IB anigif

Ayugya Gif

adweb

udgharsha

Sunil HC Gowda

Sunil HC Gowda

ನಿರ್ದೇಶಕ ಎಸ್ ನಾರಾಯಣ್ ಮತ್ತೆ ಸಿನಿಮಾ ಮಾಡುತ್ತಿದ್ದು ಈ ಬಾರಿ ಅವರು ಕಾಲೇಜು ಕಥೆಯನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ತಮ್ಮ ಹಿರಿಯ ಪುತ್ರ ಪಂಕಜ್ ಅವರನ್ನೇ ನಾಯಕರನ್ನಾಗಿಸಿದ್ದಾರೆ.

ಮನಸು ಮಲ್ಲಿಗೆ ಆದ ಮೇಲೆ ಎಸ್ ನಾರಾಯಣ್ ಮಾಜಿ ಸಿಎಂ ಕುಮಾರಸ್ವಾಮಿಯವರ 20 ತಿಂಗಳ ಅಧಿಕಾರಾವಧಿಯನ್ನು ಆಧರಿಸಿ ಭೂಮಿ ಪುತ್ರ ಎಂಬ ಚಿತ್ರ ಮಾಡಲು ಹೊರಟಿದ್ದರು. ಇದಕ್ಕೆ ಮುಹೂರ್ತ ಸಹ ನಡೆದಿತ್ತು, ಆದರೆ ಯಾವುದೋ ಕಾರಣಕ್ಕೆ ಈ ಚಿತ್ರ ಮುಹೂರ್ತ ಮಾಡಿದ್ದಷ್ಟೇ ಬಂತು, ಅಲ್ಲಿಂದ ಮುಂದಕ್ಕೆ ಹೋಗಲೇ ಇಲ್ಲ. ಈಗ ತಮ್ಮ ಹಿರಿಯ ಪುತ್ರ ಪಂಕಜ್‌ಗಾಗಿ ಕಾಲೇಜು ಸ್ಟೋರಿಯನ್ನು ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

‘ಈ ಚಿತ್ರದಲ್ಲಿ ಕಾಲೇಜು ಹುಡುಗರ ನಡುವೆ ನಡೆಯುವ ಕತೆ ಇದೆ. ಲೈಫ್‌ನ ಎಂಜಾಯ್‌ಮೆಂಟ್, ಆ ಎಂಜಾಯ್ ಮಾಡುವಾಗ ಏನೆಲ್ಲ ಅನಾಹುತ ನಡೆಯುತ್ತದೆ. ಇದರಿಂದ ಅವರ ಪೋಷಕರಿಗೆ ಏನು ತೊಂದರೆಯಾಗುತ್ತದೆ ಎಲ್ಲವೂ ಇರುತ್ತದೆ. ಸಧ್ಯಕ್ಕೆ ಪಂಕಜ್ ಮಾತ್ರ ನಟಿಸುತ್ತಿದ್ದಾರೆ. ಉಳಿದ ಕಲಾವಿದರ ಆಯ್ಕೆ ಸದ್ಯದಲ್ಲೇ ನಡೆಯುತ್ತದೆ., ಎಂದು ನಾರಾಯಣ್ ಹೇಳುತ್ತಾರೆ.

ಇನ್ನು ಈ ಚಿತ್ರಕ್ಕೆ ಅಶೋಕ್ ಶೇಠ್, ಶ್ರೀನಿವಾಸನ್ ದೊರೈ, ಫಾರುಕ್ ಪಾಶಾ ಬಂಡವಾಳ ಹೂಡುತ್ತಿದ್ದಾರೆ.

ಮದರಂಗಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ಮಲ್ಲಿಕಾರ್ಜುನ ಮತ್ತಲಗೆರೆ ಈಗ ತಮ್ಮ ಮೂರನೇ ಚಿತ್ರವನ್ನು ಫೆಬ್ರವರಿ 23ರಂದು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ಈ ಚಿತ್ರಕ್ಕೆ ರಂಗ್‌ಬಿರಂಗಿ ಎಂದು ಹೆಸರಿಟ್ಟಿದ್ದು,ಕಳೆದ ತಿಂಗಳು ಹಾಡುಗಳು ಬಿಡುಗಡೆಯಾಗಿದ್ದು, ಮಣಿಕಾಂತ್ ಕದ್ರಿ ಸಂಗೀತದ ಹಾಡುಗಳು ಕೇಳುಗರನ್ನು ಸೆಳೆಯುತ್ತಿವೆ. ಸದ್ಯದಲ್ಲೇ ತೆರೆ ಮೇಲೆ ಬರಲು ಸಿದ್ದವಾಗಿರುವ ಈ ಚಿತ್ರದಲ್ಲಿ ಶರಣ್, ಪಂಜು, ಶ್ರೀಜಿತ್ ನಾಯಕರಾದರೆ ತಾನ್ವಿ ಎಂಬ ಹೊಸ ಹುಡುಗಿ ನಾಯಕಿಯಾಗಿದ್ದಾರೆ.

ಮಲ್ಲಿಕಾರ್ಜುನ್ ಈ ಬಾರಿ ಪೂರ್ತಿ ಯವ ಮನಸುಗಳನ್ನೆ ದೃಷ್ಟಿಯಲ್ಲಿಟ್ಟುಕೊಂಡು ಕಥೆ ಮಾಡಿದ್ದಾರೆ. ಇದು ಹದಿನೆಂಟರಿಂದ ಇಪ್ಪತ್ತೆರಡರ ಆಸುಪಾಸಲ್ಲಿರೋ ಈಗಿನ ಹುಡುಗರ ಸುತ್ತ ನಡೆಯುವ ಕತೆಯಾಗಿದೆ. ಈಗಿನ ಯುವ ಸಮುದಾಯ ಇಡೀ ಬದುಕನ್ನೇ ಲೈಟ್ ಆಗಿ ತೆಗೆದುಕೊಂಡು ನೋಡೋ ಮನಸ್ಥಿತಿ ಹೊಂದಿದ್ದಾರೆ.
ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಇಂಥಾ ವಯೋಮಾನದ ಯುವಕರ ವಲಯದಲ್ಲಿ ನಡೆಯೋ ಲವ್ ಕಹಾನಿ, ಅದರಿಂದ ಆಗುವ ಪರಿಣಾಮಗಳನ್ನು ಇಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ.ಯುವಕರ ಕಥೆ ಇದ್ದರೂ ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎನ್ನುವುದು ನಿರ್ದೇಶಕ ಮಲ್ಲಿಕಾರ್ಜು ನ್ ಅವರ ಮಾತು.

ಚಿತ್ರವನ್ನು ರಾಮನಗರ ಮೂಲಾದ ಶಾಂತಕುಮಾರ್ ಅವರು ನಿರ್ಮಿಸಿದ್ದಾರೆ.

ಹೂ ಮಳೆ, ಬೆಳದಿಂಗಳ ಬಾಲೆ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮ ಸಹಜ ಸುಂದರದಿಂದ ಕನ್ನಡಿಗರ ಮನ ಮನೆ ಗೆದ್ದಿದ್ದ ಸುಮನ್‌ ನಗರ್‌ಕರ್‌ ವಿವಾಹವಾಗಿ ಅಮೇರಿಕಾಗೆ ಹಾರಿ ಹೋಗಿದ್ದರು. ಈಗ ಸಿನಿಮಾ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ವಾಪಾಸ್‌ ಬಂದಿದ್ದಾರೆ.

 

ಹೌದು ಸುಮನ್‌ ನಗರ್‌ಕರ್‌ ಬಬ್ರೂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಸಂಪೂರ್ಣ ಅಮೇರಿಕಾದಲ್ಲಿಯೇ ಚಿತ್ರೀಕರಣಗೊಂಡಿದ್ದು, ಇದರಲ್ಲಿ ಸುಮನ್‌ ನಗರ್‌ಕರ್‌ ಸಹ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿರುವ ಭಾರತೀಯ ಮೂಲದ ಅರ್ಜುನ್‌, ಅದೇ ದೇಶದಲ್ಲಿರುವ ವ್ಯಾಂಕೋವರ್ನಲ್ಲಿರುವ ತನ್ನ ಗೆಳತಿ ಮಾಯಾಳನ್ನು ಪ್ರೀತಿಸುತ್ತಿರುತ್ತಾನೆ. ಒಮ್ಮೆಯೂ ಭೇಟಿಯಾಗದ ಕಾರಣ ಒಮ್ಮೆ ವ್ಯಾಂಕೋವರ್‌ಗೆ ಹೋಗಲು ಅರ್ಜುನ್‌ ನಿರ್ಧಾರ ಮಾಡುತ್ತಾನೆ. ಇದು ಒಂದು ಕಡೆ ನಡೆಯುತ್ತಿರುವ ಕತೆಯಾದರೆ. ಮತ್ತೊಂದೆಡೆ ಅಮೇರಿಕಾದಲ್ಲಿರುವ ಸನಾ ಎಂಬ ಭಾರತೀಯ ಮಹಿಳೆ ತನ್ನ ಗಂಡನಿಂದ ಮುಕ್ತಿ ಪಡೆಯಲು ಹಾತೋರಿಯುತ್ತಿರುತ್ತಾಳೆ. ಅವಳು ಸಹ ವ್ಯಾಂಕೋವರ್‌ಗೆ ಹೋಗಲು ತೀರ್ಮಾನ ಮಾಡಿರುತ್ತಾಳೆ. ಈ ನಡುವೆ ಇಬ್ಬರೂ ಒಂದು ಜಾಹಿರಾತನ್ನು ನೋಡುತ್ತಾರೆ ಆ ಜಾಹಿರಾತಿನಲ್ಲಿ ಒಂದು ಕಾರನ್ನು ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಸಾಗಿಸಬೇಕಾಗಿರುತ್ತದೆ. ಕೆಲ ಅನಿವಾರ್ಯ ಕಾರಣಗಳಿಂದ ಅರ್ಜುನ್‌ ಮತ್ತು ಸನಾ ಇಬ್ಬರೂ ಅಪರಿಚತರಾದರೂ ಒಂದೇ ಕಾರಿನಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಾಗುತ್ತದೆ.

 

ಇಬ್ಬರು ಪ್ರಯಾಣ ಆರಂಭಿಸಿದಾಗ  ಮೆಕ್ಸಿಕೋದ  ರೈತನೊಬ್ಬ ಇವರ ಪ್ರಯಾಣದಲ್ಲಿ ಜತೆಯಾಗುತ್ತಾನೆ. ಈ ನಡುವೆ ಕಾರು ಕೆಲ ದುಷ್ಕರ್ಮಿಗಳಿಗೆ ಮತ್ತು ಪೊಲೀಸರಿಗೆ ಬೇಕಾಗಿರುತ್ತದೆ. ಕಾರು ಪೊಲೀಸರಿಗೆ ಮತ್ತು ದುಷ್ಕರ್ಮಿಗಳಿಗೆ ಏಕೆ ಬೇಕಾಗಿರುತ್ತದೆ. ಇದರಿಂದ ಸನಾ ಮತ್ತು ಅರ್ಜುನ್ಗೆ ತೊಂದರೆಯಾಗುತ್ತದಾ, ಇಬ್ಬರು ತಮ್ಮ ಗಮ್ಯವನ್ನು ಮುಟ್ಟುತ್ತಾರಾ ಎಂಬುದರ ಸುತ್ತ ಕತೆ ನಡೆಯುತ್ತದೆ.

 

ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಕಾರು ಪ್ರಯಾಣ ಮಾಡುವುದರಿಂದ ಈ ಪ್ರಯಾಣದಲ್ಲಿ ಅಮೇರಿಕಾದ ಜೀವನ ಶೈಲಿ, ಗ್ರಾಂಡ್‌ ಕ್ಯಾನಸನ್‌, ಡೆತ್‌ ವ್ಯಾಲಿ, ಜಿಯಾನ್‌ ಸೇರಿದಂತೆ ಸಾಕಷ್ಟು ರಮಣೀಯ ದೃಶ್ಯಗಳ ಸಹ ಪ್ರೇಕ್ಷಕರಿಗೆ ಕಾಣುತ್ತದೆ.

 

ಈ ಚಿತ್ರವನ್ನು ಸುಮನ್‌ ನಗರಕರ್‌ ಪ್ರೊಡಕ್ಷನ್‌ ಮತ್ತು ಯುಗ ಕ್ರಿಯೇಷನ್ಸ್‌ ಒಟ್ಟಿಗೆ ಸೇರಿ ನಿರ್ಮಾಣ ಮಾಡಿದೆ. ಸುಜಯ್‌ ರಾಮಯ್ಯ ಎಂಬುವವರು ನಿರ್ದೇಶನ ಮಾಡಿದ್ದಾರೆ.

 

ಸುಮನ್‌ ನಗರ್‌ಕರ್‌, ಮಾಹಿ ಹಿರೇ ಮಠ, ರೇ ತೊಸ್ತಾಡೋ, ಸನ್ನಿ ಮೋಜ, ಪ್ರಕೃತಿ ಕಶ್ಯಪ್‌ ನಟಿಸಿದ್ದಾರೆ. ಲೂಸಿಯಾ ಖ್ಯಾತಿ ಪೂರ್ಣಚಂದ್ರ ತೇಜಸ್ವಿ ಇದಕ್ಕೆ ಸಂಗೀತ ನೀಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೇ ಅಥವಾ ಜೂನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದಾರೆ.

ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಇದ್ದ ಸುಮನ್‌ ನಗರ್‌ಕರ್‌ ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ.

 

ಬಿಗ್‌ಬಾಸ್‌ ಪ್ರತಿ ಸೀಸನ್‌ನಲ್ಲಿಯೂ ಒಂದೊಂದು ಜೋಡಿ ಹುಟ್ಟಿಕೊಳ್ಳುತ್ತದೆ. ಈ ಬಾರಿ ಅಂದರೆ ಬಿಗ್‌ಬಾಸ್ ಸೀಸನ್ 5ರಲ್ಲಿ ಜೆಕೆ ಮತ್ತು ಗಾಯಕಿ ಶ್ರುತಿ ಪ್ರಕಾಶ್ ಆ ರೀತಿ ಹೆಸರು ಮಾಡಿದ್ರು. ಇವರಿಬ್ಬರನ್ನು ಕಂಡ ಸಾಕಷ್ಟು ಮಂದಿ ಇವರು ಲವ್‌ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಆದರೆ ಈ ಬಗ್ಗೆ ಜೆಕಗೆ ಬಹಳ ಬೇಸರದಿಂದ ಮಾತನಾಡುತ್ತಾರೆ.

'24 ಗಂಟೆಗಳಲ್ಲಿ ನಡೆದಿದ್ದರಲ್ಲಿ, ನಾನು ಮತ್ತು ಶ್ರುತಿ ಕ್ಲೊಸ್ ಆಗಿದ್ದ ದೃಶ್ಯಗಳನ್ನಷ್ಟೇ ಹೆಚ್ಚಾಗಿ ತೋರಿಸಿದ್ದಾರೆ ಹಾಗಾಗಿ ಜನರಿಗೆ ಹಾಗೆ ಅನ್ನಿಸಿದೆ ಆದರೆ ಅದೆಲ್ಲವೂ ಸುಳ್ಳು ನಾವಿಬ್ಬರೂ ಬಹಳ ಆತ್ಮೀಯ ಸ್ನೇಹಿತರಷ್ಟೇ ಅದನ್ನು ಬಿಟ್ಟು ಬೇರೆ ಏನು ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಇವರಿಬ್ಬರನ್ನು ಹೀಗೆ ಪ್ರೊಜೆಕ್ಟ್ ಮಾಡಿದ್ದಕ್ಕೆ ಅವರಿಗೆ ಬಿಗ್‌ಬಾಸ್‌ ಮೇಲೆ ಬೇಸರ ಉಂಟಾಗಿದೆಯಂತೆ. ಇದರ ಪರಿಣಾಮ ಇವರಿಗೆ ಹೊರಗೆ ಬಂದ ಮೇಲೆ ಬಹಳ ತೊಂದರೆಯಾಗಿದೆ. 'ನಾನು ಒಳಗಡೆ ಇದ್ದಾಗ ಅನುಪಮ ಮತ್ತು ಆಶಿತಾ ಜತೆಯೂ ಕ್ಲೋಸ್ ಆಗಿದ್ದೆ ಅದನ್ನು ಮಾತ್ರ ತೋರಿಸಿಲ್ಲ, ಎಂದು ಸಹ ಜೆಕೆ ಹೇಳುತ್ತಾರೆ. ಹಾಗಾಗಿ ನಾನು ಮತ್ತು ಶ್ರುತಿ ಇಬ್ಬರು ಸ್ನೇಹಿತರಷ್ಟೇ, ಪ್ರೇಮಿಗಳಲ್ಲ, ಹಾಗೆ ಅಂದುಕೊಳ್ಳಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿದ ಜೆಕೆ ಹಿಂದಿಯ ಒಂದು ಸೀರಿಯಲ್‌ನಲ್ಲಿ ರಾವಣನಾಗಿ ನಟಿಸಿ ದೊಡ್ಡ ಹೆಸರು ಮಾಡಿದ್ರು. ಜೆಕೆ ಸದ್ಯಕ್ಕೆ ದಯಾಳ್ ನಿರ್ದೇಶನದ ಆ ಕರಾಳ ರಾತ್ರಿ, ಪುಟ 109 ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹಾಡುಗಳನ್ನು ಬಿಡುಗಡೆ ಮಾಡಿ, ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ "ನಾನು ಲವರ್ ಆಫ್ ಜಾನು" ಚಿತ್ರದಲ್ಲಿ ಪ್ರೀತಿಯನ್ನು ಕ್ರಾಂತಿಯಿಂದ ಗೆಲ್ಲಬಹುದು. ಕ್ರಾಂತಿಯಿಂದ ಪ್ರೀತಿಯನ್ನು ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ಹೇಳುತ್ತಿದ್ದಾರಂತೆ.

 

ಜಿ ಸುರೇಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಒಂದು ತಪ್ಪು ಚಳವಳಿ ನಂತರ ಕ್ರಾಂತಿಯಾಗಿ ಬದಲಾಗುತ್ತಿದೆ. ಆತನ ಜೀವನದಲ್ಲಿ ಕ್ರಾಂತಿ ನಡೆದಾಗ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದನ್ನು ಅವರು ಚೆಂದವಾಗಿ ಸೆರೆ ಹಿಡಿದಿದ್ದಾರಂತೆ.

 

ಗೊಂಬೆಗಳ ಲವ್ ಸಿನಿಮಾಗೆ ಸಂಗೀತ ನೀಡಿದ್ದ ಚೆನ್ನೈನ ಶ್ರೀನಾಥ್ ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳು ಇದರಲ್ಲಿದ್ದು, ಈಗಾಗಲೇ ಜನರಿಗೆ ಇಷ್ಟವಾಗಿದೆ. ಈ ಸಿನಿಮಾಗೆ ಸ್ಯಾಂಡಲ್‌ವುಡ್‌ನ ವಿಕಟ ಕವಿ ಯೋಗರಾಜ್‌ ಭಟ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

 

ಚಿತ್ರಕ್ಕೆ ವಿಶಾಲ್ ಎಂಬ ಯುವಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಮಂಜುಳಾ ಗಂಗಪ್ಪ ನಾಯಕಿ. ನಿರ್ದೇಶಕ ಸುರೇಶ್ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ.

ನಿರ್ದೇಶಕ ಶಶಾಂಕ್‌ ಇತ್ತೀಚೆಗೆ ನಿರ್ಮಾಪಕರಾಗಿದ್ದರು. ಅದಕ್ಕೆ ಶಶಾಂಕ್‌ ಸಿನಿಮಾಸ್‌ ಎಂದು ಹೆಸರಿಟ್ಟು, ಅದರಡಿ ತಾಯಿಗೆ ತಕ್ಕ ಮಗ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ಈ ಚಿತ್ರವನ್ನು ವೇದ್‌ಗುರು ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದರು. ಆದರೆ ಈಗ ಅಲ್ಲಿ ನಿರ್ದೇಶಕರು ಬದಲಾಗಿದ್ದಾರೆ. ಸ್ವತಃ ಶಶಾಂಕ್‌ ಈಗ ಚಿತ್ರದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಹೌದು ಶಶಾಂಕ್‌ ನಿರ್ಮಾಣ ಮಾಡಿ ಅಜಯ್‌ರಾವ್‌ ನಾಯಕರಾಗಿದ್ದ ತಾಯಿಗೆ ತಕ್ಕ ಮಗ ಚಿತ್ರದಿಂದ ನಿರ್ದೇಶಕ ವೇದ್‌ಗುರು ಹೊರ ಬಂದಿದ್ದಾರೆ. ನಿರ್ದೇಶಕ ವೇದ್‌ಗುರು ಮಾತ್ರವಲ್ಲ, ಸಿನಿಮಾಟೋಗ್ರಫರ್‌ ನಂದ ಕಿಶೋರ್‌ ಸಹ ಬದಲಾಗಿದ್ದಾರಂತೆ. ಇದಕ್ಕೆ ಕಾರಣ ಕೇಳಿದ್ರೆ, ನಿರ್ದೇಶಕ ವೇದ್‌ಗುರು ಅವರಿಗೆ ಆರೋಗ್ಯದ ಸಮಸ್ಯೆಯಿಂದ ಈ ಚಿತ್ರದಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೆ.

ನಿರ್ದೇಶಕ ವೇದ್‌ಗುರು ಈ ಹಿಂದೆ ದಂಡಯಾತ್ರೆ ಎನ್ನುವ ಸಿನಿಮಾವನ್ನು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದರು. ಈಗ ತಾಯಿಗೆ ತಕ್ಕ ಮಗ ಚಿತ್ರದಿಂದಲೂ ಹೊರ ಬಂದಿದ್ದಾರೆ. ಶಶಾಂಕ್ ತಂಡದಲ್ಲಿ ಸಕ್ರಿಯರಾಗಿರುವ ಯಾರದರೊಬ್ಬನ್ನು ನಿರ್ದೇಶಕರನ್ನಾಗಿ ಮಾಡಲಾಗುವುದು ಎನ್ನುವ ಮಾತು ಹರಿದಾಡತ್ತಿತ್ತು ಆದರೆ ಈಗ ಅದನ್ನು ಶಶಾಂಕ್‌ ಅವರೇ ಡೈರೆಕ್ಟ್‌ ಮಾಡಲಿದ್ದಾರೆ ಮತ್ತು ಚಿತ್ರದ ಚಿತ್ರೀಕರಣ ನಾಳೆಯಿಂದ ಶುರುವಾಗಲಿದೆ. ಚಿತ್ರಕ್ಕೆ ಶೇಕರ್ ಚಂದ್ರ ಕ್ಯಾಮರಾ ವರ್ಕ್ ಮಾಡುತ್ತಿದ್ದು, ಚಮಕ್ ಖ್ಯಾತಿಯ ಜೂಡಾ ಸ್ಯಾಂಡಿ ಮ್ಯೂಸಿಕ್ ನೀಡುತ್ತಿದ್ದಾರೆ.

ಈ ಚಿತ್ರದಲ್ಲಿ ಅಜಯ್‌ರಾವ್‌ ಜೊತೆಗೆ ಸುಮಲತಾ, ಆಶಿಕಾ ರಂಗನಾಥ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

 
ನಿರ್ದೇಶಕ ಗುರು ಪಾಂಡೆ ಮತ್ತು ಚಿರಂಜೀವಿ ಕಾಂಬಿನೇಶನ್‌ನ ಸಂಹಾರ ಚಿತ್ರ ಈ ವಾರ ತೆರೆಗೆ ಬರಲಿದೆ. ರುದ್ರ ತಾಂಡವ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ, ಈಗ ಮತ್ತೆ ಮೋಡಿ ಮಾಡಲು ಬರುತ್ತಿದೆ.
ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕಣ್ಣು ಕಳೆದುಕೊಂಡ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿರುಗೆ ಇಲ್ಲಿ ಡ್ಯುಯೆಟ್ ಹಾಡಲು ಕಾವ್ಯಾ ಶೆಟ್ಟಿ, ಹರಿಪ್ರಿಯಾ ಇದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ನಾನು ಚಾಲೆಂಜಿಂಗ್ ಎನಿಸುವಂತಹ ರೋಲ್‌ನಲ್ಲಿ ನಟಿಸಿದ್ದು, ಖಂಡಿತ ಇದು ಜನರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ ಚಿರಂಜೀವಿ ಸರ್ಜಾ. ಮೊದಲ ಚಿತ್ರದಿಂದಲೂ ತಮ್ಮ ವಿಶಿಷ್ಟ ಅಭಿನಯದಿಂದ ಗಮನ ಸೆಳೆದಿರುವ ಚಿರು, ಈ ಚಿತ್ರದಲ್ಲಿ ಕುರುಡುನಾಗಿ ಮತ್ತೊಮ್ಮೆ ತಮ್ಮ ವಿಭಿನ್ನತೆ ಮೆರಿದಿದ್ದಾರೆ. ಚಿರುಗೆ ಈಗಾಗಲೇ ಟ್ವೀಟರ್‌ನಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ ನಟಿಯರು ಶು‘ಾಶಯ ಕೋರುತ್ತಿದ್ದು, ಚಿರು ಸಖತ್ ಖುಷಿಯಾಗಿದ್ದಾರೆ.
ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗಾಯಕ ರಘು ದೀಕ್ಷಿತ್ ಹಾಡಿರುವ 'ರಾಕ್ಷಸಿ' ಹಾಡು ಮತ್ತು ಪುನೀತ್ ರಾಜ್‌ಕುಮಾರ್ ಹಾಡಿರುವ 'ಏನಚ್ಚರಿಯೋ' ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ.
#Samhaara #YuvaSamratChiruSarja #Cineloka
 
ವಸಿಷ್ಠ ಖಳನಟನಾಗಿ ನಮಗೆಲ್ಲರಿಗೂ ಪರಿಚಯವಾಗಿದ್ದರು ಈಗ ಅವರು ಪೂರ್ಣ ಪ್ರಮಾಣದ ನಾಯಕರಾಗಿ ಬಡ್ತಿ ಪಡೆದಿದ್ದಾರೆ .
ಹೌದು ಅವರು ನಾನಿ ಚಿತ್ರದ ನಿರ್ದೇಶಕ ಸುಮಂತ್ ಅವರ ಹೊಸ ಚಿತ್ರ ಕಾಲಚಕ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆ ಬಿಡುಗಡೆಗೊಂಡಿದ್ದು,ಫಸ್ಟ್ ಲುಕ್ ಸಾಕಷ್ಟು ವಿಭಿನ್ನವಾಗಿದ್ದು ಜನರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಪೋಸ್ಟರ್ ಆನ್ ಲೈನ್ ನಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ.
ಚಿತ್ರದಲ್ಲಿ ವಸಿಷ್ಟ ಅವರದು ಎರಡು ಶೇಡ್ಗಳಿರುವ ಪಾತ್ರ ಒಂದು ಮೂವತ್ತು ವರ್ಷದ ಪಾತ್ರವಾದರೆ ಮತ್ತೊಂದು ಅರುವತ್ತು ವರ್ಷದ ಮುದುಕನ ಪಾತ್ರ. ವಸಿಷ್ಠನ ಜೋಡಿಯಾಗಿ ರಕ್ಷಾ ಅವರು ನಟಿಸಿದ್ದಾರೆ. ರಕ್ಷಾ ಅವರು ಈ ಮುಂಚೆ ತಮಿಳಿನ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರಿಗೆ ಇದು ಮೊದಲ ಕನ್ನಡ ಚಿತ್ರ .ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದ್ದು ಅದುವೇ ಚಿತ್ರದ ಬೆನ್ನೆಲುಬು ಎಂದು ಚಿತ್ರದ ನಿರ್ದೇಶಕ ಸುಮಂತ್ ಹೇಳಿಕೊಂಡಿದ್ದಾರೆ .
ನಾನಿ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ಸುಮಂತ್ ಅವರು 'ಕಾಲಚಕ್ರ' ಚಿತ್ರದ ಮೂಲಕ ನಿರ್ಮಾಪಕ ಕೂಡ ಆಗಿದ್ದಾರೆ.
ನಮಗೆಲ್ಲರಿಗೂ ಚಿರಪರಿಚಿತವಿರುವ ಒಬ್ಬ ವ್ಯಕ್ತಿಯ ನೈಜ ಕತೆಯನ್ನೊಳಗೊಂಡ ಚಿತ್ರ ಕಾಲಚಕ್ರ.ಚಿತ್ರದಲ್ಲಿ ಒಂದೊಳ್ಳೆ ಮೆಸೆಜ್ ಇದ್ದು ಫ್ಯಾಮಿಲಿ ಎಮೋಷನ್ಸ್ ಮೇಲೆ ಸಾಕಷ್ಟು ಒತ್ತು ಕೊಡಲಾಗಿದೆ. ಚಿತ್ರದಲ್ಲಿ ಒಂದು ಚಿಕ್ಕ ಹೆಣ್ಣು ಮಗಳ ಪಾತ್ರ ಕೂಡಾ ಬಹಳ ಪ್ರಮುಖವಾದದ್ದು . ಚಿತ್ರದ ಕಥೆ ಮೇಲೆ ನಂಬಿಕೆ ಇದ್ದ ಕಾರಣ ನಾನೇ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಧರಿಸಿದೆ ಎಂದು ಚಿತ್ರದ ನಿರ್ದೇಶಕ ಸುಮಂತ್ ಹೇಳಿಕೊಂಡರು.
ಚಿತ್ರೀಕರಣ ಬಹುತೇಕ ಮುಗಿದಿದ್ದು,ಎರಡು ಮೂರು ದಿನಗಳ ಪ್ಯಾಚ್ವರ್ಕ್ ಬಾಕಿ ಇದೆ. ಫೈನಲ್ ಟ್ರಿಮ್ಮಿಂಗ್ ನಡೆಯುತ್ತಿದ್ದು ಬಹುಶಃ ಏಪ್ರಿಲ್ ಹೊತ್ತಿಗೆ ಚಿತ್ರ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ .
#KaalaChakra #Cineloka
ಕನ್ನಡದಲ್ಲಿ ಆಕರ್ಷಕ ಶೀರ್ಷಿಕೆಗಳ ಹೊತ್ತ ಸಿನಿಮಾಗಳು ಸೆಟ್ಟೇರುತ್ತಿವೆ. ಅದಕ್ಕೆ ಹೊಸ ಸೇರ್ಪಡೆ "ಲುಂಗಿ". ಶಾರುಖ್‌ ಖಾನ್‌ ನಟನೆಯ ಚೆನ್ನೈ ಎಕ್ಸ್ ಪ್ರೆಸ್‌ ಚಿತ್ರದ ಲುಂಗಿ ಡ್ಯಾನ್ಸ್‌ ಸಿಕ್ಕಾಪಟ್ಟೆ ಫೇಮಸ್‌ ಆಗಿತ್ತು. ಈಗ ಲುಂಗಿ ಎಂಬ ಹೆಸರನ್ನಿಟ್ಟು, ಕೊರಿಯೋಗ್ರಫರ್‌ ಒಬ್ಬರು ಚಿತ್ರ ಮಾಡುತ್ತಿದ್ದಾರೆ.
ಹೌದು ಡಾನ್ಸರ್‌ ಆಗಿ ಹೆಸರು ಮಾಡಿರುವ ಅಕ್ಷಿತ್‌ ಶೆಟ್ಟಿ "ಲುಂಗಿ" ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಮನಸು ಮನಸುಗಳ ಬೇಸುಗೆಯ ಕತೆಯನ್ನು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ಅಕ್ಷಿತ್ ಶೆಟ್ಟಿ.
ಈ ಚಿತ್ರದಲ್ಲಿ ಮನಸುಗಳನ್ನು ಬೆಸೆಯುವ ಜತೆಗೆ ನಮ್ಮ ಸಂಸ್ಕೃತಿ ಸೇರಿದಂತೆ ಸಾಕಷ್ಟು ವಿಷಯಗಳನ್ನು ಅಕ್ಷಿತ್‌ ಹೇಳಲಿದ್ದಾರಂತೆ. ಇಂಜಿನಿಯರಿಂಗ್ ಓದಿಕೊಂಡಿರುವ ನಾಯಕ ತನ್ನ ತಂದೆ ಕೊಡಿಸಿದ ಕೆಲಸಕ್ಕೆ ಹೋಗದೆ, ಲುಂಗಿ ಬ್ಯುಸೆನೆಸ್‌ ಪ್ರಾರಂಭ ಮಾಡುತ್ತಾನೆ. ಅದರಿಂದ ಅವನು ಹೇಗೆ ಸಕ್ಸಸ್‌ ಆಗುತ್ತಾನೆ ಎಂಬುದೇ ಸಿನಿಮಾ ಕತೆ.
ತುಳು ಸಿನಿಮಾಗಳನ್ನು ಅನುಭವವಿರುವ ಮುಕೇಶ್ ಹೆಗ್ಡೆ ಈ ಚಿತ್ರದ ನಿರ್ಮಾಪಕರು.ತಮ್ಮ ಮಗ ಪ್ರಣವ್ ಹೆಗ್ಡೆಗಾಗಿ ಚಿತ್ರ ಮಾಡಿದ್ದಾರೆ. ಅಹಲ್ಯ ಸುರೇಶ್ & ರಾಧಿಕಾ ರಾವ್ ಈ ಚಿತ್ರದ ನಾಯಕಿಯರು. ಅಹಲ್ಯ ಸುರೇಶ್ ಕ್ರಿಶ್ಚಿಯನ್ ಹುಡುಗಿಯಾಗಿ ನಟಿಸಿದ್ದಾರೆ. ಮತ್ತೋರ್ವ ನಾಯಕಿ ರಾಧಿಕಾ ರಾವ್ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗಿ ನಟಿಸಿದ್ದಾರೆ.
#Lungi #Cineloka
 
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಅಬ್ಬಾಯಿನಾಯ್ಡು ಅವರು ಪರಿಚಯಿಸಿರುವ ನಟರಲ್ಲಿ ಒಬ್ಬರಾದ ವಿನೋದ್ ಆಳ್ವಾ ಈಗ ತಮ್ಮ ಮಕ್ಕಳನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.
ತವರು ಮನೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿನೋದ್ ಆಳ್ವಾ ಸಿನಿಮಾ ಕೆರಿಯರ್ ಆರಂಭಿಸಿದ ವಿನೋದ್ ಆಳ್ವಾ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸಿದ್ದರು.
ಮಂಗಳೂರು ಮೂಲದ ಪುತ್ತೂರಿನ ನಿವಾಸಿ ವಿನೋದ್ ಆಳ್ವಾ 1985 ರಲ್ಲಿ ಚಿತ್ರರಂಗಕ್ಕೆ ಬಂದು ಯಶಸ್ವಿ ನಾಯಕರಾದರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆ ಸೇರಿದಂತೆ 200 ಚಿತ್ರಗಳಲ್ಲಿ ವಿನೋದ್ ಆಳ್ವಾ ನಟಿಸಿದ್ದಾರೆ.
ಈಗ ಅವರ ಇಬ್ಬರು ಪುತ್ರರಾದ ಅಮೋಘ ಹಾಗೂ ಹಯಾಗ್‌ರನ್ನು ಬೆಳ್ಳಿತೆರೆಗೆ ಪರಿಚಿಯಸಿಲು ಅವರು ತಯಾರಿ ನಡೆಸುತ್ತಿದ್ದಾರೆ. ಅಭಿನಯಕ್ಕೆ ಸಂಬಂಧಪಟ್ಟಂತೆ ಈ ಇಬ್ಬರು ಪುತ್ರರು ತರಬೇತಿ ಪಡೆದಿದ್ದಾರೆ. ಅಜಾನುಬಾಹುಗಳಾದ ಈ ಇಬ್ಬರು ಕೂಡ 2020 ರಲ್ಲಿ ತೆರೆಯ ಮೇಲೆ ಬರಬಹುದು ಎಂದು ಅವರು ಇತ್ತೀಚೆಗೆ ಪ್ರೇಮ ಯುದ್ಧ ಎಂಬ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
#VinodAlva #Cineloka #PremaYuddha
Page 28 of 35

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top