tarakaasura

ttm

adweb

udgharsha

Sunil HC Gowda

Sunil HC Gowda

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ 'ಕೋಟಿಗೋಬ್ಬ-3' ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ.

.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ.
.
ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ ಮತ್ತು ಕಿರುತೆರೆಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
.
ಇನ್ನು ಕೋಟಿಗೊಬ್ಬ-3 ಚಿತ್ರದ ಫಸ್ಟ್‌ ಲುಕ್‌ ಮತ್ತು ಟೀಸರ್‌ ನೋಡಿದ ಬಾಂಬೆ ಮೂಲದ ಕಂಪನಿಯೊಂದು ಹಿಂದಿ ಡಬ್ಬಿಂಗ್‌ ರೈಟ್ಸ್‌ನ್ನು 9 ಕೋಟಿಗೆ ಕೊಂಡುಕೊಳ್ಳಲು ಮುಂದಾಗಿದೆಯಂತೆ. ಇನ್ನು ಎಲ್ಲ ಭಾಷೆಯ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡಾ ಭಾರಿ ಮೊತ್ತದ ಆಫರ್‌ ಬಂದಿದೆಯಂತೆ. ಆದರೆ ಚಿತ್ರೀಕರಣ ಮುಗಿಯುವವರೆಗೂ ಮಾರಾಟ ಮಾಡದಿರುವ ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ.

 

ಚಿತ್ರ: ವಿರಾಜ್.


ನಿರ್ದೇಶಕ: ನಾಗೇಶ್ ನದಾಸಿ. 
ನಿರ್ಮಾಣ : ಮಂಜುನಾಥ ಸ್ವಾಮಿ. 
ಸಿನಿಮಾಟೋಗ್ರಫಿ : ಮಲ್ಲಿಕಾರ್ಜುನ್. 
ಸಂಗೀತ: ಸುಭಾಷ್ ಆನಂದ್. 
ತಾರಾಗಣ: ದೇವರಾಜ್, ವಿನಯ ಪ್ರಸಾದ್, ಜೈಜಗದೀಶ್, ವಿದ್ಯಾಭರಣ್, ಶಿರಿನ್ ಕಂಚವಾಲ, ನಿಖಿತಾ, ಸ್ವಾತಿ, ಕಡ್ಡಿಪುಡಿ ಚಂದ್ರು.
.

ಈ ವಾರ ಬಿಡುಗಡೆಯಾಗಿರುವ ವಿರಾಜ್ ತನ್ನ ಮೇಕಿಂಗ್‌ನಿಂದಾಗಿ ಒಂದಷ್ಟು ಗಮನ ಸೆಳೆದಿತ್ತುಘಿ. ನಾಗೇಶ್ ನರದಾಸಿ ಪ್ರೇಮ ಕಥೆಗೆ ಒಂದೆರೆಡು ಟ್ವಿಸ್ಟ್‌ , ಅದಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವನ್ನು ಬೆರಸಿ ಲವ್‌ ಕಮ್‌ ಆ್ಯಕ್ಷನ್‌, ಮತ್ತು ಫ್ಯಾಮಿಲಿ ಸಿನಿಮಾ ಮಾಡಿದ್ದಾರೆ.
.

ವಿರಾಜ್‌ ಎನ್ನುವುದು ಇಲ್ಲಿ ಸಿನಿಮಾ ನಾಯಕನ ಹೆಸರು. ಈತ ತಾತ ಅಜ್ಜಿಯ ಪ್ರೀತಿಯ ಮೊಮ್ಮಗ. ತಂದೆ ತಾಯಿ ಇಲ್ಲದ ಕಾರಣ ವಿರಾಜ್‌ ಕೂಡಾತನ್ನ ತಾತ ಮತ್ತು ಅಜ್ಜಿಯನ್ನು ದೇವರಂತೆ ಪೂಜಿಸುತ್ತಿರುತ್ತಾನೆ. ಅವರಿಗೆ ನೋವಾಗುವಂತಹ ಯಾವುದೇ ಕೆಲಸವನ್ನು ಅವನು ಮಾಡುವುದಿಲ್ಲ. ಹೀಗಿರುವಾಗ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ಇಷ್ಟಪಡುತ್ತಾನೆ. ತಮ್ಮ ಮೊಮ್ಮಗ ಇಷ್ಟಪಟ್ಟಿದ್ದಾನೆ ಎಂದು ತಾತ, ಅಜ್ಜಿಯೂ ಒಪ್ಪಿಕೊಳ್ಳುತ್ತಾರೆ. ನಾಯಕಿಯ ತಂದೆ ತಾಯಿಗೆ ಯಾವಾಗಲೂ ಸ್ಟೇಟಸ್‌ದೇ ಚಿಂತೆ. ಈ ಸ್ಟೇಟಸ್‌ನಿಂದಾಗ ಇವರ ನಿಶ್ಚಿತಾರ್ಥ ಮುರಿದು ಬಿದ್ದು ಮದುವೆ ನಿಂತು ಹೋಗುತ್ತದೆ. ಆದರೆ ಹೀಗೆ ಸ್ಟೇಟಸ್‌ ನಿಂದ ದೂರವಾಗಿದ್ದ ಪ್ರೀತಿ ಮತ್ತೆ ಒಂದಾಗುತ್ತದೆ. ಹೀಗೆ ಒಂದಾದ ಪ್ರೀತಿಗೆ ಮತ್ತೆ ಕಂಟಕ ಬರುತ್ತದೆ. ಈ ಕಂಟಕವೇನು, ಆ ಕಂಟಕ ನಿವಾರಣೆಯಾಗಿ ಇವರಿಬ್ಬರು ಒಂದಾಗುತ್ತಾರೆ ಎಂಬದನ್ನು ಸಿನಿಮಾದಲ್ಲಿಯೇ ನೋಡಬೇಕು.
.

ಚಿತ್ರಕಥೆಯಲ್ಲಿ ಇನ್ನು ಒಂದಿಷ್ಟ ವೇಗ ಬೇಕಿತ್ತು, ಕಾಮಿಡಿ ದೃಶ್ಯಗಳನ್ನು ಕತ್ತರಿಸಬಹುದಿತ್ತು, ಸಿನಿಮಾಟೋಗ್ರಫಿ ಚೆನ್ನಾಗಿದೆ. ಒಂದೇ ಒಂದು ಹಾಡು ಮಾತ್ರ ಗುನುಗುವಂತಿದೆ. ಉಳಿದಂತೆ ನಾಯಕ ವಿಧ್ಯಾಭರಣ್‌ ಮೊದಲ ಪ್ರಯತ್ನಲದಲ್ಲಿಯೇ ಪಾಸ್‌ ಆಗಿದ್ದಾರೆ. ಇನ್ನೊಂದಿಷ್ಟ ಪ್ರಯತ್ನ ಮಾಡಿದರೆ ಒಳ್ಳೆ ನಟನಾಗುವ ಲಕ್ಷಣ ಕಾಣುತ್ತಿದೆ. ನಾಯಕಿಯರಿಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ದೇವರಾಜ್‌, ಜೈಜಗದೀಶ್‌, ಸ್ವಾತಿ, ಶ್ರೀಧರ್‌, ಟೆನ್ನಿಸ್‌ ಕೃಷ್ಣ ಎಲ್ಲರೂ ತಮಗೆ ಕೊಟ್ಟ ಕೆಲಸವನ್ನು ನೀಟಾಗಿ ಮಾಡಿ ಮುಗಿಸಿದ್ದಾರೆ.

ವಿಕೇಂಡ್‌ನಲ್ಲಿ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

. ರೇಟಿಂಗ್ : 3/5


ಹೊಸಬರ ಹೊಸ ಪ್ರೇಮಕಥೆ ಈ "ವಿರಾಜ್" :
ಚಿತ್ರ: ವಿರಾಜ್ನಿರ್ದೇಶಕ: ನಾಗೇಶ್ ನದಾಸಿನಿರ್ಮಾಣ : ಮಂಜುನಾಥ ಸ್ವಾಮಿಸಿನಿಮಾಟೋಗ್ರಫಿ : ಮಲ್ಲಿಕಾರ್ಜುನ್ಸಂಗೀತ: ಸುಭಾಷ್ ಆನಂದ್ತಾರಾಗಣ: ದೇವರಾಜ್, ವಿನಯ ಪ್ರಸಾದ್, ಜೈಜಗದೀಶ್, ವಿದ್ಯಾಭರಣ್, ಶಿರಿನ್ ಕಂಚವಾಲ, ನಿಖಿತಾ, ಸ್ವಾತಿ, ಕಡ್ಡಿಪುಡಿ ಚಂದ್ರು..
ಈ ವಾರ ಬಿಡುಗಡೆಯಾಗಿರುವ ವಿರಾಜ್ ತನ್ನ ಮೇಕಿಂಗ್‌ನಿಂದಾಗಿ ಒಂದಷ್ಟು ಗಮನ ಸೆಳೆದಿತ್ತುಘಿ. ನಾಗೇಶ್ ನರದಾಸಿ ಪ್ರೇಮ ಕಥೆಗೆ ಒಂದೆರೆಡು ಟ್ವಿಸ್ಟ್‌ , ಅದಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವನ್ನು ಬೆರಸಿ ಲವ್‌ ಕಮ್‌ ಆ್ಯಕ್ಷನ್‌, ಮತ್ತು ಫ್ಯಾಮಿಲಿ ಸಿನಿಮಾ ಮಾಡಿದ್ದಾರೆ..
ವಿರಾಜ್‌ ಎನ್ನುವುದು ಇಲ್ಲಿ ಸಿನಿಮಾ ನಾಯಕನ ಹೆಸರು. ಈತ ತಾತ ಅಜ್ಜಿಯ ಪ್ರೀತಿಯ ಮೊಮ್ಮಗ.  ತಂದೆ ತಾಯಿ ಇಲ್ಲದ ಕಾರಣ ವಿರಾಜ್‌ ಕೂಡಾತನ್ನ ತಾತ ಮತ್ತು ಅಜ್ಜಿಯನ್ನು ದೇವರಂತೆ ಪೂಜಿಸುತ್ತಿರುತ್ತಾನೆ. ಅವರಿಗೆ ನೋವಾಗುವಂತಹ ಯಾವುದೇ ಕೆಲಸವನ್ನು ಅವನು ಮಾಡುವುದಿಲ್ಲ. ಹೀಗಿರುವಾಗ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ಇಷ್ಟಪಡುತ್ತಾನೆ. ತಮ್ಮ ಮೊಮ್ಮಗ ಇಷ್ಟಪಟ್ಟಿದ್ದಾನೆ ಎಂದು ತಾತ, ಅಜ್ಜಿಯೂ ಒಪ್ಪಿಕೊಳ್ಳುತ್ತಾರೆ. ನಾಯಕಿಯ ತಂದೆ ತಾಯಿಗೆ ಯಾವಾಗಲೂ ಸ್ಟೇಟಸ್‌ದೇ ಚಿಂತೆ. ಈ ಸ್ಟೇಟಸ್‌ನಿಂದಾಗ ಇವರ ನಿಶ್ಚಿತಾರ್ಥ ಮುರಿದು ಬಿದ್ದು ಮದುವೆ ನಿಂತು ಹೋಗುತ್ತದೆ. ಆದರೆ ಹೀಗೆ ಸ್ಟೇಟಸ್‌ ನಿಂದ ದೂರವಾಗಿದ್ದ ಪ್ರೀತಿ ಮತ್ತೆ ಒಂದಾಗುತ್ತದೆ. ಹೀಗೆ ಒಂದಾದ ಪ್ರೀತಿಗೆ ಮತ್ತೆ ಕಂಟಕ ಬರುತ್ತದೆ. ಈ ಕಂಟಕವೇನು, ಆ ಕಂಟಕ ನಿವಾರಣೆಯಾಗಿ ಇವರಿಬ್ಬರು ಒಂದಾಗುತ್ತಾರೆ ಎಂಬದನ್ನು ಸಿನಿಮಾದಲ್ಲಿಯೇ ನೋಡಬೇಕು..
ಚಿತ್ರಕಥೆಯಲ್ಲಿ ಇನ್ನು ಒಂದಿಷ್ಟ ವೇಗ ಬೇಕಿತ್ತು, ಕಾಮಿಡಿ ದೃಶ್ಯಗಳನ್ನು ಕತ್ತರಿಸಬಹುದಿತ್ತು, ಸಿನಿಮಾಟೋಗ್ರಫಿ ಚೆನ್ನಾಗಿದೆ. ಒಂದೇ ಒಂದು ಹಾಡು ಮಾತ್ರ ಗುನುಗುವಂತಿದೆ. ಉಳಿದಂತೆ ನಾಯಕ ವಿಧ್ಯಾಭರಣ್‌ ಮೊದಲ ಪ್ರಯತ್ನಲದಲ್ಲಿಯೇ ಪಾಸ್‌ ಆಗಿದ್ದಾರೆ. ಇನ್ನೊಂದಿಷ್ಟ ಪ್ರಯತ್ನ ಮಾಡಿದರೆ ಒಳ್ಳೆ ನಟನಾಗುವ ಲಕ್ಷಣ ಕಾಣುತ್ತಿದೆ. ನಾಯಕಿಯರಿಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ  ಮಾಡಿದ್ದಾರೆ. ದೇವರಾಜ್‌, ಜೈಜಗದೀಶ್‌, ಸ್ವಾತಿ, ಶ್ರೀಧರ್‌, ಟೆನ್ನಿಸ್‌ ಕೃಷ್ಣ ಎಲ್ಲರೂ ತಮಗೆ ಕೊಟ್ಟ ಕೆಲಸವನ್ನು ನೀಟಾಗಿ ಮಾಡಿ ಮುಗಿಸಿದ್ದಾರೆ. ವಿಕೇಂಡ್‌ನಲ್ಲಿ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.


ರೇಟಿಂಗ್ :3/5

 

ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ.
.
ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್‍ನ ಪ್ರತಿಯಂದು ಹಂತವನ್ನು ಒಂದು ಎಂಟರ್ಟೈನಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆ ಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನು ರಂಜಿಸಲಿವೆ. ಎವರ್‍ಗ್ರೀನ್ ಸಾಂಗ್ಸ್, ನಕ್ಕು ನಗಿಸೋ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದ ಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ಥ್ ಪ್ರೋಗ್ರಾಮ್, ಕಣ್ಮನ ತಣಿಸೋ ಟ್ರಾವೆಲ್ ಶೋ ಈ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.
.
ಸಿರಿಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆಎಲ್ಲಾರೀತಿಯ ಸಿನಿಮಾಗಳ ಸಂಗ್ರಯವಿದ್ದುಎಲ್ಲಾ ವರ್ಗದ ವೀಕ್ಷಕರನ್ನು ರಂಗಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗುವ ಯೋಜನೆ ನಮ್ಮದಾಗಿದ್ದು ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೋಡೋ ಹೆಬ್ಬಯಕೆ ಸಿರಿಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್‍ ರೂಪಿಸೋ ಬಯಕೆ ನಮ್ಮದಾಗಿದ್ದು ಇದಕ್ಕಾಗಿ ಪ್ರತಿಭಾವಂತರ ತಂಡ ಮತ್ತು ಉತ್ಕಷ್ಠ ತಂತ್ರಜ್ಞಾನ ಬರುತ್ತಿರೋ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀಟುಏರ್) ನಿಮಗೆ ಲಭ್ಯವಾಗಿದ್ದು ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್‍ಗಳನ್ನು ಸಂಪರ್ಕಿಸಬಹುದಾಗಿದೆ.
.
ತಾರೆಯರ ಅಂದ ಚಂದಕ್ಕೆ ಅವರು ತಿನ್ನುವ ಆಹಾರವೂ ಅಷ್ಟೇ ಮುಖ್ಯ.ಆ ಬಗೆಗೆ ತಿಳಿಸಲು ಈ ವಾಹಿನಿಯಲ್ಲಿ ವಿಭ್ನಿನ್ನವಾದ ಅಡುಗೆ ಷೋ ಪ್ರಾರಂಭಿಸುತ್ತಿದ್ದಾರೆ. ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ "ಸಿರಿ ಕನ್ನಡ" ಚಾನಲ್‍ಗೆಇದೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ ಸಿರಿಕನ್ನಡ ವಾಹಿನಿ. ಈ ನಿಮ್ಮಅಭಿಮಾನದ ವಾಹಿನಿಯನ್ನು ಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.

 
ರಾಜಕುಮಾರದ ನಂತರ ಸಂತೋಷ್‌ ಆನಂದ್‌ರಾಮ್‌ ಮತ್ತು ಪವರ್ ಸ್ಟಾರ್  ಪುನೀತ್‌ರಾಜ್‌ಕುಮಾರ್‌ ಮತ್ತೆ ಒಂದಾಗಿರುವ ಯುವರತ್ನ ಸಿನಿಮಾದ ಮುಹೂರ್ತ ಬೆಂಗಳೂರಿನ ಪಂಚಮುಖ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಬುಧವಾರ ನಡೆದಿದೆ.
yuva rathan.JPG7
.
ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಕ್ಯಾಮೆರ ಬಟನ್‌ ಪ್ರೆಸ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದಾರೆ.  ಕೆಜಿಎಫ್‌, ರಾಜಕುಮಾರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ.
.
ಕಳೆದ ಬಾರಿ ಫ್ಯಾಮಿಲಿ ಡ್ರಾಮಾ ಹೇಳಿ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿದ್ದ ಸಂತೋಷ್‌, ಈ ಬಾರಿ ಅಪ್ಪುಗಾಗಿ ಯಾವ ಥರಹದ ಕಥೆ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯದಲ್ಲೇ ಉಳಿದ ತಾರಾಗಣದ ಮಾಹಿತಿಯನ್ನು ಸಂತೋಷ್‌ ಹಂಚಿಕೊಳ್ಳಲಿದ್ದಾರಂತೆ. 
yuva rathan11111

 

ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

.
ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಅಂತೋನಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ.

.

ಶಿರಿನ್ ಕಂಚವಾಲ, ನಿಖಿತ, ದೇವರಾಜ್, ವಿನಯಪ್ರಸಾದ್, ಜೈಜಗದೀಶ್, ಸ್ವಾತಿ, ಕಡ್ಡಿಪುಡಿ ಚಂದ್ರು, ಟೆನ್ನಿಸ್ ಕೃಷ್ಣ, ಚಿದಾನಂದ್ ಶ್ರೀಧರ್, ಉಗ್ರಂ ಮಂಜು, ಉಗ್ರಂ ಶರತ್, ರಾಜ್ ದೀಪಕ್ ಶೆಟ್ಟಿ, ಕೃಷಿ ತಪಾಂಡ, ಕುರಿ ಸುನೀಲ್, ಕಾಮಿಡಿ ಕಿಲಾಡಿ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `99` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

.

ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ 39ನೇ ಚಿತ್ರವಿದು. ಈ ಹಿಂದೆ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ `ಮುಂಗಾರು ಮಳೆ`ಯ ಮುಹೂರ್ತ ಕೂಡ ಇದೇ ದೇವಸ್ಠಾನದಲ್ಲಿ ನೆರವೇರಿತ್ತು.

IMG 20181208 WA0014

.

ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

.

ಗಣೇಶ್ ಅವರಿಗೆ ನಾಯಕಿಯಾಗಿ ಜಾಕಿ ಭಾವನ ನಟಿಸುತ್ತಿದ್ದಾರೆ.

ತೋತಾಪುರಿ, ಪ್ರೀಮಿಯರ್‌ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್‌ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ "ಕಾಳಿದಾಸ ಕನ್ನಡ ಮೇಷ್ಟ್ರು" ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

.

"ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾದಲ್ಲಿ ಜಗ್ಗೇಶ್‌ ಕನ್ನಡ ಶಿಕ್ಷಕರಾಗಿ ನಟಿಸಲಿದ್ದಾರಂತೆ. 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಮಾಡಿದ್ದ ಕವಿರಾಜ್‌ ಎರಡನೇ ಸಿನಿಮಾದಲ್ಲಿ ಕನ್ನಡದ ಕಂಪನ್ನು ಹರಡಿಸಲು ಸಿದ್ಧರಾಗಿದ್ದಾರೆ.

.

ಈ ಚಿತ್ರದಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ ಮೇಘನಾ ಗಾಂವ್ಕರ್‌ ನಟಿಸುತ್ತಿದ್ದಾರಂತೆ ಇದೇ 10ರಿಂದ ಚಿತ್ರೀಕರಣ ಆರಂಭವಾಗಲಿದೆ.

ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ನಟನೆಯ ಮಾಸ್ ಎಂಟರ್‌ಟೇನರ್ "ದಿ ವಿಲನ್‌" ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ.

.

ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ ಮಾಡಿದ ಸಿನಿಮಾ ಇದಾಗಿದ್ದು,ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ನಟನೆಯ ಜೊತೆಗೆ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಪ್ರೇಕ್ಷಕರಿಗೆ ಹಿಡಿಸಿತ್ತು.

.

ಇನ್ನು ಇಡೀ ಸಿನಿಮಾ ಎಚ್‌ಡಿ ಕ್ವಾಲಿಟಿಯ ಪ್ರಿಂಟ್ ಪೈರಸಿ ವಿಡಿಯೋ ಸಾಕಷ್ಟು ಜನರ ಮೊಬೈಲ್‌ನಲ್ಲಿದೆ ಆದರೂ, ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ,ಪ್ರಸನ್ನ ಸೇರಿದಂತೆ 4 ಚಿತ್ರಮಂದಿರಗಳ ಜೊತೆಗೆ ರಾಜ್ಯಾದ್ಯಂತ ಸುಮಾರು 20 ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನಗಳನ್ನು ಪೂರೈಸಿದೆ.

.

"ದಿ ವಿಲನ್‌" ಸಿನಿಮಾ 50 ದಿನಗಳನ್ನು ಪೂರೈಸಿದ್ದಕ್ಕೆ ನಟ ಸುದೀಪ್‌ ಅಭಿಮಾನಿಗಳಿಗೆ ಟ್ವೀಟರ್‌ ಮೂಲಕ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಈ ವರ್ಷದಲ್ಲಿ "ದಿ ವಿಲನ್‌" ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ.

 

ಕಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿದ '96' ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗಲಿದ್ದು, ಅದಕ್ಕೆ 99 ಎಂಬ ಟೈಟಲ್‌ ಫೈನಲ್‌ ಆಗಿದೆ.
.
ಕನ್ನಡದ 99 ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದು, ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸುತ್ತಿದ್ದಾರೆ. ಈಗಾಗಲೇ ಮುಂಗಾರುಮಳೆ, ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಭಾವನಾತ್ಮ ಪ್ರೇಮಕಥೆಯನ್ನು ಹೇಳಿರುವ ಪ್ರೀತಂ ಗುಬ್ಬಿ ಮತ್ತು ಗಣೇಶ್‌ ಈ ಬಾರಿ ಮತ್ತೊಂದು ಪ್ರೇಮ ಕಥೆ ಮೂಲಕ ಬರಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ರಾಮು ನಿರ್ಮಾಣ ಮಾಡಲಿದ್ದಾರಂತೆ.
.

ಇನ್ನು 96ನಲ್ಲಿ ನಟಿಸಿದ್ದ ತ್ರಿಷಾ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಲಿದ್ದಾರೆ ಎಂಬುದರ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸದ್ಯದಲ್ಲೇ 99 ಸಿನಿಮಾ ಸೆಟ್ಟೇರಲಿದೆ.

ಬಜಾರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ಸಿಂಪಲ್ ಸುನಿ, ಇದಾದ ಮೇಲೆ ಶರಣ್‌ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ಸುನಿ ಅವರು ಕಾಮಿಡಿ ಕಿಂಗ್ ಶರಣ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಒಳ್ಳೆ ಸಿನಿಮಾವಾಗುತ್ತದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣ ಮಾಡಲಿದ್ದಾರೆ. 
 .

ಬಜಾರ್ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಶುರುವಾಗಲಿದೆ ಮತ್ತು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬರಲಿವೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

 

ಬಜ಼ಾರ್ ಚಿತ್ರ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರ ತೆರೆಕಾಣುವ ಸಾಧ್ಯತೆ ಇದೆ. ಟೀಸರ್‌ ಮೂಲಕ ಸದ್ದು ಮಾಡುತ್ತಿರುವ ಬಜಾರ್‌ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿವೆ. 

 

ಶರಣ್ ಅವರು ಸದ್ಯ ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Page 3 of 41

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top