johny running

Running succ

adweb

anigif seizer

"ಅಸತೋಮ ಸದ್ಗಮಯ" ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಸಿಕ್ಕಿರುವ ರೆಸ್ಪಾನ್ಸ್‍ಗೆ ಚಿತ್ರತಂಡ ಈಗಾಗಲೆ ಫುಲ್ ಖುಷಿಯಾಗಿದೆ.
.
ಟ್ರೇಲರ್ ನೋಡುವಾಗ ಇದೊಂದು ಎಜುಕೇಶನ್ ಸಿಸ್ಟಂ ಬಗ್ಗೆ ಮಾಡಿರುವಂತಹ ಸಿನೆಮಾ, ಹೆತ್ತವರು ಮತ್ತು ಮಕ್ಕಳ ಸಂಬಂದದ ಬಗ್ಗೆ, ಮುಚ್ಚುತ್ತಿರುವ ಸರಕಾರಿ ಶಾಲೆಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂಬುದು ತಿಳಿಯುತ್ತದೆ. ಜೊತೆಗೆ ಹಾರರ್, ಸಸ್ಪೆನ್ಸ್, ರೊಮ್ಯಾನ್ಸ್ ಕೂಡ ಇರುವುದರಿಂದ ಇದು ಬರೀ ಮೆಸೇಜ್ ಸಿನೆಮಾವಲ್ಲದೆ ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್‍ನಿಂದ ಕೂಡಿರುವಂತಹ ಸಿನೆಮಾ ಎಂಬುದು ತಿಳಿಯುತ್ತದೆ.
.
ಟ್ರೇಲರ್‍ಗೆ ಕನ್ನಡ ಚಿತ್ರರಂಗದ ತಾರೆಯರಾದ, ಶರಣ್, ಚಂದನ್ ಶೆಟ್ಟಿ, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್, ಪ್ರಥಮ್ ಮುಂತಾದವರು ಉತ್ತಮ ಪ್ರತಿಕ್ರೀಯಯನ್ನ ನೀಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. "ಅಸತೋಮ ಸದ್ಗಮಯ" ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಿಧಾನವಾಗಿ ಕನ್ನಡ ಸಂಗೀತ ಪ್ರೇಮಿಗಳನ್ನ ಆಕರ್ಷಿಸುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಉತ್ತಮವಾಗಿದ್ದು, ವಿಜಯ್ ಪ್ರಕಾಶ್ ಹಾಡಿರುವಂತಹ ಸ್ಕ್ರಿಪ್ಟ್ ಬರೆದೋನು ಹಾಡು ಹಾಗೂ ಓ ಸಂಜೆ ಹಾಡಿನ ಬಗ್ಗೆ ಬಹಳಷ್ಟು ಮಂದಿ ಸ್ವತಹ ಫೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
.
ರಾಧಿಕಾ ಚೇತನ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಐಕೇರ್ ಬ್ಯಾನರಿನಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದು, ರಾಜೇಶ್ ವೇಣೂರ್ ನಿರ್ದೇಶಿಸುತ್ತಿದ್ದಾರೆ.
.

 

ಟ್ರೇಲರ್‌ ಮೂಲಕ ಗಮನ ಸೆಳೆದಿದ್ದ ಅಸತೋಮ ಸದ್ಗಮಯ ಸಿನಿಮಾದ ಹಾಡುಗಳು ಇತ್ತೀಚೆಗೆ ಚಂದನ್ ಶೆಟ್ಟಿ ಅವರು ಆಡಿಯೋ ಬಿಡುಗಡೆ ಮಾಡಿದರು.

 


ಈ ಚಿತ್ರವನ್ನು ರಾಜೇಶ್‌ ವೇಣೂರು ನಿರ್ದೇಶನದ ಈ ಚಿತ್ರದಲ್ಲಿ ಹಾರರ್‌ ಅಂಶಗಳ ಜತೆ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಸಹ ಇದೆಯಂತೆ. ಈ ಚಿತ್ರವನ್ನು ಮಕ್ಕಳು, ಹೆತ್ತವರು ನೋಡಲೇಬೇಕಾಗಿದೆ. ಬುದ್ದಿವಂತಿಕೆ-ಭಾವನೆಗಳು ಎರಡನ್ನು ಚೆನ್ನಾಗಿ ತೋರಿಸಲಾಗಿದೆ. ಪ್ರಸಕ್ತ ತಲೆಮಾರಿನವರು ಇಂಟಲಿಜೆನ್ಸ್‌ಗೆ ಬೆಲೆ ಕೊಡುವಂತೆ, ಕುಟುಂಬದ ಕಡೆ ಗಮನ ಹರಿಸುವುದಿಲ್ಲ. ಆದರೆ ಕುಟುಂಬ ಬಹಳ ಮುಖ್ಯ ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಿದ್ದಾರೆ.

 

 

ಈ ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ದುಬೈನನಲ್ಲಿ ಬಿಡುಗಡೆ ಮಾಡಲಾಗಿತ್ತು..ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ದುಬೈನಲ್ಲಿರುವ ದೀಪಕ್‌,ಪ್ರದೀಪ್‌ ಹಾಸ್ಯ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳು, ಯುಎಸ್‌ಎ, ಯುಕೆ, ಸಿಂಗಪೂರ್‌ನಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡಲಾಗುವುದು. ಕರ್ನಾಟಕದಲ್ಲಿ ಏಪ್ರಿಲ್‌ ಕೊನೆವಾರದಲ್ಲಿ ತೆರೆಕಾಣಿಸಲು ಯೋಜನೆ ಹಾಕಲಾಗಿದೆ.

 

 

ಈ ಚಿತ್ರದಲ್ಲಿ ರಾಧಿಕಾ ಚೇತನ್‌ ನಾಯಕಿಯಾಗಿದ್ದಾರೆ. ಇವರ ಜತೆ ಬಿಗ್‌ಬಾಸ್‌ ಖ್ಯಾತಿಯ ಲಾಸ್ಯ ನಾಗರಾಜ್‌ ವಿದೇಶದ ವ್ಯಾಮೋಹ ಇಟ್ಟುಕೊಂಡಿರುವ ಹುಡುಗಿಯಾಗಿ ನಟಿಸಿದ್ದಾರೆ. ಹಾರರ್‌, ಮೆಸೆಜ್‌ ಎಲ್ಲವೂ ಈ ಚಿತ್ರದಲ್ಲಿದೆ. ಇನ್ನು ಬಿಡುಗಡೆಯಾಗಿರುವ ಹಾಡುಗಳು ಎಲ್ಲರಿಗೂ ಇಷ್ಟವಾಗುತ್ತಿವೆ.

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top