nata

ttm

adweb

udgharsha

ತಮ್ಮ ಕಾಮಿಡಿ ಪಂಚಿಂಗ್‌ ಡೈಲಾಗ್‌ಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದ ಡೈಲಾಗ್ ರೈಟರ್ ಪ್ರಶಾಂತ್‌ ರಾಜಪ್ಪ ನಿರ್ದೇಶನಕ್ಕಿಳಿದಿದ್ದಾರೆ, ಅವರ ಮೊದಲ ಚಿತ್ರದಲ್ಲಿ ನಟ ಅನಿಶ್‌ ಹಳ್ಳಿ ಹುಡುಗನಾಗಿ ನಟಿಸುತ್ತಿದ್ದಾರಂತೆ. ಚಿತ್ರತಂಡ ಚಿತ್ರಕ್ಕೆ "ಕೇಡಿ ನಂ.1" ಎಂದು ಹೆಸರಿಟ್ಟಿದ್ದಾರೆ.

.
ಅಕಿರಾ ಸಿನಿಮಾದಲ್ಲಿ ಮಾಡ್‌ ಹುಡುಗನಾಗಿ ಕಾಣಿಸಿಕೊಂಡು, ವಾಸು ನಾನ್‌ ಪಕ್ಕಾ ಕಮರ್ಶಿಯಲ್‌ ಸಿನಿಮಾದಲ್ಲಿ ಪಕ್ಕಾ ಲೋಕಲ್‌ ಆಗಿ ನಟಿಸಿದ್ರು ಅನಿಶ್‌. ಈಗ ಪ್ರಶಾಂತ್‌ ರಾಜಪ್ಪ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಮೊದಲ ಬಾರಿಗೆ ಹಳ್ಳಿ ಹೈದನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
.
ವಾಸು ಚಿತ್ರದಂತೆ ಈ ಸಿನಿಮಾವನ್ನು ಸಹ ಅನಿಶ್‌ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
.

 

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಶಿಷ್ಟ ಮತ್ತು ವಿಚಿತ್ರ ಶೀರ್ಷಿಕೆಗಳು ಸಿನಿಮಾಗಳಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ "ಅಟ್ಟಯ್ಯ v/s ಹಂದಿ ಕಾಯೋಳು".
.
ಮಳವಳ್ಳಿಯಲ್ಲಿ ನಡೆದ ಕ್ರೆಂ ಸ್ಟೊರಿಗೆ ದೃಶ್ಯದ ಟಚ್‌ ನೀಡಿದ್ದಾರಂತೆ ನಿರ್ದೇಶಕ ನಿರ್ದೇಶಕ ಲೋಕೇಂದ್ರ ಸೂರ್ಯ.
ಒಂದು ಗದ್ದೆಗೆ ಬೇರೆಯವರ ಹಂದಿಗಳು ನುಗ್ಗಿದಾಗ ಜಗಳ ಆರಂಭವಾಗುತ್ತದೆ. ಈ ಜಗಳ ಕಡೆಗೆ ಕೊಲೆಯ ವರೆಗೂ ಹೋಗುವ ಕಥೆ ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಸಿನಿಮಾದಲ್ಲಿದೆ. ನಗರದಿಂದ ಬಂದ ಇಂಜಿನಿಯರ್‌ ಹುಡುಗ ಈ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾನೆ. ಚಿತ್ರದಲ್ಲಿ ಕತೆಯೇ ಹೀರೊ. ಲವ್, ಹಳ್ಳಿಯ ಚಿತ್ರಣ ಎಲ್ಲವೂ ಇದೆ’ ಎಂದಿದ್ದಾರೆ ಲೋಕೇಂದ್ರ ಸೂರ್ಯ.
.
ಈ ಸಿನಿಮದಲ್ಲಿ ನಾಯಕಿಯಾಗಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯ ಗೌಡನ ಮಗಳಾಗಿ ನಟಿಸಿರುವ ಇವರು, ಡಿಗ್ಲಾಮ್‌ ಪಾತ್ರದಲ್ಲಿದ್ದಾರಂತೆ. ಚಿತ್ರದಲ್ಲಿ ಅಟ್ಟಯ್ಯನಾಗಿ ಪ್ರೊಫೆಸರ್ ಎ. ಮಾದೇವಯ್ಯ, ಲೋಕೇಂದ್ರ, ಕೆಂಪೇಗೌಡ, ಎಡಿಟರ್‌ ವಿನಯ್‌ ಕೂರ್ಗ್‌, ಅರ್ಜುನ್‌ ಮತ್ತಿತರರು ನಟಿಸಿದ್ದಾರೆ. ವಿಜಯ್‌ ಪ್ರಕಾಶ್‌ ಒಂದು ಹಾಡನ್ನು ಹಾಡಿದ್ದಾರೆ. ಯಶವಂತ್‌ ಭೂಪತಿ ಸಂಗೀತ ನೀಡಿದ್ದಾರೆ.

 

ಇರುವುದೆಲ್ಲವ ಬಿಟ್ಟು ಸಿನಿಮಾದ ಬಿಡುಗಡೆಗಾಗಿ ಕಾದಿರುವ ಮೇಘನಾ ತಮ್ಮ ಸಿನಿಮಾ ಟೀಮ್‌ ಜತೆ ಎಕೋ ಫ್ರೆಂಡ್ಲಿ ಗಣಪನನ್ನು ಪೂಜಿಸಿದ್ದಾರೆ.
.
ಕಾಂತ ಕನ್ನಲಿ ನಿರ್ದೇಶನ ಮಾಡಿರುವ ಇರುವುದೆಲ್ಲವ ಬಿಟ್ಟು ಸಿನಿಮಾ ತನ್ನ ಹಾಡು ಮತ್ತು ಟ್ರೇಲರ್‌ನಿಂದಾಗಿ ಗಮನ ಸೆಳೆದಿದೆ, ಇದೇ 21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಗಣೇಶ ಹಬ್ಬದ ಸಮಯದಲ್ಲಿ ನಟಿ ಮೇಘನ ರಾಜ್‌ ಚಿತ್ರತಂಡದೊಡನೆ ಸೇರಿಕೊಂಡು ಎಕೋ ಫ್ರೆಂಡ್ಲಿ ಗಣೇಶನನ್ನು ಪೂಜೆ ಮಾಡಿದ್ದಾರೆ.
.

ಹೌದು, ಮಂಗಳವಾರ ಇರುವುದೆಲ್ಲವ ಬಿಟ್ಟು ಚಿತ್ರದ ನಾಯಕರಾದ ಶ್ರೀ,ತಿಲಕ್‌ ನಿರ್ದೇಶಕ ಕಾಂತಕನ್ನಲಿ ನಿರ್ಮಾಪಕ ದೇವರಾಜ್‌ ಮತ್ತು ಇಡೀ ಚಿತ್ರತಂಡ ಎಕೋ ಫ್ರೆಂಡ್ಲಿ ಗಣಪತಿಯನ್ನು ಪೂಜೆ ಮಾಡಿದ್ದಾರೆ.
.

ಕಾರ್ಪೋರೇಟ್‌ ಜಗತ್ತಿನ ಕಥೆ ಹೇಳುವ ಈ ಚಿತ್ರಕ್ಕೆ ತಮಿಳು ನಟ ಸಿಂಬು ಹಾಡಿದ್ದಾರೆ, ನಟ ಶ್ರೀಮುರುಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಸಿನಿಮಾಗೆ ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿದ್ದು, ದೇವರಾಜ್‌ ದಾವಣಗೆರೆ ಬಂಡವಾಳ ಹೂಡಿದ್ದಾರೆ.
.

ಇದೇ ಮೊದಲ ಬಾರಿಗೆ ತಿಲಕ್‌ ಹಾಗೂ ಶ್ರೀ ಜತೆ ಮೇಘನಾ ರಾಜ್‌ ತೆರೆ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಬಹಳ ವಿಭಿನ್ನವಾಗಿದ್ದು, ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.

 

ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರಕ್ಕಾಗಿ ಗಡ್ಡ ಬಿಟ್ಟು ಪಕ್ಕಾ ಹಳ್ಳಿ ಹುಡುಗನಾಗಿದ್ದಾರೆ.
ಅನಂತು ಸಿನಿಮಾದಲ್ಲಿ ಲಾಯರ್‌ ಆಗಿರುವ ವಿನಯ್‌, ಗ್ರಾಮಾಯಣದಲ್ಲಿ ಸಿಕ್ಸ್ತ್‌ ಸೀನ ಎಂಬ ಹಳ್ಳಿ ಹುಡುಗನ ಕ್ಯಾರೆಕ್ಟರ್‌ ಮಾಡುತ್ತಿದ್ದಾರೆ.
.
ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ಚಿತ್ರೀಕರಣಗೊಂಡ ಟೀಸರ್‌ನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್‌ನಲ್ಲಿ ವಿನಯ್‌ ಲುಕ್‌ ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
.

ಹಳ್ಳಿ ಹುಡುಗನಾಗಲು ವಿನಯ್‌ ಚಿತ್ರತಂಡದ ಜತೆ ಲೊಕೇಶನ್‌ ನೋಡಲು ಎಲ್ಲ ಕಡೆ ಹೋಗಿ ಬಂದಿದ್ದಾರೆ. ಈ ಸಿನಿಮಾದ ಶೂಟಿಂಗ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ದುನಿಯಾ ವಿಜಯ್‌ ನಟನೆಯ "ಕುಸ್ತಿ" ಸಿನಿಮಾಗೆ ಬಜ಼ಾರ್ ಬೆಡಗಿ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

.

ಕುಸ್ತಿ ಅಖಾಡದ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ತಮ್ಮ ಪುತ್ರ ಸಾಮ್ರಾಟ್‌ರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿಸುತ್ತಿದ್ದಾರೆ. ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

.

ಅಕ್ಟೋಬರ್‌ ಮೊದಲ ವಾರದಿಂದ ಶೂಟಿಂಗ್‌ ಆರಂಭವಾಗಲಿದ್ದು, ಈಗಾಗಲೇ ಉತ್ತರ ಕರ್ನಾಟಕದ ಸಾಕಷ್ಟು ಕಡೆಗಳಲ್ಲಿ ನಿರ್ದೇಶಕರು ಲೊಕೇಶನ್‌ ನೋಡಿಕೊಂಡು ಬಂದು ಫೈನಲ್‌ ಮಾಡಿದ್ದಾರೆ.

.
ಈ ಸಿನಿಮಾದಲ್ಲಿ ಅದಿತಿ ಸಕ್ಕತ್ ಬಬ್ಲಿ ಮತ್ತು ಬಹಳ ಆ್ಯಕ್ಟಿವ್‌ ಆಗಿರುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅದಿತಿ ನಟನೆಯ ಬಜಾರ್‌ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.

ಅಗ್ನಿ ಸಾಕ್ಷಿ ವಿಜಯ್‌ ಸೂರ್ಯ ಮತ್ತು ಮೇಘಶ್ರಿ ನಟನೆಯ ಕದ್ದು ಮುಚ್ಚಿ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.
.
ಪೋಷಕರಿಲ್ಲದ, ಅವರ ಪ್ರೀತಿ ವಂಚಿತ ಹುಡುಗನ ಕಥೆಯನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗನಿಗೆ ಅವನ ತಂದೆ ತಾಯಿಯ ಪ್ರೀತಿ ಸಿಗುವುದಿಲ್ಲ, ಆಗ ಆತ ಪ್ರೀತಿಯನ್ನು ಅರಸಿಕೊಂಡು ಹೋರಡುತ್ತಾನೆ. ಹೀಗೆ ಹೋರಟಾಗ ನಡೆಯುವ ಘಟನೆಗಳನ್ನು ಸಿನಿಮಾ ಮಾಡಿದ್ದಾರಂತೆ. ಕದ್ದು ಮುಚ್ಚಿ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಮೇಘಶ್ರೀ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಮೇಘಶ್ರೀ.
.
ಬಹಳಷ್ಟು ವರ್ಷಗಳ ನಂತರ ನಾದಬ್ರಹ್ಮ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿರುವ ಸಿನಿಮಾ 'ಕದ್ದು ಮುಚ್ಚಿ'. ಬಹಳ ದಿನಗಳ ನಂತರ ಬಂದರೂ ಸಾಕಷ್ಟು ಮೆಲೋಡಿ ಟ್ಯೂನ್‌ಗಳನ್ನು ಹಂಸಲೇಖ ನೀಡಿದ್ದಾರಂತೆ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವನ್ನು ಇಡೀ ಚಿತ್ರತಂಡ ಮೆಚ್ಚಿಕೊಂಡಿತು.
.
ಈ ಸಿನಿಮಾದ ವಿಶೇಷವೆಂದರೆ ಮಾರೀಚನನ್ನು ಕೊಂದ ಜಾಗ ಕೊಶವಾರ ಜಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

'ರಾಜು ಕನ್ನಡ ಮೀಡಿಯಂ' ಚಿತ್ರದ ಮೂಲಕ ಸಕ್ಸಸ್‌ಫುಲ್‌ ಜರ್ನಿಗೆ ವಾಪಾಸ್ಸಾದ ಗುರುನಂದನ್‌ 'ರಾಜು ಜೇಮ್ಸ್‌ ಬಾಂಡ್‌' ಸಿನಿಮಾದಲ್ಲಿ ಒರಿಜಿನಲ್‌ ಜೇಮ್ಸ್‌ ಬಾಂಡ್‌ನ್ನು ಅನುಕರಣೆ ಮಾಡುತ್ತಾರಂತೆ.

.

ಜೇಮ್ಸ್‌ ಬಾಂಡ್‌ ಅನುಕರಣೆ ಮಾಡಲು ಹೋಗಿ ಅವರು ಏನಾಗುತ್ತಾರೆ ಎನ್ನುವುದೇ ಚಿತ್ರಕಥೆ. ಜೇಮ್ಸ್‌ ಬಾಂಡ್‌ನ ಪಕ್ಕಾ ಅಭಿಮಾನಿಯಾಗಿ ಅವರ ರೀತಿಯಲ್ಲಿ ಸ್ಟಂಟ್‌ ಮಾಡಲು ಹೋಗಿ ಯಡವಟ್ಟುಗಳನ್ನು ಮಾಡಿಕೊಳ್ತಾರಂತೆ ಗುರು.
.
ಇತ್ತೀಚೆಗೆ ಮುಹೂರ್ತವಾಗಿರುವ ಈ ಚಿತ್ರವನ್ನು ದೀಪಕ್‌ ಮಧುವನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದೊಳ್ಳೆ ಲವ್‌ಸ್ಟೋರಿ ಸಹ ಇದ್ದು, ಅದು ಸಹ ಸಿನಿಮಾದ ಆಕರ್ಷಣೆಯಲ್ಲಿ ಒಂದು ಎನ್ನುತ್ತಾರೆ ನಿರ್ದೇಶಕ ದೀಪಕ್‌.

ಕೃಷ್ಣ ಲೀಲಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮಯೂರಿ ಈಗ ಸಿನಿಮಾಗಳ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಡಾ ಗಿರಿಧರ್‌ ನಿರ್ದೇಶನ ಮಾಡುತ್ತಿರುವ ಹರಿಕೃಷ್ಣ ನಾರಾಯಣಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

.

'ಇಷ್ಟಕಾಮ್ಯ', ಕರಿಯಾ-2’ ಸಿನಿಮಾಗಳು ಮಯೂರಿಗೆ ಹೆಸರು ತಂದುಕೊಟ್ಟವು. ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ’ ’ರುಸ್ತುಂ’, ನನ್ನ ಪ್ರಕಾರ’ ಹಾಗೂ 8 ಎಂ ಎಂ’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಚಿತ್ರದ ಹೆಸರಿಗೆ ತಕ್ಕಂತೆ ಇಲ್ಲಿ ಮಯೂರಿ ಅವರು ನಾರಾಯಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣಲೀಲಾ ನಂತರ ಟೈಟಲ್‌ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಶುಕ್ರವಾರ ಬಿಡುಗಡೆಯಾಗಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಹೇ ಜಲೀಲ ಹಾಡನ್ನು ರೆಬಲ್‌ ಸ್ಟಾರ್‌ ಅಂಬರೀಷ್‌ ಮೆಚ್ಚಿಕೊಂಡು ಸಿಎಂ ಕುಮಾರಸ್ವಾಮಿಗೂ ಅದರ ಬಗ್ಗೆ ಹೇಳಿದ್ದಾರಂತೆ.

.

ನಿರ್ದೇಶಕ ಪ್ರೇಮ್‌ ಬರೆದಿರುವ ಹೇ ಜಲೀಲ ಹಾಡು ಶುಕ್ರವಾರ ಬಿಡುಗಡೆಯಾಗಿ ವೈರಲ್‌ ಆಗಿದೆ. ಈ ಹಾಡು ಸಂಪೂರ್ಣ ಮಂಡ್ಯ ಸ್ಟೈಲ್‌ನಲ್ಲಿದ್ದು, ಇದನ್ನು ಮೊದಲಬಾರಿಗೆ ಅಂಬರೀಷ್‌ ಕೇಳಿದ್ದೇ ತಡ ಅವರಿಗೆ ಇಷ್ಟವಾಗಿತ್ತಂತೆ. ಒಂದು ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿಗೆ ಈ ಹಾಡಿನ ಬಗ್ಗೆ ಹೇಳಿದ್ದರಂತೆ.
.

ಈ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡಿದ್ದು, ಜಾಕ್‌ ಮಂಜು ಬಂಡವಾಳ ಹೂಡಿದ್ದಾರೆ.

 

ನಿರ್ದೇಶನ: ಶಿವ ಗಣೇಶ್‌
ನಿರ್ಮಾಣ: ರಾಹುಲ್‌ ಐನಾಪೂರ್‌
ಛಾಯಾಗ್ರಹಣ: ವಿನೋದ್‌ ಭಾರತಿ
ಸಂಕಲನ : ಸುರೇಶ್‌ ಅರ್ಮುಗಂ
ಕಲಾವಿದರು: ರಾಹುಲ್‌ ಐನಾಪೂರ್‌, ಅಜಿತ್‌ ಜಯರಾಜ, ಭವಾನಿ ಪ್ರಕಾಶ್‌,ನಂದಗೋಪಾಲ್, ಯಶ್‌ ಶೆಟ್ಟಿ ಮತ್ತು ಇತರರು
.
--------------

ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್‌ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ, ಆ ಸಾಲಿಗೆ ಹೊಸ ಸೇರ್ಪಡೆ ತ್ರಾಟಕ. ಕೆಲ ದಿನಗಳಿಂದ ಬಿಡುಗಡೆಯಾದ ಥ್ರಿಲ್ಲರ್‌ ಸಿನಿಮಾಗಳಲ್ಲಿ ತ್ರಾಟಕ ಸ್ವಲ್ಪ ಥ್ರಿಲ್ಲಿಂಗ್‌ ಅನುಭವ ನೀಡುವಂತಹದ್ದು ಎನ್ನಬಹುದು.
.

ದೇವ್‌ (ರಾಹುಲ್‌ ಐನಾಪೂರ್ರ್‌) ಹಾಗೂ ರವಿ (ಅಜಿತ್‌ ಜಯರಾಜ್‌) ಎಂಬ ಇಬ್ಬರು ಪೋಲೀಸ್‌ ಆಫೀಸ್‌ರ್‌ ಗಳಿರುತ್ತಾರೆ. ಇದರಲ್ಲಿ ದೇವ್‌ ಅವರ ಸಹೋದರನ ಕೊಲೆ ಯಾಗುತ್ತದೆ. ಆ ಕೊಲೆ ಯಾರು ಮಾಡಿದ್ದಾರೆ ಎಂಬುದರ ಹಿಂದೆ ಬೀಳುವ ಈ ಆಫಿಸರ್‌ಗಳ ಕಥೆಯೇ ತ್ರಾಟಕ. 
.

ಈ ಚಿತ್ರ ಆರಂಭದಿಂದ ಕೊನೆಯವರೆಗೂ ಭಯ ಮತ್ತು ಸಾಕಷ್ಟು ಥ್ರಿಲ್ಲಿಂಗ್‌ ಮೂಡಿಸುತ್ತದೆ. ಆಗಾಗ ನೀಡುವ ಟ್ವಿಸ್ಟ್‌ಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇದು ಸೈಕಾಲಾಜಿಕಲ್‌ ಥ್ರಿಲ್ಲರ್‌ ಎನ್ನಬಹುದು. ಚಿತ್ರದ ಮೊದಲಾರ್ಧದಲ್ಲಿ ನಿರ್ದೇಶಕ ಪ್ರೇಕ್ಷಕರನ್ನು ಕನ್‌ಫ್ಯೂಸ್ ಮಾಡಲು ಹೋಗಿ ಅವರೇ ಕನಫ್ಯೂಸ್ ಆಗಿದ್ದಾರಾ ಎನ್ನೋ ಫೀಲ್ ಬರತ್ತದೆ. ಅಷ್ಟರ ಮಟ್ಟಿಗೆ ಈ ಚಿತ್ರದಲ್ಲಿ ಟ್ವಿಸ್ಟ್ ಗಳಿವೆ.
.

ದೇವ್‌ ಸಹೋದರನ ಕೊಲೆ ತನಿಖೆ ನಡೆಯುತ್ತಿರುವಾಗ ಒಬ್ಬನನ್ನು ತನಗೆ ಅರಿವಲ್ಲದಂತೆ ಕೊಲೆ ಮಾಡುತ್ತಾನೆ. ಇದಕ್ಕೆ ಆತನ ಮಾನಸಿಕ ಸ್ಥಿತಿಯೇ ಕಾರಣವಾ ಎನ್ನುವ ಅನುಮಾನ ಸೃಷ್ಟಿಯಾಗುತ್ತದೆ. ಆದರೆ ಯಾರು ಕೊಲೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಿನಿಮಾವನ್ನು ಕೊನೆಯ ವರೆಗೂ ನೋಡಬೇಕು. ನಿರ್ದೇಶಕ ಶಿವಗಣೇಶ್‌ ಚಿತ್ರಕಥೆಯಲ್ಲಿ ಸಾಕಷ್ಟು ಅನುಮಾನಗಳನ್ನು ಬಿಟ್ಟು ಪ್ರೇಕ್ಷಕರ ತಲೆಗೆ ಹುಳ ಬಿಡುತ್ತಾರೆ. ಈ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾದರೆ ಚಿತ್ರವನ್ನು ನೋಡಲೇ ಬೇಕು. ಕೊನೆಯ 30-40 ನಿಮಿಷಗಳು ಚಿತ್ರದ ಹೈಲೈಟ್.
.
ರಾಹುಲ್‌ ಸಿನಿಮಾ ಪೂರ್ತಿ ಯಾವುದೇ ಏರಿಳಿತಗಳಿಲ್ಲದೇ ನಟಿಸ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ. ಅಜಿತ್‌ ಜಯರಾಜ್‌ ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಶಕ್ತಿ ಮೀರಿ ನಟಿಸಿ ನ್ಯಾಯ ಒದಗಿಸಿದ್ದಾರೆ. ನಟಿ ಹೃದಯ ಸಹ ಇಷ್ಟವಾಗುತ್ತಾರೆ. ಭವಾನಿ ಪ್ರಕಾಶ್‌ ಮತ್ತು ಯಶ್‌ ಶೆಟ್ಟಿ ಮತ್ತೊಮ್ಮೆ ತಮ್ಮ ಅಭಿನಯದ ಮೂಲಕ ಪ್ರತಿಭಾವಂತರೆಂದು ಪ್ರೂವ್‌ ಮಾಡಿದ್ದಾರೆ.ಹಾಸ್ಯ ನಟನಾಗಿ ನಂದ ಗೋಪಾಲ್ ಚೆನ್ನಾಗಿ ನಟಿಸಿದ್ದಾರೆ. ಅಕ್ಷತಾ ಅವರು ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ಪಾತ್ರ ಮಾಡಿದ್ದಾರೆ
.
ನಿರ್ದೇಶಕ ಶಿವಗಣೇಶ್‌ ಮೇಕಿಂಗ್‌ ಬಹಳಷ್ಟು ಒತ್ತು ನೀಡಿದ್ದಾರೆ. ಹಾಡುಗಳು ಮತ್ತು ಹಿನ್ನಲೆ ಸಂಗೀತ ಕೊಂಚ ಮಂಕು ಎನಿಸುತ್ತದೆ. ಕ್ಯಾಮೆರವರ್ಕ್ ನೀಟಾಗಿದೆ.

ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಈ ಚಿತ್ರವನ್ನು ಒಮ್ಮೆ ನೋಡಬಹುದು.
.
ರೇಟಿಂಗ್ - 3/5

#Trataka #Cineloka

Page 11 of 27

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top