nata

ttm

adweb

udgharsha

As per the recently released BARC weekly data (Urban + Rural) for the first week of the year 2019, Zee Kannada has claimed the top position in the Kannada market with a total of 415697 impressions ‘000s; 171167impressions ‘000s in the urban market, 244530 in the rural market, withrobust growth across its prime-time fiction shows. Continuing to hold the leadership position in the Urban market for the last 12 weeks, Zee Kannada has now earned thedistinction of being the leader for the first time in the last 13 years.

.

Taking to the challenge of reaching the market leader position, Zee Kannada has secured 260314 impressions ‘000s in its prime-time band, with its top shows including Yaare Nee Mohini, Paaru, and Brahmangantu. The channel has also secured leadership position across its prime-time slots in the Non-Fiction shows such a SRGMP15 & Drama Juniors 3.

.

Commenting on the ratings, Raghavendra Hunsur, Business Head of Zee Kannada said, “I am glad to congratulate the Zee Kutumba on kick-starting the year with a well-deserved celebration on achieving our goal of securing top honours in the Kannada GEC spacel. With the channel’s recently refreshed brand image, Zee Kannada has grown by leaps and bounds on the back of curating interesting concepts, storylines, and our success stands testimony to our steadily strengthening relationship with our viewers. We are extremely thrilled to be the number one Kannada general entertainment channel for the first time in the last 13 years and humbled by the overwhelming support of our partners and ardent viewers.”

 

Source: BARC India

 

ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ 'ಕವಚ' ಸಿನಿಮಾ ಮಲಯಾಳಂನ 'ಒಪ್ಪಂ' ರಿಮೇಕ್‌ ಆಗಿದ್ದರೂ, ಆ ಸಿನಿಮಾದ ಕಂಪ್ಲೀಟ್‌ ನಕಲಲ್ಲ ಎನ್ನುವುದು ನಿರ್ದೇಶಕರ ಮಾತಾಗಿದೆ.

.

ಚಿತ್ರ ಒಪ್ಪಂ ರೀಮೇಕ್‌ ಆಗಿದ್ದರೂ ಈ ಸಿನಿಮಾದಲ್ಲಿ ಕನ್ನಡದ ಸೊಗಡಿದೆ. ಶಿವರಾಜ್‌ಕುಮಾರ್‌ ಅವರು ಚಿತ್ರಕಥೆಯನ್ನು ಕಂಪ್ಲೀಟ್‌ ಚೇಂಜ್‌ ಮಾಡಿಕೊಂಡು ಹೇಳಿದಾಗಲೇ ನಟಿಸಲು ಒಪ್ಪಿಕೊಂಡರಂತೆ. ಹಾಗಾಗಿ ಅಭಿಮಾನಿಗಳು ಇದನ್ನು ಸ್ವಮೇಕ್‌ ರೀತಿಯಲ್ಲೇ ಒಪ್ಪಿಕೊಳ್ಳಬಹುದು ಎನ್ನುತ್ತಾರವರು.

.

ಈ ಚಿತ್ರದಲ್ಲಿ ಡಾ.ಶಿವರಾಜ್‌ಕುಮಾರ್‌ ಅಂಧನಾಗಿದ್ದರೂ ಫೈಟ್‌ ಸಹ ಮಾಡಿದ್ದಾರೆ. ಇದೇ 18ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಶಿವರಾಜ್‌ಕುಮಾರ್‌ ಜತೆ ಇಷಾ ಕೊಪ್ಪಿಕರ್‌, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ.

ನಿಖಿಲ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ 'ಸೀತಾರಾಮಾ ಕಲ್ಯಾಣ' ಸಿನಿಮಾದ ಟ್ರೇಲರ್‌ ಮತ್ತು ಪ್ರೀ ರಿಲೀಸ್‌ ಕಾರ್ಯಕ್ರಮ ಮೈಸೂರಿನಲ್ಲಿ ಜ.19ಕ್ಕೆ ನಡೆಯುತ್ತದೆ.

.

ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ಮೂರು ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಭರ್ಜರಿ ಆ್ಯಕ್ಷನ್‌ ಸನ್ನೀವೇಶಗಳಿದ್ದು, ಈಗ ಬರುವ ಟ್ರೇಲರ್‌ನಲ್ಲಿ ಏನಿದೆ ಎಂಬುದನ್ನು ನಿಖಿಲ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

.

ನನ್ನ ರಾಜ ನಾನು,ರಾಣಿ ನೀನು ಎಂಬ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ಹಿಟ್‌ ಆಗಿದ್ದು, ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿದೆ. ನೂರಕ್ಕೂ ಹೆಚ್ಚುಮುಖ್ಯ ಕಲಾವಿದರು ನಟಿಸಿರುವ ಈ ಸಿನಿಮಾದಲ್ಲಿ ನಿಖಿಲ್‌ಗೆ ಜೋಡಿಯಾಗಿ ರಚಿತಾರಾಮ್‌ ನಟಿಸಿದ್ದಾರೆ. ಶರತ್‌ಕುಮಾರ್‌, ಮಧುಬಾಲ,ರವಿಶಂಕರ್ ಸೇರಿದಂತೆ ದೊಡ್ಡ ದೊಡ್ಡ ನಟರು ನಟಿಸಿದ್ದಾರೆ,

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್‌ ನಟನೆಯ 'ಯಜಮಾನ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದೆ. 2018ರ ಕೊನೆಯ ಎರಡು ದಿನ ಮತ್ತು 2019ರ ಆರಂಭದ ಎರಡು ದಿನಗಳು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಹಾಕಿದ್ದ ಭರ್ಜರಿ ಸೆಟ್‌ನಲ್ಲಿ ಹಾಡಿನ ಶೂಟಿಂಗ್‌ ಮುಗಿಸುವ ಮೂಲಕ ಚಿತ್ರವನ್ನೂ ಕಂಪ್ಲೀಟ್‌ ಮಾಡಿದೆ ಚಿತ್ರತಂಡ.

.

ಶೈಲಜಾ ನಾಗ್‌ ಮತ್ತು ಬಿ ಸುರೇಶ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಪಿ ಕುಮಾರ್‌ ಮತ್ತು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಮೋಶನ್‌ ಪೋಸ್ಟರ್‌ ಮತ್ತು ಪೋಸ್ಟರ್‌ಗಳಿಂದ ಸಿನಿಮಾ ಮೇಲೆ ದರ್ಶನ್ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನು ಕಟ್ಟಿಕೊಂಡಿದ್ದಾರೆ. ದರ್ಶನ್ ಸಹ ಈ ಚಿತ್ರದ ಬಗ್ಗೆ ಬಹಳ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಹರಿಕೃಷ್ಣ ಸಂಗೀತದ ಜತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

.
.
ಮೈಸೂರಿನಲ್ಲಿ ನಡೆದ ಅಪಘಾತ, ಅಂಬರೀಷ್‌ ಮೃತಪಟ್ಟ ಕಾರಣದಿಂದಾಗಿ ಚಿತ್ರೀಕರಣ ಎರಡು ಬಾರಿ ಪೋಸ್ಟ್‌ ಪೋನ್‌ ಆಗಿತ್ತು. ಚಿತ್ರೀಕರಣದ ಜತೆ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಸಹ ಕಂಪ್ಲೀಟ್‌ ಆಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್‌ ಮಾಡಲಿದೆಯಂತೆ.

ಚಿತ್ರದ ಮೊದಲ ಹಾಡು "ಶಿವನಂದಿ" ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲಿದೆ ಚಿತ್ರತಂಡ.

.

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ `ಲಂಬೋದರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

.

ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ.

.

ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.

.

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ, ಭೂಮಿಕಾ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 


ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ “ಚಂದ್ರಕುಮಾರಿ” ಧಾರಾವಾಹಿ ಇದೇಜನವರಿ 7 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.
.

ಶತಮಾನಗಳ ಹಿಂದೆ ನಡೆದು ಹೋಗಿದ್ದ್ದಅಮ್ಮ ಮಗಳ ನಡುವಿನ ಸಂಘರ್ಷದಕಥೆಗೆ ಮತ್ತೆ ಮರುಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇ ಚಂದ್ರಕುಮಾರಿ ಧಾರಾವಾಹಿಯ ಜೀವಾಳ. ಈಗಾಗಲೇ ನಂದಿನಿ, ಜೈ ಹನುಮಾನ್‍ನಂಥ ಅದ್ದೂರಿ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಲೋಕದಲ್ಲಿಯೇ ಹೊಸ ದಾಖಲೆ ಬರೆದ ಉದಯ ಟಿವಿ ಚಂದ್ರಕುಮಾರಿ ಮೂಲಕ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ನಿಟ್ಟಿನಲ್ಲಿದೆ. ಹೊಸ ಕಾಲದಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂ ಅದ್ದೂರಿತನ ಎದ್ದುಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್‍ಗಳು ವೀಕ್ಷಕರ ಮನರಂಜನೆಗೆ ಭರ್ಜರಿ ಸರಕು ಒದಗಿಸುತ್ತವೆ.
.
ಇದರಜೊತೆ ಸಂಬಂಧಗಳ ಮಹತ್ವ, ಪ್ರೀತಿ, ಆ್ಯಕ್ಷನ್‍ಎಲ್ಲವೂಇದ್ದು ನೋಡುಗರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ. ಚಂದ್ರಕುಮಾರಿ ಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದು ತುಂಬಾನೆ ಕಲರ್‍ಫುಲ್ಲಾಗಿ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದರಡಾನ್, ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಜೊತೆಗೆ ಖ್ಯಾತ ನಟಿ ರಾಧಿಕಾ ಶರತ್‍ಕುಮಾರ್ ಹಾಗೂ ನಮ್ಮ ಕನ್ನಡಚಿತ್ರರಂಗದ ಖ್ಯಾತ ಕಲಾವಿದರು ಮತ್ತು ಕಲಾ ನಿರ್ದೇಶಕರಾದ ಅರುಣ್ ಸಾಗರ್, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಶೋಭಾ ನಾಯ್ಡು ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.
.

“ಚಂದ್ರಕುಮಾರಿ” ಇದೇ ಜನವರಿ 7ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್‌ ಸಿನಿಮಾದ ಕುಸ್ತಿ ಟೀಸರ್‌ನ್ನು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ.

.

ಈಗಾಗಲೇ ರಾಮೋಜಿ ಫಿಲಂ ಸಿಟಿಯಲ್ಲಿ 75% ಭಾಗದಷ್ಟು ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ, ಸದ್ಯ ಟೀಸರ್‌ನ ತಯಾರಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿವೆ.

.

ಇನ್ನು ಸಂಕ್ರಾಂತಿ ಹಬ್ಬಕ್ಕೆ ಅಂದರೆ ಜ.15ರ ಸಂಜೆ 4.45ಕ್ಕೆ ಕನ್ನಡ ವರ್ಷನ್‌ ಟೀಸರ್‌ ಬಿಡುಗಡೆಯಾಗುತ್ತಿದೆ ಎಂದು ಸ್ವತಃ ಕಿಚ್ಚ ಸುದೀಪ್‌ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

.

ಹೆಬ್ಬುಲಿ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಿನಿಮಾಟೋಗ್ರಫರ್‌ ಕೃಷ್ಣ ಪೈಲ್ವಾನ್‌ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಈ ಸಿನಿಮಾದಲ್ಲಿ ಕಬೀರ್‌ ದುಹಾನ್‌ ಸಿಂಗ್‌, ಸುನೀಲ್‌ ಶೆಟ್ಟಿ ಸೇರಿದಂತೆ ಭಾರಿ ತಾರಾಗಣವೇ ಇದೆ. ಒಟ್ಟಿನಲ್ಲಿ ಕಿಚ್ಚನ ಅಭಿಮಾನಿಗಳಿಗೆ ಈ ಬಾರಿ ಸಂಕ್ರಾಂತಿ ಭರ್ಜರಿಯಾಗಿರುತ್ತದೆ.

 

ನಿಖಿಲ್‌ಕುಮಾರ್‌ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ಇದೇ 25ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗುತ್ತಲೇ ಇದೆ. ಈ ಸಿನಿಮಾದಲ್ಲಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳಿವೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.

.

ಕಾಮಿಡಿ, ಫ್ಯಾಮಿಲಿ ಎಮೋಷನ್ಸ್‌, ಲವ್‌ಸ್ಟೋರಿ, ಮಾಸ್‌ ಫೈಟ್‌ಗಳು, ಎಲ್ಲವೂ ಇದ್ದು ಇದೊಂದು ಪವರ್‌ ಪ್ಯಾಕ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಎಂದಿದ್ದಾರವರು.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಮತ್ತು ಲಿರಿಕಲ್‌ ಹಾಡುಗಳಿಂದ ಸಿನಿಮಾ ಸಖತ್‌ ರಿಚ್‌ ಆಗಿ ಮೂಡಿಬಂದಿರುವುದು ಗೊತ್ತಾಗುತ್ತದೆ. ಈ ಚಿತ್ರಕ್ಕೆ ಪದ್ಮಾವತ್‌ ಹಿಂದಿ ಚಿತ್ರಕ್ಕೆ ಡಿ ಐ ಮಾಡಿದ್ದ ಆಶೀರ್ವಾದ್‌ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ರಾಮ್‌ಲಕ್ಷ್ಮಣ್‌ ಫೈಟ್ಸ್‌ ಕಂಪೋಸ್‌ ಮಾಡಿದ್ದಾರೆ. ಇವೆಲ್ಲವೂ ಸೇರಿಕೊಂಡು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆ ಮೇಲೆ ಕಾಣಿಸುತ್ತದೆ. ನಿಖಿಲ್‌ ಅವರಂಥೂ ಅದ್ಭುತವಾಗಿ ನಟಿಸಿದ್ದಾರೆ. ಅವರ ಕೆಲ ಲುಕ್ಸ್‌ಗಳು ಈ ವರ್ಷದಲ್ಲಿ ಟ್ರೆಂಡ್‌ ಆಗುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತಾರೆ ಹರ್ಷ.

.

ಸಿನಿಮಾ ಇದೇ ಜ.25 ಕ್ಕೆ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುತ್ತದೆ.

ಪ್ರಿಯಾಮಣಿ , ಮಯೂರಿ ಮತ್ತು ಕಿಶೋರ್‌ ನಟನೆಯ ನನ್ನ ಪ್ರಕಾರ ಸಿನಿಮಾದ ಫಸ್ಟ್‌ ಲುಕ್‌ನ್ನು ರಕ್ಷಿತ್‌ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.

.

ವಿನಯ್‌ ಬಾಲಾಜಿ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಗುರುರಾಜ್‌ ಎಸ್‌ ಅವರು ಬಂಡವಾಳ ಹೂಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿದೆ.

ಈ ಸಿನಿಮಾದ ಫಸ್ಟ್ ಲುಕ್‌ ನೋಡಿದರೆ ನನ್ನ ಪ್ರಕಾರ ಒಂದು ಥ್ರಿಲ್ಲರ್‌ ಸಿನಿಮಾ ಎಂಬುದು ಕನ್ಫರ್ಮ್‌ ಆಗುತ್ತದೆ. ವಿಶೇಷ ಎಂದರೆ ಪ್ರಿಯಾಮಣಿ ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದೆ.
.
ವಿನಯ್‌ ಬಾಲಾಜಿ ಈಗಾಗಲೇ ಎರಡು ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಮುಂಬೈನಲ್ಲಿ ವಿಎಫ್‌ಎಕ್ಸ್ ಕೆಲಸ ಮಾಡುತ್ತಿದ್ದ ಇವರಿಗೆ ನನ್ನ ಪ್ರಕಾರ ಚೊಚ್ಚಲ ಪ್ರಯತ್ನವಾಗಿದೆ.

ಚಿತ್ರಬೆಸ್ಟ್‌ ಫ್ರೆಂಡ್ಸ್‌ 
ನಿರ್ಮಾಣಲಯನ್‌ ಎಸ್‌. ವೆಂಕಟೇಶ್‌
ನಿರ್ದೇಶನ: ಟೇಶಿ ವೆಂಕಟೇಶ್‌
ತಾರಾಗಣಮೇಘನಾ, ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್‌ ಮತ್ತಿತರರು

.

ನೈಜ ಘಟನೆಗಳನ್ನು ಸಿನಿಮಾ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಆ ಸಾಲಿಗೆ ಹೊಸ ಸೇರ್ಪಡೆ ಬೆಸ್ಟ್‌ ಫ್ರೆಂಡ್ಸ್‌.

ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಚರ್ಚಿತವಾದ ಸಲಿಂಗ ಕಾಮ ಈ  ಸಿನಿಮಾದ ಕಥಾ ವಸ್ತು. ಸಲಿಂಗ ಕಾಮವನ್ನು ನಮ್ಮ ಸಮಾಜ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದಿಲ್ಲ. ಆದರೆ ಇಂತಹ ವಿಷಯದ ಬಗ್ಗೆ ದಿಟ್ಟ ನಿಲುವಿನೊಂದಿಗೆ ಸಿನಿಮಾ ಮಾಡಿರುವ ಟೇಶಿ ವೆಂಕಟೆಶ್‌ ಅವರ ಧೈರ್ಯವನ್ನು ಮೆಚ್ಚಲೇಬೇಕು.

.

ಹಳ್ಳಿಯಿಂದ ಸಿಟಿಗೆ ಬಂದು ಕಾಲೇಜಿಗೆ ಸೇರುವ ಆಕರ್ಷಣ ಎಂಬ ಹುಡುಗಿಗೆ, ಸೃಷ್ಠಿ ಎಂಬ ಯುವತಿಯ ಪರಿಚಯವಾಗುತ್ತದೆ. ಈ ಪರಿಚಯ ಗಾಢವಾದ ಸ್ನೇಹಕ್ಕೆ ದಾರಿ ಮಾಡಿಕೊಡುತ್ತದೆ. ವಿಶೇಷ ಎಂದರೆ ಇವರಿಬ್ಬರೂ ಒಬ್ಬರನ್ನೊಬ್ಬರು ಮೋಹಿಸಿಕೊಂಡು, ತಾವು ಯಾರನ್ನು ಮದುವೆಯಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇದನ್ನು ಒಪ್ಪದ ಪೋಷಕರು ಇಬ್ಬರನ್ನು ಬೇರೆ ಮಾಡುತ್ತಾರೆ. ಆಗ ಈ ಜೋಡಿ ಏನು ಮಾಡುತ್ತದೆ ಎಂಬುದೇ ಸಿನಿಮಾದ ಕಥೆ.

.

ಸಲಿಂಗ ಕಾಮ ಎಂಬುದು ಸಮಾಜದ ಒಂದು ಸಹಜ ಕ್ರಿಯೆ ಎಂಬುದನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಭೂಮಿಯಲ್ಲಿ ಭೂಮಿಯಲ್ಲಿ ಮನುಷ್ಯನೂ ಸೇರಿದಂತೆ ಪ್ರತಿಯೊಂದು ಜೀವಿಯೂ ದೇವರ ಸೃಷ್ಠಿ. ಪ್ರತಿ ಸೃಷ್ಟಿಯಲ್ಲೂ ಒಂದೊಂದು ವಿಶಿಷ್ಟಗುಣವಿರುತ್ತದೆ. ಪ್ರತಿಯೊಂದಕ್ಕೂ ಬದುಕುವ ಹಕ್ಕಿರುತ್ತದೆ. ಪ್ರತಿ ಸೃಷ್ಟಿಯನ್ನೂ ಅದರದ್ದೇ ಆದ ರೀತಿಯಲ್ಲಿ ಬದುಕಲು ಬಿಡಬೇಕು. ಆದರೆಅದೆಲ್ಲದನ್ನು ನೋಡುವ, ಸ್ವೀಕರಿಸುವ ಸಮಾಜದ ದೃಷ್ಟಿ ವಿಶಾಲವಾಗಿರಬೇಕು ಎಂಬ ಸಂದೇಶವನ್ನು ಸಿನಮಾದ ಕೊನೆಯಲ್ಲಿ ನಿರ್ದೇಶಕರು ನೀಡುತ್ತಾರೆ.

.

ಈ ಹಿಂದೆಯೂ ಬೇರೆ ಬೇರೆ ಭಾಷೆಗಳಲ್ಲಿ ಸಲಿಂಗ ಪ್ರೇಮದ ಬಗೆಗಿನ ಸಿನಿಮಾಗಳು ಮೂಡಿ ಬಂದಿವೆ. ಆದರೆ ಕನ್ನಡದ ಮಟ್ಟಿಗೆ ಬೆಸ್ಟ್‌ ಫ್ರೆಂಡ್ಸ್ ಹೊಸ ಪ್ರಯತ್ನ. ಸಿನಿಮಾವನ್ನು ನಿರ್ದೇಶಕು ಕನ್ನಡದ ನೇಟಿವಿಟಿಗೆ ತಕ್ಕಂತೆ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲ ವಿಭಾಗದಲ್ಲಿಯೂ ನಿರ್ದೇಶಕರು ಕೆಲಸ ಮಾಡಿರುವ ಪರಿಣಾಮವೋ ಏನೋ, ಎನೋ  ಮಿಸ್‌ ಆಗಿದೆ ಎಂಬ ಫೀಲಿಂಗ್‌ ಬರುತ್ತದೆ.

.

ನಿರ್ದೇಶಕರ ಕಲ್ಪನೆಗೆ ಕಲಾವಿದರು ಇನ್ನೊಂದಿಷ್ಟು ಸಾಥ್‌ ನೀಡಬೇಕಿತ್ತು ಎನಿಸುತ್ತದೆ. ಉಳಿದಂತೆ ಸಮಾಜದ ವಿಶಿಷ್ಟ ಸಬ್ಜೆಕ್ಟ್‌ ಒಂದನ್ನು ಸಿನಿಮಾ ಮಾದ್ಯಮದ ಮೂಲಕ ಅತಿಹೆಚ್ಚು ಜನರಿಗೆ ತಲುಪಿಸುವ ಟೇಶಿ ವೆಂಕಟೇಶ್‌ ಅವರ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗುತ್ತದೆ.

.

ರೇಟಿಂಗ್ - 2.75/5

Page 3 of 27

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top