Raambo 2 gIF

rlr gIF rELEASE

adweb

anigif seizer

Sunil HC Gowda

Sunil HC Gowda

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್ ಇದೆ ಎನ್ನುವ ಹೊತ್ತಿನಲ್ಲಿ ಕಿಚ್ಚ ಸುದೀಪ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಭಾವನಾ,ಧನಂಜಯ ನಟನೆಯ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

 

ಬಿಡುಗಡೆಯಾದ ದಿನದಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡು ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಅದರ ವಿಮರ್ಷೆ ಬರೆದಿದ್ದಾರೆ.

 

ಸೂರಿಯವರ ಡಿಫ್ರೆಂಟ್ ಸ್ಕ್ರೀನ್ ಪ್ಲೇ ಮೆಚ್ಚಿಕೊಂಡಿರುವ ಸುದೀಪ್, ಸೂರಿ ಇಟ್ಟಿರುವ ಹೆಸರುಗಳಿಗೂ ಅವರು ಖುಷಿ ಪಟ್ಟಿದ್ದಾರೆ. ಇಂತಹ ಚಿತ್ರ ಸೂರಿಯಿಂದ ಮಾತ್ರ ಸಾಧ್ಯ, ಈ ಚಿತ್ರಕ್ಕೆ ನಿರ್ದೇಶಕರು ಆರಿಸಿಕೊಂಡಿರುವ ಲೊಕೇಶನ್ ಸಹ ಬಹಳ ವಿಶೇಷವಾಗಿದೆ ಎಂದಿರುವ ಅವರು ಶಿವರಾಜ್‌ಕುಮಾರ್ ಅವರ ಎನರ್ಜಿ ಮತ್ತು ಅಭಿನಯಕ್ಕೆ ಫಿದಾ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆೆ. ಧನಂಜಯ ಅವರ ಸ್ಕ್ರೀನ್ ಅಪಿಯರೆನ್ಸ್ ಹಾಗೂ ಪಾತ್ರ ಎರಡು ತುಂಬಾ ಇಷ್ಟ ಪಟಿರುವ ಕಿಚ್ಚ, ವಸಿಷ್ಠ ಸಿಂಹ ಅವರ ಧ್ವನಿಯ ಬಗ್ಗೆ ಮಾತನಾಡಿದ್ದಾರೆ.

 

ಸಂಗೀತದ ಮೂಲಕ ಫೇಮಸ್ ಆಗಿರುವ ಚರಣ್‌ರಾಜ್ ಅವರಿಗೂ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಒಟ್ಟಾಗಿ ಟಗರು ಚಿತ್ರವನ್ನು ಸುದೀಪ್ ಇಷ್ಟಪಟ್ಟಿದ್ದಾರೆ.

ಹಿಂದಿಯ ಕ್ವೀನ್‌ ಚಿತ್ರದ ಕನ್ನಡ ಅವತರಿಣಿಕೆ “ಬಟರ್‌ಫ್ಲೈ “‌ ಈಗಾಗಲೇ ಪ್ಯಾರೀಸ್‌ನಲ್ಲಿ ಶೂಟಿಂಗ್‌ ಮುಗಿಸಿ ವಾಪಾಸ್ಸಾಗಿದೆ. ಈಗ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂ1 ಯಾರಿ ವಿತ್‌ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

 

ನಂ 1 ಯಾರಿ ವಿತ್‌ ರಾಣಾ ಶೋದ ಕನ್ನಡ ಅವತರಿಣಿಕೆಯಾದ ಈ ಕಾರ್ಯಕ್ರಮದಲ್ಲಿ ಈಗಾಗಲೇ ಉಪೇಂದ್ರ, ಶ್ರುತಿ ಹರಿಹರನ್‌, ಚಿಕ್ಕಣ್ಣ, ಶರಣ್‌ ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದ್ದಾರೆ.

 

ಈಗ ಬಟರ್‌ ಪ್ಲೈ ಚಿತ್ರದ ನಾಯಕಿ ಪಾರುಲ್‌ ಯಾದವ್‌ ನಿರ್ದೇಶಕ ರಮೇಶ್‌ ಅರವಿಂದ್‌ ಸೇರಿದಂತೆ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಕ ಶಿವರಾಜ್‌ಕುಮಾರ್‌ ಅವರೊಂದಿಗೆ ಮಸ್ತಿ ಮಾಡಿದ್ದಾರೆ.

ಕಳೆದವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಟಗರು' ಚಿತ್ರದಲ್ಲಿನ ಕೆಲ ಪಾತ್ರಗಳು ಸಿನಿಮಾದ ಟೈಟಲ್‌ಗಳಾಗಿವೆ.
 
ಟಗರು ಚಿತ್ರದಲ್ಲಿ ಡಾಲಿ, ಕಾಕ್ರೋಚ್‌, ಚಿಟ್ಟೆ, ಬೇಬಿ ಕೃಷ್ಣ, ಕಾನ್‌ಸ್ಟೇಬಲ್‌ ಸರೋಜ ಸೇರಿದಂತೆ ಸಾಕಷ್ಟು ವಿಶೇಷ ಕ್ಯಾರೆಕ್ಟರ್‌ಗಳಿದ್ದವು. ಇವೆಲ್ಲವೂ ಈಗ ಸಿನಿಮಾದ ಟೈಟಲ್‌ಗಳಾಗಿ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್‌ ಆಗಿವೆಯಂತೆ.
 
ಡಾಲಿ ಟೈಟಲ್‌ ದೊಡ್ಮನೆ ಹುಡ್ಗ ನಿರ್ಮಾಪಕ ಗೋವಿಂದು ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್‌ ಆದರೆ, ಚಿಟ್ಟೆ ‘ಕಾಕ್ರೋಚ್‌’ ಕೂಡ ಬೇರೊಬ್ಬ ನಿರ್ಮಾಪಕರು ರಿಜಿಸ್ಟರ್‌ ಮಾಡಿಕೊಂಡಿದ್ದಾರೆ.
 
ಡಾಲಿಯ ಜೊತೆಯಲ್ಲಿ ಡಾಲಿಯ ಡಾರ್ಲಿಂಗ್‌ ಕಾನ್‌ಸ್ಟೇಬಲ್‌ ಸರೋಜ ಹೆಸರು ಸಹ ಈಗಾಗಲೇ ರಿಜಿಸ್ಟರ್‌ ಆಗಿದೆ. ಇನ್ನು ಡಾಲಿಯ ಬಾಸ್‌ ಬೇಬಿ ಕೃಷ್ಣ ಟೈಟಲ್‌ನ್ನು ಟಗರು ಚಿತ್ರದಲ್ಲಿ ಅದೇ ಪಾತ್ರದಲ್ಲಿ ನಟಿಸಿದ್ದ ದೇವನಾಥ ರಿಜಿಸ್ಟರ್‌ ಮಾಡಿಸಿದ್ದಾರಂತೆ. ಸೂರಿ ಸಿನಿಮಾದ ಪಾತ್ರಗಳು ತೆರೆ ಮೇಲೆ ಬಂದರೆ ಅಚ್ಚರಿಯಿಲ್ಲ.

 

ಟಗರು ಚಿತ್ರದ ಚಿಟ್ಟೆ ವಸಿಷ್ಠ ಸಿಂಹ ಈಗ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದು, ಅದರ ನಿರ್ದೇಶಕರು ಫನೀಶ್‌.

 

ಫನೀಶ್‌ ಈ ಹಿಂದೆ ಶಿವರಾಜ್‌ಕುಮಾರ್‌ ನಟನೆಯ ಅಂದರ್‌ ಬಾಹರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಮ್ಮ ಸಮಾಜಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ್ರೂ ಅಸಮಾಧಾನ, ವ್ಯವಸ್ಥೆಯ ಮೇಲೆ ಕೋಪ, ಎಲ್ಲವೂ ಇದೆ. ಆದರೆ ಜೀವನ ಮಾತ್ರ ನಡೆಯುತ್ತಲೇ ಇದೆ. ಅಂತಾರಾಷ್ಟ್ರೀಯ ಬೆದರಿಕೆಗಳು ಸಾರ್ವಕಾಲಿಕ ಗಂಭೀರ ಸಮಸ್ಯೆಯ ಪರಿಧಿಯೊಳಗಿನ ಒಂದು ವಿಷಯವನ್ನು ಎತ್ತಿಕೊಂಡು ಅದರ ಬಗ್ಗೆ ಬೆಳಕು ಚೆಲ್ಲುವಂತೆ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರಂತೆ ಫನೀಶ್‌.

 

ಈ ಚಿತ್ರದಲ್ಲಿ ಸದ್ಯಕ್ಕೆ ವಸಿಷ್ಠ ಸಿಂಹ ಮತ್ತು ತಬಲಾ ನಾಣಿ ಇಬ್ಬರು ಆಯ್ಕೆ ಯಾಗಿದ್ದಾರೆ. ಉಳಿದ ಕಲಾವಿದರ ಆಯ್ಕೆ ನಡೆಯಬೇಕಿದೆ.

 

ಇಷ್ಟು ದಿನ ಗಾಯಕರಾಗಿ ಚಿರಪರಿಚಿತರಾಗಿದ್ದ ವಿಜಯ್‌ ಪ್ರಕಾಶ್‌ ಎರಡನೇ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸತೀಶ್‌, ಜನಾರ್ಧನ್‌, ಶಶಾಂಕ್‌ ಅನುಗ್ರಹ ಎಂಟರ್‌ಪ್ರೈಸಸ್‌ ಎಂಬ ಬ್ಯಾನರ್‌ನಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಛತ್ತೀಸಘಡದ ಕಾಡಿನಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ಫನೀಶ್‌ ತಯಾರಿ ನಡೆಸಿದ್ದಾರೆ.

 

ಸಂಚಾರಿ ವಿಜಯ್‌ ನಟನೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ 6 ನೇ ಮೈಲಿಯಲ್ಲಿ ಒಂದೇ ಒಂದು ಹಾಡಿದ್ದು ಅದಕ್ಕೆ ಗ್ರ್ಯಾಮಿ ಅವಾರ್ಡ್‌ ಪುರಸ್ಕೃತರು ಡೆತ್‌ಮೆಟಲ್‌ ಮಾದರಿಯ ಸಂಗೀತ ನೀಡಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ.ಇತ್ತೀಚೆಗೆ ಈ ಹಾಡಿನ್ನು ಚಿತ್ರತಂಡ ಬಿಡುಗಡೆ ಮಾಡಿತು.

 

ಈ ಚಿತ್ರದ ಕಥೆ ಬರೆಯುವಾಗ ಸಿನಿಮಾಗೆ ಹಾಡಿನ ಅಗತ್ಯ ಇರಲಿಲ್ಲ ಎಂದುಕೊಂಡಿದ್ದರು ನಿರ್ದೇಶಕ ಸೀನಿ. ಆದರೆ ಸಂಗಿತ ನಿರ್ದೇಶಕ ಸಾಯಿ ಕಿರಣ್‌ ಚಿತ್ರದಲ್ಲಿ ಡೆತ್‌ ಮೆಟಲ್‌ ಸಂಗೀತ ಇರುವ ಹಾಡೊಂದು ಇದ್ದರೆ ಚೆಂದ. ಕನ್ನಡದಲ್ಲಿ ಈವರೆಗೂ ಡೆತ್‌ಮೆಟಲ್‌ ಮ್ಯೂಸಿಕ್‌ ಬಂದಿಲ್ಲ ಎಂದು ಹೇಳಿದರಂತೆ. ಆಗ ನಿರ್ದೇಶಕ ಸೀನಿ ಕೂಡ ಈ ಮೂಲಕ ನಿರ್ಮಾಪಕ ಶೈಲೇಶ್‌ಕುಮಾರ್‌ಗೆ ಒಳ್ಳೆ ಗಿಫ್ಟ್‌ ಕೊಡೊಣ ಎಂದು ನಿರ್ಧಿರಿಸಿದ್ದಾರೆ. ಆಗ ಹುಟ್ಟಕೊಂಡಿದ್ದೆ '6 ನೇ ಮೈಲಿಯ ಟೈಟಲ್‌ ಟ್ರ್ಯಾಕ್‌'. ಈ ಹಾಡನ್ನು ಸಾಯಿಕಿರಣ್ ಕಂಪೋಸ್‌ ಮಾಡಿದ್ದಾರೆ. ಇವರ ಕಂಪೋಸಿಂಗ್‌ ಗೆ ಸೌಂಡ್‌ ಎಂಜಿನಿಯರ್‌ ಮತ್ತು ಮಾಸ್ಟರಿಂಗ್‌ ಎಂಜಿನಿಯರ್‌ ಕೆಲಸ ಮಾಡಿರುವ ಇಬ್ಬರೂ ಗ್ರ್ಯಾಮಿ ಅವಾರ್ಡ್‌ ವಿನ್ನರ್‌ ಆಗಿದ್ದಾರೆ.

 

ಈ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ವಸಿಷ್ಠ ಸಿಂಹ ಧ್ವನಿ ಈ ಹಾಡಿಗೆ ಸೂಟ್‌ ಆಗುತ್ತದೆ ಎಂಬ ಕಾರಣಕ್ಕೆ ಅವರ ಕೈಯಲ್ಲೇ ಹಾಡಿಸಿದ್ದಾರೆ. ಆರ್‌ಜೆ ನೇತ್ರಾ, ಸುದರ್ಶನ್‌, ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನ್ಯೂರೋ ಸರ್ಜನ್‌ ಡಾ. ಶೈಲೇಶ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ.

 

ಶಂಕರ್ & ಅಸೋಸಿಯೆಟ್ಸ್ ಲಾಂಛನದಲ್ಲಿ ಶಂಕರ್ ಅವರು ನಿರ್ಮಿಸಿರುವ `3000`ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಬ್ಬುನಿ ಕೀರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಸಂಗೀತ ನೀಡಿದ್ದಾರೆ.

ಮನುಕೃಷ್ಣನ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ ಹಾಗೂ ರಬ್ಬುನಿ ಕೀರ್ತಿ, ಶಿವಕಾಂತ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಗೌರೀಶ್ ಅಕ್ಕಿ, ರಬ್ಬುನಿ ಕೀರ್ತಿ, ಸುಹಾನ್, ಪ್ರಸಾದ್, ಮಹಂತೇಶ್, ಸ್ವಾತಿ, ಉಜ್ಜಾಲ, ಕಾವ್ಯ, ಪಲ್ಲವಿ ಮುಂತಾದವರಿದ್ದಾರೆ.

ಬಾಲಿವುಡ್‌ನಲ್ಲಿ ಆರ್‌ಜಿವಿ ಸರ್ಕಾರ್‌ ಬಿಡುಗಡೆಯಾಗಿ ಯಶಸ್ವಿಯೂ ಆಯಿತು. ಈಗ ಕನ್ನಡದಲ್ಲಿಯೂ ಸರ್ಕಾರ್‌ ಎನ್ನುವ ಚಿತ್ರ ಬರುತ್ತಿದೆ.

ಇದು ಹಿಂದಿಯ "ಸರ್ಕಾರ್‌"ನ ರಿಮೇಕ್‌ ಅಲ್ಲ. ಇದೊಂದು ಹೊಸಬರ ಪ್ರಯತ್ನ. ಇನ್ನೇನು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಮಂಜು ಪ್ರೀತಂ ಎಂಬ ಯುವಕ ನಿರ್ದೇಶನ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಜಗದೀಶ್‌ ಅಲಿಯಾಸ್‌ ಜಗ್ಗಿ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ.
ಮಂಜು ಪ್ರೀತಂಗೆ ಇದು ಮೊದಲ ಚಿತ್ರವಾದರೂ, ಅವರು ಈಗಾಗಲೇ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಗೊಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕಟ್ಟಾಭಿಮಾನಿಯಾಗಿದ್ದಾರೆ ಮಂಜುಪ್ರೀತಂ. ಪಾರ್ವತಿ ಚಿತ್ರದ ನಿರ್ಮಾಪಕರು. 'ಸರ್ಕಾರ್‌' ಅಂದರೆ, ಇದು ರೌಡಿಸಂ ಅಥವಾ ರಾಜಕೀಯ ಬ್ಯಾಗ್ರೌಂಡ್‌ ಇರುವ ಸಿನಿಮಾ ಎಂದುಕೊಳ್ಳುತ್ತಾರೆ ಆದರೆ ಇದು ಪಕ್ಕಾ ಲವ್‌ ಸ್ಟೋರಿ. ಜತೆಗೆ ಮಾಸ್‌ ಎಲಿಮೆಂಟ್ಸ್‌ ಸೇರಿಕೊಂಡು ಎಂಟರ್‌ಟೈನ್‌ಮೆಂಟ್‌ ಕೋಡುವ ಸಿನಿಮಾವಾಗಿದೆ. ಲೇಖಚಂದ್ರ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಸತೀಶ್‌ ಆರ್ಯನ್‌ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ. ನಾಗೇಂದ್ರಪ್ರಸಾದ್‌, ಮಳವಳ್ಳಿ ಸಾಯಿಕೃಷ್ಣ ಮತ್ತು ಸಂತೋಷ್‌ನಾಯ್ಕ ಗೀತೆ ರಚಿಸಿದ್ದಾರೆ. ರಾಜ್‌ಪುಟಿ ಅರುಣ್‌ಕುಮಾರ್‌ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದಲ್ಲಿ ಶೋಭರಾಜ್‌ ಸತ್ಯಜಿತ್‌, ಕೀರ್ತಿರಾಜ್‌, ರಮೇಶ್‌ ಪಂಡಿತ್‌ ಮತ್ತಿತರರು ನಟಿಸಿದ್ದಾರೆ.

ಚಿತ್ರ ನಾಳೆ ರಾಜ್ಯದೆಲ್ಲೆಡೆ ತೆರೆ ಬರುತ್ತಿದೆ. ವಿಜಯ್ ಸಿನಿಮಾಸ್ ಚಿತ್ರವನ್ನು ವಿತರಿಸುತ್ತಿದ್ದಾರೆ.

#Sarkar #Cineloka

ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಹರಿವು ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಂಸೂರೆ ಈಗ ಮಹಿಳಾ ಪ್ರಧಾನ 'ನಾತಿಚರಾಮಿ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಹೆಣ್ಣು ತನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹೇಗೆ ನಿರ್ವಹಿಸುತ್ತಾಳೆ ಎಂಬ ಕಥೆಯಿದೆ. ಇತ್ತೀಚೆಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ, ಸಿನಿಮಾದ ಬಗ್ಗೆ ಮಾಹಿತಿ ನೀಡಿತು.
ಈ ಚಿತ್ರದಲ್ಲಿ ಟೆಕ್ಕಿಯೊಬ್ಬಳು ವೃತ್ತಿಯಲ್ಲಿ ಯಶಸ್ಸು ಕಂಡು ತನ್ನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದ ಹಾಗೆ ಅದನ್ನು ಹೇಗೆ ನಿಭಾಯಿಸುವುದು ಎಂದು ಗೊಂದಲದಲ್ಲಿರುತ್ತಾಳೆ. ಇದೇ ಸಮಯದಲ್ಲಿ ತನ್ನ ಪತಿ ಮೃತಪಟ್ಟಿರುತ್ತಾನೆ. ವೃತ್ತಿ ಜೀವನ ಮೇಲೆ ಹೋದಂತೆ ವೈಯಕ್ತಿ ಕ ಜೀವನ ಕುಸಿಯುತ್ತಿರುತ್ತದೆ. ಇದೇ ಸಿನಿಮಾದ ಕಥೆಯಾಗಿದೆ. ಇಂತಹ ಸಾಕಷ್ಟು ಘಟನೆಗಳು ಸಾಕಷ್ಟು ಜನರ ಲೈಫ್‌ನಲ್ಲಿ ನಡೆದಿರುತ್ತದೆ. ನೋಡುಗರು ಈ ಕಥೆಯನ್ನು ರಿಲೇಟ್‌ ಸಹ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ನಿರ್ದೇಶಕ ಮಂಸೂರೆ.
ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಬೆಂಗಳೂರಿನಲ್ಲೇ ನಡೆಯುತ್ತದೆ. ಶ್ರುತಿ ಹರಿಹರನ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರಣ್ಯ, ಅಶ್ವಿನ್‌, ಗ್ರೀಷ್ಮಾ, ಬಾಲಾಜಿ ಮನೋಹರ್‌, ಸಂಚಾರಿ ವಿಜಯ್‌ ನಟಿಸುತ್ತಿದ್ದಾರೆ.
ಲೇಖಕಿ ಸಂಧ್ಯಾರಾಣಿ ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಕಂಟ್ರ್ಯಾಕ್ಟರ್ಗಳಾಗಿರುವ ಜಗನ್ಮೋಹನ ರೆಡ್ಡಿ, ಶಿವಕುಮಾರ್‌ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಧನಂಜಯ ಸ್ಯಾಂಡಲ್‌ವುಡ್‌ನ ಒಬ್ಬ ಪ್ರತಿಭಾವಂತ ನಟ. ಈಗಾಗಲೇ ಸುಮಾರು 9 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದಾವು ಅವರಿಗೆ ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಈಗ ಬಿಡುಗಡೆಯಾಗಿರುವ 'ಟಗರು' ಚಿತ್ರದಲ್ಲಿ ಧನಂಜಯ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಜನ ಹುಚ್ಚೆದ್ದು ಆ ಪಾತ್ರವನ್ನು ಇಷ್ಟಪಡುತ್ತಿದ್ದಾರೆ.

 

ಧನಂಜಯ ಅವರ ಹಿಂದಿನ ಯಾವುದೋ ಚಿತ್ರಗಳನ್ನು ಜನರು ಸ್ವೀಕರಿಸಿರಲಿಲ್ಲ. ಒಂದು ಗೆಲುವಿಗಾಗಿ ಕಾಯುತ್ತಿದ್ದ ಧನಂಜಯಗೆ 'ಟಗರು' ಮೂಲಕ ಆ ಜಯ ಸಿಕ್ಕಿದೆ ಎಂದು ಹೇಳಬಹುದು.

 

ಚಿತ್ರದಲ್ಲಿ ಧನಂಜಯ ಶಿವರಾಜ್‌ಕುಮಾರ್‌ ಅವರಿಗೆ ಟಕ್ಕರ್‌ ಕೊಡುವ ವಿಲನ್‌ ಆಗಿ ಯಾವ ಮಟ್ಟಿಗೆ ಮಿಂಚಿದ್ದಾರೆ ಎಂದರೆ, ಸ್ವತಃ ಶಿವರಾಜ್‌ಕುಮಾರ್‌ ಕರೆ ಮಾಡಿ ಅವರ ಪರ್ಫಾಮೆನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಜತೆಗೆ ಚಿತ್ರ ನೋಡಿದ ಜನರು ಡಾಲಿಯನ್ನು ಮನೆಗೆ ಮತ್ತು ತಮ್ಮ ಮನಸ್ಸಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

 

ನಾಯಕನಾಗಿ ಧನಂಜಯ ಚಿತ್ರರಂಗಕ್ಕೆ ಎಂಟ್ರಿಯಾದಗ ಜನ ಅವರಿಗೆ ವೆಲ್‌ಕಮ್‌ ಬೋರ್ಡ್‌ ಹಾಕಿ ರಿಸೀವ್‌ ಮಾಡಿಕೊಂಡಿದ್ದರು ಈಗ ಮತ್ತೆ ಖಳನಾಗಿಯೂ ಬಾಚಿ ತಬ್ಬಿಕೊಂಡಿದ್ದಾರೆ.

 

ಟಗರು ಚಿತ್ರದಲ್ಲಿ ಧನಂಜಯ ನೀಲಿ ಕಣ್ಣಿನ ಖಳನಟನಾಗಿ ಅಬ್ಬರಿಸಿದ್ದಾರೆ. ಇಡೀ ಚಿತ್ರರಂಗ ಧನಂಜಯ ಪರ್ಫಾಮೆನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಧನಂಜಯ ದರ್ಶನ್‌ ಅವರ ಎದುರು ನಟಿಸಲು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಸೂರಿ ಡಾಲಿಯ ಮೂಲಕ ಧನಂಜಯನಲ್ಲಿದ್ದ ನಿಜ ನಟನನ್ನು ಹೊರಗೆ ತಂದಿದ್ದಾರೆ.

 

ಈಗಾಗಲೇ ರಾಜ ಲವ್ಸ್ ರಾಧೆ ಎಂಬ ಚಿತ್ರವನ್ನು ತೆರೆಗೆ ಸಿದ್ದಪಡಿಸಿದ ತಂಡದಿಂದ ಈಗ ಮತ್ತೊಂದು ಚಿತ್ರ ಆರಂಭವಾಗಿದೆ. ಒಂದು ಚಿತ್ರ ಮುಗಿದು ಅದು ಬಿಡುಗಡೆಯಾಗುವ ಮೊದಲೇ ಮತ್ತೊಂದು ಚಿತ್ರವನ್ನು ಪ್ರಾರಂಭಿಸುವುದು ತುಂಬಾ ವಿರಳ. ಅದಿಲ್ಲಿ ನಡೆದಿದೆ. ಎಂ.ರಾಜಶೇಖರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಸಾರಥ್ಯದಲ್ಲಿ ತಯಾರಾಗುತ್ತಿರುವ 'ಪರದೇಸಿ c/o ಲಂಡನ್' ಎಂಬ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

 

ಮಾಜಿ ಸಚಿವ ಜನಾರ್ಧನ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದರು. ಈ ಚಿತ್ರದ ನಾಯಕಿ ಹಾಗೂ ನಿರ್ಮಾಪಕರನ್ನು ಬಿಟ್ಟರೆ ಉಳಿದವರೆಲ್ಲರೂ ರಾಜ ರಾಧೆ ಚಿತ್ರದಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ನಾಯಕ ವಿಜಯ ರಾಘವೇಂದ್ರ ಜೊತೆ ನಾಯಕಿಯರಾಗಿ ಡ್ಯುಯೆಟ್ ಹಾಡಲು ಈ ಬಾರಿ ಇಬ್ಬರು ನಾಯಕಿಯರಿದ್ದಾರೆ. ಪೂಜಾ ಹಾಗೂ ಸ್ನೇಹ. ಪೂಜಾ ಈಗಾಗಲೇ ಜಾನಕಿರಾಮ ಸೇರಿ ಒಂದೆರಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸ್ನೇಹಾಗೆ ಚಿತ್ರರಂಗ ಹೊಸದು. ವೀರಸಮರ್ಥ ಅವರ ಸಂಗೀತ ಸಂಯೋಜನೆಯಲ್ಲಿ 4 ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕವಿರಾಜ್, ನಾಗೇಂದ್ರ ಪ್ರಸಾದ್ ಹಾಗೂ ಪತ್ರಕರ್ತ ವಿಜಯ ಭರಮಸಾಗರ ಸಾಹಿತ್ಯ ರಚಿಸಿದ್ದಾರೆ. ಹಾಸ್ಯನಟ ತಬಲಾನಾಣಿ ಅಭಿನಯದ 101ನೇ ಚಿತ್ರವಿದು. ಚಿದಾನಂದ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಬಿ. ಬದರೀನಾರಾಯಣ ಈ ಚಿತ್ರದ ನಿರ್ಮಾಪಕರು.

 

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಎಂ. ರಾಜಶೇಖರ್ ಇದೊಂದು ಹಾಸ್ಯದ ಜೊತೆಗೇ ನಡೆಯುವ ಎಮೋಷನಲ್ ಫ್ಯಾಮಿಲಿ ಡ್ರಾಮಾ. ದಿಕ್ಕು ದಿವಾಳಿ ಇಲ್ಲದವನನ್ನು ಅಲ್ಲದೆ ಹೊರದೇಶದಿಂದ ಬಂದವನನ್ನು ಪರದೇಸಿ ಎನ್ನುತ್ತಾರೆ. ನಮ್ಮ ಚಿತ್ರದಲ್ಲಿ ಆ ಎರಡೂ ಪದಗಳಿಗೂ ಅರ್ಥವಿದೆ. ಯಾವುದೇ ಸಂಬಂಧಗಳು ಇಲ್ಲದೇ ಇರುವವನನ್ನು ಪರಿಸ್ಥಿತಿ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಆತ ಯಾರು, ಏನು ಅನ್ನೋದೇ ಚಿತ್ರದ ಕಥೆ. ರಾಧೆ ಚಿತ್ರದಲ್ಲಿ ಕ್ಯಾಮೆರಾ ಕೆಲಸ ಮಾಡಿದ್ದ ಚಿದಾನಂದ್ ಮತ್ತೆ ಜೊತೆಯಾಗಿದ್ದಾರೆ. ನಿರ್ಮಾಪಕರು ಸಿರಗುಪ್ಪದವರು. ನನ್ನ ಕ್ಲಾಸ್‍ಮೆಟ್, ಇದೇ ಮೊದಲಬಾರಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿಕೊಂಡರು.

 

ನಾಯಕ ವಿಜಯ ರಾಘವೇಂದ್ರ ಮಾತನಾಡಿ ಈ ಥರದ ಟೈಟಲ್ ಇರೋ ಸಿನಿಮಾದಲ್ಲಿ ನಾನು ಕೆಲಸ ಮಾಡಿದ್ದಿಲ್ಲ, ಪರದೇಸಿ ಏನು ಅಂತ ಹೇಳೋದೇ ಈ ಸಿನಿಮಾ ಎಂದು ಹೇಳಿದರು. ಚಿತ್ರದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದ ವಿಜಯ ಭರಮಸಾಗರ ಮಾತನಾಡಿ ಮತ್ತೊಮ್ಮೆ ಅದೇ ಟೀಮ್ ಜೊತೆ ಕೆಲಸ ಮಾಡಲು ಕಾರಣ ರಾಜ ಲವ್ಸ್ ರಾಧೆ ಸಿನಿಮಾ. ಬರುವ ಮಾರ್ಚ್ 5 ರಿಂದ ಆರಂಭಿಸಿ ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸುವ ಪ್ಲಾನ್ ಇದೆ. ಚಿತ್ರದಲ್ಲಿ ಮಾಮೂಲಿ ಸಂಭಾಷಣೆ ಇರುತ್ತದೆ. ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ ಎಂದು ಹೇಳಿದರು.

Page 10 of 21

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top