chamak running success

anigif

adweb

raju

 
'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟಿಸುತ್ತಾರೆ, ಆದರೆ ಯಾವ ಲುಕ್‌ನಲ್ಲಿ ಇರುತ್ತಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ, ಸೋಮವಾರ ರಾತ್ರಿ ನೆಲಮಂಗಲದ ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಸುದೀಪ್‌ ಎಂಟ್ರೀ ಸೀನ್‌ ಚಿತ್ರೀಕರಣ ಮಾಡಲಾಗಿದ್ದು, ಸುದೀಪ್‌ ಬಿಳಿ ಶರ್ಟ್‌ ಮತ್ತು ಬಿಳಿ ಕಚ್ಚೆ ಪಂಚೆ ತೊಟ್ಟು ಎಂಟ್ರಿ ಕೊಟ್ಟಿದ್ದಾರೆ.

ಮೊದಲ ದೃಶ್ಯದಲ್ಲೇ ಕಬ್ಬಡಿ ಮೂಲಕ ಸುದೀಪ್‌ ಅವರನ್ನು ಇಂಟ್ರಡ್ಯೂಸ್‌ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಸುದೀಪ್‌ ಯಂಗ್‌ ಅಂಬರೀಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಂಬರೀಷ್‌ ಅವರ ಹೈಟ್‌ ಒಂದು ಮ್ಯಾಚ್‌ ಆಗುವುದಿಲ್ಲ, ಅದಕ್ಕಾಗಿ ಸಿಜಿ ವರ್ಕ್‌ ಸಹ ಮಾಡಲಾಗುತ್ತದೆ.

ಅಂಬರೀಷ್‌ಗೆ ಸುಹಾಸಿನಿ ಜೋಡಿಯಾದರೆ, ಸುದೀಪ್‌ಗೆ ಶ್ರುತಿ ಹರಿಹರನ್‌ ಜೋಡಿಯಾಗಿದ್ದಾರೆ. ಶ್ರುತಿ ಹರಿಹರನ್‌ ಇಲ್ಲಿ ಯಂಗ್‌ ಸುಹಾಸಿನಿಯಾಗಲಿದ್ದಾರೆ. ಕಿಚ್ಚ ಕ್ರಿಯೇಶನ್ಸ್‌ ನಡಿ ಜಾಕ್‌ ಮಂಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗುರುದತ್‌ ಗಾಣಿಗ ಇದರ ನಿರ್ದೇಶಕರು. ಒಟ್ಟಿನಲ್ಲಿ 'ಅಂಬಿ..' ಅಖಾಡದಲ್ಲಿ ಕಿಚ್ಚ ಸೋಮವಾರದಿಂದ ಕಬ್ಬಡಿ ಆಡುತ್ತಿದ್ದಾರೆ.

#AmbiNingVayassaitho #Cineloka #AbhinayaChakravarthy #KicchaSudeep

 

anigif sam

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top