nata

ttm

adweb

udgharsha

Sunil HC Gowda

Sunil HC Gowda

‘Sprouter’ is a discovery of 20 years young American Daniel Everist a college student of St Thomas, Minnesota.


 ‘Sprouter’ is a platform where you can use social media accounts such as Face Book, Instagram, Twitter, Snapshot, Linkedin, Spotify, Pinterest and VSCO in a single app. Daniel Everist's ‘Sprouter’ is yet to get approval from Whats App.

Daniel Everist is a student of Indian professor in chemistry Mr Manoj Patil invited his mentor to be the operations director of ‘Sprouter’. It took three months to finalize on the mode of bringing it to public for Daniel Everist. It is exactly after one year ‘Sprouter’ is reality and available on Google Play and the App Store. With the help of his Uncle,Daniel Uncle John,maker of movie ‘Valley of Bones’ for Sony, Daniel has taken ‘Sprouter’ to the next level.

The Sprouter is for all teenage, students, businessmen and others very conducive to operate. It is ‘Bazaar of Social Media’ says Manoj Patil addressing the media at the Shangrila Hotel,Bangalore  on Saturday night. There is no other app like this in the world. It is available on Apple, Android and other tools. Apple took lot of time to scrutinize on the operating system and finally approved great work of Daniel Everist.

‘Sprouter’ is the new app of this generation, the privacy aspects are also well taken care of. Grow your network and it is easy platform called ‘Sprouter’ that connects people in a quick span of time.

 

ದರ್ಶನ್ ರಾಗ್ ನಿರ್ಮಾಣದ `ನಾಕುಮುಖ` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ ಸನ್ನೆವೇಶಕ್ಕೆ ಶಕ್ತಿ ಪತ್ರಿಕೆಯ ಸಂಪಾದಕರಾದ ಶ್ರೀಚಿದ್‍ವಿಲಾಸ್ ಆರಂಭ ಫಲಕ ತೋರಿದರು. ಬೇಬಿ||ಧ್ವನಿ ಕ್ಯಾಮೆರಾ ಚಾಲನೆ ಮಾಡಿದರು.

ಕುಶಾನ್ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಮಹೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ ಮುಂತಾದವರಿದ್ದಾರೆ.

ಕೆ ಎ ಸುರೇಶ್ ನಿರ್ಮಾಣದ ಈ ವರ್ಷದ ಮೊದಲ ಬಿಗ್ ಬಜೆಟ್ ಸಿನಿಮಾ `ರಾಜು ಕನ್ನಡ ಮೀಡಿಯಂ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಬಹುಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರೆಲ್ಲರ ಗಮನ ಸೆಳೆದಿರೋ ಈ ಚಿತ್ರ ರಾಜ್ಯಾಧ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಚಿತ್ರದಿಂದ ಖ್ಯಾತಿ ಪಡೆದ ಗುರುನಂದನ್, ನಿರ್ದೇಶಕ ನರೇಶ್ ಕುಮಾರ್, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಸಂಕಲಕಾರ ಗಿರೀಷ್ ಈ ಚಿತ್ರದಲ್ಲೂ ಒಟ್ಟಿಗೆ ಸೇರಿದ್ದಾರೆ.
ಗುರುನಂದನ್ ಜೊತೆಗೆ ಆವಂತಿಕ ಶೆಟ್ಟಿ, ಆಶಿಕ ರಂಗನಾಥ್ ಹಾಗೂ ಅಂಜೇಲಿನ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಓಂ ಪ್ರಕಾಶ್ ರಾವ್ ಹಾಗೂ ಇಂದ್ರಜಿತ್ ಲಂಕೇಶ್ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಈ ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣದಲ್ಲಿ ಮೂಡಿ ಬಂದಿರೋಈ ಚಿತ್ರಕ್ಕೆ ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಚೆಲುವರಾಜ್, ಅನೂಪ್ ಆರ್ಯನ್, ಹೇಮಂತ್ ಅರುಣ್, ಸಹಾಯಕ ನಿರ್ದೇಶಕರಾಗಿ ಲಕ್ಷ್ಮಿ ವಿನಾಯಕ್ ಕೆಲಸ ಮಾಡಿದ್ದಾರೆ

 

ಇದು ಅಸಲಿ ಬದುಕಿನ ಆಟ. ಕುತೂಹಲದ ಜೊತೆಗೆ ಅಚ್ಚುಕಟ್ಟಾದ ನಿರೂಪಣೆ, ತಾರಾಗಣ,
ಅತ್ಯುತ್ತಮ ತಂತ್ರಜ್ಞರು ಸೇರಿಕೊಂಡು ಮಾಡಿರುವ ಹೊಸ ಬಗೆಯ ಚಿತ್ರ? 3 ಘಂಟೆ 30 ದಿನ 30 ಸೆಕೆಂಡ್? ಸಿನಿಮಾ ಇಂದ ನೀಡುತ್ತಿದ್ದಾರೆ. ಇದೆ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬ್ರೈನ್ ಶೇರ್ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಚಂದ್ರಶೇಖರ ಪದ್ಮಶಾಲಿ ಆರ್ ನಿರ್ಮಾಪಕರಾಗಿದ್ದಾರೆ. ಇವರ ಜೊತೆ 10 ಸ್ನೇಹಿತರು ಸಹ ಸೇರಿಕೊಂಡಿದ್ದಾರೆ.

`3 ಘಂಟೆ 30 ದಿನ 30 ಸೆಕೆಂಡ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮುಕ್ತವಾಗಿ ಪ್ರಶಂಸೆ ಮಾಡಿ ಯಾವುದೇ ಕತ್ತರಿ ಪ್ರಯೋಗ ಇಲ್ಲದೆ ಯು/ಎ ಅರ್ಹತಾ ಪತ್ರವನ್ನು ದಯಪಾಲಿಸಿದೆ. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್ ಮಾಸ್ ಅಂಶಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದಾರೆ. ಇವರದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ. ಹೆಜ್ಜೆ ಹೆಜ್ಜೆಗೂ ಕುತೂಹಲ, ಹೃದಯ ಕಲಕುವ ಭಾವನಾತ್ಮಕ ಅಂಶಗಳು, ಪ್ರೇಕ್ಷಕ ಕುರ್ಚಿಯ ತುದಿಯಲ್ಲೇ ಕುಳಿತು ನೋಡುವ ಹಾಗೆ ಮಾಡುತ್ತಲೆ ಒಂದು ಪ್ರೇಮಕಥೆಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.

ಅರು ಗೌಡ, ಕಾವ್ಯ ಶೆಟ್ಟಿ, ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್, ಜಯಲಕ್ಷ್ಮಿ ಪಾಟಿಲ್, ಯಮುನ, ಮೇಘನ, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಅನಂತ ವೇಲು, ವಿಶ್ವ, ಹನುಮಂತೆ ಗೌಡ, ಯತಿರಾಜ್, ಟಿ ಎಸ್ ನಾಗಾಭರಣ, ಅಂಜಿನಪ್ಪ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಮಧುಸೂಧನ್ ಹಾಗೂ ಜಯಂತ್ ಕಾಯ್ಕಿಣಿ ಗೀತ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ಸಂಭ್ರಮ್ ಈ ಚಿತ್ರದ ಸಂಗೀತ ನಿರ್ದೇಶಕರು. ಶ್ರೀನಿವಾಸ ರಾಮಯ್ಯಾ ಛಾಯಾಗ್ರಾಹಕರು, ಕ್ರೇಜಿ ಮೈಂಡ್ಸ್ ಶ್ರೀ ಸಂಕಲನ, ತ್ರಿಭುವನ್ ನೃತ್ಯ, ಮಾಸ್ ಮಾದ ಸಾಹಸ, ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಅವರು ಒಂದು ಹಾಡಿನಲ್ಲಿ ಮಿಂಚಿದ್ದಾರೆ.

 
ಅಮೆರಿಕ ದೇಶದ ನಿವಾಸಿ ಅಮೆರಿಕ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ `ಶಿವು ಪಾರು' ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.
ಕಳೆದ 20 ವರ್ಷಗಳಿಂದ ಅಮೆರಿಕ ದೇಶದಲ್ಲಿ ಇದ್ದು ಹಾಲೀವುಡ್ ಅಲ್ಲಿ ಕೆಲಸ ಮಾಡಿ, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅನೇಕ ಕತೆಗಳನ್ನು ರಚಿಸಿ, ಅಮೆರಿಕ ಬ್ಯಾಂಕ್ ಅಲ್ಲಿ ಸಾಫ್ಟ್ ವೇರ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸಿರುವ ಹೊಸಕೋಟೆಯ ಈ ಅಮೆರಿಕ ಸುರೇಶ್ ಕನ್ನಡ ಸಿನಿಮಾ ಮಾಡುವ ಆಸೆ ಇಟ್ಟುಕೊಂಡು ಅಪಾರ ಶ್ರಮ ಸಹ ವ್ಯಯ ಮಾಡಿದ್ದಾರೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಎಂದು ಬಣ್ಣಿಸುತ್ತಾರೆ.
135 ನಿಮಿಷಗಳ ಈ `ಶಿವು ಪಾರು' ಇತ್ತೀಚಿಗೆ ಫಿಲ್ಮ್ ಬಜಾರ್ ಅಲ್ಲಿ ಸಹ ಪ್ರದರ್ಶನ ಮಾಡಿ ಪ್ರಶಂಸೆಗೆ ಒಳಗಾಗಿತ್ತು. ಇದು ಈಗಾಗಲೇ ಅನೇಕ ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಕನ್ನಡ ಸಿನಿಮಾಕ್ಕೆ ಆಂಗ್ಲ ಭಾಷೆಯ ಸಬ್ ಟೈಟಲ್ ಸಹ ಮಾಡಲಾಗಿದೆ.
ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ, ಹಾಲೇಶ್ ಛಾಯಾಗ್ರಹಣ, ಜೀವನ್ ಸಂಕಲನ, ಅಮೆರಿಕ ಸುರೇಶ್ ಗೀತ ಸಾಹಿತ್ಯ ಹಾಗೂ ಸಂಗೀತ, ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.
`ಶಿವ ಪಾರು' ಚಿತ್ರಕ್ಕೆ ಯಮನ ಗೆದ್ದ ಶಿವು, ದೇವಲೋಕದ ಪ್ರೇಮ ಲೋಕ, ಕಿಟ್ಟಪ್ಪ ಯಾಕೆ ಶಿವು ಹತ್ಯೆ ಮಾಡಿದ, ಯಾಕೆ ಪಾರು ಆತ್ಮಹತ್ಯೆ ಮಾಡಿಕೊಂಡಳು? ವಿಚಾರಗಳು ಅಪಾರ ಕುತೂಹಲ ಹುಟ್ಟು ಹಾಕಿದೆ. ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ `ಶಿವು ಪಾರು' ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ, ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ. ?ಪ್ಯಾಟೆ ಹುಡ್ಗಿರ್ ಹಳ್ಳಿಗ್ ಬಂದ್ರು? 6 ನೇ ಕಂತು ರಿಯಾಲಿಟಿ ಕಾರ್ಯಕ್ರಮ ಸಹ ಚಿತ್ರದ ಅಂಶಗಳಲ್ಲಿ ಒಂದು.
#ShivuPaaru #Cineloka

 

2005ರಲ್ಲಿ ಬಾಯ್‍ಫ್ರೆಂಡ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜನಾರ್ಧನ್ ಆ ಚಿತ್ರದ ನಂತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿದ್ದಿಲ್ಲ. ನಂತರ ಕೆಲ ವರ್ಷಗಳ ಹಿಂದೆ ಸ್ವಯಂಕೃಷಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಅಮೋಘ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ನೀ ಇಲ್ಲದ ಮಳೆ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಜೊತೆಗೆ ಆ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಪೆರು ದೇಶದ ಚೆಲುವೆ ವ್ಯಾಲರಿ ನಾಯಕಿಯಾಗಿ ನಟಿಸಿದ್ದಾರೆ. ಇದೇ 12ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಈ ಬಗ್ಗೆ ಹೇಳಿಕೊಳ್ಳಲೆಂದು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಟಿ ಕರೆದಿತ್ತು.

ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಅಮೋಘ್ ಈ ಚಿತ್ರಕ್ಕೆ 28 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಅಮೆರಿಕಾದಲ್ಲೇ ಹೆಚ್ಚಿನ ಭಾಗದ ಶೂಟಿಂಗ್ ನಡೆಸಲಾಗಿದೆ. ನಮ್ಮ ಮದೇಶದಿಂದ ಅಮೆರಿಕಾಗೆ ಸ್ಟಡಿ ಹಾಗೂ ಕೆಲಸಕ್ಕೆಂದು ಹೋದವರು ಯಾಕೆ ಕಣ್ಮರೆಯಾಗುತ್ತಿದ್ದಾರೆ, ಅದಕ್ಕೆ ಕಾರಣಗಳೇನು ಎಂದು ಸಾಕಷ್ಟು ರೀಸರ್ಚ್ ಮಾಡಿ ಕಥೆಯಲ್ಲಿ ಅಳವಡಿಸಿಕೊಂಡೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದು, ಉತ್ತಮ ಸಂದೇಶ ಕೂಡ ಇದೆ. ಕರ್ನಾಟಕದ ಬೀದರ್, ಬಾಗಲಕೋಟೆ ಮುಂತಾದ ಕಡೆಗಳಲ್ಲಿಯೂ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಇಂದ್ರಸೇನಾ ಈ ಚಿತ್ರದ 5 ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಬಾಯ್ ಫ್ರೆಂಡ್ ಚಿತ್ರದಿಂದಲೂ ಜನಾರ್ಧನ್ ಜೊತೆ ಇಂದ್ರಸೇನಾ ಕೆಲಸ ಮಾಡಿದ್ದಾರೆ. ನಿರಂಜನ ಬಾಬು ಈ ಚಿತ್ರದ ಛಾಯಾಗ್ರಾಹಕರು. ಬೀದರ್ ಕ್ಷೇತ್ರದ ಬಿಜೆಪಿ ಸ್ಪರ್ಧಿಯಾಗಿದ್ದ ಶೈಲೇಂದ್ರ ಕೆ. ಬೆಲ್ದಾಳ್ ಹಾಗೂ ದೇವರಾಜ್ ಶಿಡ್ಲಘಟ್ಟ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರದ ನಾಯಕಿ ವ್ಯಾಲರಿ ಮಾತನಾಡಿ ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಥರದ ಪಾತ್ರ. ಈ ಹಿಂದೆ ಪೆರುವಿನಲ್ಲಿ ಒಂದಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೆ. ಅಲ್ಲದೆ ತಮಿಳಲ್ಲಿಯೂ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಿರುವುದು ಇದೇ ಮೊದಲು ಎಂದು ಹೇಳಿದರು. ನೀ ಇಲ್ಲದ ಮಳೆ ಚಿತ್ರದಲ್ಲಿ ಅಮೆರಿಕನ್ ಭಾಷೆಯನ್ನು ಕೆಲ ಸಂದರ್ಭಗಳಲ್ಲಿ ಬಳಸಲಾಗಿದೆ. ನಾಯಕಿಯ ತಂದೆಯ ಪಾತ್ರದಲ್ಲಿ ಹಿರಿಯ ನಟ ಗಿರೀಶ್ ಕಾರ್ನಾಡ್ ಹಾಗೂ ತಾಯಿಯ ಪಾತ್ರದಲ್ಲಿ ನಟಿ ಭವ್ಯ ಅವರು ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ತಬಲಾ ನಾಣಿ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಕಥೆ ಅವರ ಪಾತ್ರದ ಮೇಲೆ ಸಾಗುತ್ತದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜನಪದ ಗಾಯಕ ಆಲೂರು ನಾಗಪ್ಪ ಮಾತನಾಡಿ ನಾನು ಚಿತ್ರವನ್ನು ನೋಡಿದ್ದೇನೆ. ಚಿತ್ರದಲ್ಲಿ ಜನಜಾಗೃತಿ ಮೂಡಿಸುವಂಥ ಒಳ್ಳೆಯ ಅಂಶಗಳಿವೆ ಎಂದು ಹೇಳಿದರು. ನಿರ್ಮಾಪಕರ ಸ್ನೇಹಿತ ನಿವೃತ್ತ ಎಸ್.ಪಿ. ನಾಗರಾಜ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿ ಮಾತನಾಡುತ್ತ ನಾನು ಕೂಡ ಈ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ತುಂಬಾ ಚೆನ್ನಾಗಿವೆ. ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ಕಥೆ ಚಿತ್ರದಲ್ಲಿದೆ ಎಂದು ಸ್ನೇಹಿತ ದೇವರಾಜ್ ಹೇಳಿದ್ದಾರೆ ಎಂದು ಹೇಳಿದರು. ನೀ ಇಲ್ಲದ ಮಳೆ ಚಿತ್ರವು ಈಗಾಗಲೇ ಸೆನ್ಸಾರ್‍ನಲ್ಲಿ ಪಾಸಾಗಿದ್ದು ಎ ಪ್ರಮಾಣ ಪತ್ರ ಪಡೆದಿದೆ. ಚಿತ್ರವನ್ನು ಅಮೆರಿಕಾ, ಪೆರು ಮೊದಲಾದ ದೇಶಗಳಲ್ಲಿಯೂ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.


ರೌಡಿಸಂ ಎನ್ನುವುದು ನೀರಿನ ಮೇಲೆ ಗುಳ್ಳೆ ಇರುವಂತೆ. ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲಿಕ್ಕೆ ಆಗದು. ಇಂತಹ ಅಂಶಗಳನ್ನು ಹೊಂದಿರುವ ‘ಸರ್ಕಾರ್’ ಅಡಿಬರಹದಲ್ಲಿ ದಿ ಬುಲೆಟ್ ಅಂತ ಹೇಳಿಕೊಂಡಿರುವ ಸಿನಿಮಾವೊಂದು ಹುಬ್ಬಳ್ಳಿ, ಸಾತೋಡಿ ಜಲಪಾತ, ಉಡುಪಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಕಳೆದ ವರ್ಷ ಮೂರು ಸಾವಿರ ಮಠದ ಆವರಣದಲ್ಲಿ ಹಾಡುಗಳು ಬಿಡುಗಡೆಗೊಂಡಿತ್ತು. ಬೆಂಗಳೂರು ಯಲಹಂಕ ನಿವಾಸಿ ಎಸ್.ಮಂಜುಪ್ರೀತಮ್ ಅಪ್ಪಟ ಗಣೇಶ್ ಅಭಿಮಾನಿ. ಚಿಕ್ಕಂದಿನಿಂದಲೂ ಚಿತ್ರರಂಗಕ್ಕೆ ಬರಬೇಕೆಂಬ ಪಸೆಯಿಂದ ಹಲವರಲ್ಲಿ ಅವಕಾಶಕ್ಕಾಗಿ ಸೈಕಲ್ ಹೊಡೆದರೂ ಪ್ರಯೋಜನವಾಗಿಲ್ಲ. ಮುಂದೆ ಗಣೇಶ್ ಚಿತ್ರಗಳ ಕಾರ್ಯಕ್ರಮ, ಸೆಟ್‍ನಲ್ಲಿ ನಿರ್ದೇಶಕರ ಚಲನವಲನಗಳನ್ನು ತಿಳಿದುಕೊಂಡು ಮುಂದೆ ಸ್ವತಂತ್ರ ನಿರ್ದೇಶಕನಾಗಿ ಛಲವನ್ನು ಸಾಧಿಸಿದ್ದಾರೆ. ಅಲ್ಲದೆ ಮಹೂರ್ತ ಸಮಾರಂಭಕ್ಕೆ ಖುದ್ದು ಗಣೇಶ್ ದಂಪತಿಗಳು ಆಗಮಿಸಿ ಶುಭಕೋರಿದ್ದಾರಂತೆ.

ಬಾಲಿವುಡ್‍ನ ಸರ್ಕಾರ್ ಇದಕ್ಕೂ ಸಂಬಂದ ಇರುವುದಿಲ್ಲ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕೆಯನ್ನು ಶೋಭರಾಜ್ ಇಡಲಾಗಿದ್ದು, ಒಳ್ಳೆಯ ಕೆಲಸಗಳಿಗೆ ಮಾತ್ರ ರೌಡಿಯಾಗಿರುತ್ತಾನೆ. ನಾಯಕ ಇವರ ತಂಡಕ್ಕೆ ಸೇರಿಕೊಂಡು, ಆತನಂತೆ ಇರುವಾಗ ನಾಯಕಿ ಮಧ್ಯೆ ಪ್ರೀತಿ ಬೆಳಯುತ್ತದೆ.

ಇದಕ್ಕೂ ಮುನ್ನ ಕತೆಯು ಹುಬ್ಬಳ್ಳಿಯಲ್ಲಿ ತೆರೆದುಕೊಂಡು, ಆತ ಬೆಂಗಳೂರಿಗೆ ಬರಲು ಕಾರಣವೇನು. ಅಲ್ಲಿ ಇವರ ತಂಡಕ್ಕೆ ಹೇಗೆ ಸೇರಿಕೊಳ್ಳುತ್ತಾನೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಹುಬ್ಬಳ್ಳಿಯ ಜಾಗ್ವಾರ್‍ ಜಗ್ಗಿ ನಾಯಕನಾಗಿ ಹೊಸ ಅನುಭವ. ಡಾಕ್ಟರ್ ಪಾತ್ರದಲ್ಲಿ ಲೇಖಾಚಂದ್ರ ನಾಯಕಿ. ಇವರೊಂದಿಗೆ ಶೋಭರಾಜ್, ಧರ್ಮ, ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಉಗ್ರಂಮಂಜು, ನಾಯಕನ ತಾಯಿ ಪಾತ್ರದಲ್ಲಿ ಯಮುನಾ ನಟನೆ ಇದೆ. ತಂದೆತಾಯಿ, ಪ್ರೀತಿ, ಸ್ನೇಹ, ನಂಬಿದವರು ಎಲ್ಲರೂ ರೌಡಿಸಂ ಮಾಡಿದಾಗ ಕಳೆದುಕೊಳ್ಳುವುದು ಖಚಿತವೆಂದು ಸಂದೇಶದ ಮೂಲಕ ಹೇಳಲಾಗಿದೆ. ಛಾಯಗ್ರಹಣ ರಾಚ್‍ಪುಟಿ ಅರುಣ್‍ಕುಮಾರ್, ಸಾಹಸ ಮಾಸ್‍ಮಾದ, ನೃತ್ಯ ಸ್ಟಾರ್‍ನಾಗಿ, ಸಂಕಲನ ತೇಜು.ಡಿ.ಕುಮಾರ್ ಅವರದಾಗಿದೆ. ಶಂಕರ್‍ಮಹದೇವನ್, ಚಂದನ್‍ಶೆಟ್ಟಿ ಗಾಯನದ ಐದು ಹಾಡುಗಳಿಗೆ ಸತೀಶ್‍ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರವು ತೆರೆಗೆ ಬರಲು ಸಮೀಪವಾಗಿರುವುದರಿಂದ ಪೋಸ್ಟರ್ ಅನಾವರಣ ನೆಪಮಾಡಿಕೊಂಡು ನಿರ್ಮಾಪಕರು ಸಣ್ಣದೊಂದು ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏರ್ಪಾಟು ಮಾಡಿದ್ದರು. ನಿರ್ದೇಶಕ, ನಿರ್ಮಾಪಕರ ಹಿತೈಷಿಗಳು ಜಾಸ್ತಿ ಆಗಮಿಸಿದ್ದರಿಂದ ಸಮಾರಂಭವು ಒಡ್ರಾಸಿಯಲ್ಲಿ ನಡೆಯಿತು. ಇದರ ಮಧ್ಯೆ ಮೈಕ್ ಕೈಕೊಟ್ಟಿದ್ದರಿಂದ ಗಣ್ಯರುಗಳು ಪಾಠ ಒಪ್ಪಿಸುವಂತೆ ಚಿತ್ರಕ್ಕೆ ಶುಭ ಹಾರೈಸಿದರು. ಅದರಲ್ಲೂ ಹುಬ್ಬಳ್ಳಿಯಿಂದ ಬಂದವರೊಬ್ಬರು ನನ್ನ ಕಡೆಯಿಂದ 1000 ಟಿಕೆಟ್ ಖರೀದಿಸುವುದಾಗಿ ಹೇಳಿದರು. ಮಗ ನಾಯಕನಾಗುತ್ತಿರುವುದರಿಂದ ಅವನ ಸಲುವಾಗಿ ಪಾರ್ವತಿ.ಎಸ್. ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

 

ಸವಿರಾಜ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ `ಹೆಬ್ಬೆಟ್‍ರಾಮಕ್ಕ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

`ನಾನು ಗಾಂದಿ` ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್.ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಬೆಂಗಳುರು ಹಾಗೂ ಚೆನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್.ಎ.ಪುಟ್ಟರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಂಜುಂಡೇಗೌಡ ಅವರ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಬಿ.ಸತೀಶ್ ಅವರ ಛಾಯಾಗ್ರಹಣ, ಬಸವರಾಜ್‍ಅರಸ್ ಅವರ ಸಂಕಲನ, ಎಸ್.ವಿ.ಸಿದ್ದರಾಮಯ್ಯ ಅವರ ಸಂಭಾಷಣೆ, ಕನಕರಾಜು ಅವರ ಕಲೆ, ಮೂರ್ತಿ ಅವರ ನಿರ್ಮಾಣ ನಿರ್ವಹಣೆ, ನಾಗೇಶ್‍ರ ಸಹನಿರ್ದೇಶನವಿದ್ದು, ರಾಮಕ್ಕನಾಗಿ ಹಿರಿಯನಟಿ ತಾರಾ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್‍ಜಾಲ, ಮೈಮ ನಂಜುಂಡ, ಸಿಂಧು ಕಾನೇನಹಳ್ಳಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ

ಮುನಿರತ್ನಂ ನಾಯ್ಡು ಅರ್ಪಿಸುವ, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿರುವ `ಬೃಹಸ್ಪತಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ರವಿವರ್ಮ, ಥ್ರಿಲ್ಲರ್ ಮಂಜು ಸಾಹಸ ನಿರ್ದೆಶ್ನ ಹಾಗೂ ಇಸ್ಮಾಯಿಲ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ನಾಗೇಂದ್ರಪ್ರಸಾದ್, ಯೋಗಾನಂದ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ.

ಮನೋರಂಜನ್ ರವಿಚಂದ್ರನ್ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕನ್ನಿಕಾ, ಸಿತಾರ, ಸಾಯಿಕುಮಾರ್, ಅವಿನಾಶ್, ಸಾಧುಕೋಕಿಲ, ವೀಣಾಸುಂದರ್ ಮುಂತಾದವರಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಷೋಗಳಿಗೆ ಹೊಸ ತಿರುವನ್ನು ಕೊಟ್ಟ ಜೀó ಕನ್ನಡ, ತನ್ನ ಹೆಮ್ಮೆಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಸೀಸನ್-2 ಮತ್ತೆ ಶುರುವಾಗುತ್ತಿದೆÉ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ 'ಜೀ ಕನ್ನಡ' ಕರ್ನಾಟಕದ 30 ಜಿಲ್ಲೆಗಳಲ್ಲಿಯೂ ಕಾಮಿಡಿ ಕಿಲಾಡಿಗಳು ಸೀಸನ್-2 ಗೆ ಈಗಾಗಲೇ ಆಡಿಷನ್ ನಡೆಸಿದೆ.

ಇಷ್ಟು ದಿನ ನಡೆಯುತ್ತಿದ್ದ ನಾಲ್ಕರಿಂದ ಐದು ಜಿಲ್ಲೆಗಳ ಆಡಿಷನ್‍ನಲ್ಲಿ, ಆಡಿಷನ್ ಕೇಂದ್ರಕ್ಕೆ ಬರಲಾಗದ ಅದೆಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದರು. ಆದರೆ ಈ ಬಾರಿ ಜೀó ಕನ್ನಡ ಕರ್ನಾಟಕದ ಪ್ರತಿ ಜಿಲ್ಲೆಯ ಮೂಲೆ-ಮೂಲೆಯನ್ನೂ ಜಾಲಾಡಿ, ಈ ಮೂಲಕ ಯಾವ ಪ್ರತಿಭೆಯೂ ಕೂಡ ಅವಕಾಶ ವಂಚಿತರಾಗದಂತೆ ಎಚ್ಚರ ವಹಿಸಿದೆ. ಈ ಆಡಿಷನ್‍ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಮೂಲೆ ಮೂಲೆಗಳಿಂದ ಬಂದ ಆ ಒಟ್ಟು ಸ್ಪರ್ಧಿಗಳಲ್ಲಿ ಶೋನ ಮುಖ್ಯ ಭಾಗವಾಗಿ 15 ಜನ ಕಲಾವಿದರು ಆಯ್ಕೆಯಾಗಿದ್ದಾರೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಬಂದ ಈ ಕಲಾವಿದರು ಈಗ ಮತ್ತೆ ಕರ್ನಾಟಕದ ಜನತೆಯನ್ನು ಮನತುಂಬಿ ನಕ್ಕು ನಗಿಸಲು ಮತ್ತೆ ತಯಾರಾಗುತ್ತಿದ್ದಾರೆ. ಸೀಸನ್ 2ರಲ್ಲಿ ಮತ್ತಷ್ಟು ವಿಭಿನ್ನ, ವಿಶೇಷವಾದ ಹಾಸ್ಯದ ಹೊನಲನ್ನು ಹರಿಸಲು, ಮನೋರಂಜನೆಯ ಮಹಾಪೂರವನ್ನು ನೀಡಲು ಜೀó ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಎಲ್ಲ ರೀತಿಯಿಂದಲೂ ಸಿದ್ಧಗೊಂಡಿದೆ.

ಇನ್ನೂ ಕಳೆದ ಸೀಸನ್‍ನ ತೀರ್ಪುಗಾರರಾಗಿದ್ದ ಕಾಮಿಡಿ ಕಿಂಗ್ ಜಗ್ಗೇಶ್, ಕ್ರೇಜಿó ಕ್ವೀನ್ ರಕ್ಷಿತಾ ಮತ್ತು ವಿಕಟಕವಿ ಯೋಗರಾಜ್ ಭಟ್, ಈ ಸೀಸನ್‍ನಲ್ಲೂ ತೀರ್ಪುಗಾರರಾಗಿ ಮುಂದುವರೆಯಲಿದ್ದಾರೆ. ಎಂದಿನಂತೆ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಲವಲವಿಕೆಯ ನಿರೂಪಣೆಯಿರುತ್ತದೆ. ಕಾಮಿಡಿ ಕಿಲಾಡಿಗಳು ಸೀಸನ್-2 ಕೂಡ ಮೊದಲ ಸೀಸನ್‍ನಲ್ಲಿದ್ದ ರೀತಿಯಲ್ಲೇ ಇರಲಿದ್ದು ಇಲ್ಲಿಯೂ ನಗೆಯ ರಸದೌತಣವೇ ಪ್ರಮುಖವಾಗಲಿದೆ.

'ಜೀ ಕನ್ನಡ'ದ ಬಹುನಿರೀಕ್ಷೆಯ ಕಾಮಿಡಿ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್-2 ಇದೇ ಡಿಸೆಂಬರ್ 30ರಿಂದ ಪ್ರತಿ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರವಾಗಲಿದ್ದು, ಈ ಬಾರಿಯೂ ಜನಮೆಚ್ಚುಗೆಯ ಕಾರ್ಯಕ್ರಮವಾಗಿ ಮತ್ತು ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅತ್ಯುನ್ನತ ವೇದಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆನ್ನಬಹುದು. ವೀಕ್ಷಕರಿಗೆ ಒತ್ತಡಮಯ ಜೀವನದ ನಡುವೆಯೂ ತಮ್ಮೆಲ್ಲ ಟೆನ್ಷನ್‍ಗಳನ್ನು ಮರೆತು ಮನತುಂಬಿ ನಕ್ಕು ನಗಿಸುವುದೇ ಕಾಮಿಡಿ ಕಿಲಾಡಿಗಳ ಮುಖ್ಯ ಉದ್ದೇಶವೆಂದು ಹೇಳಬಹುದು.

Page 38 of 43

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top