Raambo 2 gIF

rlr gIF rELEASE

adweb

anigif seizer

Sunil HC Gowda

Sunil HC Gowda

 
 ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಜಾನಿ ಜಾನಿ ಎಸ್ ಪಾಪಾ' ಸಿನಿಮಾದಲ್ಲಿ ದುನಿಯಾ ವಿಜಯ್ ರಾಮನಾಗಿದ್ದಾರೆ, ರಂಗಾಯಣ ರಘು ಹನುಮಂತನ ಅವತಾರವೆತ್ತಿದ್ದಾರೆ.
 
ಇದೇ 30ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್‌ ಸಿಕ್ಸ್ ಪ್ಯಾಕ್ ರಾಮನಾಗಿದ್ದಾರೆ. ಚಿತ್ರದಲ್ಲಿ ಬರುವ ಒಂದು ಸಣ್ಣ ದೃಶ್ಯದಲ್ಲಿ ವಿಜಯ್‌ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನವಮಿ ಹಬ್ಬದ ದಿನ ಈ ರಾಮನ ಅವತಾರದ ಟೀಸರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
 
 WhatsApp Image 2018 03 25 at 3.04.09 PM
ಈ ಹಿಂದೆ ಪ್ರೀತಮ್‌ ಗುಬ್ಬಿ ಮತ್ತು ದುನಿಯಾ ವಿಜಯ್‌ ಜತೆಯಾಗಿ 'ಜಾನಿ ಮೇರಾ ನಾಮ,ಪ್ರೀತಿ ಮೇರಾ ಕಾಮ್' ಮಾಡಿದ್ದರು. ಈಗ ಅದರ ಮುಂದುವರೆದ ಭಾಗವಾಗಿ 'ಜಾನಿ ಜಾನಿ ಎಸ್ ಪಾಪ' ಸಿನಿಮಾ ಮಾಡಿದ್ದಾರೆ . ಕಳೆದ ಬಾರಿಯಂತೆ ಈ ಬಾರಿಯೂ ಕಾಮಿಡಿ ಇಟ್ಟುಕೊಂಡು ಜನರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಲು ಬರುತ್ತಿದ್ದಾರಂತೆ.
 
ಈ ಸಿನಿಮಾದಲ್ಲಿ ರಾಮನ ಅವತಾರ ಯಾಕೆ ಬರುತ್ತದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಅಂತಾರೆ ನಿರ್ದೇಶಕ ಪ್ರೀತಂ ಗುಬ್ಬಿ.
'ಜಾನಿ....'ಯನ್ನು ದುನಿಯಾ ವಿಜಯ್‌ ಅವರು ತಮ್ಮ ಹೋಮ್‌ ಬ್ಯಾನರ್‌ ಆದ ದುನಿಯಾ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ.
#JohnnyJohnnyYesPapa #Cineloka #DuniyaVijay
 
ರಾಜೇಶ್ ವೇಣೂರು ನಿರ್ದೇಶನದಲ್ಲಿ ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ “ಅಸತೋಮ ಸದ್ಗಮಯ” ಚಿತ್ರದ ಟ್ರೇಲರ್ ಮಾರ್ಚ್ 23ರಂದು, ದುಬೈನ ಹೋಟೇಲ್ ಫಾರ್ಚೂನ್ ಪ್ಲಾಜಾದಲ್ಲಿ ಬಿಡುಗಡೆಗೊಂಡಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್‍ನ ಮಾಲಕರಾದ ಪ್ರವೀಣ್ ಶೆಟ್ಟಿಯವರು ಈ ಟ್ರೇಲರನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕನ್ನಡದ ಚಿತ್ರವನ್ನು ದುಬೈಗೆ ತಂದು ಟ್ರೇಲರ್ ರಿಲೀಸ್ ಮಾಡ್ತಾ ಇರೋದು ಕನ್ನಡಿಗರಾದ ನಮಗೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಈ ಚಿತ್ರ ಮನರಂಜನೆ ಜೊತೆಗೆ ಉತ್ತಮ ಮೆಸೇಜ್ ಇರುವಂತಹ ಚಿತ್ರ ಎಂದು ಟ್ರೇಲರ್ ನೋಡುವಾಗ ಅರ್ಥವಾಗುತ್ತದೆ. ಈ ಚಿತ್ರ ಯಶಸ್ವಿಯಾಗಿ, ಕರ್ನಾಟಕದಾದ್ಯಂತ ಮನೆಮಾತಾಗಲಿ ಎಂದು ಹಾರೈಸಿದರು.
 
ನಂತರ ಮಾತನಾಡಿದ ಜೈನ್ ಮಿಲನ್ ಅದ್ಯಕ್ಷರಾದ ದೇವ್ ಕುಮಾರ್ ಕಾಂಬ್ಳಿಯವರು, ಚಿತ್ರದ ಹೆಸರು ತುಂಬಾ ಅರ್ಥಗರ್ಬಿತವಾಗಿದೆ, ಟ್ರೇಲರ್ ನೋಡುವಾಗ ಇದರಲ್ಲಿ ಸರಕಾರಿ ಶಾಲೆಗಳ ಅವನತಿ ಬಗ್ಗೆ ಪ್ರಸ್ತಾಪವಿರುವುದು ಗೋಚರಿಸುತ್ತದೆ, ನಾನು ಕೂಡಾ ಸರ್ಕಾರಿ ಶಾಲೆಯಲ್ಲೇ ಓದಿರೋನು ಆದರೆ ದೇವರು ನನಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ, ಈ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಶುಭ ಹಾರೈಸಿದರು.
 
ಅರುಣ್ ಮುತುಗಡೂರ್ ಮಾತನಾಡಿ, “ಅಸತೋಮ ಸದ್ಗಮಯ” ಎನ್ನುವ ಶಬ್ದ ಕೇಳುವಾಗಲೇ ನಮ್ಮ ನೆನಪು ಶಾಲದಿನಗಳೆಡೆಗೆ ಜಾರುತ್ತದೆ. ಯಾಕೆಂದರೆ ಓದುವಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದೇ ಅಸತೋಮ ಸದ್ಗಮಯ ಮಂತ್ರದಿಂದ, ಈ ಚಿತ್ರದಲ್ಲಿ ಕೂಡ ಸರ್ಕಾರಿ ಶಾಲೆಯ ಪ್ರಸ್ತಾಪವಿರುವುದರಿಂದ, ಈ ಟೈಟಲ್ ಸೂಕ್ತವಾಗಿದೆ ಎಂದರು.
 
ಚಿತ್ರದ ನಿರ್ಮಾಪಕರಾದ ಅಶ್ವಿನ್ ಪಿರೇರಾ ಮಾತನಾಡಿ, ಕನ್ನಡ ಚಿತ್ರಗಳಾಗಲೀ ಅಥವಾ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ನೀವು ನೀಡಿದ ಪ್ರೋತ್ಸಾಹ, ನಮ್ಮನ್ನು ಟ್ರೇಲರ್ ಬಿಡುಗಡೆಗೆ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ನಮ್ಮ ಚಿತ್ರಕ್ಕೂ ಇದೇ ತರಹ ಪ್ರೋತ್ಸಾಹ ನೀಡಬೇಕಾಗಿ ಕೇಳಿಕೊಂಡರು.
 
#AsathomaSadgamaya #Cineloka
'ನಟಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕೂತುಹಲ ಪ್ರೇಕ್ಷಕರಲ್ಲಿತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
 
ಅಪ್ಪು ತಮ್ಮ 28ನೇ ಚಿತ್ರ 'ನಟಸಾರ್ವಭೌಮ'ದಲ್ಲಿ ರಿಪೋರ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪವನ್‌ ಒಡೆಯರ್ ನಿರ್ದೇಶನದ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಶೂಟಿಂಗ್‌ ಭರ್ಜರಿಯಾಗಿ ನಡೆಯುತ್ತಿದೆ. ರವಿಶಂಕರ್‌ ಎಂಟ್ರಿ ಸೀನ್‌ ಅನ್ನು ಇತ್ತೀಚೆಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಿದ್ದಾರೆ.
ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ರಚಿತಾ ರಾಮ್‌ ನಾಯಕಿಯಾಗಿದ್ದಾರೆ. ರಚಿತಾ ರಾಮ್‌ ನಟನೆಯ ಜಾನಿ ಜಾನಿ ಎಸ್‌ ಪಪ್ಪಾ ಈ ವಾರ ಬಿಡಗುಡೆಯಾಗಲಿದೆ.
 
 
ಅಪ್ಪು ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡಿದ್ದ ಚಿತ್ರದ ಫರ್ಸ್ಟ್ ಲುಕ್ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳನ್ನು ಮಾಡುವ ಪುನೀತ್‌ ರಾಜ್‌ಕುಮಾರ್‌ ಈ ಬಾರಿ ರಿಪೋರ್ಟರ್‌ ಆಗಿ ಯಾವ ಮೋಡಿ ಮಾಡುತ್ತಾರೋ ಕಾದು ನೋಡಬೇಕಿದೆ.
 
#Cineloka #NataSarvabhowma #PowerStarPuneethRajkumar
 
ಎಂ.ಬಿಗ್‌ ಪಿಕ್ಚರ್ಸ್‌ ಲಾಂಛನದಲ್ಲಿ ತಯಾರಾಗಿರುವ 'ಹೈಪರ್‌' ಸಿನಿಮಾದ ಟ್ರೇಲರ್‌ ಈಗ ಹಿಟ್‌ ಆಗಿದ್ದು, 22 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಜಮ್ಮು, ಕಾಶ್ಮೀರ, ಮಡಿಕೇರಿ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಅರ್ಜುನ್‌ ಆರ್ಯ ನಾಯಕರಾಗಿದ್ದಾರೆ.
ನಾಯಕ ಅರ್ಜುನ್‌ ಆರ್ಯ ಬರೆದಿರುವ ಈ ಕಥೆಗೆ ಗಣೇಶ್‌ ವಿನಾಯಕ್‌ ಎಂಬುವವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
ಕಾಲೇಜ್‌ ಲವ್‌ ಸ್ಟೊರಿ ಹಾಗೂ ಅಪ್ಪ- ಮಗಳ ಭಾಂಧವ್ಯದ ಕಥಾ ಹಂದರ ಈ ಚಿತ್ರದಲ್ಲಿದ್ದು, ಐದು ಹಾಡುಗಳನ್ನು ಹೊಂದಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಡಿ ಇಮಾನ್‌ ಈ ಚಿತ್ರಕ್ಕೆ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಎ.ಪಿ.ಅರ್ಜುನ್‌, ಬಹದ್ದೂರ್‌ ಚೇತನ್‌, ದಿಲ್‌ವಾಲ ಅನಿಲ್‌ ಹಾಗೂ ಗೌಸ್‌ಫಿರ್‌ ಬರೆದಿದ್ದಾರೆ.
 
ಅರ್ಜುನ್‌ ಆರ್ಯ, ಶೀಲ, ರಂಗಾಯಣ ರಘು, ಶೊಭರಾಜ್‌, ಬುಲೆಚ್‌ ಪ್ರಕಾಶ್‌, ಅಚ್ಯುತಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಟ್ರೇಲರ್ ಲಿಂಕ್ : https://www.youtube.com/watch?v=TCLX6LPSCSs

ಸೀನಿ ನಿರ್ದೇಶನದ '6ನೇ ಮೈಲಿ' ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು, ಆ ಹಾಡನ್ನು ಕಿಚ್ಚ ಸುದೀಪ್‍ ಮೆಚ್ಚಿಕೊಂಡು ಟ್ವೀಟ್‍ ಮಾಡಿದ್ದಾರೆ.

 

ಡೆತ್‍ ಮೆಟಲ್‍ ಮ್ಯೂಸಿಕ್‍ ಬಳಸಿದ್ದ ಹಾಡು ಬಿಡುಗಡೆಗೂ ಮುನ್ನವೇ ಸುದ್ದಿ ಮಾಡಿತ್ತು. "6ನೇ ಮೈಲಿ" ಚಿತ್ರದ ಈ ಹಾಡಿಗೆ ಲಂಡನ್‍ನಲ್ಲಿ ಗ್ರ್ಯಾಮಿ ಅವಾರ್ಡ್‍ ವಿನ್ನರ್ಸ್‍ ಬಳಿ ಡೆತ್‍ ಮೆಟಲ್‍ ಮ್ಯೂಸಿಕ್‍ ಕಂಪೋಸ್‍ ಮಾಡಿಸಲಾಗಿತ್ತು. ಈ ಹಾಡನ್ನು ಇತ್ತೀಚೆಗೆ ಸುದೀಪ್‍ ಕೇಳಿದ್ದಾರೆ, ಕೇಳಿ ಇದರಲ್ಲಿ ಬಳಸಿರುವ ಮ್ಯೂಸಿಕ್‍ ಬಗ್ಗೆ ಮತ್ತು ಹಾಡಿದ ವಸಿಷ್ಠ ಸಿಂಹ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 

ಈ ಚಿತ್ರದಲ್ಲಿ ನಟ ಸಂಚಾರಿ ವಿಜಯ್‌ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಟ್ರಕ್ಕಿಂಗ್‌ ಲೀಡರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿಯಲ್‌ ಆರ್‌ಜೆಗಳ ತಂಡವೊಂದು ನಟಿಸಿರುವುದು ವಿಶೇಷ.

 

ಟ್ರಕ್ಕಿಂಗ್‌ಗೆ ಹೋದ ಎರಡು ತಂಡಗಳು 6ನೇ ಮೈಲಿಯ ಸಮೀಪ ದಾರಿ ತಪ್ಪುತ್ತಾರೆ. ಇದು ಹೇಗಾಗುತ್ತದೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ಕತೆ. ಇದರ ಜತೆ ನಕ್ಸಲರ ಸ್ಟೋರಿಯೂ ಇದೆ ಎನ್ನುವ ಸುದ್ದಿಯಿದೆ.

ದುನಿಯಾ ವಿಜಯ್‌ ಮತ್ತು ರಚಿತಾ ರಾಮ್‌ ನಟನೆಯ 'ಜಾನಿ ಜಾನಿ ಎಸ್‌ ಪಪ್ಪಾ' ಸಿನಿಮಾ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

 

ಈಗಾಗಲೇ ಆಡಿಯೋ ಬಿಡುಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ 30ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೀತಂ ಗುಬ್ಬಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌ ಚಿತ್ರದ ಸಿಕ್ವೇಲ್‌ ಇದಾಗಿದ್ದು, ಫುಲ್‌ ಫನ್‌ನಿಂದ ಚಿತ್ರ ಕೂಡಿರುತ್ತದೆ ಎಂದು ಚಿತ್ರತಂಡ ಹೇಳಿದೆ.

 

ರಂಗಾಯಣ ರಘು, ಗಡ್ಡಪ್ಪ, ಅಚ್ಯುತಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೋಹನ್‌ ಬಿ ಕೆರೆ ಸೆಟ್‌ನ್ಲಲಿ ಈ ಚಿತ್ರದಕ್ಕಾಗಿ ವಿಶೇಷ ಸೆಟ್‌ ಹಾಕಲಾಗಿತ್ತು.

ದುನಿಯಾ ವಿಜಯ್‌ ತಮ್ಮ ಹೋಮ್‌ ಬ್ಯಾನರ್‌ ದುನಿಯಾ ಟಾಕೀಸ್‌ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

 

ಹಿಂದಿ ಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವ ಹಾಸ್ಯ ನಟ ಜಾನಿ ಲಿವರ್‌ 'ಗರ' ಎಂಬ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ತನ್ನ ವಿಶಿಷ್ಠವಾದ ಆಂಗಿಕ ಅಭಿನಯ ಶೈಲಿಯಿಂದಲೇ ಭಾರೀ ಮೋಡಿ ಮಾಡಿರೋ ಜಾನಿ, ಹಿಂದಿಯ ಬಹುತೇಕ ಸೂಪರ್‌ ಸ್ಟಾರ್‌ಗಳ ಜತೆ ನಟಿಸಿದ್ದಾರೆ.

 

'ಗರ' ಚಿತ್ರದಲ್ಲಿ ಕಿರುತೆರೆ ನಟ ಆರ್ಯನ್ & ಬಿಗ್‌ಬಾಸ್‌ ಖ್ಯಾತಿಯ ಟಿವಿ ನಿರೂಪಕ ರೆಹಮಾನ್‌ ನಾಯಕರಾಗಿ ನಟಿಸಿದ್ದಾರೆ.ನಾಯಕಿಯರಾಗಿ ನೇಹಾ ಪಾಟೀಲ್ ಮತ್ತು ಅವಂತಿಕಾ ಮೋಹನ್ ಇದ್ದಾರೆ. ಮುರಳಿಕೃಷ್ಣ ಇದರ ಕ್ಯಾಪ್ಟನ್‌ ಆಗಿದ್ದಾರೆ.ಈಗಾಗಲೇ ಚಿತ್ರೀಕರಣ ಕಂಪ್ಲೀಟ್‌ ಆಗಿದೆ.

 

ಜಾನಿ ಲಿವರ್‌ ಮತ್ತು ಸಾಧುಕೋಕಿಲಾ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕುಂಬಳಕಾಯಿ ಒಡೆಯಲಾಗಿದೆಯಂತೆ.

ಮುರಳಿಕೃಷ್ಣ ಈ ಕಥೆ ಹೇಳಿದಾಗ ಅದರ ಸೊಗಸಿಗೆ ಮನ ಸೋತೇ ರೆಹಮಾನ್‌ ನಟಿಸಲು ಒಪ್ಪಿಕೊಂಡಿದ್ದರಂತೆ. ಈ ಕಥೆಯಲ್ಲಿ ಒಂದು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನಿರ್ದೇಶಕರು ಕೊಟ್ಟಿದ್ದರಂತೆ. ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮೂರು ಶೇಡ್‌ ಇದ್ದು, ನನ್ನ ಕೈಲಾದಷ್ಟುನ್ನು ನಾನು ಮಾಡಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

 

ಈ ಚಿತ್ರದಲ್ಲಿಯೂ ಜಾನಿ ಲಿವರ್‌ ಸಾಧು ಕೋಕಿಲಾರ ಅಣ್ಣನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಜಾನಿ-ಸಾಧು ಕಾಂಬಿನೇಶನ್‌ ಸಿಕ್ಕಾಪಟ್ಟೆ ಇಷ್ಟವಾಗುತ್ತದಂತೆ.

 
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ಟೈಟಲ್‌ನಿಂದ ಗಮನ ಸೆಳೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಮಂಗಳವಾರ ರಜಾದಿನ ಎಂಬ ಸಿನಿಮಾ ಕೂಡಾ ಸೇರ್ಪಡೆಯಾಗಿದೆ.
 
 
ತ್ರಿವರ್ಗ ಫಿ‚ಲಂಸ್‌ ಲಾಂಛನದಲ್ಲಿ ಟೀಮ್‌ ತ್ರಿವರ್ಗ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಕಿರಿಕ್‌ ಪಾರ್ಟಿ ಖ್ಯಾತಿಯಚಂದನ್‌ ಆಚಾರ್‌ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್‌ ನಡೆಯುತ್ತಿದೆ.
 
ಯುವಿನ್‌ ಎಂಬ ಹೊಸ ಹುಡುಗ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಯೋಗರಾಜ್‌ ಭಟ್‌ ಹಾಗೂ ಗಡ್ದ ಜಿ ಅವರ ಬಳಿ ಸಹ ನಿರ್ದೇಶಕರಾಗಿದ್ದ ಯುವಿನ್‌ಗೆ ಮಂಗಳವಾರ ರಜಾ ದಿನ ಮೊದಲ ಅನುಭವವಾಗಿದೆ. ಉದಯ್‌ ಲೀಲಾ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಪ್ರಚೋತ್‌ ಡಿಸೋಜ ಅವರ ಸಂಗೀತ ನಿರ್ದೇಶನದೆ. ಜಯಂತ್‌ ಕಾಯ್ಕಿಣಿ, ಚಂದನ್‌ ಶೆಟ್ಟಿ, ಯೋಗರಾಜ್‌ ಭಟ್‌ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.
 
 
ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಚಂದನ್‌ಗೆ ನಾಯಕಿಯಾಗಿ ಲಾಸ್ಯ ನಾಗರಾಜ್‌ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ.
ನಾಯಕ ಚಂದನ್‌ ಆಚಾರ್‌ ಚಿತ್ರದಲ್ಲಿ ಕ್ಷೌರಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
#MangalaVaaraRajaDina #Cineloka

 

ಒಟ್ಟೊಟ್ಟಿಗೆ ಎರಡು ಚಿತ್ರಗಳನ್ನು ಅನೌನ್ಸ್‌ ಮಾಡಿದ್ದ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಈಗ ಒಂದು ಚಿತ್ರದ ಶೂಟಿಂಗ್‌ ಮುಗಿಸಿ ಮತ್ತೊಂದನ್ನು ಆರಂಭಿಸಿದ್ದಾರೆ.

 

ಹೌದು ಆ ಕರಾಳ ರಾತ್ರಿ ಮತ್ತು ಪುಟ 109 ಎಂಬ ಎರಡು ಚಿತ್ರವನ್ನು ದಯಾಳ್‌ ಒಟ್ಟಿಗೆ ಆರಂಭಿಸಿದ್ದರು. ಅದರಲ್ಲಿ ಮೊನ್ನೆ ಯುಗಾದಿ ದಿನ ಮಧ್ಯ ರಾತ್ರಿ 2 ಗಂಟೆಯ ಹೊತ್ತಿಗೆ ಆ ಕರಾಳ ರಾತ್ರಿ ಶೂಟಿಂಗ್‌ ಕಂಪ್ಲೀಟ್‌ ಮಾಡಿದ್ದಾರೆ. ಈಗ ಪುಟ 109 ಎಂಬ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದಾರೆ.

ಯುಗಾದಿ ದಿನ ಮಧ್ಯ ರಾತ್ರಿ ಆ ಕರಾಳ ರಾತ್ರಿಗೆ ಕುಂಬಳಕಾಯಿ ಹೊಡೆದ ದಯಾಳ್‌, ಬೆಳಗ್ಗೆ 6 ಗಂಟೆಗೆ ಪುಟ 109ಕ್ಕೆ ಹೇಮಾವತಿ ನದಿಯ ಬಳಿ ಇರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ.

 

ಸದ್ಯ ಬಾಳೂರು ಕಾಫಿ ಎಸ್ಟೇಟ್‌ನಲ್ಲಿ ಶೂಟಿಂಗ್‌ ನಡೆಸುತ್ತಿದ್ದು, ಇದರಲ್ಲಿ ಜಯರಾಮ್‌ ಕಾರ್ತಿಕ್‌ ಮತ್ತು ನವೀನ್‌ ಕೃಷ್ಣ ನಟಿಸುತ್ತಿದ್ದಾರೆ. ಜೆಕೆ ಇಲ್ಲಿ ಪೊಲೀಸ್‌ ಆಫೀಸರ್‌ ರೋಲ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ದಯಾಳ್‌ ಬಹಳ ಫಾಸ್ಟಾಗಿ ಸಿನಿಮಾಗಳನ್ನು ಮುಗಿಸುತ್ತಿದ್ದಾರೆ.

ಟೈಟಲ್‌ಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾಗಳ ಸಾಲಿಗೆ ಸೇರಿರುವ ಪ್ರಯಾಣಿಕರ ಗಮನಕ್ಕೆ ಸಿನಿಮಾದಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರ ನಡುವೆ ನಡೆಯುವ ಘಟನೆಗಳೇ ಕಥೆಯಾಗಿದೆಯಂತೆ.
 
ಈ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಯಶಸ್ವಿ ಎ ಪಿ ಅರ್ಜುನ್‌ ಮತ್ತು ಭರ್ಜರಿ ಚೇತನ್‌ ಅತಿಥಿಗಳಾಗಿ ಆಗಮಿಸಿದ್ದರು.
 
ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎ ಪಿ ಅರ್ಜುನ್‌ ಮತ್ತು ಭರ್ಜರಿ ಚೇತನ್‌ಕುಮಾರ್‌ ಬರೆದಿದ್ದಾರೆ. ರಾತ್ರಿ 6.30 ರಿಂದ 10.30ರ ಒಂದು ಬಸ್‌ನಲ್ಲಿ ಈ ಕಥೆ ನಡೆಯುತ್ತದೆ. ಕತ್ತಲಾದ ಮೇಲೆ ಬೆಂಗಳೂರು ಜಗತ್ತು ಹೇಗಿರುತ್ತೆ ಎಂಬುದನ್ನು ತೋರಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರಕ್ಕೆ ಮನೋಹರ್‌ ಎಂಬುವವರು ನಿರ್ದೇಶನ ಮಾಡಿದ್ದು, ಇದು ಇವರಿಗೆ ಮೊದಲ ಸಿನಿಮಾವಾಗಿದೆ.
 
ಪ್ರಯಾಣಿಕರ ಗಮನಕ್ಕೆ ಸಿನಿಮಾದಲ್ಲಿ ಏಳು ಪ್ರಮುಖ ಪಾತ್ರಗಳಿವೆ. ಈಗಾಗಲೇ ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದೆ.
 
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವು ಈ ಚಿತ್ರದಲ್ಲಿ ಚಾಲಕನಾಗಿ ಭರತ್‌, ಕಾಮಿಡಿ ಕಿಲಾಡಿಗಳು ಖ್ಯಾತಿ ಲೋಕೇಶ್‌ ಕಂಡಕ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಮಿತಾರಂಗನಾಥ್‌ ,ಪವಿತ್ರಾ, ನಿನಾದ್‌ ಹರೀಶ್‌ ಷಾ, ದೀಪಕ್‌ ಶೆಟ್ಟಿ, ಅಮಿತಾ, ಗೋಪಾಲ್‌ಕೃಷ್ಣ ದೇಶಪಾಂಡೆ, ಪ್ರಣಯಮೂರ್ತಿ ನಟಿಸಿದ್ದಾರೆ.
 
3 ಪೆಗ್ ಖ್ಯಾತಿಯ ವಿಜೇತ್‌ ಕೃಷ್ಣ ಸಂಗೀತ ಒದಗಿಸಿದ್ದಾರೆ. ಸುರೇಶ್‌ ಮತ್ತು ವಕೀಲರಾಗಿರುವ ಮೋಹನ್‌ಕುಮಾರ್‌ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.
#PrayanikaraGamanakke #Cineloka
Page 7 of 21

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top