್ನು ತನ್ನ ಧ್ವನಿಯಲ್ಲೇ ಡಬ್ ಮಾಡಿ ಉತ್ತರ ಪ್ರದೇಶ, ಬಿಹಾರ್ ನಲ್ಲಿ ಬಿಡುಗಡೆ ಮಾಡುವುದಾಗಿ ಬರೆದುಕೊಂಡಿದ್ದಾರೆ.

.
ರಿತೇಶ್ ದೇಶಮುಖ್ ಅವರು ಮರಾಠಿಯಲ್ಲಿ "ಪೈಲ್ವಾನ್" ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

 ಈಗಾಗಲೇ ಟೀಸರ್‌ನ್ನು 30 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಚಿತ್ರದ ಟೀಸರ್ ಟ್ವಿಟ್ಟರ್ ಮತ್ತು ಯೌಟೂಬ್ ನಲ್ಲಿ #1 ಸ್ಥಾನದಲ್ಲಿ ಟ್ರೆಂಡ್ ಕೂಡ ಆಗಿತ್ತು.

Rate this item
(3 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top