tarakaasura

ttm

adweb

udgharsha

 
ಚಿರಂಜೀವಿ ಸರ್ಜಾ ನಟನೆಯ 'ಅಮ್ಮಾ ಐ ಲವ್‌' ಚಿತ್ರ ಸೆನ್ಸಾರ್‌ ಅಂಗಳ ತಲುಪಿದೆ.
ಆ ದಿನಗಳ ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಿಶ್ವಿಕಾನಾಯ್ಡು ನಾಯಕಿಯಾಗಿದ್ದಾರೆ.
.
ಸೆನ್ಸಾರ್‌ ಆದ ತಕ್ಷಣ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆಯಂತೆ. ಸದ್ಯದ ಮಾಹಿತಿ ಪ್ರಕಾರ ಸಿನಿಮಾ ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳು ಮೇ 28 ರಂದು ಬಿಡುಗಡೆಯಾಗಳಿವೆಯಂತೆ.
.
ನಿರ್ಮಾಪಕ ಯೋಗಿ, ನಟ ಚಿರಂಜೀವಿ ಸರ್ಜಾ, ನಿರ್ದೇಶಕ ಚೈತನ್ಯ ಅವರ ಹ್ಯಾಟ್ರಿಕ್‌ ಕಾಂಬಿನೇಶನ್‌ ಇದಾಗಿದೆ. ಭಿಕ್ಷುಕರ ಕಥೆ ಜತೆಗೆ ತಾಯಿ ಸೆಂಟಿಮೆಂಟ್‌ ಈ ಚಿತ್ರದಲ್ಲಿದೆ.
.
#AmmaILoveYou #Cineloka

ಕೆಲ ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಇದೇ ಮೇ ೨ಕ್ಕೆ ವಿವಾಹ ಬಂಧನಕ್ಕೊಳಗಾಗುತ್ತಿದ್ದಾರೆ. 

ಹಲವು ದಿನಗಳ ಜೋಡಿ ಹಕ್ಕಿಗಳಾದ ಇಬರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.ಅದೇ ದಿನ ಸಂಜೆ ಆರತಕ್ಷತೆಯನ್ನೂ ಆಯೋಜಿಸಲಾಗಿದೆ.
.

ಒಂದು ದಶಕದಿಂದ ಸ್ನೇಹಿತರಾಗಿದ್ದ ಈ ಜೋಡಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಇದೇ ಮೇ.2ರಂದು ಬೆಳಿಗ್ಗೆ 10.30ರಿಂದ 11ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ, ಹಿಂದೂ ಧರ್ಮದ ಸಾಂಪ್ರದಾಯದಂತೆ ವಿವಾಹ ನೆರವೇರಲಿದೆ. ವಿವಾಹಕ್ಕೆ ಒಂದು ವಾರ ಮುಂಚಿತವಾಗಿಯೇ ಹಲವು ಕಾರ್ಯಕ್ರಮಗಳು ನಡೆಯಲಿದೆ. ಏಪ್ರಿಲ್ ಕಡೆಯ ವಾರದಲ್ಲಿ ಹಳದಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮೇಘನಾ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
.

ಮೇ.2 ರಂದು ಸಾಂಪ್ರದಾಯಿಕ ಕಾಂಚೀವರಂ ಸೀರೆಯನ್ನು ಮೇಘನಾ ಧರಿಸಲಿದ್ದು, ಚಿರು ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಲಿದ್ದಾರೆ. ಅದೇ ದಿನ ಸಂಜೆ ಆರತಕ್ಷತೆ ಕೂಡ ಇದ್ದು ಗ್ಲಿಟರ್ ಮತ್ತು ಗೋಲ್ಡ್ ಥೀಮ್'ನಲ್ಲಿ ಚಿರು ಹಾಗೂ ಮೇಘನಾ ಕಂಗೊಳಿಸಲಿದ್ದಾರೆ.
.

ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ಯಾಥೊಲಿಕ್ ಆಗಿರುವುದರಿಂದ ನಗರದ ಚರ್ಚ್'ನಲ್ಲಿ ಕ್ಯಾಥೊಲಿಕ್ ಸಂಪ್ರದಾಯದಂತೆಯೂ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಇದೊಂದು ಇಂಗ್ಲಿಷ್ ಥೀಂ ಕಾರ್ಯಕ್ರಮವಾಗಿರುತ್ತದೆ.
.
#MeghanaChiru #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top