Raambo 2 gIF

rlr gIF rELEASE

adweb

anigif seizer

Sunil HC Gowda

Sunil HC Gowda

 
ಯಶಸ್‌ ಸೂರ್ಯ ನಟನೆಯ ರಾಮಧಾನ್ಯ ಚಿತ್ರಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಧ್ವನಿ ನೀಡಿದ್ದಾರೆ.
ಈ ಚಿತ್ರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ದರ್ಶನ್‌ ಅವರ ಧ್ವನಿ ಕೇಳಿಬರಲಿದೆಯಂತೆ. ಈ ಹಿಂದೆ ಚೇತನ್‌ ನಿರ್ದೇಶನದ ಭರ್ಜರಿಗೂ ದರ್ಶನ್‌ ಧ್ವನಿ ನೀಡಿದ್ದರು.
.
ರಾಮಧಾನ್ಯ ಪ್ರಸ್ತುತ ಮತ್ತು ಪೌರಾಣಿಕ ಕಥೆಯನ್ನು ಹೊಂದಿದ್ದು, ಸಾಫ್ಟ್‌ವೇರ್‌ ಜೀವನ ಮತ್ತು ಕನಕದಾಸರ ಕಥೆಯನ್ನು ಒಟ್ಟಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಾಗೇಶ್‌ ಕುಮಾರ್‌.
.
ಈ ಚಿತ್ರದಲ್ಲಿ ನಾಯಕ ಯಶಸ್‌ ಸೂರ್ಯ, ಸಾಫ್ಟ್‌ವೇರ್‌ ಎಂಜಿನಿಯರ್‌, ರಾಮ, ಕನಕದಾಸ ಹೀಗೆ ಮೂರ್ನಾಲ್ಕು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದ ಟೀಸರ್‌ನ್ನು ದರ್ಶನ್‌ ಅವರಿಗೆ ತೋರಿಸಿದಾಗ, ಅದನ್ನು ಮೆಚ್ಚಿಕೊಂಡ ದರ್ಶನ್‌ ಹಿನ್ನೆಲೆ ಧ್ವನಿ ನೀಡಿದ್ರಂತೆ. ಸಿನಿಮಾದ ಆರಂಭದಲ್ಲಿ ಒಂದೂವರೆ ನಿಮಿಷ ಮತ್ತು ಚಿತ್ರದ ಕೊನೆಯಲ್ಲಿ ಸಿನಿಮಾದ ಆಶಯವನ್ನು ದರ್ಶನ್‌ ಹೇಳುತ್ತಾರೆ. ಈ ಚಿತ್ರ ಇದೇ 25ಕ್ಕೆ ಬಿಡುಗಡೆಯಾಗುತ್ತದೆ.
.
#Ramadhanya #Cineloka #ChallengingStarDarshan
ಶಿವಣ್ಣ ಮತ್ತು ಕಿಚ್ಚ ಸುದೀಪ್ ನಟನೆಯ,ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್‌' ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ.
.
ಇತ್ತೀಚೆಗೆ ಮೇ 1 ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಿಕ್ಕಿದ್ದ ಸುದೀಪ್‌, "ದಿ ವಿಲನ್‌ ಚಿತ್ರದ ಡಬ್ಬಿಂಗ್‌ ಈಗಾಗಲೇ ನಡೆಯುತ್ತಿದೆ. ಒಂದು ದಿನದ ಡಬ್ಬಿಂಗ್‌ ಬಾಕಿ ಇದೆ, ಅದರ ಜತೆಗೆ ಮೂರು ದಿನ ಹಾಡಿನ ಚಿತ್ರೀಕರಣ ಬಾಕಿ ಇದೆ. ಇಷ್ಟು ಮುಗಿದರೆ ವಿಲನ್‌ ಚಿತ್ರದಲ್ಲಿ ನನ್ನ ಭಾಗದ ಕೆಲಸ ಮುಗಿಯುತ್ತದೆ" ಎಂದು ಹೇಳಿದ್ದಾರೆ.
.
'ದಿ ವಿಲನ್‌' ಒಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಆಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಆಗಬಹುದು ಎಂದು ಹೇಳುತ್ತಾರೆ ಸುದೀಪ್‌.
.
ಒಟ್ಟಿನಲ್ಲಿ ಶಿವಣ್ಣ ಮತ್ತು ಸುದೀಪ್‌ ಅಭಿಮಾನಿಗಳ ಕುತೂಹಲಕ್ಕೆ ಆಗಸ್ಟ್‌ನಲ್ಲಿ ಉತ್ತರ ಸಿಗಬಹುದು.
.
#TheVillian #DrShivanna #KicchaSudeep #Cineloka
ಕಿವಿ ಕೇಳಿಸದ, ಮಾತು ಬಾರದ ನಾಯಕ ಧ್ರುವ ಶರ್ಮ ಹಾಗೂ ನಾಯಕಿ ಆಗಿ ಅಭಿನಯ ಅಭಿನಯಿಸಿರುವ ಚಿತ್ರ `ಕಿಚ್ಚು'.
.
ಮೂಕಹಕ್ಕಿಗಳು ಈ ರೀತಿ ಜೊತೆಯಾಗಿ ನಟಿಸಿದ ಪ್ರಥಮ ಚಿತ್ರ ಇದಾಗಿದೆ. ಅರಣ್ಯ ರಕ್ಷಿಸಿ ಎಂಬ ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ಪ್ರದೀಪ್ ರಾಜ್ `ಕಿಚ್ಚು' ಚಿತ್ರವನ್ನು ತೆರೆಗೆ ತಂರುತ್ತಿದ್ದಾರೆ. ಅರಣ್ಯ ಸಂಪತ್ತನ್ನು ನಾಶ ಮಾಡುವುದು ಮಾನವ ಜನ್ಮಕ್ಕೆ ಮಾರಕ ಎಂದು ಸಹ ಈ ಸಿನಿಮಾದಿಂದ ಹೇಳಲಾಗುತ್ತಿದೆ.
.
ರೂಬಿ ಕ್ರಿಯೇಷನ್ ಹಾಗೂ ಇಂದ್ರಜಾಲ ಅಡ್ವರ್ಟೈಸ್ಮಂಟ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಚಿದಂಬರಂ ಎಸ್ ಎನ್ ಫಾಜಿಲ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.
.
ಕಿಚ್ಚ ಸುದೀಪ್ ಅವರ ಪ್ರಮುಖ ಪಾತ್ರದ ಜೊತೆಗೆ ವಿಶೇಷ ಪಾತ್ರದಲ್ಲಿ ರಾಗಿಣಿ ದ್ವಿವೇದಿ, ಸಾಯಿಕುಮಾರ್, ಪ್ರದೀಪ್ ರಾಜ್, ಸುಚಿಂದ್ರಪ್ರಸಾದ್, ರಘು, ಅಮೋಘ್, ಕುಮಾರ್ ಹಾಗೂ ಇನ್ನಿತರರು ಅಭಿನಯಿಸಿರುವ ಚಿತ್ರ ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಆಗಿರುವುದು.
.
#Kicchu #Cineloka

 

'Buckaasuura - For Money' had created a huge demand, even before its release by the two trailers that created a buzz for everyone waiting to watch. This Friday it has hit the screens, and everyone knew about the title which itself says story of a person hunger for money.

 

Let me introduce Arya(Rohitt) an advocate who is from a middle class family background and his caring mother(Sithara) working for a orphanage. Arya has a girlfriend (Kavya) who is also his assistant and has plans to stay happy with him forever. The story starts with a court case of an MLA’s son indulged in a rape case. The case will be taken over by Arya, While the director has showed that Arya defends the case logically to such an extent that the public prosecutor has no evidences to prove that his client is innocent. Though it seems bit dramatic, it’s all there in the game.

 

But this is not the crux of this case; the narration has thriller, horror and some catchy dialogues. Finally let me introduce bad boy of a big firm, Chakravarthy(Ravichandran) , the amount of hype given to his character from the movie has been upheld. Looks stylish and classy with the negative character. Yes let me tell you what the 'F' is all about Fantastic and Frenzy.

 

The court room drama is hilarious and the audience will burst into laughter whenever our famous Kannada teacher of Sandalwood, Suchendra Prasad(Public Prosecutor) and Rohitt's gets into an court argument . This court scene should be considered as an entertainment and should not be compared to the real court room scenes. Never to forget appearances of Characters Vijay Chendoor, Sihi Kahi Chandru and Shashikumar’s special appearance they have justified their presence in the movie.

 

This young team of ‘Karvva’ needs to be applauded for their effort to pool in a brilliant story writer Rajasimha for giving kannada audience a new age story which attracts all age group. The cinematographer has really given his best but seems to be director’s execution and advice has played a spoil sport in few scenes. The BGM which is scored by Avinash is average.

 

Director Navneeth is saved by the screenplay. Overall it is a decent entertainer with a message to carry back home.

 

Rating : 3.25/5

Dhwaja is a political thriller which narrates a story of what really goes behind the manipulative game of politics set in a village backdrop.

 This is a Remake of Tamil film Kodi. Ashok Kashyap who had a good time as a cinematographer is helming the director's hat in Dhwaja. Debutant Ravi has played a dual role along with Priyamani and Divya.

 

 

Dhwaja and Jana (both played by Ravi) are twins by birth. His father was also a low-rung party worker, brings him up to become a politician, before setting himself on fire, protesting against a factory who toxic mercury waste has ruined lives in the locality.Anbu is a soft spoken and intelligent, who works as a college professor.  Dhwaja falls for the over ambitious Ramya (played by Priyamani) who belongs to the rival party and has been in politics since childhood like him. While Dhwajais the youth wing secretary of his party and a prospective candidate, Ramya’s party selects her for an upcoming bye-election. Meanwhile, Jana is in love with Mahalakshmi(Divya), a egg vendor.

In a Sudden development, Dhwaja was made to contest against her girl friend Ramya. Will the love birds fight against each her? How will Jana comes into this mix makes the crux of this film.

 

 Ravi in his debut has done a very neat job. The swag in the character Dhwaja is uplifted by him. Priyamani has given one of her career best performances in this film. As a Cunning politician, she is outstanding. Divya was lively in her brief role.TN Seetharam as a Party leader has done a good job.

 

Songs which are retained from the original film Kodi are bit average. The BGM is convincing for this political thriller.The action sequences are choreographed well. The cinematography is very good throughout the movie.

 

Summing it up, Dhwaja works for its treatment and performances. Audience can have a good watching experience.

 

Rating 3.5/5

ಆರ್ಥಿಕ ಶಿಸ್ತನ್ನು ಹೇಳಿಕೊಡುವ 'ಕಾನೂರಾಯಣ' : ಚಿತ್ರ ವಿಮರ್ಶೆ
-----------
ರಾಜ್ಯಾದ್ಯಾಂತ ಹೆಸರು ಮಾಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳು ಹಳ್ಳಿಗಳಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಈ ಗ್ರಾಮೀಣಾಭಿವೃದ್ಧಿ ಸಂಘಟನೆಯ ಮಹತ್ವವನ್ನು ಸಾರುವ ಸಿನಿಮಾವೆ ಕಾನೂರಾಯಣ.
.
ಇದು ಒಬ್ಬ ವ್ಯಕ್ತಿಯ ಕಥೆಯಲ್ಲ ಬದಲಿಗೆ ಒಂದು ಹಳ್ಳಿಯ ಕಥೆ. ಕಾನೂರು ಎಂಬ ಹಳ್ಳಿಯಲ್ಲಿನ ಜನರಿಗೆ ಸಾಕಷ್ಟು ಸಮಸ್ಯೆಗಳು. ಈ ಎಲ್ಲರ ಸಮಸ್ಯೆಗಳಿಗೆ ಹಣದ ಅಭಾವವೆ ಮೂಲ ಕಾರಣ. ಮಹಿಳೆಯರು ಆರ್ಥಿಕ ಶಿಸ್ತು ಹಾಗೂ ಉಳಿತಾಯ ಮಾಡುವುದನ್ನು ಕಲಿತುಕೊಳ್ಳಬೇಕು, ಇದರ ಜತೆಗೆ ಸಾಲದ ಹೊರೆಯಿಂದಾಗಿ ಆಗುತ್ತಿರುವ ರೈತರ ಸಾವಿನ ಸಂಖ್ಯೆ ಕಡಿಮೆಯಾಗಬೇಕು ಎನ್ನುವ ಸಂದೇಶವನ್ನು ಕಾನೂರಾಯಣ ಸಿನಿಮಾ ನೀಡುತ್ತದೆ.
.
ಈ ಸಂದೇಶವನ್ನು ನೀಡಲು ನಿರ್ದೇಶಕ ನಾಗಾಭರಣ ಶ್ರೀ ಧರ್ಮಸ್ಥಳ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಸಂಘವನ್ನು ಬಳಸಿಕೊಂಡಿದ್ದಾರೆ. ಕಾನೂರಿನ ಹಳ್ಳಿಗರಿಗೆ ಆರ್ಥಿಕ ಶಿಸ್ತು, ಉಳಿತಾಯದ ಬಗ್ಗೆ ಅರಿವು ಮೂಡಿಸಲು ಸಿನಿಮಾದ ನಾಯಕನನ್ನುಆ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯನಾಗಿಸಿದ್ದಾರೆ.
.
ಹಳ್ಳಿಗರಿಗೆ ಆರ್ಥಿಕ ಶಿಸ್ತನ್ನು ನಾಯಕ ಹೇಳುತ್ತಿದ್ದರೆ, ಊರಿನ ಇನ್ನೊಂದು ವರ್ಗದ ಜನ ಇದನ್ನು ತಪ್ಪು ಎನ್ನತ್ತಿರುತ್ತಾರೆ. ಇದೆಲ್ಲವನ್ನು ದಾಟಿ ಕಾನೂರಿನ ಮಂದಿ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಚಿತ್ರಕಥೆ.
.
ಗ್ರಾಮೀಣ ಭಾಗದ ಆರ್ಥಿಕ ವ್ಯವಸ್ಥೆಗೆ ಸ್ವಸಹಾಯ ಸಂಘಗಳು ಹೇಗೆ ನೆರವಾಗುತ್ತವೆ ಎಂಬುದರ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿಗೆ ಮೂಡಿ ಬಂದಿರುವ ಸಿನಿಮಾ ಕಾನೂರಾಯಣ.
.
ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಮಾಡುತ್ತಿದ್ದ ಕೆಲಸಗಳನ್ನು ತೆರೆಯ ಮೇಲೆ ತರುವುದರ ಜೊತೆಗೆ, ಜಾಗೃತಿ ಮೂಡಿಸಲಾಗಿದೆ.
.
ಪ್ರತಿಯೊಬ್ಬರಿಗೂ ಆರ್ಥಿಕ ಶಿಸ್ತು ಬಹಳ ಮುಖ್ಯ, ಎನ್ನುವ ಜಾಗೃತಿಗಾಗಿ ಸಿನಿಮಾ ಮಾಡಿರುವುದರಿಂದ ಮನರಂಜನೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸಿಕ್ಕ ಅವಕಾಶದಲ್ಲಿಯೇ ಒಂದಷ್ಟು ಕಮಷಿರ್ಯಲ್‌ ಅಂಶಗಳನ್ನು ಬೆರೆಸಿದ್ದಾರೆ ನಾಗಾಭರಣ.
ಹಳ್ಳಿ ರಾಜಕೀಯದ ದೃಶ್ಯಗಳು ಒಂದಷ್ಟು ಎಳೆದಂತೆ ಅನ್ನಿಸುತ್ತವೆ. ಆದರೂ ಸಿನಿಮಾದ ಆಶಯದಿಂದಾಗೆ ಗಮನ ಸೆಳೆಯುತ್ತದೆ. ಇನ್ನು ನಾಯಕ ಸ್ಕಂದ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
.
ಹಳ್ಳಿ ಹುಡುಗಿಯಾಗಿ ಡಿಗ್ಲಾಮ್‌ ರೋಲ್‌ನಲ್ಲಿ ಸೋನುಗೌಡ ನೋಡುಗರಿಗೆ ಇಷ್ಟವಾಗುತ್ತಾರೆ. ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಬಲ್ಲೆ ಎಂಬುದನ್ನು ಸೋನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಉಳಿದಂತೆ, ದೊಡ್ಡಣ್ಣ, ಅಶ್ವತ್ಥ್ ನೀನಾಸಂ, ಮನು ಹೆಗಡೆ, ಕರಿಸುಬ್ಬು,ಕಡ್ಡಿಪುಡಿ ಚಂದ್ರು, ಸುಂದರ್‌ ರಾಜ್‌, ಸುಂದರ್‌, ಗಿರಿಜಾ ಲೋಕೇಶ್‌, ಜಾನ್ವಿ ಜ್ಯೋತಿ, ಹೀಗೆ ಎಲ್ಲರೂ ತಮಗೆ ವಹಿಸಿದ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ವಾಸುಕಿ ವೈಭವ್‌ ಸಂಗೀತದಲ್ಲಿ ಹಾಡುಗಳು ಕಿವಿಗೆ ಇಂಪಾಗಿ ಕೇಳಿಸುತ್ತವೆ.
.
ರೇಟಿಂಗ್‌: 3/5.
#Kanoorayana #Cineloka
ಅಪ್ಪಟ ಗ್ರಾಮೀಣ ಕಥಾಹಂದರ ಹೊಂದಿರುವ ಡೇಸ್ ಆಫ್ ಬೋರಾಪುರ ಈವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿ ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲ ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
.
ತುಂಬಾ ಸುಭಿಕ್ಷವಾಗಿದ್ದ ಒಂದು ಕುಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಏನೇನೆಲ್ಲ ಬದಲಾವಣೆಗಳಾದವು ಎಂಬ ವಿಷಯವನ್ನು ಇಟ್ಟುಕೊಂಡು ಮಾಡಿದಂಥ ಕಥಾನಕವಿದು.
.
ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಲಾನಿರ್ದೇಶಕ ದಿನೇಶ್ ಮಂಗಳೂರು ಬೆಟ್ಟೇಗೌಡ ಎಂಬ ಪಾತ್ರವನ್ನು ಮಾಡಿದ್ದರೆ, ಅವರ ಪುತ್ರ ಸೂರ್ಯ ಸಿದ್ದಾರ್ಥ ನಾಯಕನಾಗಿ ನಟಿಸಿದ್ದಾರೆ. ಪ್ರಶಾಂತ್ ಸಿ.ಎಂ. ಅನಿತಾ ಭಟ್ ಪ್ರಕೃತಿ ಮತ್ತು ಅಮಿತಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ 35 ದಿನಗಳ ಕಾಲ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ.
.
ನಾಯಕ ಸೂರ್ಯ ಮಾತನಾಡಿ ಇದೊಂದು ಸಸ್ಪೆನ್ಸ್, ಥ್ರಿಲರ್, ಕಾಮಿಡಿ ಸಿನಿಮಾ. 10 ದಿನಗಳ ಹಿಂದಷ್ಟೇ ಬಿಟ್ಟಿದ್ದ ಟ್ರೈಲರ್‍ಗೆ ಅದ್ಭುತ ರೆಸ್ಪಾನ್ಸ್‍ಸಿಕ್ತು. ಈ ಚಿತ್ರದಲ್ಲಿ ನನ್ನದು ಒಬ್ಬ ಹಳ್ಳಿಹುಡುಗನ ಪಾತ್ರ. ಸುಮಾರು ಷೇಡ್ಸ್ ಈ ಪಾತ್ರದಲ್ಲಿದೆ. ಈ ಹಿಂದೆ ನಾನು ಮಾಡಿದ್ದ ಚಿತ್ರದಲ್ಲಿ ಲವರ್‍ಬಾಯ್ ಆಗಿದ್ದೆ ಎಂದು ಹೇಳಿದರು. ಮತ್ತೊಬ್ಬ ನಾಯಕ ಪ್ರಶಾಂತ್ ಮಾತನಾಡುತ್ತ ನಾನೊಬ್ಬ ಭಗ್ನ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇಡೀ ಸಿನಿಮಾದಲ್ಲಿ ನಾಯಕಿಯನ್ನು ಟಚ್ ಮಾಡುವುದಿಲ್ಲ. ಚಿತ್ರದ ಡೈಲಾಗ್‍ಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಇಡೀ ಸಿನಿಮಾ ಅರ್ಥವಾಗುತ್ತದೆ ಎಂದು ಹೇಳಿದರು.
.
ನಾಯಕಿ ಅಮಿತಾ ರಂಗನಾಥ್ ಮಾತನಾಡಿ ಭಾಗ್ಯ ಎಂಬ ಹಳ್ಳಿಯ ವಿದ್ಯಾವಂತೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಮೆಚೂರ್ಡ್ ಹೆಣ್ಣಿನ ಪಾತ್ರ. ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು.
.
ನಟಿ ಅನಿತಾ ಭಟ್ ಮಾತನಾಡಿ, ಒಬ್ಬ ಡ್ರಾಮಾ ಆರ್ಟಿಸ್ಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪ್ರಕೃತಿ ಮಾತನಾಡಿ ನನ್ನಲ್ಲಿನ ಟ್ಯಾಲೆಂಟನ್ನು ತೋರಿಸುವಂಥ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ಲಕ್ಷ್ಮಿ ಎಂಬ ಇನ್ನೋಸೆಂಟ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
.
ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಹಾಡನ್ನು ಹಾಡಿದ್ದಾರೆ. ನಟ ಶಿವರಾಜ ಕುಮಾರ್ ಅಭಿಮಾನಿಗಳಾದ ಮಧು ಬಸವರಾಜ ಹಾಗೂ ಅಜಿತ್‍ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಎನ್.ಆದಿತ್ಯ ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮನು ಮಂಡ್ಯ ಈ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿ ಸಹನಿರ್ದೇಶನ ಮಾಡಿದ್ದಾರೆ. ಹೈದರಾಬಾದ್ ಮೂಲದ ನಟ ಶಫಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರಘು ಪಾಂಡೇಶ್ವರ, ಮಹದೇವ ಲಾಲಿಪಾಳ್ಯ ಉಳಿದ ಪಾತ್ರಗಳಲ್ಲಿದ್ದಾರೆ.
.
#DaysOfBorapura #Cineloka
ಈ ವಾರ ಬಿಡುಗಡೆಯಾಗುತ್ತಿರುವ 'ಬಕಾಸುರ' ಚಿತ್ರದಲ್ಲಿ ಹಣವೇ ಚಿತ್ರದ ಮುಖ್ಯ ಕಥಾವಸ್ತುವಂತೆ.
.
ಕ್ರೇಜಿಸ್ಟಾರ್‌ ರವಿಚಂದ್ರನ್‌,ಆರ್‌ ಜೆ ರೋಹಿತ್‌ ಮತ್ತು ಕಾವ್ಯ ಗೌಡ ನಟಿಸಿರುವ ಈ ಚಿತ್ರದಲ್ಲಿ ಒಳ್ಳೆಯ ವ್ಯಕ್ತಿಯೊಬ್ಬ ಹಣದ ಹಿಂದೆ ಬಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ, ಅದರಿಂದ ಆ ವ್ಯಕ್ತಿ ಎದುರಿಸುವ ಸಮಸ್ಯೆಗಳೇನು ಎಂಬುದನ್ನು ಕಾಮಡಿ, ಹಾರರ್‌ ಮೂಲಕ ಹೇಳಿದ್ದಾರಂತೆ ನಿರ್ದೇಶಕ ನವನೀತ್‌.
.
ಕ್ರೇಜಿಸ್ಟಾರ್‌ ರವಿಚಂದ್ರನ್‌ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಚಿತ್ರದಲ್ಲಿ ನೆಗೆಟಿವ್‌ ರೋಲ್‌ನಲ್ಲಿ ನಟಿಸಿದ್ದಾರೆ.
ಎಲ್ಲರಿಗೂ ದುಡ್ಡು ಬೇಕು. ಒಳ್ಳೆಯವರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಆಗ ಏನಾಗುತ್ತದೆ ಎನ್ನುವುದು ಕುತೂಹಲ ಎಂದು ನಿರ್ದೇಶಕ ನವನೀತ್‌ ಮಾಧ್ಯಮಗಳಿಗೆ ತಿಳಿಸಿದರು.
.
ಚಿತ್ರಕ್ಕೆ ಮೊದಲಿಗೆ ನಿರ್ಮಾಪಕರೊಬ್ಬರು ಹಣ ಹೂಡಲು ಮುಂದೆ ಬಂದಿದ್ದರಂತೆ. ಆದರೆ, ಕೆಲ ದಿನಗಳ ನಂತರ ಅವರು ಪ್ರೊಡಕ್ಷನ್‌ನಿಂದ ಹಿಂದೆ ಸರಿದ ಪರಿಣಾಮ ರೋಹಿತ್‌ ಸ್ನೇಹಿತರು ಮತ್ತು ಚಿತ್ರತಂಡದ ಸದಸ್ಯರು ಸೇರಿಕೊಂಡು ಸಿನಿಮಾವನ್ನು ಕಂಪ್ಲೀಟ್‌ ಮಾಡಿದ್ದಾರೆ.
.
ಗಾಂಧಾರಿ ಧಾರಾವಾಹಿ ಖ್ಯಾತಿಯ ಕಾವ್ಯಾ ಗೌಡ ಈ ಚಿತ್ರದ ನಾಯಕಿ. ಇದು ಅವರ ಪ್ರಥಮ ಚಿತ್ರ. ಆದರೆ ಉತ್ತಮ ಅಭಿನಯವನ್ನು ಅವರು ನೀಡಿದ್ದಾರಂತೆ.
ಮೋಹನ್‌ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ಬಿ. ಅವಿನಾಶ್‌ ಸಂಗೀತ ಸಂಯೋಜಿಸಿದ್ದಾರೆ. ಸಾಧುಕೋಕಿಲ, ಶಶಿಕುಮಾರ್‌, ವಿಜಯ್‌ ಚೆಂಡೂರ್‌ ತಾರಾಗಣದಲ್ಲಿದ್ದಾರೆ.
.
ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಥ ನಾಯಕ್ ಎಂಬ ಇಬ್ಬರು ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
.
#Buckaasuura #Cineloka
.

ನೀರ್‍ದೋಸೆ ಬೆಡಗಿ ಹರಿಪ್ರಿಯಾ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಚಿತ್ರ `ಸೂಜಿದಾರ' ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗಿದೆ.
 
ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್, ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2 ವರ್ಷಗಳ ಹಿಂದೆ ಈ ಕಥೆಯನ್ನು ಓದಿದ ಮೌನೇಶ್, ಕೂಡಲೇ ಇಂದ್ರಕುಮಾರ್‍ಗೆ ಈ ಕಥೆಯನ್ನು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿ ತೆರೆಗೆ ಬರುವ ಸನ್ನಾಹದಲ್ಲಿದೆ.
.
ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚೀಂದ್ರ ನಾಯಕ್ ಬೆಳ್ತಂಗಡಿ ಸೇರಿ ನಿರ್ಮಿಸಿರುವ ಈ ಚಿತ್ರದ ಮೂಲಕ ಯಶ್ ಶೆಟ್ಟಿ ಎಂಬ ಹೊಸ ಪ್ರತಿಭೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತಕುಮಾರ್, ಚೈತ್ರಾ ಹರೀಶ್, ನಾಗರಾಜ್ ಪತ್ತಾರ್ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಅಶೋಕ್ ರಾಮನ್ ಅವರ ಛಾಯಾಗ್ರಹಣವಿರುವ ಈ ಚಿತ್ರ ಇದೀಗ ಬಿಡುಗಡೆಯ ತಯಾರಿಯಲ್ಲಿದೆ.
.
ರಂಗಭೂಮಿ ಮತ್ತು ಸಾಹಿತ್ಯದ ಹಿನ್ನೆಲೆ ಇರುವವರು ಸಿನಿಮಾ ಮಾಡಲು ಹೊರಟಾಗ ಸಹಜವಾಗಿಯೇ ಕುತೂಹಲವಿರುತ್ತದೆ. ಅಂಥಾದ್ದೇ ನಿರೀಕ್ಷೆಗೆ ಕಾರಣವಾಗಿರೋ `ಸೂಜಿದಾರ' ಚಿತ್ರದ ಐದು ಹಾಡುಗಳಿಗೆ ಭಿನ್ನಷಡ್ಜ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂದಷ್ಟು ಸ್ಕ್ರಿಪ್ಟ್‍ವರ್ಕ್ ಕೆಲಸ ಮಾಡುತ್ತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮೌನೇಶ್ ಬಡಿಗೇರ್ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಸಿನಿಮಾ ಮಾಡಿದ್ದಾರೆ.
.
ಈ ಚಿತ್ರವು ಪ್ರೇಕ್ಷಕರ ವಲಯದಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಮೊದಲಬರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಸೂಜಿದಾರ ಚಿತ್ರದ ಪೋಸ್ಟರ್‍ಗಳೇ ಸಿನಿಮಾದ ಬಗ್ಗೆ ಹೆಚ್ಚಿನ ಕ್ಯೂರಿಯಾಸಿಟಿ ಹುಟ್ಟುಹಾಕುವಂತಿದೆ.
.
ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಥ ನಾಯಕ್ ಎಂಬ ಇಬ್ಬರು ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
.
#Soojidhara #Cineloka

 

ಅಶೋಕ್‌ ಕಶ್ಯಪ್‌ ನಿರ್ದೇಶನದ ಧ್ವಜ ಚಿತ್ರದಲ್ಲಿ ರಾಜಕಾರಣಿ ರಮ್ಯಾ ಆಗಿ ನಟಿಸಿದ್ದಾರೆ ಪ್ರಿಯಾಮಣಿ.  ಹೌದು ರವಿ ಮತ್ತು ಪ್ರಿಯಾ ಮಣಿ ನಟಿಸುತ್ತಿರುವ 'ಧ್ವಜ' ಚಿತ್ರದಲ್ಲಿ ಪ್ರಿಯಾ ಮಣಿ ಮಹಿಳಾ ರಾಜಕಾರಣಿಯಾಗಿದ್ದಾರೆ.

.

ಇದು ಪೊಲಿಟಿಕಲ್‌ ಕಥೆಯಾದಾರಿತ ಸಿನಿಮಾ. ಪ್ರಿಯಾಮಣಿ ಪಾತ್ರಕ್ಕೆ ಚಿಕ್ಕಂದಿನಿಂದಲೂ ಅಧಿಕಾರ, ಕುರ್ಚಿಯ ವ್ಯಾಮೋಹವಿರುತ್ತದೆ.ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಪಾತ್ರದಲ್ಲಿ ರಾಜಕೀಯ ವ್ಯಕ್ತಿಯ ಗಾಂಭೀರ್ಯತೆಗಾಗಿ ಪ್ರಿಯಾಮಣಿ ಸೀರೆ, ಸೆಲ್ವಾರ್‌ ಮಾತ್ರ ಧರಿಸಿದ್ದಾರೆ.

.

ಈ ವಾರ ಈ ಚಿತ್ರ ಬಿಡುಗೆಯಾಗುತ್ತಿದೆ. ವಿಶೇಷ ಎಂದರೆ ಟ್ರೇಲರ್‌ ಬಿಡುಗಡೆಯಾದ ಇದು ರಮ್ಯ ಅವರ ನಿಜ ಜೀವನದ ಕಥೆ ಎನ್ನಲಾಗಿತ್ತು. ಆದರೆ ರಮ್ಯ ಅವರ ಜೀವನಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿತ್ತು.

.

ತಮಿಳಿನ ಕೊಡಿ ಚಿತ್ರದ ರಿಮೇಕ್‌ ಆಗಿರುವ ಈ ಚಿತ್ರವನ್ನು ಇಲ್ಲಿನ ನೆಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಅಲ್ಲದೆ ಅಲ್ಲಿ ತ್ರಿಷಾ ಮಾಡಿದ್ದ ಚಿತ್ರವನ್ನು ಇಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.

.

Page 2 of 21

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top