tarakaasura

ttm

adweb

udgharsha

 

ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಹಾಗೂ ಗುಜಲ್ ಪುರುಷೋತ್ತಮ್ ಅವರು ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 42` ನೂತನ ಚಿತ್ರದಲ್ಲಿ ಕ್ರೇಜಿಸ್ಟ್ರಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೈಸೂರು ರಸ್ತೆಯಲ್ಲಿರುವ ಬ್ಲೂ ಆರ್ಕೆಟ್ ಅಪಾರ್ಟ್‍ಮೆಂಟ್‍ನಲ್ಲಿ ಸೋಮವಾರ(ಜುಲೈ 23) ಸರಳಪೂಜಾ ಸಮಾರಂಭದೊಂದಿಗೆ ಆರಂಭವಾಯಿತು. ಚಿತ್ರದ ನಿರ್ಮಾಪಕರಾದ ಗುಜಲ್ ಪುರುಷೋತ್ತಮ್ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.


.
ಈ ಹಿಂದೆ `ಜಿಗರ್ ಥಾಂಡಾ` ಹಾಗೂ `ತ್ರಾಟಕ` ಚಿತ್ರಗಳನ್ನು ನಿರ್ದೇಶನ ಮಾಡಿರುವ ಶಿವಗಣೇಶ್ ಈ ಚಿತ್ರದ ನಿರ್ದೇಶಕರು. ಶಿವಗಣೇಶ್ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಡಾ|||ವಿ.ನಾಗೇಂದ್ರಪ್ರಸಾದ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ನೀಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಚಂದ್ರು, ಗಣೇಶ್ ಅವರ ಸಾಹಸ ನಿರ್ದೇಶನವಿದೆ.


.
ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್ ಅವರು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಉಡುಗೆ, ತೊಡುಗೆ ಹೊಸರೀತಿಯಲ್ಲಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರು, ಕೊಡಗು, ಊಟಿ, ಉತ್ತರ ಭಾರತ, ಜಮ್ಮು, ಕಾಶ್ಮೀರ ಮುಂತಾದ ಕಡೆ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ರವಿಚಂದ್ರನ್, ಅಚ್ಯುತಕುಮಾರ್, ಯಶ್‍ಶೆಟ್ಟಿ, ಚೈತ್ರಾರಾವ್, ನಿಸರ್ಗ, ಚೇತನ್, ಅರ್ಜುನ್ ಗೌಡ, ಗಿರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

.

#Cineloka


ಅಪೂರ್ವ ಚಿತ್ರದ ಮೂಲಕ ಗಮನ ಸೆಳೆದಿದ್ದ ಮೈಸೂರಿನ ಯುವತಿ ಅಪೂರ್ವ ಮತ್ತೆ ರವಿಚಂದ್ರನ್‌ಗೆ ಜತೆಯಾಗಿದ್ದಾರೆ.
.
2016ರಲ್ಲಿ ತೆರೆಕಂಡ ಅಪೂರ್ವ ಚಿತ್ರಕ್ಕೆ ರವಿಚಂದ್ರನ್‌ ಮೈಸೂರಿನ ಹುಡುಗಿ ಅಪೂರ್ವರನ್ನೇ ಕರೆತಂದಿದ್ದರು ಅಪೂರ್ವ ಚಿತ್ರ ದಯನೀಯ ಸೋಲು ಕಂಡ ನಂತರ, ಫೇಸ್‌ ಬುಕ್‌ನಲ್ಲಿ ಮಾಜಿ ನಟಿ ಎಂದು ಅಪೂರ್ವ ಬರೆದುಕೊಂಡಿದ್ದರು.
.
ಈಗ ರವಿಚಂದ್ರನ್‌ ಹೊಸ ಚಿತ್ರಕ್ಕೆ ಕೀಚಕ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರವನ್ನು ತಮಿಳು ನಿರ್ದೇಶಕ ಶಿವರಾಜ್‌ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕ ಶಿವರಾಜ್‌ ಈ ಮೊದಲು ಉಪೇಂದ್ರ ಅಭಿನಯದ ಎ ಚಿತ್ರವನ್ನು ತಮಿಳಿನಲ್ಲಿ ರಿಮೇಕ್‌ ಮಾಡಿದ್ದರು. ಈಗ ಕೀಚಕ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
.
#Keechaka #Cineloka #CrazyStarRavichandran
ಈ ವಾರ ಬಿಡುಗಡೆಯಾಗುತ್ತಿರುವ 'ಬಕಾಸುರ' ಚಿತ್ರದಲ್ಲಿ ಹಣವೇ ಚಿತ್ರದ ಮುಖ್ಯ ಕಥಾವಸ್ತುವಂತೆ.
.
ಕ್ರೇಜಿಸ್ಟಾರ್‌ ರವಿಚಂದ್ರನ್‌,ಆರ್‌ ಜೆ ರೋಹಿತ್‌ ಮತ್ತು ಕಾವ್ಯ ಗೌಡ ನಟಿಸಿರುವ ಈ ಚಿತ್ರದಲ್ಲಿ ಒಳ್ಳೆಯ ವ್ಯಕ್ತಿಯೊಬ್ಬ ಹಣದ ಹಿಂದೆ ಬಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ, ಅದರಿಂದ ಆ ವ್ಯಕ್ತಿ ಎದುರಿಸುವ ಸಮಸ್ಯೆಗಳೇನು ಎಂಬುದನ್ನು ಕಾಮಡಿ, ಹಾರರ್‌ ಮೂಲಕ ಹೇಳಿದ್ದಾರಂತೆ ನಿರ್ದೇಶಕ ನವನೀತ್‌.
.
ಕ್ರೇಜಿಸ್ಟಾರ್‌ ರವಿಚಂದ್ರನ್‌ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಚಿತ್ರದಲ್ಲಿ ನೆಗೆಟಿವ್‌ ರೋಲ್‌ನಲ್ಲಿ ನಟಿಸಿದ್ದಾರೆ.
ಎಲ್ಲರಿಗೂ ದುಡ್ಡು ಬೇಕು. ಒಳ್ಳೆಯವರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಆಗ ಏನಾಗುತ್ತದೆ ಎನ್ನುವುದು ಕುತೂಹಲ ಎಂದು ನಿರ್ದೇಶಕ ನವನೀತ್‌ ಮಾಧ್ಯಮಗಳಿಗೆ ತಿಳಿಸಿದರು.
.
ಚಿತ್ರಕ್ಕೆ ಮೊದಲಿಗೆ ನಿರ್ಮಾಪಕರೊಬ್ಬರು ಹಣ ಹೂಡಲು ಮುಂದೆ ಬಂದಿದ್ದರಂತೆ. ಆದರೆ, ಕೆಲ ದಿನಗಳ ನಂತರ ಅವರು ಪ್ರೊಡಕ್ಷನ್‌ನಿಂದ ಹಿಂದೆ ಸರಿದ ಪರಿಣಾಮ ರೋಹಿತ್‌ ಸ್ನೇಹಿತರು ಮತ್ತು ಚಿತ್ರತಂಡದ ಸದಸ್ಯರು ಸೇರಿಕೊಂಡು ಸಿನಿಮಾವನ್ನು ಕಂಪ್ಲೀಟ್‌ ಮಾಡಿದ್ದಾರೆ.
.
ಗಾಂಧಾರಿ ಧಾರಾವಾಹಿ ಖ್ಯಾತಿಯ ಕಾವ್ಯಾ ಗೌಡ ಈ ಚಿತ್ರದ ನಾಯಕಿ. ಇದು ಅವರ ಪ್ರಥಮ ಚಿತ್ರ. ಆದರೆ ಉತ್ತಮ ಅಭಿನಯವನ್ನು ಅವರು ನೀಡಿದ್ದಾರಂತೆ.
ಮೋಹನ್‌ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ಬಿ. ಅವಿನಾಶ್‌ ಸಂಗೀತ ಸಂಯೋಜಿಸಿದ್ದಾರೆ. ಸಾಧುಕೋಕಿಲ, ಶಶಿಕುಮಾರ್‌, ವಿಜಯ್‌ ಚೆಂಡೂರ್‌ ತಾರಾಗಣದಲ್ಲಿದ್ದಾರೆ.
.
ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಥ ನಾಯಕ್ ಎಂಬ ಇಬ್ಬರು ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
.
#Buckaasuura #Cineloka
.

ವಿನಯ್‌ ಕೃಷ್ಣ ನಿರ್ದೇಶನದ ಸೀಜರ್‌ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಜತೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟಿಸಿದ್ದು, ರವಿಚಂದ್ರನ್‌ಗಾಗಿ ಚಿತ್ರತಂಡ ವಿಶಿಷ್ಟ ಕಾರನ್ನು ಡಿಸೈನ್‌ ಮಾಡಿದೆ.

 

ಈ ಸಿನಿಮಾದಲ್ಲಿ ರವಿಚಂದ್ರನ್‌ ಕಾರುಗಳಿಗೆ ಫೈನಾನ್ಸ್‌ ಮಾಡುವ ಫೈನಾನ್ಸಿಯರ್‌ ಪಾತ್ರದಲ್ಲಿ ನಟಿಸಿದ್ದು, ಇವರ ಆಫೀಸ್‌ನ ಟೇಬಲ್‌ ಕೂಡಾ ಕಾರಿನ ಆಕಾರದಲ್ಲಿಯೇ ತಯಾರಿಸಲಾಗಿದೆ.

 

ಅಲ್ಲದೇ, ರವಿಚಂದ್ರನ್‌ ಅಭಿನಯದ ಏಕಾಂಗಿ ಚಿತ್ರದಲ್ಲಿ ಒಂದು ಕಪ್ಪು ಸ್ಯಾಂಟ್ರೋ ಕಾರನ್ನು ಬಳಸಿದ್ದರು. ಸೀಜರ್‌ನಲ್ಲಿ ಅದೇ ರೀತಿಯ ಮತ್ತೊಂದು ಕಾರನ್ನು ಇವರು ಸಿನಿಮಾ ಪೂರ್ತಿ ಬಳಸಿದ್ದಾದೆ. ತ್ರಿವಿಕ್ರಮ… ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರವಿಚಂದ್ರನ್‌ ಬಳಸುವ ಕಾರ್‌ ನಂಬರ್‌ ಪ್ಲೇಟ್‌ 'ಕೆಎ 01 ವೈ ಜೆಡ್‌' ಅಂತಿದೆ. ಅಲ್ಲದೇ, ಕಾರಿನ ಮುಂದೆ ಕ್ರೇಜಿ ಸ್ಟಾರ್‌, ಕಾರಿನ ಗೇರ್‌ನ್ನ್ನು ತಲೆಬುರುಡೆಯಲ್ಲಿ ವಿನ್ಯಾಸ ಮಾಡಲಾಗಿದೆ. ಕಾರಿನ ಹಿಂದೆ ಒಂದು ಸಾಲು- ಇನ್‌ಜೂರ್ಡ್‌ ಬೈ ಮಾಫಿಯಾ ಎಂದು ಬರೆಸಲಾಗಿದೆ.

ravi

 

ಇಡೀ ಸಿನಿಮಾ ಕಾರ್‌ ಮಾಫಿಯಾ ಸುತ್ತ ಸಾಗುತ್ತದೆ. ಪಾರುಲ್‌ ಯಾದವ್‌ ಈ ಚಿತ್ರದ ನಾಕಿಯಾಗಿದ್ದಾರೆ.
ಏಪ್ರಿಲ್ 13 ರಂದು ಚಿತ್ರ ತೆರೆಗೆ ಬರುತ್ತಿದೆ.

ಆರ್‌ ಜೆ ರೋಹಿತ್ ಮತ್ತು ರವಿಚಂದ್ರನ್‌ ನಟನೆಯ ಬಕಾಸುರ ಚಿತ್ರ ಇದೇ 27ಕ್ಕೆ ಬಿಡುಗಡೆಯಾಗಲಿದೆ.
ಕರ್ವ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ನವನೀತ್‌ 'ಬಕಾಸುರ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ದುಡ್ಡಿನ ಹಿಂದೆ ಹೋಗುವ ಮನುಷ್ಯನಿಗೆ ಯಾವ ರೀತಿಯ ತೊಂದರೆಗಳು ಬರುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ. ನಟ ರೋಹಿತ್‌ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
.
ವಿಶೇಷ ಎಂದರೆ ರವಿಚಂದ್ರನ್‌ ಈ ಚಿತ್ರದಲ್ಲಿ ನೆಗೆಟಿವ್ ಶೇಡ್‌ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಗಾಂಧಾರಿ ಸೀರಿಯಲ್‌ ಖ್ಯಾತಿಯ ಕಾವ್ಯ ಗೌಡ ಈ ಚಿತ್ರದ ನಾಯಕಿಯಾಗಿದ್ದಾರೆ.
.
ದುಡ್ಡು ಮನುಷ್ಯನ ಅಲ್ಟಿಮೇಟ್‌ ಗುರಿಯಾಗಬಾರದು, ದುಡ್ಡಿನ ಹಿಂದೆ ಹೋದರೆ ಸಮಾಜದಲ್ಲಿ, ಮನೆಯಲ್ಲಿ ಎಲ್ಲಿಯೂ ಬೆಲೆ ಸಿಗುವುದಿಲ್ಲ ಎಂಬ ಅಂಶವನ್ನು ಕಮರ್ಷಿಯಲ್‌ ಅಂಶಗಳನ್ನು ಇಟ್ಟುಕೊಂಡು ಹೇಳಲಾಗಿದೆ.
 
ಜಯಣ್ಣ ಫಿಲಂಸ್ ವಿತರಣೆ ಮೂಲಕ ಚಿತ್ರ ತೆರೆಗೆ ಬರುತ್ತಿದೆ.
.
#Buckaasuura #Cineloka

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ’ಸಾಹೇಬ’ ಚಿತ್ರ ಗಣೇಶ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಇದು ಮನೋರಂಜನ್ ಅವರ ಚೊಚ್ಚಲ ಚಿತ್ರವಾಗಿದೆ.


ಚಿತ್ರತಂಡ ಜೂನ್ ನಲ್ಲಿ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿತ್ತು, ಚಿತ್ರದಲ್ಲಿ ಆನೆಯನ್ನು ಬಳಸಿಕೊಂಡಿದ್ದು, ಪ್ರಾಣಿ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಸಿಗಲು ವಿಳಂಬವಾಗಿದ್ದಕ್ಕೆ ಚಿತ್ರ ಬಿಡುಗಡೆಗೆ ತಡವಾಯಿತು. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿಯು  ಯು/ಎ ಸರ್ಟಿಫಿಕೇಟ್ ನೀಡಿ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದೆ.
ಈ ಚಿತ್ರದಲ್ಲಿ ವಿ. ಹರಿಕ್ರಷ್ಣ ಸಂಗೀತವಿದ್ದು, ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ . ನಿರ್ದೇಶಕ ಭರತ್ ’ಕಾಂತಿ’ ಚಿತ್ರದ ನಂತರ ’ಸಾಹೇಬ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.     
ಮುಗುಳುನಗೆ, ಭರ್ಜರಿ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು, ಇದೀಗ ಗಣೇಶ ಹಬ್ಬಕ್ಕೆ ಎಲ್ಲಾ ವಿಘ್ನಗಳನ್ನು ನಿವಾರಿಸಿ ’ಸಾಹೇಬ’ ಇದೇ 25 ರಂದು ತೆರೆಗೆ ಬರಲು ಸಿದ್ಧವಾಗಿದೆ.

ಕನ್ನಡದಲ್ಲಿ ಈಗಾಗಲೇ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದ್ದು ಸ್ಟಾರ್ ನಟರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಕನ್ನಡ ದಲ್ಲಿ ಅಂತಹ ಪ್ರಯತ್ನ ಮಾಡಲಾಗಿದೆ.

ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ರಾಧಿಕಾ ಕುಮಾರಸ್ವಾಮಿ, ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದ ಬಹುನಿರೀಕ್ಷಿತ ಹಾಗೂ ತಮ್ಮ 50 ನೇ ಚಿತ್ರವಾಗಿರುವ ಕುರುಕ್ಶೇತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top