tarakaasura

ttm

adweb

udgharsha

Sunil HC Gowda

Sunil HC Gowda

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ವಿಚಿತ್ರ ಖಾಯಿಲೆಯನ್ನು ಇಟ್ಟುಕೊಂಡು ನವ ನಿರ್ದೇಶಕ ಅರ್ಜುನ್‌ ಸಿನಿಮಾ ಮಾಡಿದ್ದಾರೆ, ಆದರೆ ಈ ಖಾಯಿಲೆಯನ್ನು ಸಿನಿಮಾ ಮಾಡುವುದು ಬಹಳ ಕಷ್ಟವಾಯಿತು ಎನ್ನುತ್ತಾರೆ ಅವರು.

.


‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆ ಇದೆ ಎಂದು ನನಗೆ ತಿಳಿದಾಗ ಬಹಳ ಆಶ್ಚರ್ಯಪಟ್ಟಿದ್ದೆ, ಆಗ ಅದನ್ನು ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿ, ಕಥೆ ಮಾಡಲು ಕುಳಿತೆ, ಆದರೆ ಈ ಖಾಯಿಲೆಯನ್ನು ಸಿನಿಮಾ ರೂಪಕ್ಕೆ ಇಳಿಸುವುದು ಬಹಳ ಕಷ್ಟವಾಯಿತು. ಅದಕ್ಕಾಗಿ ಸಾಕಷ್ಟು ವೆಬ್‌ಸೈಟ್‌ಗಳಲ್ಲಿ ಸಂಶೋಧನೆಗಿಳಿದೆ. ಈ ವಿಷಯದ ಬಗ್ಗೆ ಸಿನಿಮಾ ಏನಾದರೂ ಬಂದಿದೆಯಾ ಎಂದು ತಿಳಿದುಕೊಳ್ಳಲು ಯತ್ನಿಸಿದೆ. ಹಾಲಿವುಡ್‌, ಅರೇಬಿಕ್‌ ಸೇರಿ ಎಲ್ಲ ಭಾಷೆಗಳಲ್ಲಿಯೂ ಹುಡುಕಿದೆ, ಆಗ ನನಗೆ ಇದರ ಬಗ್ಗೆ ತೆಲುಗಿನಲ್ಲಿ ಒಂದು ಶಾರ್ಟ್‌ ಫಿಲಂ ಮತ್ತು ಬಿಬಿಸಿಯಲ್ಲಿ ಒಂದು ಡಾಕ್ಯುಮೆಂಟರಿ ಬಂದಿರುವುದು ತಿಳಿದು, ಅದರ ಸಹಾಯದಿಂದ ಸ್ಕ್ರೀನ್‌ಪ್ಲೇ ಮಾಡಿಕೊಂಡೆ,’ಎನ್ನುತ್ತಾರೆ ಅರ್ಜುನ್‌.

.

ಈ ಚಿತ್ರದಲ್ಲಿ ನಾಯಕನಿಗೆ ಆತನ ಎಡಗೈ ವಿಲನ್‌ ಆಗಿರುತ್ತದೆ. ಹಾಗಾಗಿ ಚಿತ್ರಕ್ಕೆ ‘ಸಂಕಷ್ಟಕರ ಗಣಪತಿ’ ಎಂದು ಹೆಸರಿಡಲಾಗಿದೆಯಂತೆ. ಒಂದು ಗಂಭೀರ ಖಾಯಿಲೆಯನ್ನು ತೆರೆಗೆ ಅಳವಡಿಸುವಾಗ ಅದಕ್ಕೆ ಕಾಮಿಡಿ ಮತ್ತು ರೊಮ್ಯಾಂಟಿಕ್‌ ಅಂಶಗಳನ್ನು ಸೇರಿಸಿದ್ದಾರಂತೆ.

ಲಿಖಿತ್‌ಶೆಟ್ಟಿ ಈ ಸಿನಿಮಾದ ನಾಯಕ, ಶ್ರುತಿ ನಾಯಕಿಯಾಗಿ ನಟಿಸಿದ್ದಾರೆ.

.

#Cineloka

 

ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಹಾಗೂ ಗುಜಲ್ ಪುರುಷೋತ್ತಮ್ ಅವರು ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 42` ನೂತನ ಚಿತ್ರದಲ್ಲಿ ಕ್ರೇಜಿಸ್ಟ್ರಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೈಸೂರು ರಸ್ತೆಯಲ್ಲಿರುವ ಬ್ಲೂ ಆರ್ಕೆಟ್ ಅಪಾರ್ಟ್‍ಮೆಂಟ್‍ನಲ್ಲಿ ಸೋಮವಾರ(ಜುಲೈ 23) ಸರಳಪೂಜಾ ಸಮಾರಂಭದೊಂದಿಗೆ ಆರಂಭವಾಯಿತು. ಚಿತ್ರದ ನಿರ್ಮಾಪಕರಾದ ಗುಜಲ್ ಪುರುಷೋತ್ತಮ್ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.


.
ಈ ಹಿಂದೆ `ಜಿಗರ್ ಥಾಂಡಾ` ಹಾಗೂ `ತ್ರಾಟಕ` ಚಿತ್ರಗಳನ್ನು ನಿರ್ದೇಶನ ಮಾಡಿರುವ ಶಿವಗಣೇಶ್ ಈ ಚಿತ್ರದ ನಿರ್ದೇಶಕರು. ಶಿವಗಣೇಶ್ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಡಾ|||ವಿ.ನಾಗೇಂದ್ರಪ್ರಸಾದ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ನೀಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಚಂದ್ರು, ಗಣೇಶ್ ಅವರ ಸಾಹಸ ನಿರ್ದೇಶನವಿದೆ.


.
ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್ ಅವರು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಉಡುಗೆ, ತೊಡುಗೆ ಹೊಸರೀತಿಯಲ್ಲಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರು, ಕೊಡಗು, ಊಟಿ, ಉತ್ತರ ಭಾರತ, ಜಮ್ಮು, ಕಾಶ್ಮೀರ ಮುಂತಾದ ಕಡೆ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ರವಿಚಂದ್ರನ್, ಅಚ್ಯುತಕುಮಾರ್, ಯಶ್‍ಶೆಟ್ಟಿ, ಚೈತ್ರಾರಾವ್, ನಿಸರ್ಗ, ಚೇತನ್, ಅರ್ಜುನ್ ಗೌಡ, ಗಿರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

.

#Cineloka

ನಟ ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆದ ಕೆಸಿಸಿಯ ಎರಡನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ, ಈ ಬಾರಿ 6 ಮಂದಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
.
ವೀರೇಂದ್ರಸೆಹ್ವಾಗ್‌, ಆಸ್ಪ್ರೇಲಿಯಾದ ಆಯ್ಯಡಂ ಗಿಲ್ಕ್ರಿಸ್ಟ್‌, ಶ್ರೀಲಂಕಾದ ತಿಲಕರತ್ನೆ ದಿಲ್ಯಾನ್‌, ದಕ್ಷಿಣ ಆಫ್ರಿಕಾದ ಲ್ಯಾನ್ಸ್‌ ಕ್ಲೂಸ್ನರ್‌, ಹರ್ಷಲ್‌ ಗಿಬ್ಸ್‌ ಮತ್ತು ಇಂಗ್ಲೇಂಡ್‌ನ್ನ ಓವೈಸಿ ಶಾ ಆಡುತ್ತಿದ್ದಾರೆ. ಇದರ ಸಂಬಂಧ ಶನಿವಾರ ನಡೆದ ಸುದ್ದಿಗೋಷ್ಠಿಯನ್ನು ಸುದೀಪ್‌ ಏರ್ಪಡಿಸಿದ್ದರು.
.
ಕೆಸಿಸಿ ಲೀಗ್‌ಗೆ ಶಿವರಾಜ್‌ಕುಮಾರ್‌ ಪುನೀತ್‌,ಯಶ್‌ ಸೇರಿದಂತೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಉಪೇಂದ್ರ, ಗಣೇಶ್‌ ಸೇರಿಕೊಂಡಿರುವುದು ಖುಷಿ ಹೆಚ್ಚಾಗಿದೆ ಎಂದು ಕಿಚ್ಚ ಸುದೀಪ್‌ ಹೇಳಿದರು.
.
ಸೆಪ್ಟಂರ್ಬ 8ರಂದು ನಾಲ್ಕು ಪಂದ್ಯಗಳು, 9 ರಂದು ಎರಡು ಪಂದ್ಯಗಳು ನಡೆಯಲಿದ್ದು, ಅಂದೇ ಫೈನಲ್‌ ಪಂದ್ಯ ಕೂಡ ನಡೆಯುತ್ತದೆ .
ಎಲ್ಲ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ.
#KCC2 #Cineloka

ನೀನಾಸಂ ಸತೀಶ್‌ ನಟನೆಯ 'ಆಯೋಗ್ಯ' ಚಿತ್ರದ 'ಏನಮ್ಮಿ' ಹಾಡು 10 ದಿನದಲ್ಲಿ, 17 ಲಕ್ಷ ಮಂದಿಯಿಂದ ವೀಕ್ಷಣೆಗೊಳಪಟ್ಟಿದ್ದು, 20 ಲಕ್ಷದತ್ತ ಸಾಗುತ್ತಿದೆ.

.

ತನ್ನ ಮೇಕಿಂಗ್‌ ಮತ್ತು ಸ್ಟಿಲ್‌ಗಳಿಂದಾಗಿ ಸಿಕ್ಕಾಪಟ್ಟೆ ಗಮನ ಸೆಳೆದಿದ್ದ ಅಯೋಗ್ಯ ಸಿನಿಮಾದ ಈ ಹಾಡನ್ನು ಇತ್ತೀಚೆಗೆ ನಟ ಧ್ರುವ ಸರ್ಜಾ ರಿಲೀಸ್‌ ಮಾಡಿದ್ದರು. ಅರ್ಜುನ್ ಜನ್ಯ ಅವರ ಸಂಗೀತಕ್ಕೆ ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್‌ ಸಾಹಿತ್ಯ ರಚಿಸಿದ್ದಾರೆ.

.

ಏನಮ್ಮಿ ಏನಮ್ಮಿ ಡಬ್ಸ್ಮ್ಯಾಶ್ ನಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಕನ್ನಡ ಹಾಡು. ಅನೇಕ ಹುಡುಗಿಯರು ಈ ಹಾಡಿಗೆ ಡಬ್ ಸ್ಮ್ಯಾಶ್ ಮಾಡಿ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡುವ ರೇಂಜ್‌ಗೆ ಹಾಡು ಹಿಟ್ ಆಗಿದೆ.

.

ಈ ಹಾಡು ಸಂಪೂರ್ಣ ಗ್ರಾಮ್ಯ ಭಾಷೆಯಲ್ಲಿದ್ದು, ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿತ್ತು. ಯೂಟ್ಯೂಬ್‌ನಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿಯೂ ಇದೆ. ಈ ಹಾಡಿನಲ್ಲಿ ರಚಿತಾ ಮತ್ತು ಸತೀಶ್‌ ಇಬ್ಬರೂ ಬಹಳ ಸುಂದರವಾಗಿ ಕಾಣುತ್ತಾರೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಈ ಚಿತ್ರವನ್ನು ಟಿ ಆರ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದಾರೆ.

.

ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ

 

ಸಿಂಪಲ್‌ ಸುನಿ ನಿರ್ದೇಶನದ ಹೊಸ ಚಿತ್ರ 'ಬಜಾರ್‌' ಟೀಸರ್ 2 ಬಿಡುಗಡೆ ಮಾಡಿ ಸದ್ದು ಮಾಡಿತ್ತು, ಸುನಿ ಅವರು ಈಗ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದ್ದು, ಬಜಾರ್‌ ಸಿನಿಮಾದ ಆಡಿಯೋವನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಿಡುಗಡೆ ಮಾಡಲಿದ್ದಾರಂತೆ.
.

ಧನ್ವೀರ್‌ ಎಂಬ ಯುವಕನನ್ನು ಈ ಚಿತ್ರದ ಮೂಲಕ ಸುನಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಧನ್ವೀರ್‌ ಲುಕ್ಸ್‌ ಮತ್ತು ಟೀಸರ್ ನಲ್ಲಿ ಕಾಣಿಸಿಕೊಂಡಿರುವ ರೀತಿಗೆ ಗಾಂಧಿನಗರದಲ್ಲಿ ಒಳ್ಳೆ ಟಾಕ್‌ ಶುರುವಾಗಿದೆ. ಈಗ ಹಾಡುಗಳು ಸಹ ಅದೇ ರೀತಿ ಸದ್ದು ಮಾಡುತ್ತವೆ ಎನ್ನುತ್ತಿದೆ ಚಿತ್ರತಂಡ. ದರ್ಶನ್‌ ಯಾವತ್ತು ಹಾಡನ್ನು ಬಿಡುಗಡೆ ಮಾಡುತ್ತಾರೆ ಎಂಬುದು ಇನ್ನೂ ಕನ್ಫರ್ಮ್‌ ಆಗಿಲ್ಲ, ಆದರೆ ಅವರು ಬರುವುದು ಪಕ್ಕಾ ಆಗಿದೆ ಎನ್ನುತ್ತಿವೆ ಮೂಲಗಳು.
.
ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಈ ಸಾಲಿಗೆ 'ಬಜಾರ್‌' ಸಹ ಸೇರಿಕೊಳ್ಳುತ್ತದೆ.

 

#Bazaar #Cineloka


ಮೂಕಹಕ್ಕಿ ನಿರ್ದೇಶನ ಮಾಡಿರುವ ನೀನಾಸಂ ಮಂಜು ಈಗ ಕಾಡು, ನಾಡು ನಡುವಿನ ಕತೆಯನ್ನು ಆರಿಸಿಕೊಂಡು ‘ಕನ್ನೇರಿ’ ಅಡಿಬರಹದಲ್ಲಿ ಕಾಡಿನ ವಸಂತಗಳು ಎಂದು ಹೇಳಿಕೊಂಡಿರುವ ಚಿತ್ರ ಶುರು ಮಾಡಿದ್ದಾರೆ. ಕಾಡಿನ ಮಕ್ಕಳಿಗೆ, ವನವೇ ವಾಸತಾಣ. ಅಲ್ಲೇ ನೆಲೆ ಕಂಡುಕೊಂಡಿರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕøತಿಯನ್ನು ಬೆಳೆಸಿಕೊಂಡವರು. ಆದರೆ ದಿನಕಳೆದಂತೆ ಅವರನ್ನೇ ಹೊರ ಹಾಕುವ ಷಡ್ಯಂತರ ನಡೆಯುತ್ತಿದೆ. ಕಾಡಿನ ಜೊತೆ ನಾಡಿನ ಕಥೆಯೂ ಬರಲಿದೆ. ಉದ್ಯೋಗ ಬಯಸಿ ನಾಡಿಗೆ ಬರುವ ಮುಗ್ದ ಜನರಿಗೆ ಇಲ್ಲಿನ ಪರಿಸರ, ರೀತಿ, ನೀತಿ ಎಲ್ಲವು ಹೊಸತಾಗಿರುತ್ತದೆ. ಮುಂದೆ ಪಟ್ಟಣ್ಣ ಇವರ ಮಧ್ಯೆ ನಡುವೆ ಜರುಗುವ ಘಟನೆಗಳು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಜೇನು ಆಕಾಶದ ಅರಮನೆಯೊ ಕಾದಂಬರಿಗೆ ಸೂತ್ರದಾರರಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಚಿತ್ರಕ್ಕೆ ಸಾಹಿತ್ಯ, ಸಂಭಾಷಣೆ ಮಾತುಗಳನ್ನು ಪೋಣಿಸುತ್ತಿದ್ದಾರೆ.
.

ಸುಧಾರಾಣಿ ಗಣಿತ ತಜ್ಞೆಯಾಗಿ ನಟಿಸುತ್ತಿದ್ದಾರೆ. ತಬಲಾನಾಣಿ ಕಾಡು-ನಾಡಿಗೆ ಸೇತುವೆಯಾಗಿ ವಿಶೇಷ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ. ಇವರ ಮಗಳಾಗಿ ಕುಮಾರಿ ಅರ್ಚನಾಗೆ ನಟನೆ ಹೊಸ ಅನುಭವ. ಹಾಡುಗಳಿಗೆ ಕದ್ರಿಮಣಿಕಾಂತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಸುಜೀತ್‍ನಾಯಕ್, ಛಾಯಗ್ರಹಣ ಗುರುಪ್ರಸಾದ್.ಎಂ.ಜಿ, ಚಿತ್ರಕ್ಕಿದೆ.
.
ಬೆಳಗಾವಿಯ ಉಮೇಶ್.ಎಂ.ಕತ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ನಿರ್ಮಾಣ ಮಾಡಬೇಕೆಂಬ ಬಹುದಿನದ ಕನಸನ್ನು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ. ಆಗಸ್ಟ್ ಮೊದಲವಾರದಿಂದ ಕೊಡಗು, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಬಸವನ ಗುಡಿಯ ದೊಡ್ಡಗಣೇಶ ದೇವಾಲಯದಲ್ಲಿ ಚಿತ್ರದ ಮಹೂರ್ತ ನೆರವೇರಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕ್ಯಾಮೆರಾ ಚಾಲನೆಮಾಡಿ ಚಿತ್ರಕ್ಕೆ ಶುಭ ಕೋರಿದರು.

 

#Kanneri #Cineloka

Zee Kannada, creating the best entertainment programmes, has become a household name for quality entertainment. One of the most popular serials on Zee Kannada is Brahmagantu, which narrates the story of Gundamma, an overweight girl who has a helpful nature, and since the beginning, it has been leading the slot. In a surprising twist, Gundamma is going to be a part of Zee Kannada’s dance reality show Dance Karnataka Dance.
.
 The Dance Karnataka Dance competition will take part within the show, as a continuation of the story. Vijay Raghavendra and Arjuna will be the judges, and the programme is filmed on the DKD stage itself.
.
 The hero of the serial, Lucky, is the reason Gundamma chooses to audition for the competition. Lucky always challenges Gundamma to push her limits, and it has now made her try out a different platform. Adding to this, Gundamma's father always wanted his daughter to achieve success in her life in everything she does. However, after his demise, his aspirations stayed wandered, but Puttatthe ignites this in Gundamma again by saying, “It is not enough if you get love from Lucky, you also deserve respect from him. You have to show him that you can achieve anything.” Inspired by her words, Gundamma enters the Dance Karnataka Dance stage.
.
 Gundamma has already proved her mettle by playing kabaddi; she has also proven that her weight will never be a hindrance for her to achieve something. Whether she wins on this journey and is able to receive due respect from Lucky, or if she fails and is humiliated by it, is something we will have to wait and watch. Her dance journey will continue for over a month and a half months on Brahmagantu.
.
Brahmagantu airs from Monday to Friday at 10 pm on Zee Kannada. Shruthi Naidu, who is a popular name in the small screen industry, is directing and producing this serial.
#Cineloka #ZeeKannada

 

ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಅರುಣ್ ಎನ್.ಡಿ. ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ.
.

ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು. 5 ಜನ ಇಂಜಿನಿಯರಿಂಗ್ ಸ್ನೇಹಿತರು ಬಹಳ ವರ್ಷಗಳ ನಂತರ ಗ್ಯಾಪ್ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸಂಧಿಸುವುದು ಒಂದು ಪೊಲೀಸ್ ಠಾಣೆಯಲ್ಲಿ ಸಂಧಿಸುವ ಸಂದರ್ಭ ಹೇಗೆ ಏಕೆ ಎಂಬುದುದನ್ನು ಹೇಳುವ ಚಿತ್ರವೇ ದಿವಂಗತ ಮಂಜುನಾಥನ ಗೆಳೆಯರು.
.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರು ಆದ ಅರುಣ್ ಇದೊಂದು ಮಲ್ಟಿ ಲೇಯರ್ ಸಿನಿಮಾ 10 ವರ್ಷಗಳು ಕಳೆದ ನಂತರ ಈ ಸಿನಿಮಾ ನೋಡಿದರೂ ಹಳೆಯದು ಅನಿಸುವುದಿಲ್ಲ. ಸುಮಾರು 6-7 ತಿಂಗಳ ಕಾಲ ಕೂತು ಈ ಸ್ಕ್ರಿಪ್ಟ್ ಭರವಸೆಯ ಮೇಲೆ ಇದೇ ಟೈಟಲ್ ಕ್ಯಾಚಿಯಾಗಿದೆ ಅನಿಸಿತು. ಹಾಗಾಗಿ ದಿವಂಗತ ಮಂಜುನಾಥ ಗೆಳೆಯರು ಅಂತ ಹೆಸರಿಟ್ಟಿದ್ದೇವೆ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ. ನಮ್ಮ ಚಿತ್ರದಲ್ಲಿ 90 ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಿದ್ದೇವೆ. ಪುಟ್ಟಣ್ಣ ಸ್ಟುಡಿಯೋ ಭೂಮಿಕ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೊಂದು ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರ. ಸಿನಿಮಾ ಆಗಷ್ಟ ಮೊದಲವಾರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು.
.

ರುದ್ದ ಪ್ರಯಾಗ್ ಹಾಗೂ ಶೀತಲ್ ಪಾಂಡ್ಯ ಪ್ರಮುಕ ಪಾತ್ರದಲ್ಲಿ ನಟಿಸಿದ್ದು ಶಂಕರ್ ಮೂರ್ತಿ ಅವಿನಾಶ್ ಮುದ್ದಪ್ಪ ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೋ ಗೋಪಿ ಶೀಗೆಹಳ್ಳಿ ಸಾಹಿತ್ಯ ಬರೆದಿದ್ದಾರೆ. ರವಿಪೂಜಾರ್ ಈ ಚಿತ್ರದ ಕಲಾ ನಿರ್ದೇಶನ ಹಾಗೂ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
.

ನಾಯಕ ರುದ್ರ ಪ್ರಯಾಗ್ ಐ.ಟಿ.ಕಂಪನಿಯಲ್ಲಿ ವರ್ಕ್ ಮಾಡುತ್ತಿದ್ದವರು ಒಬ್ಬ ಕಲಾವಿದನಾಗಬೇಕೆಂದ ಆಸೆಯಿಂದ ಕೆಲಸ ತೊರೆದು ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
.
#ManjunathanaGeleyaru #Cineloka

 
ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವು ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ‘ಗಂಡುಲಿ’ ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಆರ್.ಟಿ.ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಪಕ್ಕ ಹಳ್ಳಿಯ ಸೊಗಡಿನ ಕಥಾ ಹಂದರ ಹೊಂದಿರುವ ಈ ಚಿತ್ರದ ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸುತ್ತಿದ್ದಾರೆ. ವಿನಯ್ ರತ್ನಸಿದ್ದಿ ಈ ಹಿಂದೆ ಇಂಜಿನಿಯರ್ಸ್ ಹಾಗೂ ಕಿಲಾಡಿಗಳು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಗಂಡುಲಿ ಇವರ ಮೂರನೇ ಚಿತ್ರವಾಗಿದೆ.
ಇದೇ ಮೊದಲ ಬಾರಿಗೆ ಗ್ರಾಮೀಣ ಕಥಾ ಹಂದರವನ್ನು ಕೈಗೆತ್ತಿಕೊಂಡಿರುವ ವಿನಯ್ ಈ ಚಿತ್ರಕ್ಕೆ ತುಮಕೂರು, ಕೆ.ಆರ್.ಪೇಟೆ, ಚಾಮರಾಜನಗರ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ವಿಜಯರ್‍ರತ್ನಸಿದ್ಧಿ ಗಂಡುಲಿ ಎನ್ನುವುದು ನಾಯಕನ ನಿಕ್‍ನೇಮ್ ಗ್ರಾಮೀಣ ಪ್ರದೇಶಗಳಲ್ಲಿ ಧೈರ್ಯವಂತ, ಸಾಹಸಿ ಯುವಕರನ್ನು ಗಂಡುಲಿ (ಗಂಡುಹುಲಿ) ಎಂದು ಕರೆಯುವುದು ರೂಡಿಯಲ್ಲಿದೆ. ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರದ ಕಥೆ ಕೂಡ ಅಂತ ಒಬ್ಬ ಯುವಕನ ಮೇಲೆ ನಡೆಯುತ್ತದೆ. ಒಬ್ಬ ಹುಡುಗ ತನ್ನ ಹಳ್ಳಿಯನ್ನು ಹೇಗೆಲ್ಲ ಏಳಿಗೆ ಮಾಡಬಹುದು ಅಲ್ಲದೇ ಹಳ್ಳಿಯನ್ನು ಹೇಗೆಲ್ಲ ಹಾಳುಮಾಡಬಹುದು ಎಂಬುದನ್ನು ಚಿತ್ರದಲ್ಲಿ ನಾಯಕನ ಪಾತ್ರದ ಮೂಲಕ ತೋರಿಸಿದ್ದೇವೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಡೀ ಚಿತ್ರದ ಕಥೆ ಹಳ್ಳಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
.
ನಂತರ ನಾಯಕಿ ಛಾಯಾದೇವಿ ಮಾತನಾಡಿ ಸಿಟಿಯಿಂದ ಹಳ್ಳಗೆ ಡಾಕ್ಟರ್ ಆಗಿ ಬರುವ ಪಾತ್ರವನ್ನು ನಾನು ಕಾಣಿಸಿಕೊಂಡಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ಈ ಹಿಂದೆ ಎ.ಟಿ.ಎಂ. ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದ ರವಿದೇವ್ ಈ ಚಿತ್ರದ 4 ನಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಆಗಷ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಬೇಕೆಂಬ ಯೋಜನೆಯನ್ನು ಚಿತ್ರದ ನಿರ್ದೇಶಕ ಆದ ವಿನಯ್ ರತ್ನ ಸಿದ್ದಿ ಹಾಕಿಕೊಂಡಿದ್ದಾರೆ.
.
ಧಮೇಂದ್ರ ಅರಸ್ ಸುಧಾ ಬೆಳವಾಡಿ ಗೌತಮ್ ವಿಜಯ್ ಪ್ರಜ್ವಲ್, ಶಿವು ಹಾಗೂ ಸಂತೋಷ್ ಉಳಿದ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ.
#Ganduli #Cineloka

ಸರ್ಜಾ ಕುಟುಂಬದಿಂದ ಇಂಡಸ್ಟ್ರಿಗೆ ಕಾಲಿಟ್ಟಿರುವ ಎಲ್ಲ ಪ್ರತಿಭೆಗಳು ಆ್ಯಕ್ಷನ್‌ ಸ್ಟಾರ್‌ಗಳೇ, ಈಗ ಆ ಮನೆಯಿಂದ ಬಂದಿರುವ ಪವನ್‌ತೇಜಾ ನಟನೆಯ 'ಅಥರ್ವ' ಸಹ ಪಕ್ಕಾ ಆ್ಯಕ್ಷನ್‌ ಮತ್ತು ಕಮರ್ಷಿಯಲ್‌ ಸಿನಿಮಾ.

ಕಾಲೇಜಿನಲ್ಲಿ ಓದುತ್ತಿರುವ ಸಾಮಾನ್ಯ ಹುಡುಗ ಅಥರ್ವ, ಮೊದಲ ಬಾರಿಗೆ ನೋಡಿದ ಕೂಡಲೇ ನಾಯಕಿ ಮೇಲೆ ಲವ್‌ ಆಗುತ್ತದೆ. ಇನ್ನೇನು ಪ್ರೀತಿ ಬಲಿಯಬೇಕು ಎನ್ನುವಷ್ಟರಲ್ಲಿ ನಾಯಕ ನಾಯಕಿಯ ಕಣ್ಣಿಗೆ ವಿಲನ್‌ ರೀತಿ ಕಾಣುತ್ತಾನೆ, ಇದ್ಯಾಕೆ ಹೀಗೆ ಎಂದು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.
.

ಅಥರ್ವ ಚಿತ್ರದಲ್ಲಿ ಎಲ್ಲವೂ ಇದೆ, ಸುಂದರ ಹಾಡುಗಳು, ಕಣ್ಣಿಗೆ ಹಬ್ಬ ಎನಿಸುವಂತಹ ಛಾಯಾಗ್ರಹಣ, ನಾಯಕನ ಭರ್ಜರಿ ಆ್ಯಕ್ಷನ್‌ ಹೀಗೆ ಇದೆಲ್ಲದರ ನಡುವೆ ಒಂದಷ್ಟು ನ್ಯೂನ್ಯತೆಗಳು ಇದೆ. ಆದರೆ ನಿರ್ದೇಶಕರ ಮೊದಲ ಸಿನಿಮಾ ಎಂದು ಆ ನ್ಯೂನ್ಯತೆಗಳಿಗೆ ಮಾರ್ಜಿನ್‌ ನೀಡಬಹುದು.
.

ಪವನ್‌ ತೇಜಾ ಮೊದಲ ಚಿತ್ರವಾದರೂ ಒಳ್ಳೆ ಅಭಿನಯ ನೀಡಿದ್ದಾರೆ. ಆ್ಯಕ್ಷನ್‌ ಸಿನಿಮಾ ಮಾಡುವುದಕ್ಕೆ ಹೇಳಿ ಮಾಡಿಸಿದಂತಹ ಮೈಕಟ್ಟು ಅವರದ್ದು, ನಾಯಕಿಗೆ ಮೊದಲ ನೋಟದಲ್ಲಿಯೇ ಇಷ್ಟವಾಗುವಂತೆ ನೋಡುಗರಿಗೂ ಇಷ್ಟವಾಗುತ್ತಾರೆ.ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಆರಡಿ ನಟ ಸಿಕ್ಕಿದ್ದಾನೆ.  ಸನಂ ಶೆಟ್ಟಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸಿನಿಮಾದ ಅಚ್ಚರಿ ಎಂದರೆ ಖಳ ನಟ ಯಶ್‌ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಖಳರಿಗೆ ಬರ ಇದ್ದು, ಬೇರೆ ಭಾಷೆಯಿಂದ ಆಮದು ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಯಶ್‌ ಶೆಟ್ಟಿ ಖಡಕ್‌ ವಿಲನ್‌ ಆಗಿ ಹೊರ ಹೊಮ್ಮಿದ್ದಾರೆ. ತಮ್ಮ ವಿಚಿತ್ರ ಮ್ಯಾನರಿಸಂನಿಂದಾಗಿ ಪ್ರೇಕ್ಷರನ್ನು ದಿಗಿಲುಗೊಳ್ಳುವಂತೆ ಮಾಡುತ್ತಾರೆ.
.

ಉಳಿದಂತೆ ತಾರಾ ತಾನು ಮತ್ತೊಮ್ಮೆ ಅದ್ಭುತ ಅಮ್ಮ ಎಂಬುದನ್ನು ಪ್ರೂವ್‌ ಮಾಡಿದ್ದಾರೆ. ವಿಜೇತ್‌ಕೃಷ್ಣ ಅವರ ಸಂಗೀತ ಮತ್ತು ಸಿನಿಮಾಟೋಗ್ರಫರ್‌ ಶಿವಸೀನ ಅವರ ಕೆಲಸ ಇಷ್ಟವಾಗುತ್ತದೆ. ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಸಿನಿಮಾಗಳನ್ನು ಇಷ್ಟಪಡುವವರು ಈ ಚಿತ್ರವನ್ನು ಎಂಜಾಯ್‌ ಮಾಡಬಹುದು.
.
ರೇಟಿಂಗ್- 3/5

Page 13 of 39

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top