nata

ttm

adweb

udgharsha

Sunil HC Gowda

Sunil HC Gowda

 

ಟೇಶಿ ವೆಂಕಟೇಶ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಸ್ಟ್‌ ಫ್ರೆಂಡ್ಸ್‌ ಈ ವಾರ ಅಂದರೆ ಜ.4ಕ್ಕೆ ಬಿಡುಗಡೆಯಾಗುತ್ತಿದೆ.
.

ಹೆಣ್ಣು-ಗಂಡು ಪ್ರೀತಿ ಮಾಡಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವುದು ಸಾಮಾನ್ಯ ಆದರೆ ತಾನು ಪ್ರೀತಿಸುತ್ತಿರುವ ಹುಡುಗಿ ಸಿಗಲಿಲ್ಲ ಎಂದು ಆಕೆಯನ್ನು ಕೊಲ್ಲಲು ಹೋಗುವ ಹುಡುಗಿಯ ಕಥೆಯೇ ಈ ಬೆಸ್ಟ್‌ ಫ್ರೆಂಡ್ಸ್‌. ಸಲಿಂಗ ಕಾಮ- ಪ್ರೇಮ- ಸಂಸಾರ ಇಂಥವುಗಳನ್ನು ಇಟ್ಟುಕೊಂಡು ಇದುವರೆಗೂ ಯಾರು ಸಿನಿಮಾ ಮಾಡಿಲ್ಲ. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಂತಹದ್ದೊಂದು ಪ್ರಯತ್ನವಾಗುತ್ತಿದೆ. ಇದುನೈಜ ಘಟನೆಯನ್ನು ಇಟ್ಟುಕೊಂಡು ತಯಾರಾಗಿರುವ ಸಿನಿಮಾವಾಗಿದೆ.
.

ಹಾಸನದಲ್ಲಿ ನಡೆದ ನೈಜ ಘಟನೆ ಇದಾಗಿದ್ದು, ಘಟನೆಯ ಸುತ್ತ ಒಂದಿಷ್ಟು ಸಂಶೋಧನೆ ಮಾಡಿಕೊಂಡು ನೈಜತೆ ಮತ್ತು ಕಾಲ್ಪನಿಕತೆಯನ್ನು ಬೆರೆಸಿಕೊಂಡು ಈ ಸಿನಿಮಾ ಮಾಡಿದ್ದಾರೆ.ಬೆಸ್ಟ್‌ ಫ್ರೆಂಡ್ಸ್‌ ಸಿನಿಮಾವನ್ನು ಲಯನ್‌ ವಿ ವೆಂಕಟೇಶ್‌ ನಿರ್ಮಿಸಿದ್ದು, ಸುಮತಿ ಪಾಟೀಲ್‌ ಮತ್ತು ಸಾಕ್ಷಿ ನಟಿಸಿದ್ದಾರೆ.
.
ಆರವ್‌ ರಿಶಿಕ್‌ ಸಂಗೀತ ನೀಡಿದ್ದು, ರವಿ ಸುವರ್ಣ ಮತ್ತು ಧನುಷ್‌ ಅವರ ಛಾಯಾಗ್ರಹಣ ಸಿನಿಮಾಕ್ಕಿದೆ.

ಶೃಂಗಾರದ ಹೊಂಗೆ ಮರದ ಹಾಡಿನ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ ಭಟ್ಟರ 'ಪಂಚತಂತ್ರ' ಸಿನಿಮಾ ಫೆಬ್ರವರಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

.

ಈಗಾಗಲೇ ಟೀಸರ್‌ ಮೂಲಕವೂ ಭಟ್ಟರು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ವಿಹಾನ್‌ಗೌಡ ಮತ್ತು ಸೋನಲ್‌ ಮಂಥೇರೋ , ಅಕ್ಷರಗೌಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಕಥೆ ಮಾಸ್ತಿ ಮತ್ತು ಕಾಂತರಾಜ್‌ ಅವರದ್ದು. ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಕಥೆ ಇದಾಗಿದ್ದು,ಇದರಲ್ಲಿ ಕಾರ್‌ ರೇಸ್‌ ಪ್ರಮುಖ ಅಂಶವಾಗಿದೆ.
.

ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೆಲೋಡಿ ಜತೆಗೆ ಮಾಸ್‌ ಹಾಡುಗಳು ಇವೆಯಂತೆ. ಹರಿಪ್ರಸಾದ್‌ ಜಯಣ್ಣ ಮತ್ತು ಹೇಮಂತ್‌ ಪರಾಡ್ಕರ್‌ ಬಂಡವಾಳ ಹೂಡಿದ್ದಾರೆ. ಯೂತ್‌ ಮತ್ತು ಫ್ಯಾಮಿಲಿಗೆ ಈ ಚಿತ್ರ ಇಷ್ಟವಾಗುತ್ತದೆ.
.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರೇಮಿಗಳ ದಿನ ಅಂದರೆ ಫೆ.14ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ.

ಸಿನಿಮಾ: ನಾತಿಚರಾಮಿ

ನಿರ್ದೇಶಕ: ಮಂಸೋರೆ

ನಿರ್ಮಾಣ: ತೇಜಸ್ವಿನಿ ಎಂಟರ್‌ಪ್ರೈಸಸ್‌

ಕಲಾವಿದರು: ಶ್ರುತಿ ಹರಿಹರನ್‌, ಸಂಚಾರಿ ವಿಜಯ್‌, ಶರಣ್ಯ, ಪೂರ್ಣಚಂದ್ರ ಮೈಸೂರು.

----

ಮದುವೆ ಸಮಯದಲ್ಲಿ ಅರ್ಥೇಚ, ಧರ್ಮೇಚ, ಕಾಮೇಚ ಎಂದು ವಾಗ್ದಾನ ಮಾಡುವ ಪತಿ ಇದ್ದಕ್ಕಿದ್ದ ಹಾಗೆ ಮೃತಪಟ್ಟರೆ, ಮದುವೆಯಾದ ಪತ್ನಿಯ ಮನಸ್ಸಲ್ಲಿ ನಡೆಯುವ ಸಂಘರ್ಷವನ್ನು ತಡೆಯುವಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡಿದ್ದಾರೆ ನಿರ್ದೇಶಕ ಮಂಸೋರೆ.

.

ಗೌರಿ [ಶ್ರುತಿ ಹರಿಹರನ್‌] ಮತ್ತು ಸುಮಾ [ಶರಣ್ಯ] ಈ ಸಿನಿಮಾದ ಎರಡು ಮುಖಗಳು. ಪ್ರೀತಿಯಿಂದ ವಿವಾಹವಾಗಿ ದಾಂಪತ್ಯ ಸುಖದ ಅಲೆಯಲ್ಲಿ ತೇಲುತ್ತಿರುವ ಗೌರಿಗೆ ಗಂಡನ ಸಾವು ದೊಡ್ಡ ಅಘಾತ ನೀಡುತ್ತದೆ. ಗಂಡನ ನೆನಪು ಒಂದು ಕಡೆಯಾದರೆ, ತನ್ನೊಳಗೆ ಅದುಮಿಡಲು ಸಾಧ್ಯವಾಗದಿರು ಬಯಕೆಗಳು ಮತ್ತೊಂದು ಕಡೆ ಗೌರಿಯನ್ನು ಬಾಧಿಸುತ್ತಿರುತ್ತವೆ. ಅದೇ ರೀತಿ ಮದುವೆಯಾದ ದಿನದಿಂದ ಗಂಡ ಬರೀ ದೈಹಿಕ ವಾಂಛೆಗಷ್ಟೇ ನನ್ನನ್ನು ಬಳಸಿಕೊಳ್ಳುತ್ತಿದ್ದಾನೆ ಹೊರತು ನನಗೆ ತನ್ನ ಆತ್ಮ ಸಂಗಾತವನ್ನು ನೀಡುತ್ತಿಲ್ಲ ಎನ್ನುವ ನೋವಿನಲ್ಲಿ ದಿನ ದೂಡುತ್ತಿದ್ದಾಳೆ ಸುಮಾ. ಇವರಿಬ್ಬರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮಧ್ಯಮ ವರ್ಗದ ಗಂಡನಾಗಿ ಸುರೇಶ್‌ [ಸಂಚಾರಿ ವಿಜಯ್‌] . ಈ ಮೂರು ಪಾತ್ರಗಳನ್ನು ಸಂಬಂಧ ಅನ್ನವು ದಾರದಿಂದ ಪೋಣಿಸಿದ್ದಾರೆ ಮಂಸೋರೆ.

.

ಮಹಿಳೆಯ ದೇಹ ಬಯಕೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವುದಿರಲಿ, ಹಂಚಿಕೊಳ್ಳುವುದರ ಬಗ್ಗೆ ಯಾರು ಯೋಚನೆಯೂ ಮಾಡುವುದಿಲ್ಲ. ಅಂತಹ ಸೂಕ್ಷ್ಮ ವಿಷಯವನ್ನು ನಿರ್ಧಿಷ್ಟ ಅವಧಿಯಲ್ಲಿ ತೆರೆದಿಡಿವ ಪ್ರಯತ್ನದಲ್ಲಿ ನಿರ್ದೇಶಕರು ತಕ್ಕ ಮಟ್ಟಿಗೆ ಗೆದಿದ್ದಾರೆ. ನಿರ್ದೇಶಕರ ಈ ಆಲೋಚನೆಗೆ ಜೀವ ತುಂಬಿರುವುದು, ಕಥೆಗಾರ್ತಿ ಸಂಧ್ಯಾರಾಣಿ, ಸಂಗೀತ ನಿರ್ದೇಶಕಿ ಬಿಂದು ಮಾಲಿನಿ ಮತ್ತು ಕಲಾವಿದರು. ಇವರ ಜತೆ ಉಳಿದ ತಂತ್ರಜ್ಞರ ಕೆಲಸವೂ ಸಿನಿಮಾದಲ್ಲಿ ಗಮನ ಸೆಳೆಯುತ್ತದೆ.

.

ದೇಹದ ಬಯಕೆಗಳನ್ನು ಮುಕ್ತವಾಗಿ ಮಾತನಾಡುವುದು ತಪ್ಪೋ ಸರಿಯೋ ಎಂಬ ಗೊಂದಲದಲ್ಲಿರುವ ಪಾತ್ರದಲ್ಲಿ ಶ್ರುತಿ ಹರಿಹರನ್‌ ಅವರದ್ದು ಕಾಡುವ ನಟನೆ. ಶ್ರುತಿ ಅವರು ಚಿತ್ರದಿಂದ ಚಿತ್ರಕ್ಕೆ ತಮ್ಮ ನಟನ ಸಾಮರ್ಥ್ಯವನ್ನು ಹೊರಹಾಕುತ್ತಿದ್ದಾರೆ. ಮಧ್ಯಮ ವರ್ಗದ ಗಂಡ ಹೆಂಡತಿಯಾಗಿ ಸಂಚಾರಿ ವಿಜಯ್‌ ಮತ್ತು ಶರಣ್ಯ ಚಪ್ಪಾಳೆ ಗಿಟ್ಟಿಸುವಂತೆ ನಟಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಬರುವ ಪೂರ್ಣಚಂದ್ರ ಮೈಸೂರು ಇನ್ನೊಂದಷ್ಟು ಹೊತ್ತು ಇರಬೇಕಿತ್ತು ಅನ್ನಿಸುವಂತೆ ನಟಿಸಿದ್ದಾರೆ. ಬಾಲಾಜಿ ಮನೋಹರ್‌ ಸೇರಿದಂತೆ ಎಲ್ಲ ಕಲಾವಿದರು ನೈಜತೆಗೆ ಹತ್ತಿರವಾಗಿ ನಟಿಸಿದ್ದಾರೆ.

.

ಚಿತ್ರದ ತಾಂತ್ರಿಕತೆಯ ವಿಷ್ಯದಲ್ಲಿ ಹೇಳಿಕೊಳ್ಳುವ ಕೆಲಸವನ್ನು ಮಾಡಿಲ್ಲ. ತಾಂತ್ರಿಕ ದೋಷಗಳು ಚಿತ್ರದುದ್ದಕ್ಕೂ ಕಾಣುತ್ತಿರುತ್ತವೆ. ಚಿತ್ರದ ಹಿನ್ನಲೆ ಸಂಗೀತ ಹಾಡುಗಳಿಗಿಂತ ಚೆನ್ನಾಗಿದೆ.
ಮಂಸೋರೆ ಅವರು ಚಿತ್ರಕ್ಕೆ ಇನ್ನಷ್ಟು ವೇಗ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸದೇ ಇರದು.

.

ಸೂಕ್ಷ್ಮ ಸಂವೇದನೆ ಉಳ್ಳ ಸಿನಿಮಾ ಇದಾಗಿದ್ದು, ಅಂತಹ ಸಿನಿಮಾ ನೋಡೋ ಪ್ರೇಕ್ಷಕರಿಗೆ ಕಾಡದೇ ಬಿಡುವುದಿಲ್ಲ.

ರೇಟಿಂಗ್‌: 3.25/5

 

ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸುತ್ತಿರುವ, ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ `ನಾ ಹುಡುಕೊ ನಾಳೆ` ಎನ್ನುವ ಹಾಡನ್ನು ನಟ ರಕ್ಷಿತ್ ಶೆಟ್ಟಿ ಜನವರಿ 6ರಂದು ಬಿಡುಗಡೆ ಮಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಸರಿಗಮಪ ಖ್ಯಾತಿಯ ನಿಹಾಲ್ ಹಾಡಿದ್ದಾರೆ. ಶ್ರುತಿ ನಾಯ್ಡು ಚಿತ್ರ ನಿಹಾಲ್ ಅವರಿಗೆ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಚಿತ್ರದ ಎರಡನೇ ಹಾಡು.

.

ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೆಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಅವರ ಸಂಕಲನವಿದೆ. ಕೃಷ್ಣ ಸಾರ್ಥಕ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
.


ನವರಸ ನಾಯಕ, ಜಗ್ಗೇಶ್, ಮಧುಬಾಲ, ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ವಿವೇಕ್ ಸಿಂಹ, ರಮೇಶ್ ಇಂದಿರಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾ: ಸ್ವಾರ್ಥರತ್ನ

ನಿರ್ದೇಶಕ: ಅಶ್ವಿನ್‌ ಕೋಡಂಗೆ
ಕಲಾವಿದರು: ಆದರ್ಶ್‌ ಗುಂಡುರಾಜ್‌, ಇಶಿತಾ ವರ್ಷ, ಸ್ನೇಹಾ ಸಿಂಗ್‌, ಸಾಧು ಕೋಕಿಲಾ, ರಮೇಶ್‌ ಭಟ್‌, ಸುಧಾ ಬೆಳವಾಡಿ, ಅಮಿತ್‌

.

ಬದುಕಿನಲ್ಲಿಪ್ರೀತಿ ಎಂಬುದು ಎಂತಹ ಮನುಷ್ಯನನ್ನು ಬೇಕಾದರೂ ಬದಲಾಯಿಸುತ್ತದೆ. ಅಂತಹ ಒಬ್ಬನ ಕಥೆಯೇ ಈ ಸ್ವಾರ್ಥರತ್ನ. ಪರಮ ಸ್ವಾರ್ಥಿಯಾಗಿದ್ದ ಒಬ್ಬ ಹುಡುಗ ತನ್ನ ಪ್ರೀತಿಗಾಗಿ ಹೇಗೆ ನಿಸ್ವಾರ್ಥಿಯಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ.

ಅಶ್ವಿನ್‌ ಕೋಡಂಗೆ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸ್ವಾರ್ಥ ರತ್ನ, ವಿಶೇಷ ಸಬ್ಜೆಕ್ಟ್‌ ಇಟ್ಟುಕೊಂಡು ತಯಾರಾದ ಸಿನಿಮಾವಾಗಿದೆ. ಆದರೆ ಒಂದಷ್ಟು ಮುಖ್ಯ ಅಂಶಗಳ ಕೊರತೆಯಿಂದ ಈ ಸಿನಿಮಾ ಕೊರಗುತ್ತದೆ.

.

ನಾಯಕ ಆದರ್ಶ್‌ ಪರಮ ಸ್ವಾರ್ಥಿ ತಾನು ಪ್ರೀತಿಸುವ ಹುಡುಗಿಯ ಮುಂದೆ ಭಿಕ್ಷುಕರಿಗೆ ಹಣ ಕೊಟ್ಟರೂ ಅವಳು ಹೋದ ತಕ್ಷಣ ಅದನ್ನು ವಾಪಾಸ್‌ ಕಿತ್ತಕೊಳ್ಳುವ ಬುದ್ಧಿ. ಹೀಗಿದ್ದವನನ್ನು ನಾಯಕಿ ದೂರದಿಂದಲೇ ಬದಲಾಯಿಸುತ್ತಾಳೆ. ನಾಯಕಿ ಕವನ[ ಇಷಿತಾ] ಗೆ ಸಮಾಜ ಸೇವೆ ಮಾಡುವುದರಲ್ಲಿ ಆನಂದ. ನಿಧಾನವಾಗಿ ತನ್ನ ಹುಡುಗನನ್ನು ಅದೇ ಹಾದಿಗೆ ತರುವ ಪ್ರಯತ್ನ ಮಾಡುತ್ತಾಳೆ. ಆದರೆ ಸೆಕೆಂಡ್‌ ಹಾಫ್‌ನಲ್ಲಿ ಮತ್ತೊಬ್ಬ ಹುಡುಗಿ ನಾಯಕನನ್ನು ಪ್ರೀತಿಸುತ್ತಾಳೆ. ಆದರೆ ಅವನು ಮಾತ್ರ ಕವನಳಿಗಾಗಿಯೇ ನಿಸ್ವಾರ್ಥವಾಗಿ ಕಾಯುತ್ತಾ ಕೂರುತ್ತಾನೆ. ಇವನಿಗೆ ಕವನ ಸಿಗುತ್ತಾಳೋ ಇಲ್ಲವೋ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

.

ಸಿನಿಮಾದ ಸಂಭಾಷಣೆ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಇದನ್ನು ಚಿತ್ರಕಥೆ ಮಾಡಿಕೊಳ್ಳುವ ವಿಚಾರದಲ್ಲಿಯೂ ನಿರ್ದೇಶಕರು ಗಮನ ಹರಿಸಬೇಕಿತ್ತು. ಒಂದಷ್ಟು ಉತ್ತರ ಸಿಗದ ಪ್ರಶ್ನೆಗಳು ಸಿನಿಮಾದಲ್ಲಿವೆ.. ಇಡೀ ಚಿತ್ರವನ್ನು ನವ ನಟ ಆದರ್ಶ್‌ ಆವರಿಸಿಕೊಂಡಿದ್ದಾರೆ. ಇನ್ನೊಂದಿಷ್ಟು ಅಭಿನಯದ ಅವಶ್ಯಕತೆ ಅವರಿಗಿತ್ತು.. ಇಶಿತಾ ವರ್ಷ ಮತ್ತು ಸ್ನೇಹಾ ಸಿಂಗ್‌ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹಾಸ್ಯ ನಟ ಅಮಿತ್‌ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಕಡೆಯಲ್ಲಿ ಒಂದು ಮೆಸೆಜ್‌ ಕೊಡುವ ಪ್ರಯತ್ನ ಮಾಡುತ್ತದೆ.

.

ರೇಟಿಂಗ್‌: 3/5

 

ವಿಜಯ್‌ ಪ್ರಸಾದ್‌ ಮತ್ತು ಜಗ್ಗೇಶ್‌ ಕಾಂಬಿನೇಶನ್‌ನ "ತೋತಾಪುರಿ"- 'ತೊಟ್‌ ಕೀಳ್ಬೇಡಿ' ಸಿನಿಮಾದಲ್ಲಿ ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ, ಈಗ ಆ ಸಿನಿಮಾದಲ್ಲಿ ಅವರ ಲುಕ್‌ ರೀವಿಲ್‌ ಆಗಿದ್ದು, ಡಾಲಿ ಸಖತ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಾರಾಯಣ ಪಿಳ್ಳೈ ಎಂಬ ವ್ಯಾಪಾರಿಯ ರೋಲ್‌ ಇದಾಗಿದ್ದು, ಧನಂಜಯ,ಸುಮನ್‌ ರಂಗನಾಥ್‌ ಜೋಡಿಯಾಗಿ ನಟಿಸುತ್ತಿದ್ದಾರೆ.

 

ವಿಜಯ್‌ ಪ್ರಸಾದ್‌ ಅವರ ಕಾನ್ಸೆಪ್ಟ್‌ ಬಹಳ ಚೆನ್ನಾಗಿರುವ ಕಾರಣ ಅತಿಥಿ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರಂತೆ.

ಶ್ರುತಿ ಹರಿಹರನ್‌ ನಟನೆಯ ನಾತಿಚರಾಮಿ ಸಿನಿಮಾದಲ್ಲಿ ಹೆಣ್ಣಿನ ತುಮುಲಗಳನ್ನು ಹೇಳಿದ್ದಾರೆ ನಿರ್ದೇಶಕ ಮಂಸೂರೆ. ಈ ಹಿಂದೆ ಹರಿವು ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ, ಇವರು ಈ ಬಾರಿ ಸ್ವಲ್ಪ ಕಮರ್ಷಿಯಲ್‌ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರಂತೆ.

.
ಶ್ರುತಿ ಹರಿಹರನ್‌ ಜತೆ ಸಂಚಾರಿ ವಿಜಯ್‌, ಪೂರ್ಣಚಂದ್ರ ಮೈಸೂರು, ಶರಣ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಗನ್ಮೋಹನ್‌ ರೆಡ್ಡಿ ಹಾಗೂ ಶಿವಕುಮಾರ್‌ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ.
.
ಈ ಸಿನಿಮಾದಲ್ಲಿ ಬಿಗಿ ನಿರೂಪಣೆಯಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಎಲ್ಲರ ಗಮನಸೆಳೆದಿದೆ. ಜತೆಗೆ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಲೇಖಕಿ ಸಂಧ್ಯರಾಣಿ ಸಂಭಾಷಣೆ ಬರೆಯುತ್ತಿದ್ದಾರೆ.

ಚಿತ್ರ ಇದೇ ಡಿಸೆಂಬರ್ 28 ರಂದು ತೆರೆಕಾಣುತ್ತಿದೆ.

 
ಸಲಿಂಗ ಕಾಮದ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವುದು ಬಹಳ ಕಡಿಮೆ, ಆದರೆ ಕನ್ನಡದಲ್ಲಿ ಅಂತಹದ್ದೊಂದು ವಿಶೇಷ ಸಬ್ಜೆಕ್ಟ್ ಸಿನಿಮಾವಾಗಿದ್ದು ಅದು ಹೊಸ ವರ್ಷದ ಆರಂಭದಲ್ಲಿ  ವಾರ ಬಿಡುಗಡೆಯಾಗುತ್ತಿದೆ. 
.
ಹೌದು ಟೇಶಿ ವೆಂಕಟೇಶ್‌ ನಿರ್ದೇಶನದ ಬೆಸ್ಟ್‌ ಫ್ರೆಂಡ್ಸ್‌ ಎಂಬ ಸಿನಿಮಾದಲ್ಲಿ  ಹೆಣ್ಣು ಹೆಣ್ಣನ್ನೇ ಪ್ರೀತಿಸುವ ಕತೆ. ಒಂದು ಕಡೆ ಇದಕ್ಕೆ ಕಾನೂನಿನ ಮಾನ್ಯತೆ ಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಟೇಶಿ ವೆಂಕಟೇಶ್‌ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ಬೆಸ್ಟ್‌ ಫ್ರೆಂಡ್ಸ್‌ Ü ಸಿನಿಮಾ ಮಾಡಿದ್ದಾರೆ. 
.
ಈ ಚಿತ್ರದಲ್ಲಿ ಮೇಘನಾ, ಚಿಕ್ಕಮಗಳೂರಿನ ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್‌ ನಟಿಸಿದ್ದಾರೆ. ಲಯನ್‌ ಎಸ್‌ ವೆಂಕಟೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಇದೇ ಜನವರಿ 4ರಂದು ಚಿತ್ರ ಬಿಡುಗಡೆಯಾಗುತ್ತದೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುವ ಆಸೆಯ ಬಗ್ಗೆ ಬಹಳ ದಿನಗಳ ಹಿಂದೆಯೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು.. ಆ ಕಾಲ ಈಗ ಕೂಡಿ ಬಂದಿದೆ. ಹೌದು, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಅಡ್ವೆಂಚರ್ ಸಿನಿಮಾ ಒಂದರಲ್ಲಿ ಕಿಚ್ಚ ಸುದೀಪ ನಾಯಕರಾಗಿ ನಟಿಸಲಿದ್ದಾರೆ.

.

ಈ ಚಿತ್ರವು ಕಿಚ್ಚ ಸುದೀಪ ಅವರ “ಸುಪ್ರಿಯಾನ್ವಿ” ಬ್ಯಾನರ್ನಲ್ಲಿ ತಯಾರಾಗಲಿದ್ದು ಅವರೊಂದಿದೆ ಜಾಕ್ ಮಂಜುನಾಥ್ ಅವರ “ಕೆ ಎಸ್ ಕೆ ಶೋ ರೀಲ್” ಸಂಸ್ಥೆಯು ನಿರ್ಮಾಣದಲ್ಲಿ ಕೈಜೋಡಿಸಲಿದ್ದಾರೆ. ಈ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಬಹುಭಾಷಾ ಚಿತ್ರವಾಗಲಿದೆಯಂತೆ.

.

“ಅನೂಪ್ ಭಂಡಾರಿ ಅವರು ಹೇಳಿದ ಒನ್ ಲೈನ್ ಸ್ಟೋರಿ ತುಂಬಾ ಹಿಡಿಸಿತು. ಬಹಳ ಎಕ್ಸಿಟಿಂಗ್ ಅನ್ನಿಸ್ತು, ಅದರಿಂದ ನಾನೇ ನಿರ್ಮಿಸೋಣ ಅಂತ ತೀರ್ಮಾನಿಸಿದೆ. ನಮ್ಮ ಬ್ಯಾನರ್ “ಸುಪ್ರಿಯಾನ್ವಿ” ಜೊತೆ ಜಾಕ್ ಮಂಜು ಅವರ “ಕೆ ಎಸ್ ಕೆ ಷೋ ರೀಲ್” ಕೂಡ ನಿರ್ಮಾಣದಲ್ಲಿ ಜೊತೆಯಾಗಲಿದ್ದು, ಬಹು ಕೋಟಿವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ತಯಾರಾಗಲಿದೆ. ಸದ್ಯಕ್ಕೆ ಹೆಚ್ಚೇನೂ ಹೇಳಲಾರೆ, ಗುರುವಾರ ಸಂಜೆ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ” ಎಂದಷ್ಟೇ ಹೇಳಿ ಚಿತ್ರದ ಬಗೆಗಿನ ತಮ್ಮ ಉತ್ಸಾಹ ಹಂಚಿಕೊಂಡರು ಕಿಚ್ಚ ಸುದೀಪ್.

.

ಈ ಚಿತ್ರವು ಅವರು ಸದ್ಯ ಒಪ್ಪಿಕೊಂಡಿರುವ ಕನ್ನಡದ “ಪೈಲ್ವಾನ್” “ಕೋಟಿಗೊಬ್ಬ 3”, ತೆಲುಗಿನ “ಸೈರಾ” ಮತ್ತು ಹಾಲಿವುಡ್ ಚಿತ್ರ ರೈಸನ್ ಚಿತ್ರೀಕರಣ ಮುಗಿಸಿದ ನಂತರ ಬಹುಷಃ ಮೇ ತಿಂಗಳಲ್ಲಿ ಶುರುವಾಗಬಹುದು.

.

ಕಿಚ್ಚ ಸುದೀಪ್ ಅವರು ನಟಿಸುತ್ತಿರುವ “ಪೈಲ್ವಾನ್” ಚಿತ್ರದ ಶೇಕಡಾ 75ರಷ್ಟು ಶೂಟಿಂಗ್ ಮುಗಿದಿದ್ದು,ಜನವರಿಯಲ್ಲಿ ಬಹುತೇಕ ಚಿತ್ರೀಕರಣ ಮುಗಿಯಲಿದ್ದು.. ಸಂಕ್ರಾಂತಿ ನಂತರ ಸುದೀಪ್ ಅವರು ‘ಕೋಟಿಗೊಬ್ಬ 3’ ತಂಡ ಸೇರಿಕೊಳ್ಳಲಿದ್ದಾರೆ.

.

ಸದ್ಯಕ್ಕೆ ಈ ಅಡ್ವೆಂಚರ್ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಅನೂಪ್ ಭಂಡಾರಿ ಮತ್ತು ತಂಡ.

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ 'ಕೋಟಿಗೋಬ್ಬ-3' ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ.

.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ.
.
ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ ಮತ್ತು ಕಿರುತೆರೆಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
.
ಇನ್ನು ಕೋಟಿಗೊಬ್ಬ-3 ಚಿತ್ರದ ಫಸ್ಟ್‌ ಲುಕ್‌ ಮತ್ತು ಟೀಸರ್‌ ನೋಡಿದ ಬಾಂಬೆ ಮೂಲದ ಕಂಪನಿಯೊಂದು ಹಿಂದಿ ಡಬ್ಬಿಂಗ್‌ ರೈಟ್ಸ್‌ನ್ನು 9 ಕೋಟಿಗೆ ಕೊಂಡುಕೊಳ್ಳಲು ಮುಂದಾಗಿದೆಯಂತೆ. ಇನ್ನು ಎಲ್ಲ ಭಾಷೆಯ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡಾ ಭಾರಿ ಮೊತ್ತದ ಆಫರ್‌ ಬಂದಿದೆಯಂತೆ. ಆದರೆ ಚಿತ್ರೀಕರಣ ಮುಗಿಯುವವರೆಗೂ ಮಾರಾಟ ಮಾಡದಿರುವ ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ.

Page 4 of 43

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top