tarakaasura

ttm

adweb

udgharsha

 

ಹಿಂದಿಯಲ್ಲಿ ದೊಡ್ಡ ಹಿಟ್‌ ಆಗಿರುವ ಕ್ವೀನ್‌ ಚಿತ್ರದ ಕನ್ನಡ ಅವತರಿಣಿಕೆ ಬಟರ್‌ ಫ್ಲೈ ಚಿತ್ರದ ಕೊನೆಯ ಹಂತದ ಶೂಟಿಂಗ್‌ ಗ್ರೀಸ್‌ ದೇಶದಲ್ಲಿ ನಡೆಯುತ್ತಿದೆ.

ಪಾರುಲ್‌ ನಾಯಕಿಯಾಗಿರುವ ಈ ಚಿತ್ರವನ್ನು ನಟ ರಮೇಶ್‌ ಅರವಿಂದ್‌ ನಿರ್ದೇಶನ ಮಾಡುತ್ತಿದ್ದಾರೆ.

.

ಈ ನಡುವೆ ಮೈಸೂರಿನ ಶೂಟಿಂಗ್‌ ಸಮಯದಲ್ಲಿ ಜೇನು ನೋಣಗಳ ಅಟ್ಯಾಕ್‌ನಿಂದ ಸ್ವಲ್ಪ ಆರೋಗ್ಯ ಕೆಡಿಸಿಕೊಂಡಿದ್ದ ಪಾರುಲ್‌ ಯಾದವ್‌ ಈಗ ಚೇತರಿಸಿಕೊಂಡಿದ್ದು, ಶೂಟಿಂಗ್‌ ನಿಮಿತ್ತು ಗ್ರೀಸ್‌ಗೆ ಹಾರಿದ್ದಾರೆ. ಅಲ್ಲಿ ಪ್ರವಾಸಿ ಸ್ಥಳಗಳಿಗೆಲ್ಲ ಭೇಟಿ ನೀಡಿ ಫೋಟೋ ತೆಗೆದುಕೊಂಡು ಅದನ್ನು ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡಿದ್ದಾರೆ.

.

ಬಟರ್‌ ಫ್ಲೈ ಚಿತ್ರ ಜೂನ್‌ ತಿಂಗಳಿನಲ್ಲಿ ತೆರೆಗೆ ಬರಬಹುದು. ಸಾಗರ, ಬೆಂಗಳೂರು, ಪ್ಯಾರೀಸ್‌ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ಹಿಂದಿಯ ಸೂಪರ್‌ ಹಿಟ್ ಚಿತ್ರ ಕ್ವೀನ್‌ನ ಕನ್ನಡ ಅವತರಿಣಿಕೆ ಬಟರ್‌ ಫ್ಲೈ ಚಿತ್ರದ ಮತ್ತೊಂದು ಶೆಡ್ಯೂಲ್‌ ಏಪ್ರಿಲ್‌ 3 ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ.

 

ಹಿಂದಿಯಲ್ಲಿ ಕಂಗನಾ ಮಾಡಿದ್ದಪಾತ್ರವನ್ನು ಪಾರುಲ್‌ ಯಾದವ್‌ ಮಾಡುತ್ತಿದ್ದು, ಈಗಾಗಲೇ ಪ್ಯಾರೀಸ್‌ ಸೇರಿದಂತೆ ಹೊರ ದೇಶಗಳಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ ಚಿತ್ರತಂಡ. ಕರ್ನಾಟಕದ ಗೋಕಣಧದಲ್ಲಿಯೂ ಶೂಟಿಂಗ್‌ ಕಂಪ್ಲೀಟ್‌ ಮಾಡಿದ್ದು, ಮುಂದಿನ ಶೆಡ್ಯೂಲ್‌ ಮೈಸೂರಿನಲ್ಲಿ ಎನ್ನಲಾಗುತ್ತಿದೆ.

 

ಈ ಚಿತ್ರದಲ್ಲಿ ಶಶಿ ವರುಣ್‌ ನಾಯಕರಾಗಿ ನಟಿಸುತ್ತಿದ್ದಾರೆ. ರಮೇಶ್‌ ಅರವಿಂದ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಇದನ್ನು ಯಥಾವತ್‌ ರಿಮೇಕ್‌ ಮಾಡದೇ, ಆ ಚಿತ್ರದ ಥೀಮ್‌ ಮಾತ್ರ ತೆಗೆದುಕೊಂಡು ನಮ್ಮ ಭಾವನೆಗಳಿಗೆ ತಕ್ಕ ದೃಶ್ಯಗಳನ್ನು ಕಟ್ಟುತ್ತಿದ್ದಾರಂತೆ.

 

ನಿರ್ಮಾಪಕರಾದ ಮನು ಕುಮಾರನ್, ನಿರ್ದೇಶಕರಾದ ರಮೇಶ್ ಅರವಿಂದ್ ಮತ್ತು ನಾಯಕಿ ಪರುಲ್ ಯಾದವ್ ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಮಾತೆಯ ಆಶೀರ್ವಾದವನ್ನು ಪಡೆದರು.

ಹಿಂದಿಯ ಕ್ವೀನ್‌ ಚಿತ್ರದ ಕನ್ನಡ ಅವತರಿಣಿಕೆ “ಬಟರ್‌ಫ್ಲೈ “‌ ಈಗಾಗಲೇ ಪ್ಯಾರೀಸ್‌ನಲ್ಲಿ ಶೂಟಿಂಗ್‌ ಮುಗಿಸಿ ವಾಪಾಸ್ಸಾಗಿದೆ. ಈಗ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂ1 ಯಾರಿ ವಿತ್‌ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

 

ನಂ 1 ಯಾರಿ ವಿತ್‌ ರಾಣಾ ಶೋದ ಕನ್ನಡ ಅವತರಿಣಿಕೆಯಾದ ಈ ಕಾರ್ಯಕ್ರಮದಲ್ಲಿ ಈಗಾಗಲೇ ಉಪೇಂದ್ರ, ಶ್ರುತಿ ಹರಿಹರನ್‌, ಚಿಕ್ಕಣ್ಣ, ಶರಣ್‌ ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದ್ದಾರೆ.

 

ಈಗ ಬಟರ್‌ ಪ್ಲೈ ಚಿತ್ರದ ನಾಯಕಿ ಪಾರುಲ್‌ ಯಾದವ್‌ ನಿರ್ದೇಶಕ ರಮೇಶ್‌ ಅರವಿಂದ್‌ ಸೇರಿದಂತೆ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಕ ಶಿವರಾಜ್‌ಕುಮಾರ್‌ ಅವರೊಂದಿಗೆ ಮಸ್ತಿ ಮಾಡಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top