IB anigif

Ayugya Gif

adweb

udgharsha

 

ತಾಯಿಗೆ ತಕ್ಕ ಮಗ ಸಿನಿಮಾದ ಬಿಡುಗಡೆಯ ಬಿಝಿಯಲ್ಲಿರುವ ನಿರ್ದೇಶಕ ಶಶಾಂಕ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಿರ್ದೇಶನ ಮಾಡಲಿದ್ದಾರೆ.
.
ಈ ಹಿಂದೆ ಶಶಾಂಕ್‌ ಉಪೇಂದ್ರ ಜತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಉಪ್ಪಿ ಪ್ರಜಾಕೀಯದಲ್ಲಿ ಬಿಝಿಯಾದ ನಂತರ ಶಶಾಂಕ್‌ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಮೊನ್ನೆ ತಾಯಿಗೆ ತಕ್ಕ ಮಗ ಸುದ್ದಿಗೋಷ್ಠಿಯಲ್ಲಿ ಶಶಾಂಕ್‌ ಮತ್ತು ಉಪೇಂದ್ರ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು.
.
ಶಶಾಂಕ್‌ ಕನ್ನಡದ ಸೂಕ್ಷ್ಮ ಸಂವೇದನೆ ಉಳ್ಳ ನಿರ್ದೇಶಕ ಎಂದು ಹೆಸರು ಮಾಡಿದವರು, ಉಪ್ಪಿ ಡಿಫ್ರೆಂಟ್‌ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಈಗ ಇಬ್ಬರೂ ಒಂದಾಗುತ್ತಿದ್ದಾರೆ. ಇಬ್ಬರ ಸಿನಿಮಾ ಹೇಗಿರುತ್ತದೋ ಕಾದು ನೋಡಬೇಕಿದೆ.

 

ಬೆಂಗಳೂರಿನ ಹೆಸರುಘಟ್ಟ ಆಚಾರ್ಯ ಕಾಲೇಜಿನಲ್ಲಿ ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡಿ ಸಿದ್ದೇಶ್ವರ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಆಭಿನಯದ ಬಹುನಿರೀಕ್ಷೆಯ ಐ ಲವ್ ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಮಾರ್ಗದರ್ಶನದಲ್ಲಿ ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್‍ನ ರೋಚಕ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.
.
ಅದ್ದೂರಿ ವೆಚ್ಚದ ಈ ಸಾಹಸ ದೃಶ್ಯಕ್ಕಾಗಿ ಕಾಸ್ಟ್ಲೀ ಕಾರುಗಳನ್ನು ಬಳಸುತ್ತಿರುವ ಸ್ಟಾರ್ ನಿರ್ದೇಶಕ ಆರ್.ಚಂದ್ರು ಹಲವಾರು ಜನ ಕಲಾವಿದರನ್ನು ಈ ಭರ್ಜರಿ ಸಾಹಸ ದೃಶ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಚಿತ್ರೀಕರಣ ಶುರುವಾದಾಗಿನಿಂದಲೂ ತನ್ನ ವೈಶಿಷ್ಟ್ಯಗಳಿಂದ ಗಮನ ಸೆಳೆದಿರುವ ಐ ಲವ್ ಯೂ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಡಾ.ರವಿವರ್ಮ , ವಿನೋದ್ , ಹಾಗೂ ತಮಿಳಿನ ಫೇಮಸ್ ಸ್ಟಂಟ್ ಮಾಸ್ಟರ್ ಗಣೇಶ್ ಸಾಹಸ ಸಂಯೋಜಿಸಿರೋದು ವಿಶೇಷ.
.
ಇನ್ನು ಬಹು ಬಾಷಾ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಐ ಲವ್ ಯೂ ಗಾಗಿ ನೃತ್ಯ ನಿರ್ದೇಶನ ಮಾಡಿರೋದು ಈ ಚಿತ್ರದ ಮತ್ತೊಂದು ವಿಶೇಷವಾಗಿದೆ

ಕನ್ನಡದಲ್ಲಿ ಈಗಾಗಲೇ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದ್ದು ಸ್ಟಾರ್ ನಟರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಕನ್ನಡ ದಲ್ಲಿ ಅಂತಹ ಪ್ರಯತ್ನ ಮಾಡಲಾಗಿದೆ.

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top