IB anigif

Ayugya Gif

adweb

udgharsha

Sunil HC Gowda

Sunil HC Gowda

ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಪಡ್ಡೆ ಹುಲಿ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ.

ಕೆ. ಮಂಜು ಪುತ್ರ ಶ್ರೇಯಸ್‌ಗೆ ಇದು ಡೆಬ್ಯೂ ಮೂವಿ ಆಗಿದ್ದು, ನಟ ಸುದೀಪ್‌,ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಚಿತ್ರರಂಗದ ಗಣ್ಯರು ಬಂದು ಶ್ರೇಯಸ್‌ಗೆ ವಿಷ್‌ ಮಾಡಿದರು.

 

ಈ ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ‘ವಾಸು - ಪಕ್ಕಾ ಕಮರ್ಷಿಯಲ್‌’ ಮತ್ತು ‘ಅಮ್ಮ ಐ ಲವ್‌ ಯು’ ಎಂಬ ಎರಡು ಚಿತ್ರಗಳಲ್ಲಿ ನಿಶ್ವಿಕಾ ನಾಯಕಿಯಾಗಿ ನಟಿಸಿದ್ದರು. ಆ ಎರಡು ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ‘ಪಡ್ಡೆ ಹುಲಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 

ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣ ಇದೆ. ರಮೇಶ್‌ರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

ಪಡ್ಡೆ ಹುಲಿ’ ಚಿತ್ರವು ಇವತ್ತಿನ ಟ್ರೆಂಡ್‌ಗೆ ಇರುವ ಒಂದು ಕಾಲೇಜ್‌ ಲವ್‌ ಸ್ಟೋರಿ ಚಿತ್ರವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ. ಇಲ್ಲೊಂದು ಯೂಥ್‌ ಸ್ಟೋರಿ ಇರಲಿದ್ದು, ಈಗಿನ ಕಾಲದ ಪ್ರೇಮ ಲೋಕ’ ಎನ್ನುತ್ತಾರೆ ಗುರು ದೇಶಪಾಂಡೆ.

ಈ ಚಿತ್ರಕ್ಕಾಗಿ ಈಗಾಗಲೇ ಅದ್ಧೂರಿಯಾಗಿ ಫೋಟೋ ಶೂಟ್‌, ಪ್ರೋಮೋ ಶೂಟ್‌ನ್ನು ನಿರ್ದೇಶಕರು ಮಾಡಿಸಿದ್ದಾರೆ.

 
'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟಿಸುತ್ತಾರೆ, ಆದರೆ ಯಾವ ಲುಕ್‌ನಲ್ಲಿ ಇರುತ್ತಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ, ಸೋಮವಾರ ರಾತ್ರಿ ನೆಲಮಂಗಲದ ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಸುದೀಪ್‌ ಎಂಟ್ರೀ ಸೀನ್‌ ಚಿತ್ರೀಕರಣ ಮಾಡಲಾಗಿದ್ದು, ಸುದೀಪ್‌ ಬಿಳಿ ಶರ್ಟ್‌ ಮತ್ತು ಬಿಳಿ ಕಚ್ಚೆ ಪಂಚೆ ತೊಟ್ಟು ಎಂಟ್ರಿ ಕೊಟ್ಟಿದ್ದಾರೆ.

ಮೊದಲ ದೃಶ್ಯದಲ್ಲೇ ಕಬ್ಬಡಿ ಮೂಲಕ ಸುದೀಪ್‌ ಅವರನ್ನು ಇಂಟ್ರಡ್ಯೂಸ್‌ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಸುದೀಪ್‌ ಯಂಗ್‌ ಅಂಬರೀಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಂಬರೀಷ್‌ ಅವರ ಹೈಟ್‌ ಒಂದು ಮ್ಯಾಚ್‌ ಆಗುವುದಿಲ್ಲ, ಅದಕ್ಕಾಗಿ ಸಿಜಿ ವರ್ಕ್‌ ಸಹ ಮಾಡಲಾಗುತ್ತದೆ.

ಅಂಬರೀಷ್‌ಗೆ ಸುಹಾಸಿನಿ ಜೋಡಿಯಾದರೆ, ಸುದೀಪ್‌ಗೆ ಶ್ರುತಿ ಹರಿಹರನ್‌ ಜೋಡಿಯಾಗಿದ್ದಾರೆ. ಶ್ರುತಿ ಹರಿಹರನ್‌ ಇಲ್ಲಿ ಯಂಗ್‌ ಸುಹಾಸಿನಿಯಾಗಲಿದ್ದಾರೆ. ಕಿಚ್ಚ ಕ್ರಿಯೇಶನ್ಸ್‌ ನಡಿ ಜಾಕ್‌ ಮಂಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗುರುದತ್‌ ಗಾಣಿಗ ಇದರ ನಿರ್ದೇಶಕರು. ಒಟ್ಟಿನಲ್ಲಿ 'ಅಂಬಿ..' ಅಖಾಡದಲ್ಲಿ ಕಿಚ್ಚ ಸೋಮವಾರದಿಂದ ಕಬ್ಬಡಿ ಆಡುತ್ತಿದ್ದಾರೆ.

#AmbiNingVayassaitho #Cineloka #AbhinayaChakravarthy #KicchaSudeep

 
 
ಪುನೀತ್‌ ರಾಜ್‌ಕುಮಾರ್‌ ಅವರ 28 ನೇ ಚಿತ್ರದ ನಾಯಕಿ ಬದಲಾಗಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಆರಂಭಿಸಿರುವ ಚಿತ್ರಕ್ಕೆ ಈ ಮೊದಲು ತೆಲುಗಿನ ಪ್ರಿಯಾಂಕ ಜ್ವಾಲಾಕರ್‌ ನಾಯಕಿಯಾಗಿದ್ದರು. ಈಗ ಅದೇ ಜಾಗಕ್ಕೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಎಂಟ್ರಿ ಕೊಟ್ಟಿದ್ದಾರೆ.
 
ಪವನ್‌ ಒಡೆಯರ್ ನಿರ್ದೇಶನದ ರಾಕ್‌ಲೈನ್‌ ವೆಂಕಟೇಶ್‌ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರು ಈ ಚಿತ್ರಕ್ಕೆ ಮೊದಲು ಪ್ರಿಯಾಂಕ ಜ್ವಾಲಕರ್‌ ಆಯ್ಕೆಯಾಗಿದ್ದರು. ಆದರೆ ಡೇಟ್ಸ್‌ ಕ್ಲಾಶ್‌ ಆಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ರಚಿತಾ ರಾಮ್‌ ಮೊರೆ ಹೋಗಿದೆ.
 
ಮಂಗಳವಾರದಿಂದ ರಚಿತಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು, ಅಪ್ಪು ಮತ್ತು ರಚಿತಾ ಕಾಂಬಿನೇಶನ್‌ನ ಒಂದಷ್ಟು ದೃಶ್ಯಗಳನ್ನು ಯಲಹಂಕ ಬಳಿ ಶೂಟಿಂಗ್‌ ಮಾಡಿಕೊಂಡಿದ್ದಾರೆ ನಿರ್ದೇಶಕ ಪವನ್‌ ಒಡೆಯರ್‌. ರಚಿತಾ ರಾಮ್‌ ಈ ಹಿಂದೆ ಚಕ್ರವ್ಯೂಹದಲ್ಲಿ ಪುನೀತ್‌ ಜತೆ ರೊಮ್ಯಾನ್ಸ್‌ ಮಾಡಿದ್ದರು.
 
ರಚಿತಾ ರಾಮ್‌ ನಟನೆಯ 'ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರೀಕರಣ ಇತ್ತೀಚೆಗೆ ಕಂಪ್ಲೀಟ್‌ ಆಯಿತು. ಇನ್ನು ನೀನಾಸಂ ಸತೀಶ್‌ ನಾಯಕರಾಗಿರುವ 'ಅಯೋಗ್ಯ'ದಲ್ಲಿಯೂ ರಚಿತಾ ರಾಮ್‌ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಅಪ್ಪು ಮತ್ತು ರಚಿತಾ ಮತ್ತೆ ಒಂದಾಗಿರುವು ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ.

ಯುಎಫ್‍ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ, ಈ ವಾರ ಚಿತ್ರಗಳು ಬಿಡುಗಡೆಯಾಗಲಿವೆ.
----------------

ಯುಎಫ್‍ಓ ಮತ್ತು ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಈ ಶುಕ್ರವಾರದಿಂದ ಹೊಸ ಚಿತ್ರಗಳು ಬಿಡುಗಡೆಯಾಗಲಿವೆ.

ಬಿಡುಗಡೆ ಮುಂದಕ್ಕೆ ಹಾಕಿದ್ದ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಈ ವಾರ ದಂಡುಪಾಳ್ಯ-3, ಇದಂ ಪ್ರೇಮಂ ಜೀವನಂ ಮತ್ತು ನನ್ನಿಷ್ಟ ಚಿತ್ರಗಳು ಬಿಡುಗಡೆಯಾಗಲಿವೆ.

 

ಡಿಜಿಟಲ್ ಸರ್ವಿಸ್ ಪ್ರೊವೈಡರ್ಸ್ 15 ದಿನಗಳ ಕಾಲ ಕಾಲಾವಕಾಶ ನೀಡಿದ್ದು, ಸದ್ಯಕ್ಕೆ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಚಲನಚಿತ್ರ ವಾಣಿಜ್ಯ ಮಂಡಳಿ.
ಚಿತ್ರ ನಿರ್ಮಾಪಕರ ಹಿತಾ ದೃಷ್ಟಿಯಿಂದ ಈ ನಿರ್ಧಾರ ಕೈಕೊಂಡಿದ್ದು, ಈ ವಿಷಯವಾಗಿ ನಾಳೆ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರು ಪತ್ರಿಕಾಗೋಷ್ಟಿ ಏರ್ಪಡಿಸಿದ್ದಾರೆ.

#Cineloka

"ರಾಂಬೊ 2" ಸಿನಿಮಾದ ಸ್ಪೇಷಲ್‌ ಹಾಡಿನಲ್ಲಿ ಶರಣ್‌ ಜತೆ ಐವರು ಬೆಡಗಿಯರು ನೃತ್ಯ ಮಾಡಿದ್ದಾರೆ. ಬೆಂಗಳೂರಿನ ಇನ್ನೋವೆಟಿವ್‌ ಫಿಲಂ ಸಿಟಿಯಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ ಚಿತ್ರತಂಡ.

WhatsApp Image 2018 03 13 at 3.57.33 PM

ಶರಣ್ ಅವರ ಇಂಟ್ರೊಡಕ್ಷನ್ ಸಾಂಗ್ ಇದಾಗಿದ್ದು, ಈ ಹಾಡಿನಲ್ಲಿ ಶ್ರುತಿ ಹರಿಹರನ್‌, ಶುಭಾ ಪೂಂಜಾ, ಸಂಚಿತಾ ಪಡುಕೋಣೆ, ಭಾವನರಾವ್‌, ಮಯೂರಿ ನಟಿಸುತ್ತಿದ್ದಾರೆ. ಈ ಐದು ಜನ ನಟಿಮಣಿಯರು ಈ ಹಿಂದೆ ಶರಣ್‌ ನಟನೆಯ ಸಿನಿಮಾಗಳಲ್ಲಿ ನಾಯಕಿಯರಾಗಿದ್ದರು.

WhatsApp Image 2018 03 13 at 3.55.44 PM

"ರಾಂಬೊ 2" ಚಿತ್ರವನ್ನು ಅಟ್ಲಾಂಟ ನಾಗೇಂದ್ರ ನಿರ್ಮಾಣ ಮಾಡಿದ್ದಾರೆ, ಅವರಿಗೆ ಚಿತ್ರದ ತಂತ್ರಜ್ಞರು ಸಾಥ್ ನೀಡಿದ್ದಾರೆ. ಎಲ್ಲ ತಂತ್ರಜ್ಞರು ಪೇಮೆಂಟ್‌ ತೆಗೆದುಕೊಳ್ಳದೇ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.

WhatsApp Image 2018 03 13 at 3.57.34 PM

ಆಶಿಕಾ ರಂಗನಾಥ್‌, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆಯುವ ಕಥೆ ಇದಾಗಿದ್ದು, ಎರಡು ಕಾರುಗಳು ಸಹ ಮುಖ್ಯ ಪಾತ್ರ ನಿರ್ವಹಿಸಿವೆ.ದಿಲ್‌ವಾಲ ಖ್ಯಾತಿಯ ಅನಿಲ್‌ಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಮ್ಯೂಸಿಕ್ ಚಿತ್ರಕ್ಕಿದೆ.

 

 

ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸುತ್ತಿರುವ `ತಾರಾಕಾಸುರ` ಚಿತ್ರಕ್ಕಾಗಿ ಚೇತನ್ ಕುಮಾರ್ ಅವರು ಬರೆದಿರುವ `ಚಂದಮಾಮ ಕಥೆ ಕೇಳಿದ್ದೆ, ಲೈನು ಹಾಕೋರನ್ನ ನೋಡಿದ್ದೆ, ಲವ್ವು ಮಾಡೋರನ್ನ ಬೈತಿದ್ದೆ, ಈಗ ನಾನೇ ಲವ್ವಲ್ ಬಿದ್ದು ಮಕ್ಕರ್ ಆಗೋದೆ` ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಬೆಟ್ಟದಲ್ಲಿ ಮೂರುದಿನಗಳ ಕಾಲ ನಡೆದಿದೆ.

 

ಮಾನ್ವಿತ ಹರೀಶ್, ವೈಭವ್, ಕರಿಸುಬ್ಬು, ಎಂ.ಕೆ.ಮಠ ಅಭಿನಯಿಸಿದ ಈ ಹಾಡಿನ ಚಿತ್ರೀಕರಣದಲ್ಲಿ 500ಕ್ಕೂ ಹೆಚ್ಚು ಸಹ ಕಲಾವಿದರು, 200ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗವಹಿಸಿದ್ದರು. ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.

 

ಹಿಂದೆ `ರಥಾವರ` ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ `ತಾರಾಕಾಸುರ` ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

ವೈಭವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‍ನ ನಟ ಡ್ಯಾನಿ ಸ¥sóÁನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಆರ್ಯ ಅವರ ಮೊದಲ ಕನ್ನಡ ಸಿನಿಮಾ 'ರಾಜರಥ'. ಇದರಲ್ಲಿ ಅವರು 'ವಿಶ್ವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಫಸ್ಟ್ ಲುಕ್ ಸಂಚಲನವನ್ನೇ ಸೃಷ್ಠಿಸಿತು. ಚಿತ್ರದಲ್ಲಿನ ಅವರ ಲುಕ್ ಕಿಚ್ಚ ಸುದೀಪ್ ರವರಿಂದ ಸ್ಫೂರ್ತಿಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

 

ಕಿಚ್ಚ ಸುದೀಪ್ ಅವರು ಅನೂಪ್ ಮತ್ತು ನಿರೂಪ್ ತಂದೆ ಸುಧಾಕರ್ ಭಂಡಾರಿ ಅವರ ಟಿವಿ ಧಾರಾವಾಹಿ ಪ್ರೇಮದ ಕಾದಂಬರಿಯಲ್ಲಿ 90ರ ದಶಕದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಸುದೀಪ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಕಥೆಗಳನ್ನು ಅನೂಪ್ ಹಾಗು ನಿರೂಪ್ ಚರ್ಚಿಸುತ್ತಿದ್ದರು. ತಮ್ಮ ಎಂಜಿನಿಯರಿಂಗ್ ದಿನಗಳಲ್ಲಿ ಅನೂಪ್ ಅವರು "ಯೋಧಾ" ಎಂಬ ಶೀರ್ಷಿಕೆಯಡಿ ಒಂದು ಸ್ಕ್ರಿಪ್ಟ್ ತಯಾರಿಸಿ , ಸುದೀಪ್ ಅವರು ಪೋಲೀಸ್ ಪಾತ್ರ ನಿಭಾಯಿಸಿದರೆ ಚೆನ್ನಾಗಿ ಮೂಡಿ ಬರುತ್ತದೆ ಎಂಬ ಆಲೋಚನೆ ಅನೂಪ್ ಅವರಿಗೆ ತಮ್ಮೆ ಎಂಜಿನಿಯರಿಂಗ್ ದಿನಗಳಲ್ಲಿಯೇ ಬಂದಿತ್ತು.

 

2010 ರಲ್ಲಿ ಅನೂಪ್, 'ವರ್ಡ್ಸ್' ಎಂಬ ಪ್ರಶಸ್ತಿ ಗೆದ್ದ ಕಿರುಚಿತ್ರ ನಿರ್ದೇಶಿಸಿದಾಗ, ಪತ್ರಿಕಾಗೋಷ್ಠಿಗೆ ಅತಿಥಿಯಾಗಿ ಬಂದ ಸುದೀಪ್ ರಿಂದ ಪ್ರಶಂಸೆ ಗಳಿಸಿದ್ದರು. ಆ ಸಮಯದಲ್ಲಿ ಅನೂಪ್ 'ರಾಜರಥ'ದ ಡ್ರಾಫ್ಟ್ ಮಾಡುತ್ತಿದ್ದರು. ಸುದೀಪ್ ಅವರ ವೇಷಭೂಷಣ, ನೀಲಿ ಕುರ್ತಾ, ಜೀನ್ಸ್ ಮತ್ತು ಸ್ಯಾಂಡಲ್ಸ್ ಗಳು ಕೂಡಲೇ ಅನೂಪ್ ಗೆ ಇಷ್ಟವಾಗಿ, "ಕಥೆಯಲ್ಲಿ ಬರುವ ವಿಶ್ವ ಪತ್ರದಂತೆಯೇ ಇದೆಯಲ್ಲ ಎಂದನಿಸಿತಂತೆ!". 'ರಾಜರಥ'ದ ಕೆಲಸ ಶುರುವಾದಂತೆ ವಸ್ತ್ರ ವಿನ್ಯಾಸಕರಾದ ಪತ್ನಿ ನೀತಾ ಶೆಟ್ಟಿಗೆ ಇದೇ ಸಲಹೆ ನೀಡಿದರು, ಅದನ್ನೇ ಕಾರ್ಯರೂಪಕ್ಕೂ ತರಲಾಯಿತು.

 

ಆರ್ಯರ ಸಹಾಯಕರು ತಮ್ಮ ಯಜಮಾನರ ವೇಷಭೂಷಣವನ್ನು ತುಂಬಾ ಇಷ್ಟಪಟ್ಟರು, ಅವರು 'ರಾಜರಥ'ದಲ್ಲಿ ಅತ್ಯುತ್ತಮವಾಗಿ ಕಾಣುತ್ತಾರೆ ಎಂದು ಅವರೆಲ್ಲರೂ ಭಾವಿಸಿದರು. ಆರ್ಯ ಪರದೆಯಮೇಲೆ ನಟಿಯರ ಜೊತೆ ಪ್ರಾಣಯರಾಜನ ಪಾತ್ರ ಮಾಡದೆ, ಈ ಚಿತ್ರದಲ್ಲಿ ಆರ್ಯ ವಿಭಿನ್ನ ಪಾತ್ರ ಮಾಡುವುದನ್ನು ನೋಡಿ ತುಂಬಾ ಖುಷಿಪಟ್ಟರು. ಆರ್ಯ, ಅವರು ಸಂಭಾಷಣೆಗಳನ್ನು ಜಿಮ್ನಲ್ಲಿ, ತಿನ್ನುವಾಗ, ಮಲಗಿದ್ದಾಗ, ಅಕ್ಷರಶಃ ಎಲ್ಲೆಡೆ ಅಭ್ಯಾಸ ಮಾಡುತಿದ್ದರು, ಇದನ್ನು ಕಂಡ ಆರ್ಯ ಅವರ ಸಹಾಯಕರು "ನಿರ್ದೇಶಕ ಅನುಪ್ ಭಂಡಾರಿ ಆರ್ಯರನ್ನು ಚಿತ್ರಹಿಂಸಿಸುತ್ತಿದ್ದಾರೆಂದು" ಹಾಸ್ಯದಿಂದ ಹೇಳುತ್ತಿದ್ದರು. ಕನ್ನಡ ಭಾಷೆ ಆರ್ಯರಿಗೆ ಹೊಸದಾಗಿದ್ದರಿಂದ ತಮ್ಮ ಸಾಲುಗಳನ್ನು ಹಾಗು ಅಭಿವ್ಯಕ್ತಿಗಳನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವುದಕ್ಕಾಗಿ ಆರ್ಯ ಸಂಪೂರ್ಣವಾಗಿ ಗಮನವಹಿಸುತ್ತಿದ್ದರು. ತೆಲುಗು ಅವರ ಮೊದಲ ಭಾಷೆ ಅಲ್ಲ ಹಾಗಾಗಿ ಅವರು ತೆಲುಗಿನ ಸಾಲುಗಳನ್ನು ಪೂರ್ವಾಭ್ಯಾಸ ಮಾಡಿಕೊಳ್ಳುತ್ತಿದ್ದರು.
ಆರ್ಯ ರಂಗಿತರಂಗದ ದೊಡ್ಡ ಅಭಿಮಾನಿಯಾದ ಕಾರಣ, ತಾನು ಪ್ರೀತಿಯಿಂದ ಒಪ್ಪಿಕೊಂಡಿರುವ ಪಾತ್ರಕ್ಕೆ ಅತ್ಯುತ್ತಮವಾದ ಅಭಿನಯ ನೀಡಬೇಕೆಂಬ ಉದ್ದೇಶ ಅವರದಾಗಿತ್ತು.

 

'ರಾಜರಥ' ತಂಡದ ಪ್ರಕಾರ ಕೆಲಸ ಮಾಡುವ ಅತ್ಯಂತ ವಿನಮ್ರ ವ್ಯಕ್ತಿಯಲ್ಲಿ ಆರ್ಯ ಸಹ ಒಬ್ಬರು. "ಅವರು ಸಮಯಕ್ಕೆ ಸೆಟ್ಟಿನಲ್ಲಿರುತ್ತಾರೆ ಮತ್ತು ಪ್ರಶ್ನಿಸದೆಯೇ ಪಾತ್ರಕ್ಕೆ ಅಗತ್ಯವಿರುವ ನಟನೆಯನ್ನು ಮಾಡುತ್ತಿದ್ದರು" ಎಂದು ನಿರ್ದೇಶಕ ಅನುಪ್ ಭಂಡಾರಿ ತಿಳಿಸಿದ್ದಾರೆ.

 

ರಾಜರಥ ರೋಮ್ಯಾನ್ಸ್, ಕಾಮಿಡಿ, ಸಂಗೀತದ ಅಂಶವಿರುವ ಚಿತ್ರ. ಅಜಯ್ ರೆಡ್ಡಿ, ಅಂಜು ವಲ್ಲಭನೆನಿ, ವಿಷು ದಕ್ಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ಅವರನ್ನು ಒಳಗೊಂಡಂತೆ ಜಾಲಿಹಿಟ್ಸ್ ಅವರು ಪ್ರಪಂಚದಾದ್ಯಂತ ಬಿಡುಗಡೆ ಮಾಡುತಿದ್ದಾರೆ.

 
ಈ ಬಾರಿ ಯುಗಾದಿ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮತ್ತು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಮನೆಗಳಿಗೆ ಬರಲಿದ್ದಾರೆ. ಹೌದು ಈ ಇಬ್ಬರು ನಟಿಸಿದ ಸೂಪರ್‌ ಹಿಟ್‌ ಚಿತ್ರಗಳಾದ ಅಂಜನಿಪುತ್ರ ಮತ್ತು ತಾರಕ್‌ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ದರ್ಶನ್‌ ನಟನೆಯ ತಾರಕ್‌ ಚಿತ್ರ ಸ್ಟಾರ್‌ ಸುವರ್ಣದಲ್ಲಿ ಯುಗಾದಿ ಹಬ್ಬದ ದಿನ ಪ್ರಸಾರವಾಗಲಿದೆ. ಪುನೀತ್‌ ರಾಜ್‌ಕುಮಾರ್‌ ಅವರ ‘ಅಂಜನಿಪುತ್ರ’ ಸಿನಿಮಾ ಕೂಡ ಅದೇ ದಿನ ಪ್ರಸಾರ ಆಗುತ್ತಿದೆ. ಯುಗಾದಿ ಹಬ್ಬಕ್ಕೆ ಉದಯ ಟಿವಿಯಲ್ಲಿ ಪುನೀತ್‌ ಸಿನಿಮಾ ಸಂಜೆ ಆರು ಗಂಟೆಗೆ ಟೆಲಿಕಾಸ್ಟ್‌ ಆಗುತ್ತಿದೆ.
ಕನ್ನಡದ ಸ್ಟಾರ್‌ ನಟರಾದ ದರ್ಶನ್‌ ಮತ್ತು ಪುನೀತ್‌ ಅವರ ಸಿನಿಮಾಗಳು ಒಂದೇ ದಿನ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದು, ಯಾವ ಸಿನಿಮಾಗೆ ಟಿಆರ್‌ಪಿ ಹೆಚ್ಚಾಗಿ ಬರುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.
ಇಲ್ಲಿಯವರೆಗೆ ಕನ್ನಡ ಕಿರುತೆರೆಯಲ್ಲಿ ‘ದೊಡ್ಮೆನೆ ಹುಡ್ಗ’ ಸಿನಿಮಾ ಅತಿ ಹೆಚ್ಚು ಟಿ ಆರ್‌ ಪಿ ಪಡೆದ ಸಿನಿಮಾವಾಗಿ ರೆಕಾರ್ಡ್‌ ಮಾಡಿದೆ.
ಒಟ್ಟಿನಲ್ಲಿ ಯುಗಾದ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
#AnjaniPutra #Tarak #ChallengingStarDarshan #PowerStarPuneethRajkumar #Cineloka

 

ಡಿಜಿಟಲ್‌ ಸರ್ವಿಸ್‌ ಪ್ರೊವೈಡರ್ಸ್ ವಿಧಿಸುತ್ತಿರುವ ದರವನ್ನು ಕಡಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶುಕ್ರವಾರ ಥಿಯೇಟರ್‌ ಬಂದ್‌ಗೆ ಕರೆ ಕೊಟ್ಟಿತ್ತು. ಬೆಂಗಳೂರಿನಲ್ಲಿ ಮಾತ್ರ ಚಿತ್ರಮಂದಿರಗಳು ಬಂದ್‌ಗೆ ಸ್ಪಂದಿಸಿದ್ದು, ಉಳಿದಂತೆ ರಾಜ್ಯದ ಇತರೆಡೆ ಸಿನಿಮಾಮಂದಿರಗಳು ನಿರಾಂತಕವಾಗಿ ನಡೆದಿವೆ.


ಈ ವಿವಾದದಿಂದಾಗಿ ಚಿತ್ರರಂಗಕ್ಕೆ ಸುಮಾರು ನಲವತ್ತು ಕೋಟಿಗೂ ಅಧಿಕ ಮೊತ್ತದ ಆರ್ಥಿಕ ನಷ್ಟವಾಗಿದೆ ಎನ್ನಲಾಗುತ್ತಿದೆ.


ಈಗಾಗಲೇ ವಿಧಿಸುತ್ತಿರುವ ದರದಲ್ಲಿ ಶೇ 25ರಷ್ಟು ಕಡಿಮೆ ಮಾಡುವಂತೆ ಯುಎಫ್‌ಒ ಮತ್ತು ಕ್ಯೂಬ್‌ಗೆ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ ಒಟ್ಟಾಗಿ ಮನವಿ ಸಲ್ಲಿಸಿದ್ದವು. ಕರ್ನಾಟಕ ಹೊರತು ಪಡಿಸಿ ಉಳಿದೆಲ್ಲ ಮಂಡಳಿಗಳು ಮಾ.2ರಿಂದಲೇ ಹೊಸ ಸಿನಿಮಾ ಕೊಡದಂತೆ ನಿರ್ಣಯ ತಗೆದುಕೊಂಡಿದ್ದವು. ಆದರೂ, ದರ ಕಡಿತದ ಕುರಿತು ಒಮ್ಮತ ಮೂಡಿಲ್ಲ. ಎರಡು ಬಾರಿ ನಡೆದ ಮಾತಕತೆ ಕೂಡ ವಿಫಲವಾಗಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಥಿಯೇಟರ್‌ ಬಂದ್‌ ಮಾಡುವಂತಹ ನಿರ್ಧಾರ ತಗೆದುಕೊಂಡಿತ್ತು.

ನಿರ್ಮಾಪಕರಿಗೆ ಹೊರೆ ಆಗುವಂತಹ ದರ ನಿಗದಿ ಮಾಡಿದ ಪರಿಣಾಮ ಬಂದ್‌ ಅನಿವಾರ್ಯವಾಗಿತ್ತು, ಈಗ ಶುಕ್ರವಾರ ಎಲ್ಲ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗಿದೆ. ಇಷ್ಟಾಗಿಯೂ ಡಿಜಿಟಲ್‌ ಸರ್ವಿಸ್‌ ಪ್ರೊವೈಡರ್ಸ್‌ ಮನವಿಗೆ ಸ್ಪಂದಿಸದೇ ಹೋದಲ್ಲಿ ಪರ್ಯಾಯ ಮಾರ್ಗದ ಬಗ್ಗೆ ವಾಣಿಜ್ಯ ಮಂಡಳಿಯು ಯೋಚಿಸುತ್ತದಂತೆ.

ಲೂಸ್‌ ಮಾದ ಯೋಗಿ ನಾಯಕರಾಗಿ ನಟಿಸಿರುವ 'ಯೋಗಿ ದುನಿಯಾ'ದಲ್ಲಿ ಅವರು ಟ್ರಾವೆಲ್‌ ಏಜೆಂಟ್‌ರಾಗಿ ನಟಿಸುತ್ತಿದ್ದಾರೆ. 

ಹರಿ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಯೋಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ರುವ ಟ್ರಾವೆಲ್‌ ಏಜೆಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಬೆಂಗಳೂರಿನ ಮೆಜಸ್ಟಿಕ್‌ ರಾತ್ರಿ ಆಗುತ್ತಿದ್ದಂತೆಯೇ ಅನೇಕ ರೂಪಗಳನ್ನು ಪಡೆದುಕೊಳ್ಳುತ್ತದೆ. ಅನೇಕ ಚಟುವಟಿಕೆಗಳು ನಡೆಯುತ್ತವೆ. ಇಂತಹ ಚಟುವಟಿಕೆಯಲ್ಲಿ ನಡೆದಂತಹ ಒಂದು ಘಟನೆಯನ್ನು ಇಟ್ಟುಕೊಂಡು ಹರಿ ಸಿನಿಮಾ ಮಾಡಿದ್ದಾರೆ.


ಈ ಸಿನಿಮಾದಲ್ಲಿ ಒಂದು ಹಾಡನ್ನು ಸತತವಾಗಿ 12 ಗಂಟೆಗಳ ಕಾಲ ನಿರಂತರ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಹಾಡಿನಲ್ಲಿ ನಾಯಕ ಯೋಗಿ ಮತ್ತು ಹಿತಾ ಚಂದ್ರಶೇಖರ್‌ ಪಾಲ್ಗೊಂಡಿದ್ದಾರೆ.

 

ಯೋಗಿ ಸಹೋದರ ಮಹೇಶ್‌ ಈ ಸಿನಿಮಾದಲ್ಲಿ ನಾಯಕನ ಗೆಳೆಯನ ಪಾತ್ರ ಮಾಡಿದ್ದಾರೆ. ವಸಿಷ್ಠ ಸಿಂಹ, ಅಶ್ವತ್ಥ್‌ ನೀನಾಸಂ, ಸಂದೀಪ್‌ ಸೇರಿ ಪ್ರತಿಭಾವಂತರ ದಂಡೇ ಇಲ್ಲಿದೆ.

 

ಚಿತ್ರವು ಇದೇ ಮಾರ್ಚ್ 16 ರಂದು ತೆರೆಗೆ ಬರಲಿದೆ.

Page 25 of 37

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top