nata

ttm

adweb

udgharsha

"ಉದ್ಘರ್ಷ" ಚಿತ್ರದ ಟ್ರೈಲರ್ಗೆ 'ಕಿಚ್ಚ'ನ ಧ್ವನಿ

ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ.

.

ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ 'ಉದ್ಘರ್ಷ' ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ ಖುಷಿಯಿಂದಲೇ ಕಂಠದಾನ ಮಾಡಿದ್ದಾರೆ.

.

ಸೋಮವಾರ ಹೈದರಾಬಾದ್ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ಮಾಪಕರಾದ ಆರ್. ದೇವರಾಜ್ ಸುದೀಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹೈದರಾಬಾದ್ನಲ್ಲಿಯೇ ಸುದೀಪರಿಂದ ಟ್ರೇಲರ್ಗೆ ಡಬ್ಬಿಂಗ್ ಮಾಡಿಸಿದ್ದಾರೆ.

.

ವಿಶೇಷ ಅಂದರೆ ನಾಲ್ಕೂ ಭಾಷೆಯಲ್ಲೂ ಸುದೀಪ್ರದ್ದೇ ಧ್ವನಿ ಕೇಳಲಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ.

.

ಇನ್ನು ಬಹುಭಾಷೆಯಲ್ಲಿ ಮೂಡಿ ಬಂದಿರೋ ಉದ್ಘರ್ಷದಲ್ಲಿ ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನು ಮೋಸ್ಟ್ ವಾಂಟೆಡ್ ವಿಲನ್ ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ಇನ್ನೂ ಮುಂತಾದವರು ವಿಲನ್ ಆಗಿ ಅಭಿನಯಿಸಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top