tarakaasura

ttm

adweb

udgharsha

ಕನ್ನಡದ ಸಾಕಷ್ಟು ಯುವ ನಟರಿಗೆ ಫಿಟ್ನೆಸ್‌ ಟ್ರೇನರ್‌ ಆಗಿರುವ ಶ್ರೀನಿವಾಸ್‌ ಗೌಡ ಇತ್ತೀಚೆಗೆ ಬನಶಂಕರಿಯ ಬಳಿ ಮಸಲ್‌ 360 ಎಂಬ ಜಿಮ್‌ ಆರಂಭಿಸಿದರು.
.
ಈ ಜಿಮ್‌ ಓಪನಿಂಗ್‌ಗೆ ಡಾಲಿ ಧನಂಜಯ, ದುನಿಯಾ ವಿಜಯ್‌, ರಕ್ಷಿತ್‌ ಶೆಟ್ಟಿ,ರಚಿತಾ ರಾಮ್‌, ಮಾನ್ವಿತಾ ಹರೀಶ್‌, ಚಿರಂಜೀವಿ ಸರ್ಜಾ, ಯುವ ನಟ ಅನಿಶ್‌ ತೇಜೇಶ್ವರ್‌, ಗಿರಗಿಟ್ಲೆ ಚಂದ್ರು, ರಾಕೇಶ್‌ ಅಡಿಗ, ನಿರಂಜನ್‌, ಉದಯೋನ್ಮಖ ನಟ ಪೂರ್ಣಚಂದ್ರ ಮೈಸೂರು, ಪೃಥ್ವಿ, ಅರುಣ್‌ ರಾಮ್‌ಪ್ರಸಾದ್‌, ಚಂದನ್‌ ಶೆಟ್ಟಿ,ವಸಿಷ್ಠ ಸಿಂಹ, ನಿರ್ದೇಶಕರಾದ ದುನಿಯಾ ಸೂರಿ, ವಿಕಾಸ್‌, ಮಂಜು ಮಾಂಡವ್ಯ, ಮಾಸ್ತಿ, ಸನಾತನಿ, ಸೋನುಗೌಡ, ಅನುಪಮಾ ಗೌಡ ಸೇರಿದಂತೆ ಸಾಕಷ್ಟು ಮಂದಿ ಬಂದು ಶ್ರೀನಿವಾಸಗೌಡರಿಗೆ ಶುಭಾಶಯ ಕೋರಿದ್ದಾರೆ.
.
ಇವರ ಟ್ರೇನಿಂಗ್‌ನಲ್ಲಿ ಸಾಕಷ್ಟು ಜನ ನಟರು ವರ್ಕೌಟ್‌ ಮಾಡಿ ರಿಸಲ್ಟ್‌ ಪಡೆದುಕೊಂಡಿದ್ದಾರೆ. ನಟರ ಬಾಯಲ್ಲಿ ಸೀನು ಮಾಸ್ಟರ್‌ ಎಂದೆ ಕರೆಸಿಕೊಳ್ಳುವ ಶ್ರೀನಿವಾಸ್‌ಗೌಡ ಅವರ ಕೈಚಳಕಕ್ಕೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಮಂದಿ ಮಾರು ಹೋಗಿ ಅವರ ಶಿಷ್ಯ ಪಡೆ ದೊಡ್ಡದಾಗುತ್ತಲೇ ಇದೆ. ಈ ಹಿಂದೆ ಮಸಲ್‌ ಮ್ಯಾಕನಿಕ್‌ ಎಂಬ ಜಿಮ್‌ನಲ್ಲಿ ಟ್ರೇನರ್‌ ಆಗಿ ಶ್ರೀನಿವಾಸಗೌಡರು ಕೆಲಸ ಮಾಡುತ್ತಿದ್ದರು. ಅದು ದಿವಂಗತ ಅನಿಲ್‌ ಅವರ ಒಡೆತನದ ಜಿಮ್‌.
.
#Cineloka

 

ಸಿನಿಮಾಟೋಗ್ರಫರ್‌ ಆಗಿ ಯಶಸ್ಸು ಕಂಡಿರುವ ಅಶೋಕ್‌ ಕಶ್ಯಪ್‌ 'ಧ್ವಜ' ಎಂಬ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ರಾಜ್ಯದಲ್ಲಿ ಚುನಾವಣ ಕಾವು ಜೋರಾಗಿರುವ ಸಂದರ್ಭದಲ್ಲಿ ಅಶೋಕ್‌ ಕಶ್ಯಪ್‌ ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ ಮಾಡಿದ್ದಾರೆ.

.

ಈ ಚಿತ್ರದ ಮೂಲಕ ರವಿ ಎನ್ನುವ ನಟರನ್ನು ಸ್ಯಾಂಡಲ್‌ವುಡ್‌ಗೆ ನಾಯಕರಾಗಿ ಪರಿಚಯಿಸುತ್ತಿದ್ದಾರೆ. ಇವರ ಜತೆ ಪ್ರಿಯಾಮಣಿ, ದಿವ್ಯಾ ಉರುಡುಗ ಸಹ ನಟಿಸಿದ್ದಾರೆ. ನಾಯಕ ನಟ ರವಿಗೆ ಈ ಚಿತ್ರದಲ್ಲಿ ದ್ವಿಪಾತ್ರ ಅಂತೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನ್ನು ಲಕ್ಷಾಂತರ ಮಂದಿ ನೋಡಿದ್ದಾರೆ.

.

ಈ ಸಿನಿಮಾದಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬ ಕೊಲೆಯಾಗುವ ಕಥೆಯಿದೆ.ಈ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ. ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್‌. ಸೀತಾರಾಮ ಅವರು ಈ ಸಿನಿಮಾದ ದೊಡ್ಡ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

.

ಈ ಸಿನಿಮಾದ ಬಿಡುಗಡೆ ಚುನಾವಣೆ ಸಂದರ್ಭದಲ್ಲೇ ಆಗುತ್ತದೆ. ತಮಿಳಿನಲ್ಲಿ ಧನುಷ್‌ ಮತ್ತು ತ್ರಿಶಾ ನಟಿಸಿದ್ದ ಕೊಡಿ ಚಿತ್ರದ ರಿಮೇಕ್‌ ಇದಾಗಿದ್ದು, ಧನುಷ್‌ ಪಾತ್ರದಲ್ಲಿ ರವಿ ಕಾಣಿಸಿಕೊಂಡರೆ ತ್ರಿಷಾ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.

.

#Dhwaja #Cineloka 

 

ಹಿಂದಿಯಲ್ಲಿ ದೊಡ್ಡ ಹಿಟ್‌ ಆಗಿರುವ ಕ್ವೀನ್‌ ಚಿತ್ರದ ಕನ್ನಡ ಅವತರಿಣಿಕೆ ಬಟರ್‌ ಫ್ಲೈ ಚಿತ್ರದ ಕೊನೆಯ ಹಂತದ ಶೂಟಿಂಗ್‌ ಗ್ರೀಸ್‌ ದೇಶದಲ್ಲಿ ನಡೆಯುತ್ತಿದೆ.

ಪಾರುಲ್‌ ನಾಯಕಿಯಾಗಿರುವ ಈ ಚಿತ್ರವನ್ನು ನಟ ರಮೇಶ್‌ ಅರವಿಂದ್‌ ನಿರ್ದೇಶನ ಮಾಡುತ್ತಿದ್ದಾರೆ.

.

ಈ ನಡುವೆ ಮೈಸೂರಿನ ಶೂಟಿಂಗ್‌ ಸಮಯದಲ್ಲಿ ಜೇನು ನೋಣಗಳ ಅಟ್ಯಾಕ್‌ನಿಂದ ಸ್ವಲ್ಪ ಆರೋಗ್ಯ ಕೆಡಿಸಿಕೊಂಡಿದ್ದ ಪಾರುಲ್‌ ಯಾದವ್‌ ಈಗ ಚೇತರಿಸಿಕೊಂಡಿದ್ದು, ಶೂಟಿಂಗ್‌ ನಿಮಿತ್ತು ಗ್ರೀಸ್‌ಗೆ ಹಾರಿದ್ದಾರೆ. ಅಲ್ಲಿ ಪ್ರವಾಸಿ ಸ್ಥಳಗಳಿಗೆಲ್ಲ ಭೇಟಿ ನೀಡಿ ಫೋಟೋ ತೆಗೆದುಕೊಂಡು ಅದನ್ನು ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡಿದ್ದಾರೆ.

.

ಬಟರ್‌ ಫ್ಲೈ ಚಿತ್ರ ಜೂನ್‌ ತಿಂಗಳಿನಲ್ಲಿ ತೆರೆಗೆ ಬರಬಹುದು. ಸಾಗರ, ಬೆಂಗಳೂರು, ಪ್ಯಾರೀಸ್‌ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ಸೀರಿಯಲ್‌ನ ಸ್ಟಾರ್‌ ನಿರ್ದೇಶಕಿ ಎಂಬ ಖ್ಯಾತಿ ಇರುವ ಶ್ರುತಿ ನಾಯ್ಡು ಪ್ರೀಮಿಯರ್‌ ಪದ್ಮಿನಿ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್‌, ರೋಜಾ ಖ್ಯಾತಿಯ ಮಧುಬಾಲಾ, ಸುಧಾರಾಣಿ ನಟಿಸುತ್ತಿದ್ದಾರೆ.
.
ಚಿತ್ರವು ಇಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿತು. ನಿರ್ದೇಶಕ ದಿನಕರ್ ತೂಗುದೀಪ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
.
 ಕಿರುತೆರೆಯಲ್ಲಿ ಹೆಸರು ಮಾಡಿರುವ ರಮೇಶ್‌ ಇಂದಿರಾ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರೀಮಿಯರ್‌ ಪದ್ಮನಿ ಕಾರು ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಗೀತಾ ಬ್ಯಾಂಗಲ್‌ಸ್ಟೋರ್‌ ಖ್ಯಾತಿಯ ಪ್ರಮೋದ್‌ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮೋದ್‌ ಜತೆ ಹಿತಾ ಚಂದ್ರಶೇಖರ್‌ ಕಾಂಬಿನೇಷನ್‌ ಇರಲಿದೆ.
.
ಚಿತ್ರಕ್ಕೆ ಯೋಗರಾಜ್‌ ಭಟ್ಟರ ಸಾಹಿತ್ಯ ಇದ್ದು, ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಫೋಟೋ ಶೂಟ್‌ ನಡೆದಿದ್ದು, ಸ್ಯಾಂಡಲ್‌ವುಡ್‌ನ ಸೆಲೆಬ್ರಟಿ ಫೋಟೋಗ್ರಫರ್‌ ಮಹೇನ್‌ ಸಿಂಹ ಫೋಟೋ ಶೂಟ್‌ ಮಾಡಿದ್ದಾರೆ.
.
#PremierPadmini #Cineloka #NavarasaNayakaJaggesh

 

ಇತ್ತೀಚಿನ ದಿನಗಳಲ್ಲಿ ಹಳೇ ಚಿತ್ರಗಳ ಟೈಟಲ್‌ಗಳನ್ನು ರಿಸೈಕಲ್‌ ಮಾಡುವ ಪ್ರಕ್ರಿಯೆ ಹೆಚ್ಚಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ಎಡಕಲ್ಲು ಗುಡ್ಡದ ಮೇಲೆ. ಕೆಲ ವರ್ಷಗಳ ಹಿಂದೆ ಪುಟ್ಟಣ್ಣ ಕಣಗಾಲ್‌ ನಿರ್ದೇಶನ ಮಾಡಿದ್ದ ಈ ಚಿತ್ರ ಯಶಸ್ಸು ಕಂಡಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಬಿಡುಗಡೆಗೆ ಸಿದ್ಧಗೊಂಡಿದೆ.

.

ಖಳನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿವಿನ್‌ ಸೂರ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಹೇಳಲಾಗಿದೆ. ಬಾಂದವ್ಯಗಳ ಬಗ್ಗೆ ಗಮನ ಹರಿಸದೆ, ವಸ್ತು ಮೇಲೆ ಪ್ರೀತಿ ಜಾಸ್ತಿ ತೋರಿಸಿ, ಹಣದ ಹಿಂದೆ ಹೋದಾಗ ಏನೇನು ಘಟನೆಗಳು ನಡೆಯುತ್ತವೆ ಎಂಬುದನ್ನು ಹೇಳಲಾಗಿದೆ. ಇಂತಹ ಸಂಗತಿಗಳು ಭೂತ, ವರ್ತಮಾನದಲ್ಲಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಆಗಬಹುದು.

.

ಈ ಸಿನಿಮಾಗೆ ಆರತಿ,ಜಯಂತಿ ಮತ್ತು ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಲು ಯೋಜನೆ ಹಾಕಲಾಗಿತ್ತು. ಆದರೆ ಜಯಂತಿ ಆರೋಗ್ಯ ಸರಿ ಇರಲಿಲ್ಲ. ಆರತಿ ಸಂಪರ್ಕಕ್ಕೆ ಸಿಗಲಿಲ್ಲ. ಕಡೆಗೆ ಸಿಕ್ಕಿದ್ದು ಚಂದ್ರಶೇಖರ್‌ ಒಬ್ಬರೆ. ಅವರು ಇದ್ದಾರೆ ಎಂದ ಮಾತ್ರಕ್ಕೆ ಹಳೇ ಚಿತ್ರಕ್ಕೂ ಇದಕ್ಕು ಹೊಲಿಕೆ ಇಲ್ಲ ಅಂತಾರೆ ನಿರ್ದೇಶಕರು.

.

ಈ ಚಿತ್ರದಲ್ಲಿ ದತ್ತಣ್ಣ, ಮೂಗು ಸುರೇಶ್‌, ಮನ್‌ದೀಪ್‌, ರವಿಭಟ್‌ ಸೇರಿದಂತೆ ಒಂದಷ್ಟು ಅನುಭವಿಗಳ ತಂಡ ಇದ್ದರೆ ನಾಯಕಿ ಸ್ವಾತಿಶರ್ಮಾ , ನಕುಲ್‌ ರಂಥಹ ಹೊಸಬರು ಸಹ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಐದು ಹಾಡುಗಳಿಗೆ ಆಶಿಕ್‌ ಅರುಣ್‌ ಸಂಗೀತ ನೀಡಿದ್ದಾರೆ. ಜಿ.ಪಿ.ಪ್ರಕಾಶ್‌ ನಿರ್ಮಾಣ ಮಾಡಿದ್ದಾರೆ.

.

#EdakalluGuddadaMele #Cineloka

ಕಳೆದ ವಾರ 50 ದಿನ ಪೂರೈಸಿದ ಟಗರು ಚಿತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈಗ ಆ ಚಿತ್ರವನ್ನು ಇಂಗ್ಲೇಂಡ್‌ ಕ್ರಿಕೆಟ್‌ ಆಟಗಾರ ಒವೈಶ್‌ ಶಾ ನೋಡಿ ಮೆಚ್ಚಿಕೊಂಡಿದ್ದಾರೆ.
.
ಅಂದ ಹಾಗೆ ಒವೈಶ್‌ ಶಾ ಗೆ ಟಗರು ಮೊಟ್ಟ ಮೊದಲ ಕನ್ನಡ ಸಿನಿಮಾ. ಅಲ್ಲದೆ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆಯನ್ನು ನೋಡಿ ಮೆಚ್ಚಿಕೊಂಡು, ಕವಚ ಶೂಟಿಂಗ್‌ ಸೆಟ್‌ಗೆ ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.
.
ಅಲ್ಲದೇ ಸಿನಿಮಾ ನೋಡಿ ಬಂದ ಕೂಡಲೇ ಟ್ವೀಟರ್‌ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದಿನೇ ದಿನೇ ಜನರನ್ನು ಸೆಳೆಯುತ್ತಿರುವ ಟಗರು ಇಂಗ್ಲೇಂಡ್‌ ಕ್ರಿಕೆಟ್‌ ಆಟಗಾರನನ್ನು ಸೆಳೆದಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆ ಬೆಳವಣಿಗೆಯಾಗಿದೆ.
.
#Tagaru #OwaisShah #Cineloka
 
ಟ್ರೇಲರ್‌ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿರುವ ಎಟಿಎಂ ಚಿತ್ರದಲ್ಲಿ ನಾಯಕನ ಜತೆ ವಿಲನ್‌ ಕೂಡಾ ಮುಖ್ಯವಾಗಿದ್ದು, ಅದಕ್ಕಾಗಿ ಚಿತ್ರದಲ್ಲಿ ಒಂದು ಹಾಡನ್ನು ಇಡಲಾಗಿದೆ. ಇನ್ನು ಈ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ಸೂರ್ಯ ನಟಿಸಿದ್ದು, ಅದಕ್ಕಾಗಿ ಅವರು ಒಂದು ವರ್ಷ ಗಡ್ಡಕ್ಕೆ ಕತ್ತರಿ ಹಾಕಿಲ್ಲವಂತೆ.
.
 AH6I8945
ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ದಾಳಿಯನ್ನು ತಮ್ಮ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ ನಿರ್ದೇಶಕರು. ಮಹಿಳೆಯೊಬ್ಬರ ಕೊಲೆ ಪ್ರಯತ್ನದ ಸುತ್ತ ಇರುವ ಮನಸ್ಥಿತಿಯನ್ನು ಈ ಚಿತ್ರದಲ್ಲಿ ಹೇಳುತ್ತಿದ್ದಾರಂತೆ.
.
ಕೊಲೆ ಪ್ರಯತ್ನದ ಕಥೆ ಸಿನಿಮಾದಲ್ಲಿದ್ದರೂ, ಎಲ್ಲಿಯೂ ರಕ್ತದ ಕಲೆಗಳು ಕಾಣುವುದಿಲ್ಲ. ಭಯ ಹುಟ್ಟಿಸುವಂಥ ದೃಶ್ಯಗಳೂ ಇಲ್ಲ. ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವಂಥ ಸಿನಿಮಾವಂತೆ.
.
ಈ ಚಿತ್ರದಲ್ಲಿ ಕ್ರೈಮ್‌ ಜತೆಗೆ ಪ್ರೀತಿ ಕಥೆಯನ್ನು ನಿರ್ದೇಶಕರು ಹೇಳಿದ್ದಾರೆ. ಶೋಭಿತಾ ಮತ್ತು ಹೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೋಭಿತಾ ಈ ಚಿತ್ರದಲ್ಲಿ ಐಟಿ ಕಂಪೆನಿಯ ಹುಡುಗಿಯಾಗಿ ನಟಿಸಿದ್ದಾರೆ. ಕ್ಯಾಬ್‌ ಚಾಲಕನಾಗಿ ಕಿರುತೆರೆ ನಟ ಚಂದೂ ನಟಿಸಿದ್ದಾರೆ.
.
ಈ ಚಿತ್ರಕ್ಕೆ ಎಸ್‌.ವಿ. ನಾರಾಯಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಏ.20 ರಂದು ಎಟಿಎಂ ಬಿಡುಗಡೆಯಾಗುತ್ತಿದೆ.
.
#ATM #AttemptToMurder #Cineloka
 ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮತ್ತು ಚಿರಂಜೀವಿ ಸರ್ಜಾ ನಟನೆಯ ಸೀಜರ್‌ ಚಿತ್ರದ ವಿವಾದಿತ ಡೈಲಾಗ್‌ನ್ನು ಚಿತ್ರತಂಡ ಕತ್ತರಿಸಿದೆ.
.
ಜನವರಿ 7ರಂದು ಯೂಟ್ಯೂಬಲ್ಲಿ ರಿಲೀಸ್ ಆಗಿದ್ದ 'ಸೀಜರ್'​ ಚಿತ್ರದ ಟ್ರೈಲರ್​ನಲ್ಲಿ 'ಹಸು ತಲೆ ಕಡಿಯೋದೂ ಒಂದೇ, ಹೆತ್ತ ತಾಯಿಯ ತಲೆಹಿಡಿಯೋದೂ ಒಂದೇ' ಎಂದು ರವಿಚಂದ್ರನ್ ಡೈಲಾಗ್ ಹೊಡೆಯುತ್ತಾರೆ,. ಆದರೆ ಇದೀಗ ರವಿಚಂದ್ರನ್ ಹೇಳಿದ ಡೈಲಾಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ನಿರ್ದೇಶಕ ವಿನಯ್ ಕೃಷ್ಣ ಗೆ ಸೋಶಿಯಲ್ ಮೀಡಿಯಾಗಳಲ್ಲಿ ಬೈಗುಳ ಕೂಡಾ ಕೇಳಿ ಬಂದಿದೆ.
.
ಈ ಹಿನ್ನೆಲೆಯಲ್ಲಿ ವಿನಯ್ ಕೃಷ್ಣ ಈ ಡೈಲಾಗ್​ನ್ನು ತೆಗೆದಿದ್ದಾರೆ. ಸೀಜರ್‌ ಚಿತ್ರ ಕಾರು ಲೋನ್‌ ಮಾಫಿಯಾ ಸುತ್ತ ನಡೆಯುವ ಸಿನಿಮಾವಾಗಿದೆ. ಚಿತ್ರದಲ್ಲಿ ಚಿರು ಸರ್ಜಾ, ಪಾರುಲ್ ಯಾದವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಗ್​ಬಾಸ್​ ವಿನ್ನರ್​ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
.
#Seizer #Cineloka
"ಅಸತೋಮ ಸದ್ಗಮಯ" ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಸಿಕ್ಕಿರುವ ರೆಸ್ಪಾನ್ಸ್‍ಗೆ ಚಿತ್ರತಂಡ ಈಗಾಗಲೆ ಫುಲ್ ಖುಷಿಯಾಗಿದೆ.
.
ಟ್ರೇಲರ್ ನೋಡುವಾಗ ಇದೊಂದು ಎಜುಕೇಶನ್ ಸಿಸ್ಟಂ ಬಗ್ಗೆ ಮಾಡಿರುವಂತಹ ಸಿನೆಮಾ, ಹೆತ್ತವರು ಮತ್ತು ಮಕ್ಕಳ ಸಂಬಂದದ ಬಗ್ಗೆ, ಮುಚ್ಚುತ್ತಿರುವ ಸರಕಾರಿ ಶಾಲೆಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂಬುದು ತಿಳಿಯುತ್ತದೆ. ಜೊತೆಗೆ ಹಾರರ್, ಸಸ್ಪೆನ್ಸ್, ರೊಮ್ಯಾನ್ಸ್ ಕೂಡ ಇರುವುದರಿಂದ ಇದು ಬರೀ ಮೆಸೇಜ್ ಸಿನೆಮಾವಲ್ಲದೆ ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್‍ನಿಂದ ಕೂಡಿರುವಂತಹ ಸಿನೆಮಾ ಎಂಬುದು ತಿಳಿಯುತ್ತದೆ.
.
ಟ್ರೇಲರ್‍ಗೆ ಕನ್ನಡ ಚಿತ್ರರಂಗದ ತಾರೆಯರಾದ, ಶರಣ್, ಚಂದನ್ ಶೆಟ್ಟಿ, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್, ಪ್ರಥಮ್ ಮುಂತಾದವರು ಉತ್ತಮ ಪ್ರತಿಕ್ರೀಯಯನ್ನ ನೀಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. "ಅಸತೋಮ ಸದ್ಗಮಯ" ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಿಧಾನವಾಗಿ ಕನ್ನಡ ಸಂಗೀತ ಪ್ರೇಮಿಗಳನ್ನ ಆಕರ್ಷಿಸುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಉತ್ತಮವಾಗಿದ್ದು, ವಿಜಯ್ ಪ್ರಕಾಶ್ ಹಾಡಿರುವಂತಹ ಸ್ಕ್ರಿಪ್ಟ್ ಬರೆದೋನು ಹಾಡು ಹಾಗೂ ಓ ಸಂಜೆ ಹಾಡಿನ ಬಗ್ಗೆ ಬಹಳಷ್ಟು ಮಂದಿ ಸ್ವತಹ ಫೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
.
ರಾಧಿಕಾ ಚೇತನ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಐಕೇರ್ ಬ್ಯಾನರಿನಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದು, ರಾಜೇಶ್ ವೇಣೂರ್ ನಿರ್ದೇಶಿಸುತ್ತಿದ್ದಾರೆ.
.

ಕೆಲ ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಇದೇ ಮೇ ೨ಕ್ಕೆ ವಿವಾಹ ಬಂಧನಕ್ಕೊಳಗಾಗುತ್ತಿದ್ದಾರೆ. 

ಹಲವು ದಿನಗಳ ಜೋಡಿ ಹಕ್ಕಿಗಳಾದ ಇಬರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.ಅದೇ ದಿನ ಸಂಜೆ ಆರತಕ್ಷತೆಯನ್ನೂ ಆಯೋಜಿಸಲಾಗಿದೆ.
.

ಒಂದು ದಶಕದಿಂದ ಸ್ನೇಹಿತರಾಗಿದ್ದ ಈ ಜೋಡಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಇದೇ ಮೇ.2ರಂದು ಬೆಳಿಗ್ಗೆ 10.30ರಿಂದ 11ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ, ಹಿಂದೂ ಧರ್ಮದ ಸಾಂಪ್ರದಾಯದಂತೆ ವಿವಾಹ ನೆರವೇರಲಿದೆ. ವಿವಾಹಕ್ಕೆ ಒಂದು ವಾರ ಮುಂಚಿತವಾಗಿಯೇ ಹಲವು ಕಾರ್ಯಕ್ರಮಗಳು ನಡೆಯಲಿದೆ. ಏಪ್ರಿಲ್ ಕಡೆಯ ವಾರದಲ್ಲಿ ಹಳದಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮೇಘನಾ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
.

ಮೇ.2 ರಂದು ಸಾಂಪ್ರದಾಯಿಕ ಕಾಂಚೀವರಂ ಸೀರೆಯನ್ನು ಮೇಘನಾ ಧರಿಸಲಿದ್ದು, ಚಿರು ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಲಿದ್ದಾರೆ. ಅದೇ ದಿನ ಸಂಜೆ ಆರತಕ್ಷತೆ ಕೂಡ ಇದ್ದು ಗ್ಲಿಟರ್ ಮತ್ತು ಗೋಲ್ಡ್ ಥೀಮ್'ನಲ್ಲಿ ಚಿರು ಹಾಗೂ ಮೇಘನಾ ಕಂಗೊಳಿಸಲಿದ್ದಾರೆ.
.

ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ಯಾಥೊಲಿಕ್ ಆಗಿರುವುದರಿಂದ ನಗರದ ಚರ್ಚ್'ನಲ್ಲಿ ಕ್ಯಾಥೊಲಿಕ್ ಸಂಪ್ರದಾಯದಂತೆಯೂ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಇದೊಂದು ಇಂಗ್ಲಿಷ್ ಥೀಂ ಕಾರ್ಯಕ್ರಮವಾಗಿರುತ್ತದೆ.
.
#MeghanaChiru #Cineloka

Page 19 of 23

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top