Raambo 2 gIF

rlr gIF rELEASE

adweb

anigif seizer

ನಟ, ನಿರ್ದೇಶಕ ಎಸ್ ಮೋಹನ್ ಇದ್ದ ಕಡೆ ನಗು, ಸಂಭ್ರಮ ಇರಲೇಬೇಕು. ಅದನ್ನು ಮೋಹನ್ "ಹೆಲೋ ಮಾಮಾ"...ಥೂ ಹಂಗ್ ಕರಿಬೇಡ್ರೊ ಚಿತ್ರದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ.

 

ಬಿ ಕೆ ಚಂದ್ರಶೇಖರ್ ಅವರ ಪ್ರಗತಿ ಸಿನಿಮಾಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವನ್ನ ಇತ್ತೀಚಿಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ರಾಜಣ್ಣ ಹಾಗೂ ಕೃಷ್ಣ ಪ್ರಸಾದ್ ಈ ಚಿತ್ರದ ಜಂಟಿ ನಿರ್ಮಾಪಕರು.

 

 ಅನಿವಾರ್ಯವಾಗಿ ಹಾಗೂ ಕೆಲವೊಮ್ಮೆ ಅವಶ್ಯಕತೆ ಇಂದ ಸಮಾಜದಲ್ಲಿ 'ಮಾಮಾ' ಪದವನ್ನು ಬಳಕೆ ಮಾಡಲಾಗುತ್ತದೆ. ನಿರ್ದೇಶಕ ಮೋಹನ್ ಅವರು ಹಲವಾರು ಬಗೆಗಳಲ್ಲಿ ಆ ಪದವನ್ನು ಉಪಯೋಗ ಮಾಡಿಕೊಂಡಿದ್ದಾರೆ. ಮೋಹನ್, ಸಂಪ್ರತ, ಅರವಿಂದ್ ರಾವ್, ಭೂಮಿಕಾ, ಸೌಜನ್ಯ ಮುಖ್ಯ ತಾರಾಗಣದಲ್ಲಿ ಇದ್ದಾರೆ.

 

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಸ್ ಮೋಹನ್ ಮಾಡಿದ್ದರೆ, ಡಿ ಪ್ರಸಾದ್ ಬಾಬು ಛಾಯಾಗ್ರಹಣ, ಧರಂ ದೀಪ್ ಸಂಗೀತ ಒದಗಿಸಿದ್ದಾರೆ.

ನಿರ್ದೇಶಕ /ನಟ ಮೋಹನ್ ಅವರು ಇತ್ತೀಚಿಗೆ ಚಿತ್ರರಂಗದಲ್ಲಿ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ , ಕಿರುತೆರೆಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು,ಸ್ವಲ್ಪ ಮಟ್ಟಿಗೆ ಸುದ್ದಿ ಕೂಡ ಮಾಡಿದ್ದರು. ಇದೀಗ ಮೋಹನ್ ಅವರು ಮತ್ತೆ ಚಿತ್ರರಂಗದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು,ಮೋಹನ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. "ಹಲೋ ಮಾಮ" ಎಂದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿಕೊಂಡಿರುವ ಮೋಹನ್ ಅವರು ಈ ಚಿತ್ರಕ್ಕೆ ನಾಯಕರಾಗೂ ಕಾಣಿಸಿಕೊಳ್ಳುತ್ತಿದ್ದಾರೆ.

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top