DKD Gif

Ayugya Gif

adweb

Raambo 2 gIF

 
 ಸತೀಶ್‌ ನೀನಾಸಂ ಮತ್ತು ರಚಿತಾರಾಮ್‌ ನಟನೆಯ ಅಯೋಗ್ಯ ಸಿನಿಮಾ ಶುಕ್ರವಾರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರು ದಿನಗಳಳೊಗೆ 4.18 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
.
 
ಪಕ್ಕಾ ಮಂಡ್ಯ ಭಾಷೆಯಲ್ಲಿ ತಯಾರಾಗಿದ್ದ ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್‌ ಮಾಡುತ್ತಿದ್ದು, ದಿನೇ ದಿನೇ ಪ್ರದರ್ಶನಗಳು ಹೌಸ್‌ಫುಲ್‌ ಆಗುತ್ತಿವೆ. ಭಾನುವಾರ ಮತ್ತು ಸೋಮವಾರ ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದು, ಅಲ್ಲೆಲ್ಲಾ ಜನ ಜಂಗುಳಿ ಹೆಚ್ಚಾಗಿ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.
 
.
ಮಹೇಶ್‌ಕುಮಾರ್‌ ಚೊಚ್ಚಲ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾಗಲು ನಮ್ಮ ರಾಜಕಾರಣಿಗಳು ಏನೇನು ಮಾಡುತ್ತಾರೆ ಎಂಬ ಅಂಶವಿದೆ. ಬಹಳ ದಿನಗಳ ನಂತರ ನೀನಾಸಂ ಸತೀಶ್‌ ನಟನೆಯ ಸಿನಿಮಾವೊಂದಕ್ಕೆ ಈ ಮಟ್ಟದ ಕ್ರೇಜ್‌ ಕ್ರಿಯೇಟ್‌ ಆಗಿರುವುದರಿಂದ ಸತೀಶ್‌ ಸಹ ಖುಷಿಯಾಗಿದ್ದಾರೆ. 
.
#Ayogya #Cineloka 

 

ಮಹೇಶ್‌ಕುಮಾರ್‌ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಪಕ್ಕಾ ಮಂಡ್ಯದ ಹುಡುಗಿಯಾಗಿ ನಟಿಸಿದ್ದಾರೆ. ಈ ರೀತಿ ನಟಿಸಲು ಅವರು, ಮಂಡ್ಯ ಭಾಗದ ಹುಡುಗಿಯರ ಸಹಾಯ ಪಡೆದುಕೊಂಡಿದ್ದಾರಂತೆ.
.
‘ನಾನು ಇಷ್ಟು ದಿನ ಬರೀ ಪಟ್ಟಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇ, ಇದೇ ಮೊದಲ ಬಾರಿಗೆ ಮಂಡ್ಯದ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮಂಡ್ಯದ ಭಾಷೆಯ ಸೊಗಡು ನನಗೆ ಆರಂಭದಲ್ಲಿ ಕಷ್ಟವಾಯಿತು. ಆದರೆ ಸತೀಶ್‌ ಮತ್ತು ನಿರ್ದೇಶಕ ಮಹೇಶ್‌ ನನಗೆ ಸೊಗಡನ್ನು ಕಲಿಸುವಲ್ಲಿ ಸಹಾಯ ಮಾಡಿದರು. ಅದರ ಜತೆಗೆ ಸಿನಿಮಾ ಮಂಡ್ಯದ ಸುತ್ತಮುತ್ತ ಶೂಟಿಂಗ್‌ ನಡೆದಿದ್ದು, ಅಲ್ಲಿನ ಕೆಲ ಹುಡುಗಿಯರು ನನಗೆ ಸಿಕ್ಕಾಪಟ್ಟೆ ಸಹಾಯ ಮಾಡಿದರು. ಆ ಭಾಷೆಯನ್ನು ಮಾತನಾಡುವುದು ಹೇಗೆ, ಅವರ ಟಿಪಿಕಲ್‌ ಡ್ರೆಸ್‌ ಸ್ಟೈಲ್‌ ಎಲ್ಲದರಲ್ಲು ಮಂಡ್ಯದ ಹುಡುಗಿಯರು ಹೆಲ್ಪ್‌ ಮಾಡಿದರು,’ಎಂದು ಹೇಳುತ್ತಾರೆ ರಚಿತಾರಾಮ್‌.
.
ಅಯೋಗ್ಯ ಸಿನಿಮಾವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ ಆರ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದಾರೆ. ನೀನಾಸಂ ಸತೀಶ್‌ ಮತ್ತು ರಚಿತಾರ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದಾರೆ. ಚಿತ್ರ ಈ ವಾರ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
.
#Ayogya #Cineloka

ನೀನಾಸಂ ಸತೀಶ್‌ ನಟನೆಯ 'ಆಯೋಗ್ಯ' ಚಿತ್ರದ 'ಏನಮ್ಮಿ' ಹಾಡು 10 ದಿನದಲ್ಲಿ, 17 ಲಕ್ಷ ಮಂದಿಯಿಂದ ವೀಕ್ಷಣೆಗೊಳಪಟ್ಟಿದ್ದು, 20 ಲಕ್ಷದತ್ತ ಸಾಗುತ್ತಿದೆ.

.

ತನ್ನ ಮೇಕಿಂಗ್‌ ಮತ್ತು ಸ್ಟಿಲ್‌ಗಳಿಂದಾಗಿ ಸಿಕ್ಕಾಪಟ್ಟೆ ಗಮನ ಸೆಳೆದಿದ್ದ ಅಯೋಗ್ಯ ಸಿನಿಮಾದ ಈ ಹಾಡನ್ನು ಇತ್ತೀಚೆಗೆ ನಟ ಧ್ರುವ ಸರ್ಜಾ ರಿಲೀಸ್‌ ಮಾಡಿದ್ದರು. ಅರ್ಜುನ್ ಜನ್ಯ ಅವರ ಸಂಗೀತಕ್ಕೆ ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್‌ ಸಾಹಿತ್ಯ ರಚಿಸಿದ್ದಾರೆ.

.

ಏನಮ್ಮಿ ಏನಮ್ಮಿ ಡಬ್ಸ್ಮ್ಯಾಶ್ ನಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಕನ್ನಡ ಹಾಡು. ಅನೇಕ ಹುಡುಗಿಯರು ಈ ಹಾಡಿಗೆ ಡಬ್ ಸ್ಮ್ಯಾಶ್ ಮಾಡಿ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡುವ ರೇಂಜ್‌ಗೆ ಹಾಡು ಹಿಟ್ ಆಗಿದೆ.

.

ಈ ಹಾಡು ಸಂಪೂರ್ಣ ಗ್ರಾಮ್ಯ ಭಾಷೆಯಲ್ಲಿದ್ದು, ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿತ್ತು. ಯೂಟ್ಯೂಬ್‌ನಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿಯೂ ಇದೆ. ಈ ಹಾಡಿನಲ್ಲಿ ರಚಿತಾ ಮತ್ತು ಸತೀಶ್‌ ಇಬ್ಬರೂ ಬಹಳ ಸುಂದರವಾಗಿ ಕಾಣುತ್ತಾರೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಈ ಚಿತ್ರವನ್ನು ಟಿ ಆರ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದಾರೆ.

.

ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ

ಯೋಗರಾಜ್‌ಭಟ್ಟರ ಶಿಷ್ಯ ಮಹೇಶಕುಮಾರ್‌ ನಿರ್ದೇಶನದ ಅಯೋಗ್ಯ ಚಿತ್ರ ಮಂಡ್ಯ ಸುತ್ತಮುತ್ತ ಶೂಟಿಂಗ್‌ ಕಂಪ್ಲೀಟ್‌ ಮಾಡಿದೆ.ಸತತವಾಗಿ 38 ದಿನಗಳ ಕಾಲ ಚಿತ್ರೀಕರಣ ನಡೆಸಿದ ನಿರ್ದೇಶಕ ಮಹೇಶ್‌, ಹಾಡುಗಳು ಮತ್ತು ನಾಯಕಿಯ ಎಂಟ್ರಿ ಸೀನ್‌ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.

 

ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯನ ನಡುವೆ ನಡೆಯುವ ಜಿದ್ದಾಜಿದ್ದಿಯನ್ನು ಕಾಮಿಡಿಯಾಗಿ ತೋರಿಸಲು ಮಹೇಶ್‌ ಈ ಕಥೆಯನ್ನು ಹೆಣೆದಿದ್ದಾರೆ. ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಈ ಚಿತ್ರಕ್ಕೆ ನಾಯಕ ನಾಯಕಿ, ರವಿಶಂಕರ್‌, ಶಿವರಾಜ್‌ ಕೆ ಆರ್‌ ಪೇಟೆ, ಸಾಧುಕೋಕಿಲಾ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ.

 

 

ಚಮಕ್‌ ಚಿತ್ರವನ್ನು ನಿರ್ಮಾಣ ಮಾಡಿದ್ದ ಟಿ ಆರ್‌ ಚಂದ್ರಶೇಖರ್‌ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣದಲ್ಲಿ ತೆಗೆದ ಕೆಲ ಫೋಟೋಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸದ್ದು ಮಾಡಿದ್ದವು.

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top