IB anigif

Ayugya Gif

adweb

udgharsha

 
ರೈತನ ಬದುಕು ಬವಣೆಯ ಕುರಿತಾದ ಕಥೆ ಹೊಂದಿದ ಚಿತ್ರ ಕೂಗು. ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಕೆ. ಪದ್ಮನಾಭನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಹೊಸ ಅನುಭವ ಚಿತ್ರವನ್ನು ನಿರ್ಮಿಸಿದ್ದ ಅವರಿಗೆ ಇದು ಎರಡನೇ ಅನುಭವ. ಈ ಚಿತ್ರವನ್ನು ಅರಿವು ಖ್ಯಾತಿಯ ನಿರ್ದೇಶಕ ಆರ್.ರಂಗನಾಥ್ ಅವರು ನಿರ್ಮಾಣ ಮಾಡಿದ್ದಾರೆ. ಅರಿವು, ಪ್ರಭುತ್ವ ನಂತರ ಇದು ಅವರ ನಿರ್ದೇಶನದ 3ನೇ ಚಿತ್ರವಾಗಿದೆ. ಎಟಿ ರವೀಶ್ ಅವರ ಸಂಗೀತ ಸಂಯೋಜನೆಯ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ.
.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಪದ್ಮನಾಭನ್ ಅವರು ಕೂಗು ರೈತರ ಬದುಕು, ಬವಣೆಯ ಕುರಿತಾದ ಕಥಾನಕವನ್ನು ಒಳಗೊಂಡಿದೆ. ಸಮಾಜದಲ್ಲಿ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಅವರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕು, ದೇಶದ ಬೆನ್ನೆಲುಬಾದ ರೈತರ ದಿನಾಚರಣೆ ಜಾರಿಯಾಗಬೇಕು ಹೀಗೆ ಹಲವಾರು ಅಂಶಗಳನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ಜೂನ್ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.
.
ನಂತರ ಚಿತ್ರದ ಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದ ಸೋಸಲೆ ಗಂಗಾಧರ್ ಮಾತನಾಡಿ ಕೂಗು ಎಂದರೆ ರೈತನ ಆರ್ತನಾದ. ದೇಶದ ಅಡಿಪಾಯದಲ್ಲಿರುವ ಒಬ್ಬ ರೈತನ ಕೂಗು. ಆತ ಬೆಳೆದಂಥ ಪದಾರ್ಥಗಳಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ, ಒಂದು ಬೆಂಕಿಪಟ್ಟಣಕ್ಕೂ ಎಂಆರ್‍ಪಿ ಇದೆ. ಆದರೆ ರೈತನ ಬೆಳೆಗೆ ಬೆಲೆ ಇರುವುದಿಲ್ಲ. ನಮಗೆ ಕಂಡದ್ದು, ಕೇಳಿದ್ದು, ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ನೋಡಿದ್ದನ್ನು ನಾವಿಲ್ಲಿ ತೋರಿಸಿದ್ದೇವೆ. ನಾನು ನಿರ್ದೇಶಕರು, ಸಂಗೀತ ನಿರ್ದೇಶಕ ಎಟಿ ರವೀಶ್ ಎಲ್ಲರೂ ಕುಳಿತು ಚರ್ಚೆಮಾಡಿ ಈ ಚಿತ್ರಕ್ಕೆ ಒಂದು ರೂಪ ಕೊಟ್ಟಿದ್ದೇವೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಈ ಚಿತ್ರವನ್ನು ಆರಂಭಿಸಿದೆವು. ಉತ್ತಮ ಸಂದೇಶ ಇರುವಂಥ ಚಿತ್ರವಿದು. ಹಾಡೊಂದರ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಕೂಡ ಈ ಚಿತ್ರದಲ್ಲಿದೆ ಎಂದು ಹೇಳಿಕೊಂಡರು.
.
ಚಿತ್ರದ ನಿರ್ದೇಶಕ ರಂಗನಾಥ್ ಮಾತನಾಡಿ ರೈತರು ಎದುರಿಸುತ್ತಿರುವ ಅನೇಕ ತೊಂದರೆ, ತಾಪತ್ರಯಗಳನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಆರಂಭದಲ್ಲಿ ನಾನು ಮಾಡಿದ ಒಂದು ಶಾರ್ಟ ಫಿಲಂ ಈಗ ಸಿನಿಮಾ ಆಗುತ್ತಿದೆ. ಅಶೋಕ್ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರ ಮಾಡಿದ್ದಾರೆ. ಸೋಮಣ್ಣ ಅವರು ರೈತನ ಪಾತ್ರದಲ್ಲಿ ಮಿಂಚಿದ್ದಾರೆ. ಅವಿಸ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ ಎಂದು ಹೇಳಿದರು. ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ವರ್ಷ ಒಬ್ಬ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಮಾತನಾಡುತ್ತ ಒಬ್ಬ ಜರ್ನಲಿಸ್ಟ್, ಒಬ್ಬ ಸಾಫ್ಟ್‍ವೇರ್ ಎಂಜಿನಿಯರ್ ಹಾಗೂ ಒಬ್ಬ ರೈತ ಈ ಮೂವರ ಮೇಲೆ ಇಡೀ ಚಿತ್ರದ ಕಥೆ ಸಾಗುತ್ತದೆ. ಇದೇ ಮೊದಲ ಬಾರತಿಗೆ ನಾನು ಈ ಚಿತ್ರದಲ್ಲಿ ಒಬ್ಬ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ಸಂಗೀತ ನಿರ್ದೇಶಕ ಎಟಿ ರವೀಶ್, ಛಾಯಾಗ್ರಾಹಕ ಚಂದ್ರಣ್ಣ, ನಾಯಕನಟ ದತ್ತ, ಎಂಎಲ್‍ಎ ಪಾತ್ರ ಮಾಡಿರುವ ಧನಂಜಯ ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದು ಮಾತನಾಡಿದರು.
.
#Koogu #Cineloka

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top