nata

ttm

adweb

udgharsha

ಚಿತ್ರ : ಬಜಾರ್
ನಿರ್ಮಾಣ : ತಿಮ್ಮೇಗೌಡ
ನಿರ್ದೇಶಕ : ಸುನಿ
ಸಂಗೀತ : ರವಿ ಬಸ್ರೂರು
ಕ್ಯಾಮೆರಾ : ಸಂತೋಷ್ ರೈ ಪಾತಾಜೆ
ತಾರಾಗಣ : ಧನ್‌ವೀರ್, ಅದಿತಿ ಪ್ರಭುದೇವ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಚೇತನ್ ಚಂದ್ರ, ಧರ್ಮೇಂದ್ರ ಅರಸ್

.

ಪಾರಿವಾಳ ರೇಸ್‌ ಜಗತ್ತಿನ ಪರಿಚಯ ಮಾಡಿಸುವ ಬಜಾರ್‌ :

 

ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ತರಹದ ರೌಡಿಸಂ ಸಿನಿಮಾಗಳು ಬಂದಿವೆ. ಆದರೆ ಪಾರಿವಾಳ ರೇಸ್‌ಗೆ ಸಂಬಂಧಿಸಿದ್ದು ಇರಲಿಲ್ಲ. ಅದರ ಕೊರತೆಯನ್ನು ಬಜಾರ್‌ ನೀಗಿಸಿದೆ.

ಇಲ್ಲಿಯವರೆಗೂ ತರಾವರಿ ಲವ್‌ ಸ್ಟೋರಿಗಳ ಮೂಲಕ ಗಮನ ಸೆಳೆದಿದ್ದ ಸಿಂಪಲ್‌ ಸುನಿ ಮೊದಲ ಬಾರಿಗೆ ಇಂತಹದ್ದೊಂದು ವಿಶೇಷ ಕಥೆಯ ಮೂಲಕ ಮಾಸ್‌ ಸಿನಿಮಾ ಮಾಡಿದ್ದಾರೆ.

.

ನಿರ್ದೇಶಕ ಸುನಿ ತಮ್ಮ ಪಾರಿವಾಳ ಹಾರಾಟ ಸ್ಪರ್ಧೆ ಮತ್ತು ಅದರ ಹಿಂದಿನ ಬೆಟ್ಟಿಂಗ್ ದಂಧೆಯನ್ನು ತೆರೆ ಮೇಲೆ ತಂದು ಎಲ್ಲ ವರ್ಗದವರಿಗೂ ತಲುಪಿಸವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಕ್ಕೆ ಅವರ ಚಿತ್ರಕಥೆ ಸಾಥ್‌ ನೀಡಿದೆ.

.

ಈ ಸಿನಿಮಾದಲ್ಲಿ ಕ್ಯೂಟ್‌ ಲವ್‌ಸ್ಟೋರಿಯಿದೆ, ಕ್ಲಾಸ್‌ ಜನಗಳ ಬದುಕಿದೆ. ಬಿ ಮತ್ತು ಸಿ ಆಡಿಯನ್ಸ್ ಇಷ್ಟಪಡುವ ಖಡಕ್‌ ಡೈಲಾಗ್‌, ಮಾಸ್‌ ಫೈಟ್ಸ್‌, ಕಿವಿಗೆ ಕಿಕ್‌ ಕೊಡುವ ಹಿನ್ನೆಲೆ ಸಂಗೀತ ಎಲ್ಲವೂ ಇದೆ. ಇವೆಲ್ಲವೂ ಇರುವ ಕಾರಣಕ್ಕೆ ಬಹುಶಃ ಸುನಿ ಇದಕ್ಕೆ ಬಜಾರ್‌ ಎಂದು ಹೆಸರಿಟ್ಟಿರಬಹುದು.

.

ಸುನಿ ಮೊದಲ ಬಾರಿಗೆ ರೌಡಿಸಂ ಎಲಿಮೆಂಟ್‌ ಇರುವ ಮಾಸ್‌ ಸಿನಿಮಾ ಮಾಡಿದ್ದಾರೆ, ಆದರೆ ತಮ್ಮ ಸ್ಟೈಲ್‌ನ್ನು ಇಲ್ಲಿಯೂ ಸೂಕ್ಷ್ಮವಾಗಿ ಮುಂದುವರೆಸಿದ್ದಾರೆ.ಚಿತ್ರದ ವೇಗ ಸ್ವಲ್ಪ ಚುರುಕಾಗಿರಬೇಕಿತ್ತು, ಚಿತ್ರದ ಸಬ್ಜೆಕ್ಟ್ ಹೆವಿ ಆಗಿರೋದ್ರಿಂದ ಪಾತ್ರವರ್ಗಕ್ಕೆ ನುರಿತ ಕಲಾವಿದರ ಅವಶ್ಯಕತೆ ಇತ್ತು. ಉದಾಹರಣೆಗೆ ಪೋಲೀಸ್ ಅಧಿಕಾರಿ ಪಾತ್ರಕ್ಕೆ ಮತ್ತಷ್ಟು ಖಡಕ್ ನಟನ ಅವಶ್ಯಕತೆಯಿತ್ತು. ಸಾಧು ಕೋಕಿಲ ಅವರದು ಕಾಮಿಡಿ ಪಾತ್ರವೋ, ಸೀರಿಯಸ್ ಪಾತ್ರವೋ ತಿಳಿಯುವುದಿಲ್ಲ. ಯಾಕಂದ್ರೆ ಚಿತ್ರ ಮುಗಿದ ಮೇಲೆ ಸಾಧು ಅವರ ನೆನಪಿರೋದೇ ಇಲ್ಲ.

.

ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟಿರುವ ಧನ್ವೀರ್‌ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ.ತಮ್ಮ ಹೈಟು ವೈಟು, ಧ್ವನಿ, ನಟನೆ ಎಲ್ಲದರಲ್ಲಿಯೂ ಅವರು ಇಷ್ಟವಾಗುತ್ತಾರೆ. ಶರತ್‌ ಲೋಹಿತಾಶ್ವ ಎಂದಿನಂತೆ ತಮ್ಮ ಪಾತ್ರದಲ್ಲಿ ಸಿಕ್ಸರ್‌ ಬಾರಿಸಿದ್ದಾರೆ. ನಾಯಕಿ ಅದಿತಿ ಸಹ ಕ್ಯೂಟ್‌ ಆಗಿ ನಟಿಸಿದ್ದಾರೆ. ಕುಡುಕ ತಂದೆಯಾಗಿ ಧರ್ಮೇಂದ್ರ ಅರಸ್ ಇಷ್ಟವಾಗುತ್ತಾರೆ. ಚೇತನ್ ಚಂದ್ರ, ಸಾಧು ಕೋಕಿಲಾ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

.

ಸಂಗೀತ ಮತ್ತು ಸಿನಿಮಾಟೋಗ್ರಫಿ ಸಿನಿಮಾದ ಪ್ಲಸ್‌ಪಾಯಿಂಟ್‌ನಲ್ಲಿ ತನ್ನ ಅಗ್ರಗಣ್ಯ ಸ್ಥಾನ ಗಳಿಸುತ್ತದೆ. ಇದಕ್ಕೆ ಕಾರಣರಾದ ರವಿ ಬಸ್ರೂರು, ಸಂತೋಷ್‌ ರೈ ಪಾತಾಜೆ ಅಭಿನಂದಾರ್ಹರು.

ಒಟ್ಟಿನಲ್ಲಿ ಸಿನಿಮಾ ಮಾಸ್‌ ಮತ್ತು ಕ್ಲಾಸ್‌ ಪ್ರೇಕ್ಷಕರಿಬ್ಬರನ್ನು ಸೆಳೆಯುವದರಲ್ಲಿ ಅನುಮಾನವಿಲ್ಲ.

.

ರೇಟಿಂಗ್ : 3.5/5

ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಮಕ್‌ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಸುನಿ ಕೈಗೆತ್ತಿಕೊಂಡ ಚಿತ್ರ 'ಬಜಾರ್‌'. ಈ ಸಿನಿಮಾದ ಮೂಲಕ ಅವರು ಮಾಸ್‌ ಡೈರೆಕ್ಟರ್‌ ಆಗುವುದು ಪಕ್ಕಾ ಎನ್ನುತ್ತಿದೆ ಸ್ಯಾಂಡಲ್‌ವುಡ್‌.

 

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ .

ಹೌದು, "ಪಾರಿವಾಳ ಪ್ರೀತಿಯ ಸಂಕೇತ, ಪಾರಿವಾಳ ಶಾಂತಿಯ ಪ್ರತೀಕ. ಆದರೆ ನಿಮಗೆ ಗೊತ್ತಿಲ್ಲದ ಬೇರೆ ಪಾರಿವಾಳದ ಲೋಕವೊಂದಿದೆ' ಎನ್ನುವ ಡೈಲಾಗ್ ಮೂಲಕ ಟ್ರೈಲರ್ ಆರಂಭವಾಗುತ್ತದೆ. ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿರುವ ಬಜಾರ್ ಸಿನಿಮಾದಲ್ಲಿ ಸಖತ್‌ ಮಾಸ್‌ ಸನ್ನಿವೇಶಗಳು, ಇವೆಯಂತೆ. ಜತೆಗೆ ಲವ್‌ಸ್ಟೋರಿ ಸಹ ಇಲ್ಲಿದೆಯಂತೆ. ಪಾರಿವಾಳಗಳ ಬೆಟ್ಟಿಂಗ್‍ನಲ್ಲಿ ನಡೆಯುವ ಪ್ರೇಮಕಥೆ ಜತೆಗೆ ರೌಡಿಸಂ ಸಹ ಈ ಬಜಾರ್‌ನಲ್ಲಿದೆ.

.

ಈ ಚಿತ್ರದ ಮೂಲಕ ಸುನಿ ಧನ್ವೀರ್‌ ಎಂಬ 6 ಅಡಿ ಎತ್ತರದ ಮತ್ತೊಬ್ಬ ನಾಯಕನನ್ನು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಈ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಾಣ ಮಾಡಿದ್ದಾರೆ.

.

ಇದೇ ಫೆ.1ಕ್ಕೆ ಚಿತ್ರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 

ಸಿಂಪಲ್‌ ಸುನಿ ನಿರ್ದೇಶನದ ಹೊಸ ಚಿತ್ರ 'ಬಜಾರ್‌' ಟೀಸರ್ 2 ಬಿಡುಗಡೆ ಮಾಡಿ ಸದ್ದು ಮಾಡಿತ್ತು, ಸುನಿ ಅವರು ಈಗ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದ್ದು, ಬಜಾರ್‌ ಸಿನಿಮಾದ ಆಡಿಯೋವನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಿಡುಗಡೆ ಮಾಡಲಿದ್ದಾರಂತೆ.
.

ಧನ್ವೀರ್‌ ಎಂಬ ಯುವಕನನ್ನು ಈ ಚಿತ್ರದ ಮೂಲಕ ಸುನಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಧನ್ವೀರ್‌ ಲುಕ್ಸ್‌ ಮತ್ತು ಟೀಸರ್ ನಲ್ಲಿ ಕಾಣಿಸಿಕೊಂಡಿರುವ ರೀತಿಗೆ ಗಾಂಧಿನಗರದಲ್ಲಿ ಒಳ್ಳೆ ಟಾಕ್‌ ಶುರುವಾಗಿದೆ. ಈಗ ಹಾಡುಗಳು ಸಹ ಅದೇ ರೀತಿ ಸದ್ದು ಮಾಡುತ್ತವೆ ಎನ್ನುತ್ತಿದೆ ಚಿತ್ರತಂಡ. ದರ್ಶನ್‌ ಯಾವತ್ತು ಹಾಡನ್ನು ಬಿಡುಗಡೆ ಮಾಡುತ್ತಾರೆ ಎಂಬುದು ಇನ್ನೂ ಕನ್ಫರ್ಮ್‌ ಆಗಿಲ್ಲ, ಆದರೆ ಅವರು ಬರುವುದು ಪಕ್ಕಾ ಆಗಿದೆ ಎನ್ನುತ್ತಿವೆ ಮೂಲಗಳು.
.
ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಈ ಸಾಲಿಗೆ 'ಬಜಾರ್‌' ಸಹ ಸೇರಿಕೊಳ್ಳುತ್ತದೆ.

 

#Bazaar #Cineloka

'ಚಮಕ್‌' ಚಿತ್ರದ ಚಿತ್ರದ ನಂತರ ಸಿಂಪಲ್‌ ಸುನಿ , ನವ ನಟ ಧನ್ವೀರ್‌ಗಾಗಿ 'ಬಜಾರ್‌' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ನಟ ಧನ್ವೀರ್‌ ತಮ್ಮ ದೇಹವನ್ನು ಹುರಿಗೊಳಿಸಿದ್ದು, ಖಡಕ್‌ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ.

.

ಕೆಲ ದಿನಗಳ ಹಿಂದೆ 'ಬಜಾರ್‌' ಚಿತ್ರದ ಟೀಸರ್‌ ಬಿಡುಗಡೆಯಾದಾಗ ಧನ್ವೀರ್‌ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಮಾತುಗಳು ಕೇಳಿ ಬಂದಿದ್ದವು. ಈ ಸಿನಿಮಾದಲ್ಲಿನ ಒಂದು ಫೈಟ್‌ ಸೀನ್‌ಗಾಗಿ ನಾಯಕ ಧನ್ವೀರ್‌ ದೇಹವನ್ನು ಹುರಿಗೊಳಿಸಿ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ. ಈ ಸಿಕ್ಸ್‌ ಪ್ಯಾಕ್‌ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತಿದ್ದು, ಸ್ಯಾಂಡಲ್ವುಡ್‌ಗೆ ಮತ್ತೊಬ್ಬ ಸಿಕ್ಸ್ ಪ್ಯಾಕ್‌ ಹೀರೋ ಬಂದಂತಾಗಿದೆ.
.

'ಬಜಾರ್‌' ಚಿತ್ರ ಸುನಿಯವರ ಹಿಂದಿನ ಸಿನಿಮಾಗಳಿಗಿಂತಲೂ ಬಹಳ ವಿಭಿನ್ನವಾಗಿದ್ದು, ದೊಡ್ಡ ಮಟ್ಟದ ಮಾಸ್‌ ಸಿನಿಮಾ ಇದಾಗುತ್ತದೆ ಎನ್ನುತ್ತಿದೆ ಚಿತ್ರತಂಡ.
.
#Bazaar #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top