chamak running success

anigif

adweb

raju

Sunil HC Gowda

Sunil HC Gowda

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಚಿತ್ರವನ್ನು ಯಾರು ನಿರ್ಮಿಸುತ್ತಾರೆ?ಯಾರು ನಿರ್ದೇಶಿಸುತ್ತಾರೆ? ಎಂಬುದಕ್ಕೆ ಪಕ್ಕಾ ಮಾಹಿತಿ ಸಿಕ್ಕಿದೆ.

ಹೌದು, ದರ್ಶನ್ ಅವರ 51ನೇ ಚಿತ್ರವನ್ನು ಬಿ. ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುವುದು ಖಾತ್ರಿಯಾಗಿದೆ.
ಈ ಚಿತ್ರವನ್ನು ವಿಷ್ಣುವರ್ಧನ, ಚಾರುಲತ,ರಾಜ ರಾಜೇಂದ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ. ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ.

'ಸಿನಿಲೋಕ'ಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

"ಹೌದು,ನಾವು ದರ್ಶನ್ ಅವರ 51ನೇ ಚಿತ್ರವನ್ನು ನಿರ್ಮಿಸುತ್ತಿದ್ದೇವೆ,2015 ರಲ್ಲೇ ನಾವು ಅವರ 51ನೇ ಚಿತ್ರದ ಕಾಲ್‌ಶೀಟ್ ಪಡೆದುಕೊಂಡಿದ್ದೆವು. ಅದರಂತೆಯೇ ಈಗ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದೇವೆ. 'ವಿಷುವರ್ಧನ' ನಿರ್ದೇಶಿಸಿದ್ದ ಪಿ. ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ. ಹರಿಕೃಷ್ಣ ಮತ್ತು ಕುಮಾರ್ ಇಬ್ಬರು ಸೇರಿ ಕಥೆ ಹೆಣೆದಿದ್ದಾರೆ, ಅದಕ್ಕೆ ಚಿತ್ರಕಥೆ,ನಿರ್ದೇಶನದ ಮಾಡುವ ಜವಾಬ್ದಾರಿ ಪಿ. ಕುಮಾರ್ ಅವರದ್ದಾಗಿದೆ.
ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ, ನವೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಸಾದ್ಯತೆ ಇದೆ. ದರ್ಶನ್ ಅವರ 'ಮುನಿರತ್ನ ಕುರುಕ್ಷೇತ್ರ' ಮುಗಿದ ನಂತರ ನಮ್ಮ ಚಿತ್ರ ಪ್ರಾರಂಭವಾಗುವುದು ಖಚಿತ" ಎನ್ನುತ್ತಾರೆ ಶೈಲಜಾ ನಾಗ್.

ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಮತ್ತು ಮುಂತಾದ ಮಾಹಿತಿಗಳನ್ನು ಅವರು ಬಿಟ್ಟು ಕೊಡಲಿಲ್ಲ.

ಶ್ರಮ ಹಾಗೂ ಬುದ್ದಿವಂತಿಕೆಯ ಸಮ್ಮಿಲನ `ರಾಜಹಂಸ' ಕನ್ನಡ ಸಿನೆಮಾ ರಜತ ಪರದೆಯ ಮೇಲೆ ಚಲಿಸಲು ಬರುತ್ತಿದೆ.

ನಾಯಕ ಹಾಗೂ ಜಂಟಿ ನಿರ್ಮಾಪಕ ಗೌರಿ ಶಿಕರ್ ಅವರ 'ರಾಜಹಂಸ' ಚಿತ್ರದ ಟ್ರೈಲರ್ ಈಗಾಗಲೇ ಅಪಾರ ನೋಡುಗರನ್ನು ಆಕರ್ಷಿಸಿದೆ. ಮತ್ತೊಂದು ವಿಶೇಷ 'ರಾಜಹಂಸ' ಕಾಫೀ ವಿತ್ ಸೆಲಿಬ್ರಿಟಿ ಮತ್ತು ಸಾಮಾನ್ಯ ವ್ಯಕ್ತಿಗಳ ಜೊತೆ ಸಹ ಗೌರಿ ಶಿಕರ್ ಜನರ ಮನಸನ್ನು ಸೂರೆಗೊಂಡಿದ್ದಾರೆ. ಇದು ಜನಮನ ಸಿನಿಮಾಸ್ ಚಿತ್ರ.

`ರಾಜ ಹಂಸ' ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜಡೆಶ್ ಕುಮಾರ್ ಹಂಪಿ ಮಾಡಿದ್ದಾರೆ. ಆರೂರ್ ಸುಧಾಕರ್ ಅವರ ಛಾಯಾಗ್ರಹಣ, ವಂಟೇಶ್ ಅವರ ಸಂಕಲನ ಕೆಲಸ ಮಾಡಿದ್ದಾರೆ. ಜೋಶ್ವಾ ಶ್ರೀಧರ್ ಅವರ ಸಂಗೀತ ಹಾಗೂ ಕಿರಣ್ ರವೀಂದ್ರನಾಥ್ ಹಿನ್ನಲೆ ವಾಧ್ಯ ಜೋಡಣೆ ಮಾಡಿದ್ದಾರೆ. ಚಿತ್ರದ ಎಲ್ಲ ಹಾಡುಗಳ ಸಾಹಿತ್ಯವನ್ನು ಧನಂಜಯ್ ದಿಡಿಗ ರಚಿಸಿದ್ದಾರೆ.

ಗೌರಿ ಶಿಕರ್ ಅವರಿಗೆ ನಾಯಕಿ ಆಗಿ 'ಪುಟ್ಟ ಗೌರಿ' ಧಾರವಾಹಿಯ ರಂಜಿನಿ ಅವರನ್ನು ಸಿನಿಮಾಕ್ಕೆ ಪರಿಚಯ ಮಾಡುತ್ತಿದ್ದಾರೆ. ಡಾ ಶ್ರೀಧರ್, ಬಿ ಸಿ ಪಾಟೀಲ್, ಯಮುನ, ಹರ್ಷಾರ್ಜುನ್, ವಿಜಯ್ ಚೆಂಡೂರ್, ಬುಲ್ಲೆಟ್ ಪ್ರಕಾಶ್, ರಾಜು ತಾಳಿಕೋಟೆ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಭುವನ್ ಅವರು ಈಗ ಬೆಳ್ಳಿತೆರೆಅಲ್ಲಿ ಪೂರ್ಣಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, "ರಾಂಧವ" ಎನ್ನುವ ವಿಭಿನ್ನ ಟೈಟಲ್ ಇರುವ ಚಿತ್ರದಲ್ಲಿ ಭುವನ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು 3 ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಾರಂತೆ.
ಸುನಿಲ್ ಎಸ್ ಆಚಾರ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಅದ್ವೈತ ಮತ್ತು ತಾಕ್ಷ್ಯ ಎಂಬುವವರು ನಿರ್ಮಿಸುತ್ತಿದ್ದಾರೆ.

ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ರಾಜ ಶಂಕರ್ ಅವರ ಕ್ಯಾಮರವರ್ಕ್ ಈ ಚಿತ್ರಕ್ಕಿರಲಿದೆ.

ಮೊನ್ನೆ ಅಷ್ಟೇ ಚಿತ್ರ ಮುಹೂರ್ತ ನಡೆಸಿ, ಚಿತ್ರೀಕರಣ ಶುರು ಮಾಡಿದೆ. ಚಿತ್ರವು ಯಾವ ಥೀಮ್ ನಲ್ಲಿರದೆ ಎಂಬುದನ್ನು ತಿಳಿಸಲು ಚಿತ್ರತಂಡ ಒಂದು ಟೀಸರ್ ಕೂಡ ಬಿಡುಗಡೆ ಮಾಡಿದೆ.

 

ಅಂದು 2006 ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆದ `ಮುಂಗಾರು ಮಳೆ' ಮೂಲಕ ದಾಖಲೆ ಬರೆದ ಜೋಡಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ 2008 ಜನವರಿ ತಿಂಗಳಿನಲ್ಲಿ ಒಂದು ಮಧುರುವಾದ ಪ್ರೇಮಕಥೆ `ಗಾಳಿಪಟ'ದಿಂದ ಪ್ರೇಕ್ಷಕರ ಮುಂದೆ ಬಂದು ಮನರಂಜನೆಯನ್ನು ನೀಡಿದ್ದರು. ಇಂದು 2017 ಸೆಪ್ಟೆಂಬರ್ 1 ರಂದು `ಮುಗುಳು ನಗೆ'ಯ ಮೂಲಕ ನಗೆಯ ಹಬ್ಬವನ್ನು ನೀಡಲು ಮುಂದಾಗಿದ್ದಾರೆ.

`ಮುಗುಳು ನಗೆ' ಏಳು ಹಾಡುಗಳ ಸಂಗಮ, ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಜೋಡಿಗೆ ವಿ ಹರಿಕೃಷ್ಣ ಅವರ ಸಂಗೀತ ಈಗಾಗಲೇ ಮನೆ ಮಾತಾಗಿದೆ. ಚಿತ್ರದ ನಿರ್ಮಾಪಕ ಸಯ್ಯದ್ ಸಲಾಂ ಅವರು ಎಸ್ ಎಸ್ ಫಿಲ್ಮ್ಸ್, ಗೋಲ್ಡನ್ ಮೂವೀಸ್ ಹಾಗೂ ಯೋಗರಾಜ್ ಸಿನಿಮಾಸ್ ಸಹಯೋಗದೊಂದಿಗೆ `ಮುಗುಳು ನಗೆ' ನಿರ್ಮಾಣ ಮಾಡಿದ್ದಾರೆ. ವಿಶೇಷ ಬಗೆಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ್ದು ಈಗ ಧಾಖಲೆ ಆಗಿದೆ.

`ಮುಗುಳು ನಗೆ' ಚಿತ್ರದಿಂದ ಯೋಗರಾಜ್ ಭಟ್ಟರು ಪ್ರೀತಿಯನ್ನು ಹುಡುಕುವ ಕೆಲಸವನ್ನು ನಾಯಕನಿಂದ ಮಾಡಿಸುತ್ತಾ ಅನೇಕ ಹೊಸ ಬಗೆಯ ವಿಚಾರಗಳನ್ನು ಹೇಳುತ್ತಾ ಹೋಗುತ್ತಾರೆ. ನಗುವುದೇ ನಾಯಕನ ಧರ್ಮ. ಆತನ ಜೀವನದಲ್ಲಿ ಬಂದು ಹೋಗುವ ಪ್ರೇಮಿಗಳೆ ಪ್ರಮುಖ ಪಾತ್ರದಾರಿಗಳು. ಯೋಗರಾಜ ಭಟ್ಟರ ಕಥೆಗೆ ಅವರದೇ ಚಿತ್ರಕಥೆ, ಸಂಭಾಷಣೆ ಸಹ ನೀಡಿದ್ದಾರೆ. ಇದು ಒಂದು ರೊಮ್ಯಾಂಟಿಕ್ ಕಥೆ ಹೊಂದಿರುವ ಹಾಸ್ಯ ರಸಾಯನ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಾಲ್ವರು ನಾಯಕಿಯರು. ಆಶಿಕ ರಂಗನಾಥ್ ನಾಯಕನ ಹದಿಹರೆಯದ ವಯಸ್ಸಿನಲ್ಲಿ ಕಾಣಿಸಿಕೊಳ್ಳುವವರು, ನಿಕಿತ ನಾರಾಯಣ್ ಜೀವನದಲ್ಲಿ ತನ್ನ ವೃತ್ತಿಯನ್ನು ಆರಾಧಿಸುವ ಆಧುನಿಕ ಕಾಲದ ಹುಡುಗಿ, ಮೂರನೇ ನಾಯಕಿ ಅಪೂರ್ವ ಆರೋರಾ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಜೀವನದಲ್ಲಿ ಮೌಲ್ಯಗಳನ್ನು ನಂಬಿರುವವರು. ಇದರ ಜೊತೆಗೆ ಅಮೂಲ್ಯ ಅತಿಥಿ ಪಾತ್ರದಲ್ಲಿ ನಾಯಕನಿಗೆ ಮಾರ್ಗದರ್ಶನ ನೀಡುವ ನಾಯಕಿ. ಈ ನಾಯಕಿಯರ ಜೊತೆ ನವಿರಾದ ಸಂಭಾಷಣೆ, ಮೋಜು, ಮಸ್ತಿ ಮನಕ್ಕೆ ತಟ್ಟುವ ವಿಚಾರಗಳನ್ನು ನಿರ್ದೇಶಕ ಯೋಗರಾಜ ಭಟ್ಟರು ತುಂಬಿದ್ದಾರೆ.

ಅತಿಥಿ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್, ವಿಶೇಷ ಪಾತ್ರದಲ್ಲಿ ಅನಂತ್ ನಾಗ್ ಅಲ್ಲದೆ ರಂಗಾಯಣ ರಘು, ಅಚ್ಯುತ್ ಕುಮಾರ್, ಮಂಜುನಾಥ್ ಹೆಗ್ಡೆ, ರಾಮ ರಾಮ ರೇ ಧರ್ಮಣ್ಣ, ಚಂದನ್, ಸಾಗರ್ ಹಾಗೂ ಇತರರು ತಾರಾಬಳಗದಲ್ಲಿ ಇದ್ದಾರೆ.
ವಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನದ ಹಾಡುಗಳಲ್ಲಿ ರೂಪಸಿ ಸುಮ್ಮನೆ....ಹೊಡಿ ಒಂಬತ್ತು, ಮುಗುಳು ನಗೆ ಶೀರ್ಷಿಕೆ ಗೀತೆ, ಕನ್ನಡಿ ಇಲ್ಲದ ಊರಿನಲ್ಲಿ,....ಕೆರೆ ಏರಿ....ಅತ್ಯಂತ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದೆ.

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಗೀತ ಸಾಹಿತ್ಯ, ಸುಜ್ಞಾನ್ ಅವರ ಛಾಯಾಗ್ರಹಣ, ಸುರೇಶ್ ಅರ್ಮೂಗಮ್ ಸಂಕಲನ, ಮುರಳಿ ಹಾಗೂ ರಾಜು ಅವರ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ,ವಿಕ್ರಮ್ ಮೋರ್ ಅವರ ಸಾಹಸ ಒದಗಿಸಿದ್ದಾರೆ.
ಇದೆ ಶುಕ್ರವಾರ `ಮುಗುಳು ನಗೆ' ನಗೆ ಶುರು ರಜತ ಪರದೆಯ ಮೇಲೆ. ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡುತ್ತಾ ಇರುವವರು ಮೈಸೂರು ಟಾಕೀಸ್ ಜಾಕ್ ಮಂಜುನಾಥ್ ಅವರು.

ಸೆಪ್ಟಂಬರ್‍ನಲ್ಲಿ `ಐ - ಯು’ :
ಕವಿ ಹೃದಯ ಟಾಕೀಸ್ ಲಾಂಛನದಲ್ಲಿ ಕವಿತಾ ರಘು ಅವರು ನಿರ್ಮಿಸಿರುವ `ಐ – ಯು` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ನವರಾತ್ರಿಯ ಶುಭ ಸಂದರ್ಭದಲ್ಲಿ ಚಿತ್ರ ತೆರೆಗೆ ಬರಲಿದೆ.
ಕೇಶವ ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಆದಿಲ್ ನಧಾ¥sóï ಸಂಗೀತ ನೀಡಿದ್ದಾರೆ. ಸಿ.ಎಸ್ ಮಹದೇವ್ ಛಾಯಾಗ್ರಹಣ ಹಾಗೂ ವೆಂಕಟೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್, ಲಕ್ಕಿ, ಕಲ್ಯಾಣಿ, ಸುವರ್ಣ, ರಾಕ್‍ಲೈನ್ ಸುಧಾಕರ್ ಮುಂತಾದವರಿದ್ದಾರೆ.
#IDashYou #Cineloka

 

ರೋಲಿಂಗ್ ಡ್ರೀಮ್ಸ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಎನ್.ವಿಜಯಕುಮಾರ್, ಪ್ರವೀಣ್‍ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್‍ಕುಮಾರ್ ಅವರು ನಿರ್ಮಿಸುತ್ತಿರುವ `ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ` ಚಿತ್ರಕ್ಕಾಗಿ ಕಂಚನ್ ಕೌಸ್ತುಭ ಅವರು ಬರೆದಿರುವ `ಹೇಳದಂತೆ ಹೇಳಿದಂತೆ ಹೇಳಿದೆ. ಮನ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಿದೆ` ಎಂಬ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಪ್ರಭು ಹಾಗೂ ಸಂಯುಕ್ತ ಹೆಗಡೆ ಅಭಿನಯಿಸಿದ ಈ ಹಾಡಿಗೆ ಸ್ನೇಹ ನೃತ್ಯ ನಿರ್ದೇಶನ ಮಾಡಿದ್ದಾರೆ.

ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಅರ್ಧ ಭಾಗದಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಉಡುಪಿ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಕಲ್ಯಾಣ್ ಸಮಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕಿರಣ್ ವಾರಣಾಸಿ ಸಂಗೀತ ನೀಡಿದ್ದಾರೆ. .ಸುರೇಶ್‍ಕುಮಾರ್ ಸಂಕಲನ, ಸ್ನೇಹ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಸುಮಿತ್ ಪಟೇಲ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರವೀಣ್ ಸೂಡ ಸಂಭಾಷಣೆ ಬರೆದಿದ್ದಾರೆ.

ಪ್ರಭು ಮುಂಡಕರ್(ಊರ್ವಿ), ಸಂಯುಕ್ತ ಹೆಗಡೆ(ಕಿರಿಕ್ ಪಾರ್ಟಿ), ಎದಕಲ್ಲುಗುಡ್ಡ ಚಂದ್ರಶೇಖರ್, ರಾಮಕೃಷ್ಣ, ರಂಗಿತರಂಗ ಅರವಿಂದ್, ಸುಶ್ಮಿತಾ ಗೌಡ, ವಿಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

`ಮೈಲಾರಿ` ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ `ಕನಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಮೈಸೂರಿನ ಸುತ್ತಮುತ್ತ ಚಿತ್ರಕ್ಕೆ ಹದಿನೈದು ದಿನಗಳ ಕಾಲ ಮಾತಿನ ಭಾಗದ ಹಾಗೂ ಹಾಡಿನ ಚಿತ್ರೀಕರಣ ನಡೆಯಲಿದೆ. ದುನಿಯಾ ವಿಜಯ್, ಹರಿಪ್ರಿಯ, ರವಿಶಂಕರ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇರುತ್ತದೆ. ಉಳಿದಂತೆ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.

ನಿರ್ದೇಶನದೊಂದಿಗೆ ಚಿತ್ರದ ನಿರ್ಮಾಪಕರೂ ಆಗಿರುವ ಆರ್.ಚಂದ್ರು `ಕನಕ’ ಚಿತ್ರವನ್ನು ಬಹು ತಾರಾಗಣದೊಂದಿಗೆ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ದುನಿಯಾ ವಿಜಯ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಮಾನ್ವಿತ ಹರೀಶ್, ಹರಿಪ್ರಿಯ, ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಪದ್ಮಜಾರಾವ್, ಸುಧಾಬೆಳವಾಡಿ ಮುಂತಾದವರಿದ್ದಾರೆ ತೆಲುಗಿನ ಖ್ಯಾತ ನಟಿ ಸುಧಾ ವಿಜಯ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರಾಗಿದ್ದÀ ಯುಗ ಚಂದ್ರು ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ರವಿಶಂಕರ್ ಅವರ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಿದ್ದಾರೆ. ಹರೀಶ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ, ಡಿ¥sóÀರೆಂಟ್ ಡ್ಯಾನಿ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ, ಹರ್ಷ, ಇಮ್ರಾನ್ ಅವರ ನೃತ್ಯ ನಿರ್ದೇಶನ `ಕನಕ’ ಚಿತ್ರಕ್ಕಿದೆ.

 

ಶ್ರೀಸಾಯಿ ಕರಿಷ್ಮಾ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕರಿಷ್ಮಾ ಆರ್ ಶೆಟ್ಟಿ ಅವರು ನಿರ್ಮಿಸಿರುವ `ಹ್ಯಾಪಿ ಜರ್ನಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ಯಾಮ್ ಶಿವಮೊಗ್ಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಸೃಜನ್ ಲೋಕೇಶ್ ಅಭಿನಯಿಸಿದ್ದಾರೆ. ಅಮಿತಾ ಕುಲಾಲ್ ಈ ಚಿತ್ರದ ನಾಯಕಿ. ರಮೇಶ್ ಭಟ್, ಶಿವಧ್ವಜ್, ನವೀನ್ ಪಡೀಲ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹರ್ಷಿಕಾ ಪೂಣಚ್ಛ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಎಸ್.ಪಿ.ಚಂದ್ರಕಾಂತ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಎಂ.ಆರ್.ಸೀನು ಅವರ ಛಾಯಾಗ್ರಹಣವಿದೆ. ಶ್ರೀನಿವಾಸ.ಪಿ.ಬಾಬು ಸಂಕಲನ, ರಾಮು, ಧನಕುಮಾರ್ ನೃತ್ಯ ನಿರ್ದೇಶನ, ಡಿ¥sóÀರೆಂಟ್ ಡ್ಯಾನಿ, ವಿನೋದ್ ಸಾಹಸ ನಿರ್ದೇಶನ ಹಾಗೂ ಸುರೇಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಘು ಕೋವಿ ಸಂಭಾಷಣೆ ಬರೆದಿದ್ದಾರೆ.

 

ಸತ್ಯಕಥೆ - ಇದು ಬದುಕಿನ ಸತ್ಯಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಕಾರ್ಯಕ್ರಮ. ಬದುಕಿನ ಪಯಣದಲ್ಲಿ ನಾವು ಕಂಡು ಕೇಳರಿಯದ ಸತ್ಯದ ಅನಾವರಣ ಈ ಕಾರ್ಯಕ್ರಮದ ಹಂತ ಹಂತದಲ್ಲೂ ಸಿಗುತ್ತದೆ. ಅನುಭವಕ್ಕೂ ಮೀರಿದ ವಾಸ್ತವ ಪ್ರಪಂಚ ನಮ್ಮ ಮುಂದೆತೆರೆದು ಕೊಳ್ಳುತ್ತದೆ. ಜೊತೆಗೆ ಮೇಲ್ನೋಟಕ್ಕೆ ಸತ್ಯದಂತೆ ಕಾಣುವ ಸುಳ್ಳಿನ ಪೊರೆ ಕಳಚಿ ಸತ್ಯದರ್ಶನ ಮಾಡಿಸುವುದೇ ಸತ್ಯಕಥೆ. ಈ ಕಾರ್ಯಕ್ರಮ ಇದೇ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ವಿನೂತನ, ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ರಮದ ಸಾರಥ್ಯವನ್ನು ಕನ್ನಡದ ಹಿರಿಮೆಯ ಭಾವಪೂರ್ಣ ಅಭಿನಯಕ್ಕೆ ಹೆಸರಾದ ಶ್ರೀಮತಿ “ಶೃತಿ”ಯವರು ನೆಡೆಸಿಕೊಡುತ್ತಿದ್ದಾರೆ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಪಾತ್ರವಹಿಸಿರುವ ಶೃತಿಯವರು ಕನ್ನಡದ ಜನಮನಕ್ಕೆ ಚಿರಪರಿಚಿತರು. ಶೃತಿಯವರು ಈ ಷೋನಲ್ಲಿ ಒಬ್ಬ ತಾಯಿಯಾಗಿ, ಸಹೊದರಿಯಾಗಿ, ಜವಾಬ್ದಾರಿಯುತ ಯಜಮಾನಿಯಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅವರ ದುಃಖವನ್ನು ಆಲಿಸಿ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಾರೆ. ಕನ್ನಡಿಗರ ಮನೆಮಗಳು ಶೃತಿಯವರ ಗಾಂಭೀರ್ಯದ ಪ್ರಸ್ತುತಿಯ ಈ ಕಾರ್ಯಕ್ರಮಈಗ ಸಿದ್ಧವಾಗಿದೆ.

ಜೀವನದ ಕಷ್ಟಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾರದೇ ತವಕಿಸುತ್ತಿರವ ಜೀವಗಳಿಗೆ ಯಾವಾ ಮುಚ್ಚುಮರೆ ಇಲ್ಲದೆ ತಮ್ಮ ಒಳನೋವನ್ನು ತೆರೆದಿಟ್ಟುಕೊಳ್ಳಲು ಈ ವೇದಿಕೆ ಮುಕ್ತ ಅವಕಾಶ ನೀಡಿದೆ, ಮತ್ತು ಆ ಕಷ್ಟಗಳನ್ನು ಪರಿಹರಿಸಲು ಟೊಂಕಕಟ್ಟಿ ನಿಂತಿದೆ.ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು ಮುಖ್ಯವಾಗಿ ದಂಪತಿಗಳು ತಂದೆ-ತಾಯಿಯರುಅತ್ತೆ ಮಾವಂದೀರು, ಪೋಷಕರು ಮತ್ತು ಮಕ್ಕಳ ಮನಸುಗಳ ನಡುವೆ ಭಾವನೆಗಳ ಎರಕ ಹೊಯ್ಯುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಒಡೆದ ಈ ಹಲವು ಮನಸ್ಸುಗಳನ್ನು ಒಗ್ಗೂಡಿಸಿ ಅವರ ಅಭಿಪ್ರಾಯಗಳನ್ನು ಆಲಿಸಿ, ಅವರವರಲ್ಲಿ ಮೂಡಿದತಪ್ಪು ತಿಳುವಳಿಕೆಗಳನ್ನು ಕಳೆದು, ಭಾಂದವ್ಯದ ಅರಿವು ಮೂಡಿಸಿ ಬೇರೆಯಾಗಿ ವೇದಿಕೆಗೆ ಬಂದವರನ್ನು ಒಂದು ಮಾಡಿ ಕಳುಹಿಸುವುದು ಈ ಷೋನ ಮುಖ್ಯಹೊಣೆಗಾರಿಕೆಯಾಗಿದೆ.

ಶಿರ್ಷಿಕೆಯ ಟ್ಯಾಗ್‍ಲೈನ್ “ಹೊಸಾ ಆರಂಭ” ಹೇಳುವಂತೆ ಪ್ರತಿ ಅಧ್ಯಾಯದಲ್ಲೂ ಹೊಸದೊಂದು ರೀತಿಯ ಆಯಾಮವನ್ನು ತರಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ.ಈ ಕಾರ್ಯಕ್ರಮದಲ್ಲಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಜ್ಞರ ಸಲಹೆ ಅನುಭವಿಗಳ ಮಾರ್ಗದರ್ಶನ ಪಡೆದು ಸುಜ್ಞಾನದಿಂದ ವಿಷಯವನ್ನು ಪರಾಮರ್ಶಿಸಿ ಪರಿಹಾರ ಸೂಚಿಸಲಾಗುವುದು. ಅಲ್ಲದೇಇಲ್ಲಿಬರುವ ಸೋತಮನಸ್ಸುಗಳಿಗೆ ಕಾನೂನು ಸಲಹೆ ನೀಡಿ ಮಾನಸಿಕವಾಗಿ ದೈರ್ಯ-ಸ್ಥೈರ್ಯಗಳನ್ನು ತುಂಬಿಕೊಡಲಾಗುತ್ತದೆ ಎಂಬುದು ವಾಹಿನಿಯ ಅಭಿüಪ್ರಾಯ.

ಶೃತಿಯವರು ಹೇಳುವಂತೆ "ಸಮಾಜದಲ್ಲಿಯ ಕೆಲ ಮೂಡನಂಬಿಕೆಗಳನ್ನು, ಆಕಸ್ಮಿಕವಾಗಿ ಬಂದೊದಗಿದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲುಜನರ ಕಷ್ಟಗಳನ್ನು ಆಲಿಸಿ ಅವರಿಗೆ ಸಾಮಾಜಿಕನ್ಯಾಯಒದಗಿಸುವುದು ಸುಲಭದಕಾರ್ಯವಲ್ಲಅಂತಹ ಮಹತ್ತರಜವಾಬ್ದಾರಿಯುತ ಸ್ಥಾನಕ್ಕೆ ನಾನು ಯಾವುದೇಧಕ್ಕೆ ಬಾರದ ಹಾಗೆ ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಸೇವೆಗೆ ಸಿದ್ಧರಿದ್ದೇವೆ. ಒಬ್ಬರ ನೋವನ್ನು ಕೇಳಿ ಅಯ್ಯೋ ಪಾಪಾ ಎನ್ನುವುದಕ್ಕಿಂತ ಅವರ ಕಣ್ಣೀರನ್ನು ವರೆಸಿ ಅವರ ಜೀವನವನ್ನು ಸುಧಾರಿಸುವ ಕಾರ್ಯವನ್ನು ಈ ಕಾರ್ಯಕ್ರಮದ ಮೂಲಕ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎನ್ನುತ್ತಾರೆ.

ಹೊಸ ಆಯಾಮದ ಹೊಸ ಆರಂಭ “ಸತ್ಯಕಥೆ” ಇದೇ ಸೋಮಾವಾರ (28.08.2017)ದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕೆ. ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಸತ್ಯ ಹರಿಶ್ಚಂದ್ರ" ಚಿತ್ರದ ಆಡಿಯೋ ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ.

ಶರಣ್, ಚಿಕ್ಕಣ್ಣ, ಸಂಚಿತ ಪಡುಕೋಣೆ, ಸಾಧು ಕೋಕಿಲ, ಭವನ ರಾವ್ ನಟಿಸಿರುವ ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರದಲ್ಲಿ 4 ಹಾಡುಗಳಿವೆ ಎಂದು ತಿಳಿದು ಬಂದಿದೆ.

Page 8 of 10

anigif sam

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top