chamak running success

anigif

adweb

raju

Sunil HC Gowda

Sunil HC Gowda

 
ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು ವೀಕ್ಷಿಸಬಹುದು. ಗಣೇಶ್ ಎಂಬ ಯುವಕ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಪ್ರೇಮಿಗಳ ದಿನದಂದು ವಿಶೇಷವಾಗಿ ಬಿಡುಗಡೆಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ನಮಗೆ ಯಾರಾದರೂ ಮೋಸ ಮಾಡಿದಾಗ ಇವರೇ ಹಿಂಗಾ, ಎಲ್ಲರೂ ಹಿಂಗಾ ಅನ್ನೋ ಉದ್ಘಾರ ಬರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಹಾಡನ್ನು ಮಾಡಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಹೇಮಂತ್ ಮಾತನಾಡಿ ನಮ್ಮ ಬ್ಯಾನರ್‍ನಲ್ಲಿ ಮೂಡಿರುವ ಮೊಟ್ಟಮೊದಲ ಆಲ್ಬಂ ಹಾಡಿನ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು.
ಈ ಹಾಡಿನಲ್ಲಿ ರೋಹನ್ ರಾಜ, ವಿಜಯಶ್ರೀ ಎಂ.ಸಿ.ಬಿಜ್ಜು, ಅಕ್ಷಿತಾ, ಆರಾಧ್ಯ, ಅಮೂಲ್ಯ ಅಭಿನಯಿಸಿದ್ದಾರೆ. ಸುಮಾರು 7.8 ಲಕ್ಷಗಳ ಬಜೆಟ್‍ನೊಂದಿಗೆ ಈ ಹಾಡನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆಲ್ಬಂ ಸಾಂಗೊಂದನ್ನು ಚಾಪರ್ ಉಪಯೋಗಿಸಿ ಚಿತ್ರೀಕರಣ ಮಾಡಲಾಗಿದೆ. ಭಾನುಪ್ರತಾಪ್ ಈ ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ರಾಘವೇಂದ್ರ ಈ ಹಾಡಿಗೆ ಕಂಪೋಸ್ ಮಾಡಿದ್ದಾರೆ. ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಗಣೇಶ್.
#Cineloka

 

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ `ಉಡುಂಬ' ಕನ್ನಡ ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ದೊರಕಿದೆ ಎಂದು ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.

ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿರುವ ಈ ಚಿತ್ರದ ನಿರ್ಮಾಪಕರು ಹನುಮಂತ ರಾವ್, ವೆಂಕಟ್ ರೆಡ್ಡಿ ಹಾಗೂ ಮಹೇಶ್ ಕುಮಾರ್. 35 ದಿವಸಗಳಲ್ಲಿ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

ನಾಯಕ ಪವನ್ ಸೂರ್ಯ ಈ ಚಿತ್ರಕ್ಕೆ `ಸಿಕ್ಸ್ ಪ್ಯಾಕ್' ತಯಾರಿ ಸಹ ಮಾಡಿಕೊಂಡಿದ್ದಾರೆ. ಮೂರು ಸಾಹಸ ಸನ್ನಿವೇಶಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಚಿರಶ್ರೀ ಈ ಚಿತ್ರದ ಕಥಾ ನಾಯಕಿ. ಇರ್ಫಾನ್ ಖಳ ನಾಯಕ, ಶರತ್ ಲೋಹಿತಾಶ್ವ, ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಎಸ್ ಬಿ ಉದವ್ ಸಂಕಲನ ಈ ಚಿತ್ರಕ್ಕೆ ಒದಗಿಸಿದ್ದಾರೆ.

 
`ಸುವರ್ಣ ಸುಂದರಿ' ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ ಒಳಗೊಂಡಿದೆ.
ಬೆಂಗಳೂರು, ವಿಜಾಪುರ, ಹೈದರಾಬಾದ್, ಕೇರಳದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ್ಯ ಅವರು ತಿಳಿಸುತ್ತಾರೆ. ವಾಹಿನಿಗಳಲ್ಲಿ ಕೆಲಸ ಮಾಡಿ 10 ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಈ `ಸುವರ್ಣ ಸುಂದರಿ' ಚಿತ್ರವನ್ನ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯಕ್ಕೆ ಹೋಗಿ ಇಂದಿನ ಕಾಲಕ್ಕೆ ಸಿನಿಮಾ ಕಥೆ ಬಂದು ನಿಲ್ಲುತ್ತದೆ.
10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರಕ್ಕೆ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಷ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸಾಯಿ ಕಾರ್ತಿಕ್ ಅವರ ಸಂಗೀತ, ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರ ಒಳಗೊಂಡಿದೆ.
#SuvarnaSundari #Cineloka
 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಚಿತ್ರಕ್ಕೆ 'ಯಜಮಾನ' ಎಂಬ ಟೈಟಲ್‌ ಫಿಕ್ಸ್‌ ಆಗಿದೆ.
ಕೆಲ ವರ್ಷಗಳ ಹಿಂದೆ ಡಾ.ವಿಷ್ಣುವರ್ಧನ್‌ ನಾಯಕರಾಗಿ ನಟಿಸಿದ್ದ ಚಿತ್ರ ಟೈಟಲ್ ಇದಾಗಿದೆ. ಆ ಯಜಮಾನ ಕನ್ನಡ ಚಿತ್ರರಂಗದ ದೊಡ್ಡ ಹಿಟ್‌ ಚಿತ್ರ. 25 ವಾರಗಳ ಪ್ರದರ್ಶನ ಕಂಡಿತ್ತು. ಅಂತಹ ಯಶಸ್ವಿ ಸಿನಿಮಾದ ಟೈಟಲ್‌ನ್ನು ಮತ್ತೆ ಈಗ ದರ್ಶನ್‌ ಸಿನಿಮಾಗೆ ಬಳಸಿಕೊಳ್ಳಲಾಗುತ್ತಿದೆ.
 
ಬಿ ಸುರೇಶ್‌ ಮತ್ತು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಪಿ ಕುಮಾರ್‌ ಡೈರೆಕ್ಟ್‌ ಮಾಡುತ್ತಿದ್ದಾರೆ. ಈ ಹಿಂದೆ 'ವಿಷ್ಣುವರ್ಧನ' ಎಂಬ ಟೈಟಲ್‌ ಇರುವ ಚಿತ್ರವನ್ನು ಕುಮಾರ್‌ ಕಿಚ್ಚ ಸುದೀಪ್‌ಗಾಗಿ ನಿರ್ದೇಶನ ಮಾಡಿದ್ದರು. ಈಗ ಡಾ.ವಿಷ್ಣುವರ್ಧನ್‌ ಅವರ ಇನ್ನೊಂದು ಚಿತ್ರದ ಟೈಟಲ್‌ನ್ನು ಇಟ್ಟು ದರ್ಶನ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಬಾರಿ ದೊಡ್ಡ ಸಕ್ಸಸ್‌ ಕಂಡಿದ್ದ ಕುಮಾರ್‌, ಈ ಬಾರಿ ಮತ್ತೆ ಅದೇ ಹುರುಪಿನಲ್ಲಿದ್ದಾರೆ.
 
ಇನ್ನು ಈ ಚಿತ್ರದಲ್ಲಿ ದರ್ಶನ್‌ಗೆ ವಿಲನ್‌ ಆಗಿ ಧನಂಜಯ, ಅನುರಾಗ್‌ ಸಿಂಗ್‌ ಠಾಕೂರ್‌, ರವಿಶಂಕರ್ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದ್ದಾರೆ. ಫೆಬ್ರವರಿ 19ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
#Yajamana #Cineloka

ಇತ್ತೀಚೆಗೆ ಬಿಡುಗಡೆಯಾದ ಸಂಹಾರ ಚಿತ್ರದಲ್ಲಿ ಅಂಧನಾಗಿ ನಟಿಸಿ ಗಮನ ಸೆಳೆದ ಚಿರಂಜೀವಿ ಸರ್ಜಾ ಅಮ್ಮಾ ಐ ಲವ್‌ಯೂ ಚಿತ್ರದಲ್ಲಿ ಭಿಕ್ಷುಕನಾಗಿ ನಟಿಸಲಿದ್ದಾರೆ.

ತಮಿಳಿನಲ್ಲಿ ಸೂಪರ್‌ ಹಿಟ್‌ ಆಗಿದ್ದ ಪಿಚ್ಚಕಾರನ್‌ ಚಿತ್ರವನ್ನು ಕನ್ನಡಕ್ಕೆ ಕೆ ಎಂ ಚೈತನ್ಯ ರಿಮೇಕ್‌ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿ ಸಿತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ನಿಶ್ವಿಕಾ ನಾಯ್ಡು ಎಂಬ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಲಾಗುತ್ತಿದೆ. ಉಳಿದಂತೆ ಕರಿಸುಬ್ಬು, ನಟನ ಪ್ರಶಾಂತ್‌ ಮುಖ್ಯ ತಾರಾಗಣದಲ್ಲಿದ್ದಾರೆ.

 

ಇದು ದ್ವಾರಕೀಶ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾಗಿದ್ದು, ಕೆ ಎಂ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಅವರ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.

 

ಸುಮಾರು 54 ದಿನಗಳ ಕಾಲ ಉಡುಪಿ,ಬೆಂಗಳೂರು,ಮೈಸೂರಿನಲ್ಲಿ ಚಿತ್ರೀಕರಣ ಮಾಡಿರುವ ಚಿತ್ರತಂಡ ಈಗ ಡಬ್ಬಿಂಗ್‌ನಲ್ಲಿ ನಿರತವಾಗಿದೆ.

ಗುರು ಕಿರಣ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ,ಶೇಖರ್ ಚಂದ್ರ ಛಾಯಾಗ್ರಹಣವಿದೆ.

'ಅಕಿರ' ಸಿನಿಮಾದ ಬಳಿಕ ಅನೀಶ್‌ ತೇಜೆಶ್ವರ್‌ ನಟನೆಯ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್ ‌ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಈಗ ಆ ಚಿತ್ರಕ್ಕೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ.

ಪುನೀತ್‌ರಾಜ್‌ಕುಮಾರ್‌ ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ, ಇದರಲ್ಲೇನು ವಿಶೇಷ ಎಂದರೆ, ಅಪ್ಪು ಈ ಚಿತ್ರಕ್ಕೆ “ರಂಗೇರಿದೆ ಈ ಮನಸಿನ ಬೀದಿ” ಎಂದು ಶುರುವಾಗುವ ಒಂದು ರೊಮ್ಯಾಂಟಿಕ್‌ ಸಾಂಗ್‌ ಹಾಡಿದ್ದಾರೆ.

ಕಮರ್ಷಿಯಲ್‌ ಡೈಲಾಗ್ ಗಳ ಮೂಲಕ ಟೀಸರ್‌ನ್ನು ಸೆಳೆಯುವಂತೆ ಮಾಡಿದ್ದ ಅನಿಶ್‌ ಮತ್ತವರ ತಂಡ ಈಗ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್‌ ಅವರ ಕೈಯಲ್ಲಿ ಹಾಡಿಸಿದೆ.

ಅಜನೀಶ್‌ ಲೋಕನಾಥ್‌ “ವಾಸು...”ಗೆ ಸಂಗೀತ ನೀಡಿದ್ದಾರೆ.

ಪಕ್ಕಾ ಲೋಕಲ್ ಹುಡುಗ 'ವಾಸು' ಸುತ್ತ ಹೆಣೆದಿರುವ ಕಥೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್' . ಈ ಚಿತ್ರಕ್ಕೆ ಅಜಿತ್‌ವಾಸನ್‌ ಕ್ಯಾಪ್ಟನ್‌ ಆಗಿದ್ದಾರೆ.

ಈ ಕಥೆಯನ್ನು ಅನಿಶ್‌ಗೆ ಅಕಿರಾ ಟೈಮ್‌ನಲ್ಲಿ ಹೇಳಿದ್ದರಂತೆ. ಈ ವಾಸು ನಾನ್‌ ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ಅನಿಶ್‌ ಅವರೇ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ. ಟಾಕಿ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆಯಂತೆ.

ಜಗತ್ತಿನಲ್ಲೇ ತಂದೆ ತಾಯಿ ಪ್ರೀತಿಗಿಂತಲೂ ಮುಖ್ಯವಾದದ್ದು ಯಾವುದು ಇಲ್ಲ ಎಂಬುದನ್ನು ನಮ್ಮ ಯುವಕರಿಗೆ ತೋರಿಸಲು ಇದಂ ಪ್ರೇಮಂ ಜೀವನಂ ಎಂಬ ಚಿತ್ರ ಬರುತ್ತಿದೆ. ಸಂಪೂರ್ಣವಾಗಿ ಹೊಸಬರಿಂದಲೇ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಘವಾಂಕ ಪ್ರಭು ಎಂಬುವವರು ನಿರ್ದೇಶನ ಮಾಡಿದ್ದಾರೆ.

ಇವರ ಹೊಸ ರೀತಿಯ ಪ್ರಯತ್ನಕ್ಕೆ ಕೆಆರ್‌ಜಿ ಸ್ಟೂಡಿಯೋಸ್‌ನ ಕಾರ್ತಿಕ್‌ ಗೌಡ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಹಿಂದೆ ಗಣಿತ ಉಪನ್ಯಾಸಕರಾಗಿದ್ದ ರಾಘವಾಂಕ ಪ್ರಭು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ, ತಂದೆ-ತಾಯಿ ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. ಅವರಿಗಾಗಿ ಮಕ್ಕಳು ಏನು ಮಾಡುತ್ತಾರೆ ಎಂಬುದಕ್ಕೆ ಸ್ವಲ್ಪ ಕಮರ್ಷಿಯಲ್‌ ಟಚ್‌ ನೀಡಿ ಚಿತ್ರ ಮಾಡಿದ್ದಾರಂತೆ ನಿರ್ದೇಶಕ ರಾಘವಾಂಕ ಪ್ರಭು.

ಈ ಚಿತ್ರದಲ್ಲಿ ನಾಯಕ-ನಾಯಕಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕಥೆ ಎಂಜಿನಿಯರಿಂಗ್‌ ಕೊನೆ ಸೆಮಿಸ್ಟರ್‌ನಿಂದ ಆರಂಭವಾಗುತ್ತದೆ. ತಂದೆ ತಾಯಿ ಆಸೆ ಪೂರೈಸುವ ಸಲುವಾಗಿ ತಮ್ಮ ಪ್ರೀತಿ ತ್ಯಾಗ ಮಾಡಲು ಸಿದ್ಧರಾಗುವ ಕಥೆ ಇದರಲ್ಲಿದೆ .

ಕೆ ಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಬರೀ ಟ್ರೇಲರ್‌ ನೋಡಿ ಈ ಚಿತ್ರವನ್ನು ವಿತರಣೆ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರಂತೆ.

ಚಿತ್ರದಲ್ಲಿ ತಂದೆ ತಾಯಿಯಾಗಿ ಅವಿನಾಶ್‌ - ಮಾಳವಿಕಾ ನಟಿಸಿದ್ದಾರೆ. ಸನತ್‌ ಸನ್ನಿ, ಶನಾಯ ಕಾತ್ವೆ ಎಂಬ ಹೊಸ ಪ್ರತಿಭೆಗಳು ನಾಯಕ -ನಾಯಕಿ. ಈ ಚಿತ್ರವನ್ನು ರಿಯೋನೊ ಪ್ರೋಡಕ್ಷನ್‌ ಹೌಸ್‌ ನಿರ್ಮಿಸಿದ್ದು, ಇದು ಗೋಕುಲ್‌ ಎನ್‌. ಕೆ, ನವೀನ್‌ ಕುಮಾರ್‌ ಜೆ.ಪಿ, ರಾಘವಂಕ ಪ್ರಭು ಸೇರಿ ಸ್ಥಾಪಿಸಿರುವ ಸಂಸ್ಥೆ. ಚಿತ್ರದ ಟ್ರೇಲರ್‌ನ್ನು ಜನವರಿ 1ರಂದು ಬಿಡುಗಡೆಯಾಗಿತ್ತು.

ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಬೇಸಿಕಲ್‌, ನವೀನ್‌ ಪಂಚಾಕ್ಷರಿ ಎಂಬುವವರು ಸಿನಿಮಾಟೋಗ್ರಫಿ ಮಾಡಿದ್ದಾರೆ.

'ನನಗೆ ಸಿನಿಮಾ ಅಂದ್ರೆ ಬಹಳ ಇಷ್ಟ. ಇವತ್ತಿನ ಜನರೇಶನ್‌ಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದರಂತೆ ಇದಂ ಪ್ರೇಮಂ ಜೀವನಂ ಚಿತ್ರ ಮಾಡಿದ್ದೇನೆ. ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸಿನಿಮಾ ತಂಡ.

 

ಟೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರ "ಕಂತ್ರಿ ಬಾಯ್ಸ್" ಈವಾರ ಬಿಡುಗಡೆಯಾಗುತ್ತಿದೆ. ವೆಂಕಟ್ ಗೌಡ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಕಿರುತೆರೆಯ ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಕಾಮಿಡಿ ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ರಾಜು ಚಟ್ನಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಸಿ ಹೇಮಂತ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ ರಿಲೀಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಜು ಚಟ್ನಳ್ಳಿ ಇದೊಂದು ಸಪೂರ್ಣ ಹಾಸ್ಯ ಚಿತ್ರ. ಹಿಂದೆ ನಾನು ಕಾಮಿಡಿ ಸೀರಿಯಲ್‍ಗಳಿಗೆ ಕೆಲಸ ಮಾಡಿದ್ದು ಈ ಚಿತ್ರಕ್ಕೆ ಅನುಕೂಲಕರವಾಯಿತು. ಚಿತ್ರದ ಪ್ರತಿ ಸೀನ್ ಕಾಮಿಡಿಯಾಗಿದೆ. ಹೆಣ್ಣನ್ನು ಒಳ್ಳೇ ರೀತಿಯಲ್ಲಿ ನೋಡ ಎನ್ನುವುದೇ ನಮ್ಮ ಉದ್ದೇಶ. ಯಾವುದೋ ಕಾರಣಕ್ಕಾಗಿ ಪರಿಸ್ಥಿತಿಗೆ ಸಿಲುಕಿ ತಪ್ಪುದಾರಿ ಹಿಡಿದಿರುತ್ತಾರೆ. ಇಂಥವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಅಬೀನಯಿಸಿರುವವರು ಯಾರೂ ಹೊಸಬರ ಹಾಗೆ ಕಾಣುವುದಿಲ್ಲ. ಗಡ್ಡಪ್ಪ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದಾರೆ. ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದಾರೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಎಂ.ಸಿ. ಹೇಮಂತ ಗೌಡ ಮಾತನಾಡುತ್ತ ಈವರೆಗೆ ಚಿತ್ರರಂಗದಲ್ಲಿ ನಾನೂ ನಟನೆ, ಸಹನಿರ್ದೇಶನ ಅಂತ ತೊಡಗಿದ್ದೆ. ಈ ನಿರ್ದೇಶಕರು ಮಾಡಿದ್ದ ಕಥೆ ತುಂಬಾ ಇಷ್ಟವಾಯಿತು. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಜನರಿಗೆಖಂಡಿತ ಉತ್ತಮ ಮನರಂಜನೆ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ವಿತರಕ ವೆಂಕಟ ಗೌಡಮಾತನಾಡಿ ನಾನು ಒಂದೆರಡು ಚಿನಿಮಾ ರಿಲೀಸ್ ಮಾಡಿದ್ದೆ. ಸ್ವಂತ ಆಫೀಸ್ ಮಾಡಿದ ಮೇಲೆ ರಿಲೀಸ್ ಮಾಡುತ್ತಿರುವ ಮೊದಲ ಚಿತ್ರವಿದು. ಈವರೆಗೆ 75ರಿಂದ 80 ಚಿತ್ರಮಂದಿರಗಳು ಕನ್‍ಫರ್ಮ್ ಆಗಿವೆ. ಹತ್ತರಿಂದ ಹದಿನೈದು ಮಲ್ಟಿಪ್ಲೆಕ್ಸ್ ಕೂಡ ಸಿಕ್ಕಿವೆ, ಒಳ್ಳೇ ಸಿನಿಮಾ ಮಾಡಿದ್ದಾರೆ. ನನಗೂ ತುಂಬಾ ಇಷ್ಟವಾಯಿತು ಎಂದು ಹೇಳಿದರು.

'ತಿಥಿ' ಖ್ಯಾತಿಯ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರನ್ನು ಬಳಸಿಕೊಂಡು ಕಂತ್ರಿಬಾಯ್ಸ್ ಚಿತ್ರವನ್ನು ನಿರ್ದೇಶಕ ರಾಜು ಚಟ್ನಳ್ಳಿ ನಿರೂಪಿಸಿದ್ದಾರೆ. ಮರ್ಡರಿ ಮಿಸ್ಟ್ರಿಯ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಅನಿವಾರ್ಯ ಕಾರಣಕ್ಕೆ ವೈಶ್ಯಾವೃತ್ತಿಗೆ ಇಳಿಯಲು ಬರೀ ಹೆಣ್ಣಿನದಷ್ಟೇ ತಪ್ಪು ಇರುವುದಿಲ್ಲ ಬದಲಾಗಿ ಪುರುಷನದು ಇರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿ ಮತ್ತು ಕಾರಣಗಳನ್ನು ಕಂತ್ರಿಬಾಯ್ಸ್ ಮಾಡುವ ಕಂತ್ರಿ ಕಂತ್ರಿ ಕೆಲಸಗಳು ಮತ್ತು ಅದರಿಂದ ಸಮಾಜಕ್ಕೆ ಅಗುವ ಒಳ್ಳೆಯ ಕೆಲಸದ ಸುತ್ತಾ ಈ ಚಿತ್ರದ ಕಥೆ ಸಾಗಲಿದೆ.

ನಟ ಅರವಿಂದ್ ಮಾತನಾಡಿ ಇದು ನನ್ನ ಮೂರನೇ ಚಿತ್ರ. ಉದಾಸೀನತೆಯಿಂದ ಇರುವ ಹುಡುಗನಾಗಿ ಅಭಿನಯಿಸಿದ್ದೇಬೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ನಟಿಯರಾದ ಸಂಧ್ಯಾ, ಅನಕ, ಬಸಂತಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಹೇಮಂತ್ ಗೌಡ, ಜೋಕರ್ ಹನುಮಂತ್, ಹೇಮಂತ್ ಸೂರ್ಯ, ದರ್ಶನ್ ರಾಜ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೇಮಂತ್ ಗೌಡ ಅವರ ಜೊತೆ ನಿರ್ಮಾಣದಲ್ಲಿ ಎಂ.ಸಿ. ರೇಣುಕ, ಮೋಹನ್ ಕೆ. ಕೃಷ್ಣಮೂರ್ತಿ ಎಂ, ಶ್ರೀಧರ್‍ರಾಜು, ದರ್ಶನ್‍ರಾಜ್ ಕೈಜೋಡಿಸಿದ್ದಾರೆ. ಪಿ.ವಿ ಅರ್. ಸ್ವಾಮಿ ಅವರ ಛಾಯಾಗ್ರಹಣ, ಕಿರಣ್ ಮಹದೇವ್ ಅವರ ಸಂಗೀತ ಸಂಯೋಜನೆ, ಡಿ. ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಅಂಬಾರಿ, ಅದ್ಧೂರಿ ಸಿನಿಮಾಗಳ ಮೂಲಕ ಸ್ಟಾರ್‌ ನಿರ್ದೇಶಕರಾದ ಎ ಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಕಿಸ್ ಚಿತ್ರದ ನಾಯಕ ಮತ್ತು ನಾಯಕಿಯ ಪಾತ್ರ ಗಳನ್ನು ಪರಿಚಯಿಸುವ ಫಸ್ಟ್ ಲುಕ್ ಟೀಸರ್ ನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.

 

ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ವಿ. ರವಿಕುಮಾರ್ ನಿರ್ಮಾಣದ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವ ವಿರಾಟ್ ಹಾಗೂ ಶ್ರೀಲೀಲಾ ಪಾತ್ರಗಳನ್ನು ಪರಿಚಯ ಮಾಡುವ ಒಂದು ನಿಮಿಷದ ವಿಡಿಯೋವನ್ನು ಫೆ. 14ರಂದು ಬಿಡುಗಡೆ ಮಾಡಲಿದ್ದಾರೆ ಅರ್ಜುನ್.

 

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್‌ಲುಕ್‌ ಮತ್ತು ಫೋಟೋಗಳು ಫ್ರೆಶ್‌ ಫೀಲ್‌ ಕೊಡುತ್ತಿದೆ ಎಂಬ ಮಾತುಗಳು ಆನ್‌ಲೈನ್‌ನಲ್ಲಿ ವ್ಯಕ್ತವಾಗಿದೆ.

 

ನಾಯಕಿ ಪಾತ್ರಕ್ಕಾಗಿ ಎಪಿ ಅರ್ಜುನ್ ಸುಮಾರು 200 ಕ್ಕೂ ಹೆಚ್ಚು ಹುಡುಗಿಯರನ್ನು ಆಡಿಶನ್ ಮಾಡಿ, ಕೊನೆಗೆ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದಾರೆ. ನಾಯಕ ವಿರಾಟ್‌ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷದ ವ್ಯಾಲೆಂಟೇನ್ಸ್ ಡೇ‌ ದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಮಾಡಿದ್ದರು.

 

ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಸಿನಿಮಾಗೆ ಎಲ್ಲ ತಯಾರಿಗಳು ನಡೆಯುತ್ತಿವೆ. ಈಗ ಈ ಚಿತ್ರಕ್ಕೆ ಸ್ಪೆಷಲ್‌ ಸ್ಟಾರ್‌ ಧನಂಜಯ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
 
ಹೌದು ಟಗರು ಚಿತ್ರದಲ್ಲಿ ನೆಗೆಟಿವ್‌ ರೋಲ್‌ ಮಾಡಿದ್ದ ಧನಂಜಯ,ದರ್ಶನ್‌ ಅವರ 51 ನೇ ಚಿತ್ರದಲ್ಲಿ ಆ್ಯಂಟಿ ಹೀರೋ ಆಗಿ ನಟಿಸುತ್ತಿದ್ದಾರೆ. ಟಗರು ಚಿತ್ರದ ಡಾಲಿ ಕ್ಯಾರೆಕ್ಟರ್‌ಗೆ ಈಗಾಗಲೇ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. ಧನಂಜಯ ನಟನೆಯ ಬಲ್ಲುಮಾ ಹಾಡಿನ ಲಿರಿಕಲ್‌ ವಿಡಿಯೋವನ್ನು ಮಿಲಿಯನ್‌ಗಟ್ಟಲೇ ಜನ ನೋಡಿದ್ದಾರೆ.
 
ಶಿವರಾಜ್‌ಕುಮಾರ್‌ ಎದುರು ಗುದ್ದಾಡಿದ್ದ ಧನಂಜಯ ಈಗ ದರ್ಶನ್‌ ಎದುರು ವಿಲನ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದಾರೆ. ವಿಷ್ಣು ವರ್ಧನ ಚಿತ್ರ ಖ್ಯಾತಿಯ ಪಿ ಕುಮಾರ್‌ ಇದರ ನಿರ್ದೇಶಕರು. ಟಗರು ಚಿತ್ರದ ಧನಂಜಯ ಅವರ ಖಡಕ್‌ ಲುಕ್‌ ನೋಡಿ, ಈ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
 
 
ಒಟ್ಟಿನಲ್ಲಿ ಧನಂಜಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಿಗೆ ಟಕ್ಕರ್‌ ಕೊಡುವ ವಿಲನ್‌ ಆಗುತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ದರ್ಶನ್‌ ಹುಟ್ಟುಹುಬ್ಬವಾದ ನಂತರ ಶೂಟಿಂಗ್‌ ಆರಂಭವಾಗಲಿದೆ. ಚಿತ್ರವನ್ನು ಮೀಡೀಯ ಹೌಸ್ ಬ್ಯಾನರ್‌ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ ಅವರು ನಿರ್ಮಿಸುತ್ತಿದ್ದಾರೆ.
#Cineloka #ChallengingStarDarshan #SpecialStarDhananjaya
Page 5 of 14

anigif sam

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top