nata

ttm

adweb

udgharsha

Sunil HC Gowda

Sunil HC Gowda

 

ಟೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರ "ಕಂತ್ರಿ ಬಾಯ್ಸ್" ಈವಾರ ಬಿಡುಗಡೆಯಾಗುತ್ತಿದೆ. ವೆಂಕಟ್ ಗೌಡ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಕಿರುತೆರೆಯ ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಕಾಮಿಡಿ ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ರಾಜು ಚಟ್ನಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಸಿ ಹೇಮಂತ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ ರಿಲೀಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಜು ಚಟ್ನಳ್ಳಿ ಇದೊಂದು ಸಪೂರ್ಣ ಹಾಸ್ಯ ಚಿತ್ರ. ಹಿಂದೆ ನಾನು ಕಾಮಿಡಿ ಸೀರಿಯಲ್‍ಗಳಿಗೆ ಕೆಲಸ ಮಾಡಿದ್ದು ಈ ಚಿತ್ರಕ್ಕೆ ಅನುಕೂಲಕರವಾಯಿತು. ಚಿತ್ರದ ಪ್ರತಿ ಸೀನ್ ಕಾಮಿಡಿಯಾಗಿದೆ. ಹೆಣ್ಣನ್ನು ಒಳ್ಳೇ ರೀತಿಯಲ್ಲಿ ನೋಡ ಎನ್ನುವುದೇ ನಮ್ಮ ಉದ್ದೇಶ. ಯಾವುದೋ ಕಾರಣಕ್ಕಾಗಿ ಪರಿಸ್ಥಿತಿಗೆ ಸಿಲುಕಿ ತಪ್ಪುದಾರಿ ಹಿಡಿದಿರುತ್ತಾರೆ. ಇಂಥವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಅಬೀನಯಿಸಿರುವವರು ಯಾರೂ ಹೊಸಬರ ಹಾಗೆ ಕಾಣುವುದಿಲ್ಲ. ಗಡ್ಡಪ್ಪ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದಾರೆ. ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದಾರೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಎಂ.ಸಿ. ಹೇಮಂತ ಗೌಡ ಮಾತನಾಡುತ್ತ ಈವರೆಗೆ ಚಿತ್ರರಂಗದಲ್ಲಿ ನಾನೂ ನಟನೆ, ಸಹನಿರ್ದೇಶನ ಅಂತ ತೊಡಗಿದ್ದೆ. ಈ ನಿರ್ದೇಶಕರು ಮಾಡಿದ್ದ ಕಥೆ ತುಂಬಾ ಇಷ್ಟವಾಯಿತು. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಜನರಿಗೆಖಂಡಿತ ಉತ್ತಮ ಮನರಂಜನೆ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ವಿತರಕ ವೆಂಕಟ ಗೌಡಮಾತನಾಡಿ ನಾನು ಒಂದೆರಡು ಚಿನಿಮಾ ರಿಲೀಸ್ ಮಾಡಿದ್ದೆ. ಸ್ವಂತ ಆಫೀಸ್ ಮಾಡಿದ ಮೇಲೆ ರಿಲೀಸ್ ಮಾಡುತ್ತಿರುವ ಮೊದಲ ಚಿತ್ರವಿದು. ಈವರೆಗೆ 75ರಿಂದ 80 ಚಿತ್ರಮಂದಿರಗಳು ಕನ್‍ಫರ್ಮ್ ಆಗಿವೆ. ಹತ್ತರಿಂದ ಹದಿನೈದು ಮಲ್ಟಿಪ್ಲೆಕ್ಸ್ ಕೂಡ ಸಿಕ್ಕಿವೆ, ಒಳ್ಳೇ ಸಿನಿಮಾ ಮಾಡಿದ್ದಾರೆ. ನನಗೂ ತುಂಬಾ ಇಷ್ಟವಾಯಿತು ಎಂದು ಹೇಳಿದರು.

'ತಿಥಿ' ಖ್ಯಾತಿಯ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರನ್ನು ಬಳಸಿಕೊಂಡು ಕಂತ್ರಿಬಾಯ್ಸ್ ಚಿತ್ರವನ್ನು ನಿರ್ದೇಶಕ ರಾಜು ಚಟ್ನಳ್ಳಿ ನಿರೂಪಿಸಿದ್ದಾರೆ. ಮರ್ಡರಿ ಮಿಸ್ಟ್ರಿಯ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಅನಿವಾರ್ಯ ಕಾರಣಕ್ಕೆ ವೈಶ್ಯಾವೃತ್ತಿಗೆ ಇಳಿಯಲು ಬರೀ ಹೆಣ್ಣಿನದಷ್ಟೇ ತಪ್ಪು ಇರುವುದಿಲ್ಲ ಬದಲಾಗಿ ಪುರುಷನದು ಇರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿ ಮತ್ತು ಕಾರಣಗಳನ್ನು ಕಂತ್ರಿಬಾಯ್ಸ್ ಮಾಡುವ ಕಂತ್ರಿ ಕಂತ್ರಿ ಕೆಲಸಗಳು ಮತ್ತು ಅದರಿಂದ ಸಮಾಜಕ್ಕೆ ಅಗುವ ಒಳ್ಳೆಯ ಕೆಲಸದ ಸುತ್ತಾ ಈ ಚಿತ್ರದ ಕಥೆ ಸಾಗಲಿದೆ.

ನಟ ಅರವಿಂದ್ ಮಾತನಾಡಿ ಇದು ನನ್ನ ಮೂರನೇ ಚಿತ್ರ. ಉದಾಸೀನತೆಯಿಂದ ಇರುವ ಹುಡುಗನಾಗಿ ಅಭಿನಯಿಸಿದ್ದೇಬೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ನಟಿಯರಾದ ಸಂಧ್ಯಾ, ಅನಕ, ಬಸಂತಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಹೇಮಂತ್ ಗೌಡ, ಜೋಕರ್ ಹನುಮಂತ್, ಹೇಮಂತ್ ಸೂರ್ಯ, ದರ್ಶನ್ ರಾಜ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೇಮಂತ್ ಗೌಡ ಅವರ ಜೊತೆ ನಿರ್ಮಾಣದಲ್ಲಿ ಎಂ.ಸಿ. ರೇಣುಕ, ಮೋಹನ್ ಕೆ. ಕೃಷ್ಣಮೂರ್ತಿ ಎಂ, ಶ್ರೀಧರ್‍ರಾಜು, ದರ್ಶನ್‍ರಾಜ್ ಕೈಜೋಡಿಸಿದ್ದಾರೆ. ಪಿ.ವಿ ಅರ್. ಸ್ವಾಮಿ ಅವರ ಛಾಯಾಗ್ರಹಣ, ಕಿರಣ್ ಮಹದೇವ್ ಅವರ ಸಂಗೀತ ಸಂಯೋಜನೆ, ಡಿ. ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಅಂಬಾರಿ, ಅದ್ಧೂರಿ ಸಿನಿಮಾಗಳ ಮೂಲಕ ಸ್ಟಾರ್‌ ನಿರ್ದೇಶಕರಾದ ಎ ಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಕಿಸ್ ಚಿತ್ರದ ನಾಯಕ ಮತ್ತು ನಾಯಕಿಯ ಪಾತ್ರ ಗಳನ್ನು ಪರಿಚಯಿಸುವ ಫಸ್ಟ್ ಲುಕ್ ಟೀಸರ್ ನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.

 

ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ವಿ. ರವಿಕುಮಾರ್ ನಿರ್ಮಾಣದ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವ ವಿರಾಟ್ ಹಾಗೂ ಶ್ರೀಲೀಲಾ ಪಾತ್ರಗಳನ್ನು ಪರಿಚಯ ಮಾಡುವ ಒಂದು ನಿಮಿಷದ ವಿಡಿಯೋವನ್ನು ಫೆ. 14ರಂದು ಬಿಡುಗಡೆ ಮಾಡಲಿದ್ದಾರೆ ಅರ್ಜುನ್.

 

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್‌ಲುಕ್‌ ಮತ್ತು ಫೋಟೋಗಳು ಫ್ರೆಶ್‌ ಫೀಲ್‌ ಕೊಡುತ್ತಿದೆ ಎಂಬ ಮಾತುಗಳು ಆನ್‌ಲೈನ್‌ನಲ್ಲಿ ವ್ಯಕ್ತವಾಗಿದೆ.

 

ನಾಯಕಿ ಪಾತ್ರಕ್ಕಾಗಿ ಎಪಿ ಅರ್ಜುನ್ ಸುಮಾರು 200 ಕ್ಕೂ ಹೆಚ್ಚು ಹುಡುಗಿಯರನ್ನು ಆಡಿಶನ್ ಮಾಡಿ, ಕೊನೆಗೆ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದಾರೆ. ನಾಯಕ ವಿರಾಟ್‌ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷದ ವ್ಯಾಲೆಂಟೇನ್ಸ್ ಡೇ‌ ದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಮಾಡಿದ್ದರು.

 

ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಸಿನಿಮಾಗೆ ಎಲ್ಲ ತಯಾರಿಗಳು ನಡೆಯುತ್ತಿವೆ. ಈಗ ಈ ಚಿತ್ರಕ್ಕೆ ಸ್ಪೆಷಲ್‌ ಸ್ಟಾರ್‌ ಧನಂಜಯ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
 
ಹೌದು ಟಗರು ಚಿತ್ರದಲ್ಲಿ ನೆಗೆಟಿವ್‌ ರೋಲ್‌ ಮಾಡಿದ್ದ ಧನಂಜಯ,ದರ್ಶನ್‌ ಅವರ 51 ನೇ ಚಿತ್ರದಲ್ಲಿ ಆ್ಯಂಟಿ ಹೀರೋ ಆಗಿ ನಟಿಸುತ್ತಿದ್ದಾರೆ. ಟಗರು ಚಿತ್ರದ ಡಾಲಿ ಕ್ಯಾರೆಕ್ಟರ್‌ಗೆ ಈಗಾಗಲೇ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. ಧನಂಜಯ ನಟನೆಯ ಬಲ್ಲುಮಾ ಹಾಡಿನ ಲಿರಿಕಲ್‌ ವಿಡಿಯೋವನ್ನು ಮಿಲಿಯನ್‌ಗಟ್ಟಲೇ ಜನ ನೋಡಿದ್ದಾರೆ.
 
ಶಿವರಾಜ್‌ಕುಮಾರ್‌ ಎದುರು ಗುದ್ದಾಡಿದ್ದ ಧನಂಜಯ ಈಗ ದರ್ಶನ್‌ ಎದುರು ವಿಲನ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದಾರೆ. ವಿಷ್ಣು ವರ್ಧನ ಚಿತ್ರ ಖ್ಯಾತಿಯ ಪಿ ಕುಮಾರ್‌ ಇದರ ನಿರ್ದೇಶಕರು. ಟಗರು ಚಿತ್ರದ ಧನಂಜಯ ಅವರ ಖಡಕ್‌ ಲುಕ್‌ ನೋಡಿ, ಈ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
 
 
ಒಟ್ಟಿನಲ್ಲಿ ಧನಂಜಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಿಗೆ ಟಕ್ಕರ್‌ ಕೊಡುವ ವಿಲನ್‌ ಆಗುತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ದರ್ಶನ್‌ ಹುಟ್ಟುಹುಬ್ಬವಾದ ನಂತರ ಶೂಟಿಂಗ್‌ ಆರಂಭವಾಗಲಿದೆ. ಚಿತ್ರವನ್ನು ಮೀಡೀಯ ಹೌಸ್ ಬ್ಯಾನರ್‌ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ ಅವರು ನಿರ್ಮಿಸುತ್ತಿದ್ದಾರೆ.
#Cineloka #ChallengingStarDarshan #SpecialStarDhananjaya

 

ಶರಣ್‌,ಆಶಿಕಾ ನಟನೆಯ "ರಾಂಬೊ-2" ಚಿತ್ರ ತಂಡ ಶರಣ್‌ ಬರ್ತ್‌ಡೇ ಪ್ರಯುಕ್ತ ಆ ಚಿತ್ರದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.

 

ಸ್ಟೈಲಿಷ್‌ ಪೋಸ್ಟರ್‌ಗಳು ಮತ್ತು ಆಶಿಕಾ ಅವರ ಗ್ಲಾಮರಸ್‌ ಸ್ಟಿಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಈಗಾಗಲೇ ಒಂದು ಹವಾ ಕ್ರಿಯೇಟ್‌ ಮಾಡಿರುವ "ರಾಂಬೊ-2" ಚಿತ್ರದ 'ಯವ್ವಾ ಯವ್ವಾ' ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ.

 

ಈ ಹಾಡಿನಲ್ಲಿ ಶರಣ್‌ ಮತ್ತು ಆಶಿಕಾ ರಂಗನಾಥ್‌ ಸಖತ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಡು ಕೂಡಾ ಅದ್ಧೂರಿಯಾಗಿ ಚಿತ್ರೀಕರಣಗೊಂಡಿದ್ದು, ನೋಡುಗರನ್ನು ಮೊದಲ ನೋಟಕ್ಕೆ ಸೆಳೆಯುತ್ತಿದೆ.ಶರಣ್ ಅವರ ಡ್ಯಾನ್ಸ್ ಸ್ಟೆಪ್ಸ್ ನೋಡಿ ಜನರು ಖುಷಿಯಾಗಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡಿಗೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ಯುಟೂಬ್‌ನಲ್ಲಿ ವೀಕ್ಷಿಸಿದ್ದಾರೆ.

 

ದಿಲ್‌ವಾಲಾ ಖ್ಯಾತಿಯ ಅನಿಲ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರಕ್ಕೆ ರಾಮೇಶ್ವರಂನಿಂದ ಪಾಕಿಸ್ತಾನದ ಗಡಿವರೆಗೆ ಶೂಟಿಂಗ್‌ ಮಾಡಲಾಗಿದೆ. ಇಡೀ ಸಿನಿಮಾದ ರೋಡ್‌ನಲ್ಲಿಯೇ ನಡೆಯುತ್ತದೆ. ಚಿಕ್ಕಣ್ಣ ಮೊದಲ ಬಾರಿಗೆ ಬೇರೆ ತರಹದ ಪಾತ್ರದಲ್ಲಿ ನಟಿಸಿದ್ದು, ಅವರು ಇರುವ ಪ್ರತಿ ಸೀನ್‌ನಲ್ಲಿಯೂ ಎಲ್ಲರನ್ನು ನಗಿಸುತ್ತಾರಂತೆ.ಈ ಸಿನಿಮಾದಲ್ಲಿ ಕಾರು ಕೂಡ ಒಂದು ಪ್ರಮುಖ ಪಾತ್ರವಹಿಸಿದೆಯಂತೆ.

 

ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ "ರಾಂಬೊ-2" ಸಖತ್‌ ಸದ್ದು ಮಾಡುತ್ತಿದೆ. ಅಂಟ್ಲಾಂಟ ನಾಗೇಂದ್ರ, ಅರ್ಜುನ್‌ ಜನ್ಯ, ಮೋಹನ್‌ ಬಿ ಕೆರೆ, ಸುಧಾಕರ್‌, ತರುಣ್‌ ಸುಧೀರ್‌ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

 

ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಮಿಸ್ಟರ್ ಎಲ್.ಎಲ್.ಬಿ. ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪ್ರೇಮ್ ಅಭಿನಯದ ಗುಣವಂತ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ರಘುವರ್ಧನ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ. ಫೆಬ್ರವರಿ 16 ರಂದು ಸುಮಾರು 70 ರಿಂದ 80 ಥಿಯೇಟರುಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರದ ಬಿಡುಗಡೆಯ ಕುರಿತಂತೆ ವಿವರಗಳನ್ನು ಹಂಚಿಕೊಳ್ಳಲು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಟಿಯನ್ನು ಆಯೋಜಿಸಿತ್ತು.

ನಿರ್ದೇಶಕ ರಘುವರ್ಧನ್ ಮಾತನಾಡುತ್ತ ಈ ತಂಡದಲ್ಲಿ ನಾನೊಬ್ಬ ಹಳಬನಾಗಿದ್ದರೂ ಉಳಿದವರೆಲ್ಲ ಹೊಸಬರು. ಇಷ್ಟು ದಿನ ನಿರ್ದೇಶನ ಮಾಡಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. 2 ಜನರೇಶನ್‍ನಲ್ಲಿ ನಡೆಯುವ ಕಥೆಯಿದು ಎಂದು ಹೇಳಿದರು. ನಾಯಕ ಶಿಶಿರ್ ಮಾತನಾಡುತ್ತ ಸೀರಿಯಲ್ ಮೂಲಕವೇ ನಾನು ಚಿತ್ರರಂಗಕ್ಕೆ ಬಂದೆ. ಒಬ್ಬ ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಏನೇನು ಬೇಕೋ ಅದೆಲ್ಲ ಈ ಚಿತ್ರದಲ್ಲಿದೆ. ಒಬಬ್ ಗೌಡನ ಮಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ನಾಯಕಿ ಲೇಖಾಚಂದ್ರ ಮಾತನಾಡಿ ತುಂಬಾ ಕ್ಯೂಟ್ ಆಗಿರುವಂಥ ಹಾಗೂ ನಾಯಕನಿಗೆ ಯಾವಾಗಲೂ ಕ್ವಾಟ್ಲೆ ಕೊಡುವಂಥ ಪಾತ್ರ ಎಂದು ತನ್ನ ಪಾತ್ರವನ್ನು ವಿವರಿಸಿದರು. ಉಳಿದಂತೆ ನಾರಾಯಣಸ್ವಾಮಿ, ಕೆಂಪೇಗೌಡ, ಹಾಗೂ ಸುಜಯ್ ಹೆಗಡೆ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.

ಮಂಜು ಚರಣ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರತಿ ಹಾಡುಗಳು ವಿಶೇಷತೆಯಿಂದ ಕೂಡಿವೆ. ಬಾಂಬೆ ಬೆಡಗಿಯೊಬ್ಬಳ ಅಭಿನಯದಲ್ಲಿ ಮೂಡಿಬಂದಿರುವ ಐಟಮ್ ಹಾಡೊಂದರಲ್ಲಿ ಉಪಹಾರಗಳ ಬಗ್ಗೆಯೇ ಉಲ್ಲೇಖಿಸಲಾಗಿದೆ. ಇಡ್ಲಿ ವಡಾ ಸಾಂಬಾರ್, ಬೆಂಗಳೂರು ಮಂಗಳೂರು ನಂದೇನೇ ದರ್ಬಾರು ಎಂಬ ಈ ಹಾಡು ಎಲ್ಲಾ ಕಡೆ ವೈರಲ್ ಆಗಿದೆ. ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ, ಪ್ರೇಮದ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ನವಿರಾದ ಹಾಸ್ಯವನ್ನು ಕೂಡ ಹೇಳಲಾಗಿದೆ.

ಈ ಚಿತ್ರಕ್ಕೆ ಸುರೇಶ್ ಬಾಬು ಅವರ ಛಾಯಾಗ್ರಹಣ, ರಾಜು ಬೆಳಗೆರೆ ಅವರ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಅವರ ಸಂಕಲನ, ಗೌಸ್‍ಪೀರ್, ಮಂಜುಚರಣ್ ಅವರ ಸಾಹಿತ್ಯ, ಕಲೈ ಮಾಸ್ಟರ್, ತ್ರಿಭುವನ್ ಅವರ ನೃತ್ಯ ನಿರ್ದೇಶನ ಹಾಗೂ ಪ್ರಭು ಅವರ ಕಲಾನಿರ್ದೇಶನವಿದೆ. ಶಿಶಿರ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ್ರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತಾ ಆಚಾರ್ಯ, ನಾರಾಯಣಸ್ವಾಮಿ, ಡೈಮಂಡ್ ರಾಜಣ್ಣ, ಡಾ|| ಸೋಮಶೇಖರ್, ರಾಮಣ್ಣ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಡಾ.ಶಿವಣ್ಣ ಈಗ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ತೆಲುಗಿನಲ್ಲಿ ಬಾಹುಬಲಿ ಖ್ಯಾತಿಯ ರಾಣಾ ನಡೆಸಿಕೊಡುತ್ತಿರುವ ನಂ 1 ಯಾರಿ ವಿತ್ ರಾಣಾ ಶೋದ ಕನ್ನಡ ಅವತರಿಣಿಕೆ ಇದಾಗಿದ್ದು, ಇದಕ್ಕೆ "ನಂ 1 ಯಾರಿ ವಿತ್ ಶಿವರಾಜ್‌ಕುಮಾರ್" ಎಂದು ಹೆಸರಿಡಲಾಗಿದೆ.
ಇದರಲ್ಲಿ ಶಿವರಾಜ್‌ಕುಮಾರ್ ಸಿಲೆಬ್ರೆಟಿ ಮತ್ತು ಅವರ ನಿಜ ಜೀವನದ ಸ್ನೇಹಿತರ ಜತೆ ಮಾತುಕತೆ ನಡೆಸಲಿದ್ದಾರಂತೆ. ಜತೆಗೆ ಸಿಲೆಬ್ರೆಟಿಗಳ ಜತೆ ಆಟವಾಡಿಕೊಂಡು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರಂತೆ.
ಶಿವಣ್ಣ ಜತೆ ಉಪೇಂದ್ರ, ಶ್ರುತಿಹರಿಹರನ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಸಾಕಷ್ಟು ಮಂದಿ ಸಿಲೆಬ್ರೆಟಿಗಳು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
#KarunadaChakrvarthy #DrShivanna #Cineloka
 
ಲೂಸ್ ಮಾದ ಯೋಗೀಶ್ ನಟನೆಯ ದುನಿಯಾ-2 ಈಗ 'ಯೋಗಿ ದುನಿಯಾ' ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದ ಸೆನ್ಸಾರ್ ಆಗಿದ್ದು, ಮಾರ್ಚ್ 9ಕ್ಕೆ ಚಿತ್ರಮಂದಿರಕ್ಕೆ ಬರುತ್ತದಂತೆ.
ಫೆ.23ರಂದು 'ಯೋಗಿ ದುನಿಯಾ'ವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ತೀರ್ಮಾನ ಮಾಡಿದ್ದರು. ಆದರೆ ಅಂದು ಟಗರು ಬಿಡುಗಡೆಯಾಗುವ ಕಾರಣ ಅದನ್ನು ಮಾರ್ಚ್ 9ಕ್ಕೆ ಮುಂದೂಡಿದ್ದಾರೆ.
ಟ್ರೇಲರ್ ಮತ್ತು ಸಿನಿಮಾದ ಫೋಟೋಗಳಿಂದ 'ಯೋಗಿ ದುನಿಯಾ' ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ದುನಿಯಾದಂತೆ ಇದು ಸಹ ಪಕ್ಕಾ ರೌಡಿಸಂ ಚಿತ್ರವಾಗಿದ್ದು ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ವಿಲನ್ ಆಗಿ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯೋಗಿಯವರ ಸಹೋದರ ಮಹೇಶ್ ಇಲ್ಲಿ ಮುಸ್ಲೀಂ ಯುವಕನಾಗಿ ನಟಿಸುತ್ತಿದ್ದಾರೆ.
ಹರಿ ಎಂಬುವವರು ಇದೇ ಮೊದಲ ಬಾರಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಖಡಕ್ ಡೈಲಾಗ್‌ಗಳಿದ್ದು, ಇದು ಪಕ್ಕಾ ಜನರನ್ನು ಮನರಂಜಿಸುತ್ತದೆ. ಸಂಭಾಷಣೆಯನ್ನು ನಿರ್ದೇಶಕ ಹರಿಯವರೇ ಬರೆದಿದ್ದಾರೆ. ಬಿ ಜೆ ಭರತ್ ಈ ಚಿತ್ರಕ್ಕೆ ಸಾಂಗ್ ಕಂಪೋಸ್ ಮಾಡಿದ್ದಾರೆ.
#YogiDuniya #Cineloka
There are many directors in Kannada Industry who are well versed in directing Remake films, a new name which could be easily added to the list is Guru Deshpande.
Guru Deshpande who had tasted success through Rajahuli has picked a Tamil film "Adhe Kangal" this time.
This film falls into a crime thriller genre film with lot of humor and action sequences.
Chiru Sarja, who generally been lucky in Thriller Genre films has a bit of challenge in this film as he plays a blind man role in the first half of the film.
This film looks like a love triangle at the beginning, but it turns out be an investigation thriller. Movie majorly revolves around A Blind chef (Chiru Sarja)who falls for Nandini(Haripriya)and her childhood friend Janaki(Kavya Shetty)who loves him and a policeman Rajahuli(Chikkanna) who helps him in an investigation.
If you are wondering whether chiru Sarja was really blind or was he just acting as a blind person, will he marry Nandini or will he chose Janaki ? Why will he take up an investigation ? — it is for you to watch the movie on the big screen.
A fantastic surprise in the movie is of HariPriya’s who does a fabulous work in a never seen before character of her career. Kavya Shetty, the other leading lady of the film has done a neat job and has a good screen space.
Chiranjeevi Sarja had couple of shades to his character. His performance in both the shades is commendable. He is Too Good in Action Sequences.
It is Chikkanna who steals the show with his punching dialogues. The spoof of Kempegowda has worked well for the film. The sequences between him and Chiru sarja are the biggest positive for this movie. Dialogue writer has written good witty lines for Chikkanna.
The supporting cast Tabala Nani, Yash Shetty, Aruna Balraj, Darshan, Manish have done a good job.
The film starts slow, but picks up well after the first twist. Second half is the real winner among the two halves of the flick. It is very gripping, especially the pre-climax and Climax scenes are effectively shot.
Ravi Basrur once again wins in BGM part and fails to create magic through his songs. The Action Scenes are very well choreographed while the Editing is neat.
Overall Samhaara is an Enjoyable Thriller.
Rating - 3.5/5

ವಿನೂತನ ಥ್ರಿಲ್ಲರ್ ಕಥೆ ಹೊಂದಿದ ಚತುರ ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. 

ಮೊನ್ನೆಯಷ್ಟೇ ಬಿಡುಗಡೆಯಾದ ಗಾಯತ್ರಿ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮುನಿ ಹಾಗೂ ಪೂಜಾ ಲೋಕೇಶ್ ನಾಯಕ, ನಾಯಕಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸತ್ಯ ಸಾಮ್ರಾಟ್ ಒಬ್ಬ ಹುಡುಗಿ ಹಳ್ಳಿಯಲ್ಲಿ ಮಿಸ್ ಆಗಿ ಸಿಟಿಗೆ ಬಂದಾಗ ಆಕೆಯನ್ನು ಜನ ಹೇಗೆ ಕಾಣುತ್ತಾರೆ, ಪೋಲೀಸ್ ಹೇಗೆ ಟ್ರೇಸ್ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ನೂರು ಜನ ಮಿಸ್ ಆದರೆ ಅವರಲ್ಲಿ 70 ಜನ ಸಿಗೋದೇ ಇಲ್ಲ, ಅವರೆಲ್ಲ ಎಲ್ಲಿಗೆ ಹೋಗ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಕಂಡುಹಿಡಿಯವ ಪ್ರಯತ್ನ ಮಾಡಲಾಗಿದೆ. ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುತ್ತಿರುವ ಸತ್ಯ ಸಾಮ್ರಾಟ್ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದಾರೆ.

 

ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿಯನ್ನು ಜನ ಹೇಗೆಲ್ಲ ಕಾಣುತ್ತಾರೆ ಎಂಬ ಅಂಶದ ಮೇಲೆ ಈ ಕಥೆ ನಡೆಯಲಿದೆ. ಖಳ, ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ನಟ ಮುನಿ ಅಪರೂಪಕ್ಕೆನ್ನುವಂತೆಈ ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಟಿ ಪೂಜಾ ಲೋಕೇಶ್ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ನಾಯಕಿಯಾಗಿ ನಟಿಸುವ ಮೂಲಕ ಬಣ್ಣ ಹಚ್ಚಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 12 ವರ್ಷಗಳ ನಂತರ ನನ್ನ ಪುನರಾಗಮನ ಎಂದೇ ಹೇಳಬಹುದು. 2ನೇ ಇನ್ನಿಂಗ್ಸ್. ತುಂಬಾ ಪವರ್ ಫುಲ್ ಪಾತ್ರವನ್ನು ಈ ಚಿತ್ರದಲ್ಲಿ ಪ್ಲೇ ಮಾಡ್ತಿದೇನೆ. ಒಬ್ಬ ಹಳ್ಳೀ ಹುಡುಗಿಯಾದ ನನಗೆ 4-5ಷೇಡ್ಸ್ ಇದೆ. ಎಂದು ಹೇಳಿಕೊಂಡರು.

 

ಶ್ರೀ ದಳವಾಯಿ ಬೀರೇಶ್ವರ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಮಂಜು.ಎಸ್. ಪಟೇಲ್ ಹಾಗೂ ಸುಮತಿ ಶ್ರೀನಿವಾಸ್ ನಿರ್ಮಿಸುತ್ತಿರುವ ಚತುರ ಚಿತ್ರಕ್ಕೆ ವಿನೋದ್ ಭಾರತಿ ಅವರ ಛಾಯಾಗ್ರಹಣವಿದೆ. ಚಿತ್ರದ 4 ಹಾಡುಗಳಿಗೆ ಅಭಿಷೇಕ್ ರಾಯ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಎಸ್.ಸಾಮ್ರಾಟ್ ಸಾಹಿತ್ಯ, ದುರ್ಗ ಪಿ.ಎಸ್. ಸಂಕಲನವಿದೆ. ಮುನಿ, ಪೂಜಾ ಲೋಕೇಶ್, ರಮೇಶ್ ಪಂಡಿತ್, ಶೋಭರಾಜ್, ಹರೀಶ್ ರಾಯ್ ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕರುಣಾಕರ್, ಲಕ್ಷ್ಮೀ ಸಿದ್ದಯ್ಯ, ವಾಸು, ಮೈಕೋ ನಾಗರಾಜ್ ಅನಂತ್ ವೇಲು, ಅಪೂರ್ವ, ರಾಣಿ ಮುಂತಾದವರು ತಾರಾಬಳಗವಿದೆ.

ದಿನೇ ದಿನೇ ಸದ್ದು ಮಾಡುತ್ತಿರುವ ಸಂಹಾರ ಚಿತ್ರದಲ್ಲಿ ನಟಿ ಕಾವ್ಯ ಶೆಟ್ಟಿ ಜರ್ನಲಿಸ್ಟ್ ಜಾನಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಹಿಂದಿನ ಸಿನಿಮಾ 3 ಗಂಟೆ, 30 ನಿಮಿಷ ,30 ಸೆಕೆಂಡ್‌ ಸಿನಿಮಾದಲ್ಲಿಯೂ ಜರ್ನಲಿಸ್ಟ್ ರೋಲ್‌ನಲ್ಲಿ ಕಾವ್ಯ ಶೆಟ್ಟಿ ನಟಿಸಿದ್ದರು. ಅಲ್ಲದೆ ಮೊದಲ ಬಾರಿಗೆ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ ಖುಷಿ ಅವರಿಗೆ ಇದೆಯಂತೆ. ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಗೆ ನಾಯಕಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಚಿರು ಜತೆ ಕೆಲಸ ಮಾಡುವುದು ಒಂದೊಳ್ಳೆ ಎಕ್ಸ್‌ಪಿರಿಯನ್ಸ್ ಎನ್ನುತ್ತಾರವರು. ಸಂಹಾರದಲ್ಲಿ ಚಿರು, ಚಿಕ್ಕಣ್ಣ, ಕಾವ್ಯ ಶೆಟ್ಟಿ ಸೇರಿಕೊಂಡು ಒಂದು ಕೊಲೆಯ ಹಿಂದೆ ಬೀಳುತ್ತಾರೆ. ಸಿನಿಮಾದ ಸೆಕೆಂಡ್‌ ಆಫ್‌ ಪೂರಾ ಕಾವ್ಯ ಶೆಟ್ಟಿ ಪಾತ್ರ ಬರುತ್ತದಂತೆ.

ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕಥೆ ಸಾಗಲಿದೆ. ಮಂಗಳೂರಿನ ಎಪಿಸೋಡ್​ನಲ್ಲಿ ಚಿಕ್ಕಣ್ಣ ಇರಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿರುವ ಹಾಡುಗಳು ಈಗಾಗಲೇ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಜೆ.ಎಸ್. ವಾಲಿ ಛಾಯಾಗ್ರಹಣ ಮಾಡಿದ್ದಾರೆ. ಎ. ವೆಂಕಟೇಶ್ ಮತ್ತು ಆರ್. ಸುಂದರ್ ಕಾಮರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

Page 35 of 43

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top