IB anigif

Ayugya Gif

adweb

udgharsha

 

ಸಿಂಪಲ್‌ ಸುನಿ ನಿರ್ದೇಶನದ ಹೊಸ ಚಿತ್ರ 'ಬಜಾರ್‌' ಟೀಸರ್ 2 ಬಿಡುಗಡೆ ಮಾಡಿ ಸದ್ದು ಮಾಡಿತ್ತು, ಸುನಿ ಅವರು ಈಗ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದ್ದು, ಬಜಾರ್‌ ಸಿನಿಮಾದ ಆಡಿಯೋವನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಿಡುಗಡೆ ಮಾಡಲಿದ್ದಾರಂತೆ.
.

ಧನ್ವೀರ್‌ ಎಂಬ ಯುವಕನನ್ನು ಈ ಚಿತ್ರದ ಮೂಲಕ ಸುನಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಧನ್ವೀರ್‌ ಲುಕ್ಸ್‌ ಮತ್ತು ಟೀಸರ್ ನಲ್ಲಿ ಕಾಣಿಸಿಕೊಂಡಿರುವ ರೀತಿಗೆ ಗಾಂಧಿನಗರದಲ್ಲಿ ಒಳ್ಳೆ ಟಾಕ್‌ ಶುರುವಾಗಿದೆ. ಈಗ ಹಾಡುಗಳು ಸಹ ಅದೇ ರೀತಿ ಸದ್ದು ಮಾಡುತ್ತವೆ ಎನ್ನುತ್ತಿದೆ ಚಿತ್ರತಂಡ. ದರ್ಶನ್‌ ಯಾವತ್ತು ಹಾಡನ್ನು ಬಿಡುಗಡೆ ಮಾಡುತ್ತಾರೆ ಎಂಬುದು ಇನ್ನೂ ಕನ್ಫರ್ಮ್‌ ಆಗಿಲ್ಲ, ಆದರೆ ಅವರು ಬರುವುದು ಪಕ್ಕಾ ಆಗಿದೆ ಎನ್ನುತ್ತಿವೆ ಮೂಲಗಳು.
.
ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಈ ಸಾಲಿಗೆ 'ಬಜಾರ್‌' ಸಹ ಸೇರಿಕೊಳ್ಳುತ್ತದೆ.

 

#Bazaar #Cineloka

 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ವನ್ಯ ಜೀವಿ ರಕ್ಷಣೆಗೆ ನಿಂತಿದ್ದಾರೆ. ಅರ್ಥಾತ್‌ ಮೈಸೂರು ಮೃಗಾಲಯ ಮತ್ತು ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ.
.
ಈ ಹಿಂದೆಯೇ ದರ್ಶನ್‌ ಮೃಗಾಲಯದಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕಲು ಧನ ಸಹಾಯ ಮಾಡಿದ್ದಾರೆ. ಹಲವು ವರ್ಷಗಳಿಂದ ಒಂದು ಆನೆ ಮತ್ತು ಒಂದು ಹುಲಿಯನ್ನು ದರ್ಶನ್‌ ದತ್ತು ಪಡೆದು ಅದಕ್ಕೆ ಆಗುವ ಖರ್ಚು ನೀಡುತ್ತಿರುತ್ತಾರೆ.
.
ಈಗಾಗಲೇ ದರ್ಶನ್‌ ವೃಕ್ಷ ಸಂರಕ್ಷಣೆ ಕುರಿತ ‘ಪ್ಲಾಂಟ್‌ ಎ ಟ್ರೀ’(Plant a Tree) ಎಂಬ ಸಾಕ್ಷ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರ್ನಾಟಕದ ಅಭಯಾರಣ್ಯಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಮಲೆಮಹದೇಶ್ವರ ಬೆಟ್ಟ, ನಾಗರಹೊಳೆ, ಬಂಡೀಪುರ ಮತ್ತಿತರ ಕಾಡುಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಜೂನ್‌ 5 ರಂದು ಇದು ರಿಲೀಸ್‌ ಆಗಲಿದೆ.
.
#ChallengingStarDarshan #Cineloka

 
ಯಶಸ್‌ ಸೂರ್ಯ ನಟನೆಯ ರಾಮಧಾನ್ಯ ಚಿತ್ರಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಧ್ವನಿ ನೀಡಿದ್ದಾರೆ.
ಈ ಚಿತ್ರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ದರ್ಶನ್‌ ಅವರ ಧ್ವನಿ ಕೇಳಿಬರಲಿದೆಯಂತೆ. ಈ ಹಿಂದೆ ಚೇತನ್‌ ನಿರ್ದೇಶನದ ಭರ್ಜರಿಗೂ ದರ್ಶನ್‌ ಧ್ವನಿ ನೀಡಿದ್ದರು.
.
ರಾಮಧಾನ್ಯ ಪ್ರಸ್ತುತ ಮತ್ತು ಪೌರಾಣಿಕ ಕಥೆಯನ್ನು ಹೊಂದಿದ್ದು, ಸಾಫ್ಟ್‌ವೇರ್‌ ಜೀವನ ಮತ್ತು ಕನಕದಾಸರ ಕಥೆಯನ್ನು ಒಟ್ಟಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಾಗೇಶ್‌ ಕುಮಾರ್‌.
.
ಈ ಚಿತ್ರದಲ್ಲಿ ನಾಯಕ ಯಶಸ್‌ ಸೂರ್ಯ, ಸಾಫ್ಟ್‌ವೇರ್‌ ಎಂಜಿನಿಯರ್‌, ರಾಮ, ಕನಕದಾಸ ಹೀಗೆ ಮೂರ್ನಾಲ್ಕು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದ ಟೀಸರ್‌ನ್ನು ದರ್ಶನ್‌ ಅವರಿಗೆ ತೋರಿಸಿದಾಗ, ಅದನ್ನು ಮೆಚ್ಚಿಕೊಂಡ ದರ್ಶನ್‌ ಹಿನ್ನೆಲೆ ಧ್ವನಿ ನೀಡಿದ್ರಂತೆ. ಸಿನಿಮಾದ ಆರಂಭದಲ್ಲಿ ಒಂದೂವರೆ ನಿಮಿಷ ಮತ್ತು ಚಿತ್ರದ ಕೊನೆಯಲ್ಲಿ ಸಿನಿಮಾದ ಆಶಯವನ್ನು ದರ್ಶನ್‌ ಹೇಳುತ್ತಾರೆ. ಈ ಚಿತ್ರ ಇದೇ 25ಕ್ಕೆ ಬಿಡುಗಡೆಯಾಗುತ್ತದೆ.
.
#Ramadhanya #Cineloka #ChallengingStarDarshan
ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿನಯದ 51 ನೇ ಚಿತ್ರ 'ಯಜಮಾನ'ದ ಎರಡನೇ ಹಂತದ ಶೂಟಿಂಗ್‌ ಸೋಮವಾರದಿಂದ (ಮಾರ್ಚ್ 25) ಚಿಕ್ಕಮಗಳೂರಿನಲ್ಲಿ ಆರಂಭವಾಗಿದೆ. ಪಿ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ.
 
ಮೈಸೂರಿನಲ್ಲಿ ಮೊದಲ ಶೆಡ್ಯೂಲ್‌ನ್ನು ಚಿತ್ರತಂಡ ಇತ್ತೀಚೆಗೆ ಮುಗಿಸಿದೆ. ಈಗ ಎರಡನೇ ಶೆಡ್ಯೂಲ್‌ಗಾಗಿ ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿದ್ದು, ಇಲ್ಲಿ ದರ್ಶನ್‌, ರಶ್ಮಿಕಾ, ದೇವರಾಜ್ ಮತ್ತು ಇನ್ನೂ ಕೆಲವು ಪ್ರಮುಖ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
 
ಧನಂಜಯ, ರವಿಶಂಕರ್‌, ಅನೂಪ್‌ ಸಿಂಗ್‌ ಠಾಕೂರ್‌ ದರ್ಶನ್‌ಗೆ ಎದುರಾಗಿ ನಟಿಸುತ್ತಿದ್ದಾರೆ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ,ಬಹದ್ದೂರ್ ಚೇತನ್ ಡೈಲಾಗ್ ಬರೆದಿದ್ದಾರೆ.
 
 
  
ವಿಶೇಷ ಎಂದರೆ ಸುಮಾರು 90 ದಿನಗಳ ಕಾಲ್‌ಶೀಟ್‌ನ್ನು ದರ್ಶನ್‌ ಈ ಚಿತ್ರಕ್ಕಾಗಿ ನೀಡಿದ್ದಾರಂತೆ. ಬಿ ಸುರೇಶ್ ಮತ್ತು ಶೈಲಜಾ ನಾಗ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
 
 
#Yajamana #ChallengingStarDarshan #Cineloka

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top