nata

ttm

adweb

udgharsha

 


ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್, ಶಬೀನಾ ಹರ, ನಿರ್ಮಿಸಿರುವ ಮನಸಿನ ಮರೆಯಲಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಂದು ರೊಮ್ಯಾಂಟಿಕ್ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ.

.

ಈ ಚಿತ್ರಕ್ಕೆ ಪವನ್ ಕುಮಾರ್ ಛಾಯಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್.ಸಾಯಿರಾಮ್ ಚಿತ್ರಕಥೆ ಮತ್ತು ಸಂಭಾಷಣೆ, ಹರೀಶ್ ಗೌಡ ಸಂಕಲನ, ಸ್ಟಾರ್ ನಾಗಿ ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸವಿದೆ.

.

ಕೀಶೊರ್ ಯಾದವ್, ದಿವ್ಯ ಗೌಡ, ಗುರುರಾಜ್ ಬೂಪಾಲ್, ರಾಜ್, ಪುಷ್ಪ, ಶುಕ್ಲ ಭಗವತ್, ವರ್ದನ್ ತೀರ್ಥಹಳ್ಳಿ, ಮಾಸ್ಟರ್ ಕಿನ್, ಪ್ರಿಯಾಂಕ, ಸಂದೀಪ್ ಮಲಾನಿ, ವಠಾರ ಮಲ್ಲೇಶ್ ಇನ್ನೂ ಮುಂತಾದವರ ತಾರಾಬಳಗವಿದೆ.
್ಮ

 


ಕರ್ನಾಟಕದ ಮನೆ ಮನದ ಮನರಂಜನಾ ವಾಹಿನಿಯಾದ ಉದಯ ಟಿವಿ ತನ್ನಅಭೂತ ಪೂರ್ವ ಕಾರ್ಯಕ್ರಮಗಳಿಂದ ವೀಕ್ಷಕರ ಮನೆ ಮಾತಾಗಿದೆ. ಉದಯ ಟಿವಿ ದೀಪಾವಳಿಯ ಕೊಡುಗೆಯಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ. ಸಸ್ಪೇನ್ಸ್, ಥ್ರಿಲ್ಲರ್ ಹಾರರ್‍ ಮತ್ತು ಪ್ರೇಮಕಥೆಯನ್ನು ಒಳಗೊಂಡ ಹೊಸ ಕಥೆ “ದೇವಯಾನಿ” ಇದೇ ನವೆಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

.

ದೇವಯಾನಿ 8 ವರ್ಷದಿಂದ ಶ್ರೀವತ್ಸನನ್ನ ಪ್ರೀತಿಸಿರುತ್ತಾಳೆ. ಅವರ ಪ್ರೀತಿಗೆಎರಡು ಮನೆಯವರಿಂದ ವಿರೋಧವಿದೆ. 8 ವರ್ಷದ ನಂತರ ಅವರ ಮದುವೆಗೆ ಎರಡು ಕುಟುಂಬ ಒಪ್ಪಿಗೆ ಕೊಟ್ಟಿದೆ. ಹೀಗೆ ಮದುವೆ ಮಂಟಪವರೆಗೂ ಬಂದಾಗ ಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ಈ ಮದುವೆ ನಡೆದದ್ದೇ ಆದಲ್ಲಿ ದೇವಯಾನಿ ಸಾವಾಗುತ್ತದೆ ಎಂದು ಹೇಳುತ್ತಾರೆ.

.

ಅದಕ್ಕೆ ಪೂರಕವಾಗಿ, ಮದುವೆ ನಿಲ್ಲಿಸಲು ಪ್ರೇಮಿಗಳ ಸುತ್ತ ಹತ್ತಾರು ಶತ್ರುಗಳು ಸೇರುತ್ತಾರೆ.ದೇವಯಾನಿ ಮತ್ತು ಶ್ರೀವತ್ಸರನ್ನು ಕೊಲ್ಲುವ ಕುತಂತ್ರ ಮಾಡುತ್ತಾರೆ. ಈ ಎಲ್ಲಾಅಡ್ಡಿ ಆತಂಕಗಳಿಂದ ಪಾರಾಗುವ ಈ ಜೋಡಿ ಮದುವೆಯಾಗುತ್ತಾರೆ. ಮದುವೆಆದ ನಂತರವೂ ದೇವಯಾನಿ ಕಷ್ಟ ನಿಲ್ಲಲ್ಲ. ಶತಾಯಗತಾಯ ಶ್ರೀವತ್ಸ ದೇವಯಾನಿ ಜೋಡಿಯನ್ನ ಬೇರ್ಪಡಿಸಲೇ ಬೇಕೆನ್ನುವ ಕೆಲ ಹಿತ ಶತ್ರುಗಳು.

.
ಸಾವನ್ನುಗೆದ್ದು ಮತ್ತೆ ನಿನ್ನನ್ನ ಸೇರುವೆಎನ್ನುವದೇವಯಾನಿ ಕಥೆಏನಾಗುತ್ತೆ..?ದೇವಯಾನಿ ಸಾವನ್ನು ಹೇಗೆ ಗೆಲ್ಲುತ್ತಾಳೆ,ಶತ್ರುಗಳಿಂದ ಗಂಡನನ್ನ ಹೇಗೆ ರಕ್ಷಣೆ ಮಾಡ್ತಾಳೆ? ಎನ್ನುವಕುತೂಹಲ ಅಂಶದಿಂದ ಪ್ರತಿಯೊಂದು ಸಂಚಿಕೆಯಲ್ಲೂ ತಿರುವನ್ನು ಹೊಂದಿರುವ ಅಪರೂಪದ ಧಾರಾವಾಹಿ ದೇವಯಾನಿ.

.
ದೇವಯಾನಿ ಧಾರಾವಾಹಿಯನ್ನು ಸುಂದರೇಶ್‍ಅವರು ಓಂ ಸಾಯಿರಾಂಕ್ರಿಯೇಷನ್ಸ್‍ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.ಆಕ್ಷನ್‍ಕಟ್‍ ಜೊತೆಗೆ ಛಾಯಾಗ್ರಹಣ ನಿರ್ವಹಣೆಯನ್ನು ನಿರ್ದೇಶಕ ಜೊತೆಗೆ ಛಾಯಾಗ್ರಾಹಕ ಎಂ.ಕುಮಾರ್ ವಹಿಸಿಕೊಂಡಿದ್ದಾರೆ. ಕಥೆಯನ್ನು ಖ್ಯಾತ ಕಥೆಗಾರರಾದ ಗಿರಿಜಾ ಮಂಜುನಾಥ್‍ ಅವರು ಬರೆಯುತ್ತಿದ್ದು, ಸಂಭಾಷಣೆಯನ್ನು ಗೌತಮ್ ವಖಾರಿ ಬರೆಯುತ್ತಿದ್ದಾರೆ. ಮಾಮೂಲು ಅತ್ತೆ ಸೊಸೆಯ ಕಾಟ ಕಿರುಕುಳ ಕಥೆಯಿಂದ ಹೊರತಾಗಿರುವ ಈ ಹೊಸ ಧಾರಾವಾಹಿ ಪ್ರತಿಯೊಂದು ಕಂತಿನಲ್ಲೂ ಕುತೂಹಲ ತಿರುವುಗಳನ್ನು ನೀಡುತ್ತಾ ಮನರಂಜಿಸುವುದರಲ್ಲಿ ಸಂಶಯವಿಲ್ಲ ಎಂದು ತಂಡದವರು ಹೇಳುತ್ತಾರೆ.

.
“ದೇವಯಾನಿ” ಇದೇ ನವಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

ಚಿತ್ರ: ಕನ್ನಡ ದೇಶದೋಳ್‌

ನಿರ್ದೇಶಕ: ಅವಿರಾಮ್‌ ಕಂಠೀರವ

ತಾರಾಗಣ: ಸುಚೇಂದ್ರಪ್ರಸಾದ್, ಹರಿಶ್‌ ಅರಸು, ತಾರಕ್‌, 

 

ಕನ್ನಡ ಸಂಸ್ಕೃತಿ , ಭಾಷೆ ಬಗ್ಗೆ ಮಾತನಾಡುವ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ, ಆ ಸಾಲಿಗೆ ಹೊಸ ಸೇರ್ಪಡೆ ಕನ್ನಡ ದೇಶದೋಳ್‌.

.

ವಿದೇಶಿ ದಂಪತಿಯೊಂದು ಕರ್ನಾಟಕದ ಸಂಸ್ಕೃತಿಯನ್ನು ಅರಿಯಲು ಬರುತ್ತಾರೆ. ಇದೇ ಸಂದರ್ಭದಲ್ಲಿ ವಿದೇಶಿ ಮಹಿಳೆ ಕಾಣೆಯಾಗುತ್ತಾರೆ. ಇವರನ್ನು ಹುಡುಕಲು ಪೊಲೀಸರು ಆರಂಭಿಸುತ್ತಾರೆ. ಇಲ್ಲವೋ ಆಕೆಯನ್ನು ಹುಡುಕುತ್ತಿದ್ದಸಂಶೋಧಕರಿಗೆ ಸಿಗುತ್ತಾರೋ ಎಂಬುದೇ ಸಿನಿಮಾದ ಕಥೆ. 

z

ಈ ಸಸ್ಪೆನ್ಸ್‌ ಥ್ರಿಲ್ಲರ್ ಕಥೆಯ ಜತೆಗೆ, ಬೆಂಗಳೂರಿನಲ್ಲಿ ಕನ್ನಡದ ಅವನತಿಯ ಬಗ್ಗೆ ಚಿತ್ರದಲ್ಲಿ ಚರ್ಚೆ ಆಗುತ್ತದೆ. ಸ್ಥಳೀಯರು ಇಂಗ್ಲೀಷ್‌ ಸ್ಪಷ್ಟವಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಉದ್ಯೋಗಕ್ಕಾಗಿ ಪಡುವ ಕಷ್ಟವನ್ನು ತೋರಿಸಲಾಗಿದೆ.

.

 ಕನ್ನಡ ದೇಶದೋಳ್‌ ಸಿನಿಮಾದಲ್ಲಿ ಕನ್ನಡ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ವಿಶೇಷವಾಗಿ ತೋರಿಸಲಾಗಿದೆ. ಅದರಲ್ಲು ಒಂದು ಹಾಡಿನಲ್ಲಿ ಉತ್ತರ ಕರ್ನಾಟಕದಿಂದ ಮಡಿಕೇರಿಯವರೆಗಿನ ಚಿತ್ರಣ ಸುಂದರವಾಗಿ ತೆರೆ ಮೇಲೆ ಕಾಣುತ್ತದೆ. 

.

ಒಂದಿಬ್ಬರು ಹಿರಿಯ ಕಲಾವಿದರನ್ನು ಬಿಟ್ಟರೆ ಬಹುತೇಕ ಹೊಸಬರೇ ಸಿನಿಮಾದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್‌ ಮತ್ತೊಮ್ಮೆ ಸಿಕ್ಸರ್‌ ಬಾರಿಸಿದ್ದಾರೆ. ಕನ್ನಡದ ಹೋರಾಟಗಳ ಬಗ್ಗೆಒಂದಷ್ಟು ವ್ಯಂಗ್ಯ ಸಿನಿಮಾದಲ್ಲಿದೆ. ಕಥೆ ಇನ್ನೊಂದಿಷ್ಟು ಸ್ಟ್ರಾಂಗ್‌ ಆಗಿ ಇದ್ದಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು. ಒಂದಷ್ಟು ತಪ್ಪು ಒಪ್ಪುಗಳನ್ನುಹೊರತು ಪಡಿಸಿದರೆ ಕನ್ನಡಾಭಿಮಾನಿಗಳೆಲ್ಲರೂ ಈ ಸಿನಿಮಾವನ್ನು ಒಮ್ಮೆ ನೋಡಬೇಕು. 

.

ರೇಟಿಂಗ್- 3/5.

 

ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟ ಸಾರ್ವಭೌಮ ಚಿತ್ರದ ಹಾಡಿನ ಚಿತ್ರೀಕರಣ ಚಿಕ್ಕಮಗಳೂರು, ಹೊರನಾಡು, ಕಳಸ ಸುತ್ತಮುತ್ತ ನಡೆಯುತ್ತಿದೆ.
.
ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಮತ್ತು  ನಟಿ ರಚಿತಾ ರಾಮ್‌ ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪು ಈ ಸಿನಿಮಾದಲ್ಲಿ ಪೋಟೋಗ್ರಫರ್‌ ಪಾತ್ರದಲ್ಲಿ ನಟಿಸಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದಾರೆ.

.

ಶೂಟಿಂಗ್‌ನಲ್ಲಿ ಬಿಡುವು ಮಾಡಿಕೊಂಡು ಪುನೀತ್‌ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದಾರೆ.

 

ಶರಣ್‌ ನಟನೆಯ ವಿಕ್ಟರಿ -2 ಈ ವಾರ ಬಿಡುಗಡೆಯಾಗುತ್ತಿದೆ, ಈ ಸಿನಿಮಾದಲ್ಲಿ ಶರಣ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. "ವಿಕ್ಟರಿ" ಸಿಕ್ವೇಲ್‌ ಇದಾಗಿದೆ. ಆದರೆ ಮೊದಲ ಸಿನಿಮಾಗಿಂತಲೂ ಈ ಸಿನಿಮಾದಲ್ಲಿ ಅತಿ ಹೆಚ್ಚು ಕಾಮಿಡಿ ಇದೆಯಂತೆ.
.
ಕಾಲೇಜ್‌ಕುಮಾರ್‌ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಸಂತು ವಿಕ್ಟರಿ -2 ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಭಟ್ಟರು ಬರೆದಿರುವ "ನಾವು ಮನೆಗ್ ಹೋಗೋದಿಲ್ಲ" ಹಾಡು ಈಗಾಗಲೇ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ.
.
ಮೊದಲ ಭಾಗದಲ್ಲಿದ್ದ ಮಿತ್ರ, ರವಿಶಂಕರ್‌ ಎಲ್ಲರೂ ಎರಡನೇ ಭಾಗದಲ್ಲಿಯೂ ಮುಂದುವರೆದಿದ್ದಾರೆ. ಒಟ್ಟಿನಲ್ಲಿ ವಿಕ್ಟರಿ -2 ನೋಡುವ ಪ್ರತಿಯೊಬ್ಬರನ್ನು, ವಿಕ್ಟರಿ 1ಕ್ಕಿಂತಲೂ ನಕ್ಕು ನಗಿಸುತ್ತದೆ ಎನ್ನುವುದು ಚಿತ್ರತಂಡದ ಮಾತು.

 

ಪುನೀತ್‌ರಾಜ್‌ಕುಮಾರ್‌ ಮತ್ತು ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಶನ್‌ನ ಹೊಸ ಚಿತ್ರದಲ್ಲಿ ಪೊಲಿಟಿಕಲ್‌ ಡ್ರಾಮಾ ಜಾನರ್ ಕತೆ ಇದೆಯಂತೆ.

"ರಾಜಕುಮಾರ" ಮೂಲಕ 50 ಕೋಟಿ ಕ್ಲಬ್‌ ಓಪನ್‌ ಮಾಡಿದ ಈ ಜೋಡಿಯ ಹೊಸ ಚಿತ್ರದ ಟೈಟಲ್‌ ನವೆಂಬರ್‌ 1ರಂದು ಅನೌನ್ಸ್‌ ಆಗಲಿದೆ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಈ ಟೈಟಲ್‌ನ್ನು ಲಾಂಚ್‌ ಮಾಡಲಿದ್ದಾರೆ.

ಹೊಸ ಸಿನಿಮಾದಲ್ಲಿ ಕಥೆ ಏನು ಇರಲಿದೆ ಎಂಬ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಮತ್ತು ಪೊಲಿಟಿಕಲ್‌ ಡ್ರಾಮಾ ಇರಲಿದೆ ಎಂಬ ಸುದ್ದಿ ಹಬ್ಬಿದೆ.

"ರಾಜಕುಮಾರ" ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಹೊಸ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

 

ತಾಯಿಗೆ ತಕ್ಕ ಮಗ ಸಿನಿಮಾದ ಬಿಡುಗಡೆಯ ಬಿಝಿಯಲ್ಲಿರುವ ನಿರ್ದೇಶಕ ಶಶಾಂಕ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಿರ್ದೇಶನ ಮಾಡಲಿದ್ದಾರೆ.
.
ಈ ಹಿಂದೆ ಶಶಾಂಕ್‌ ಉಪೇಂದ್ರ ಜತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಉಪ್ಪಿ ಪ್ರಜಾಕೀಯದಲ್ಲಿ ಬಿಝಿಯಾದ ನಂತರ ಶಶಾಂಕ್‌ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಮೊನ್ನೆ ತಾಯಿಗೆ ತಕ್ಕ ಮಗ ಸುದ್ದಿಗೋಷ್ಠಿಯಲ್ಲಿ ಶಶಾಂಕ್‌ ಮತ್ತು ಉಪೇಂದ್ರ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು.
.
ಶಶಾಂಕ್‌ ಕನ್ನಡದ ಸೂಕ್ಷ್ಮ ಸಂವೇದನೆ ಉಳ್ಳ ನಿರ್ದೇಶಕ ಎಂದು ಹೆಸರು ಮಾಡಿದವರು, ಉಪ್ಪಿ ಡಿಫ್ರೆಂಟ್‌ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಈಗ ಇಬ್ಬರೂ ಒಂದಾಗುತ್ತಿದ್ದಾರೆ. ಇಬ್ಬರ ಸಿನಿಮಾ ಹೇಗಿರುತ್ತದೋ ಕಾದು ನೋಡಬೇಕಿದೆ.

 

ಜೋಶ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ನಟ ರಾಕೇಶ್‌ ಅಡಿಗ ಈಗ ನಿರ್ದೇಶಕರಾಗಿದ್ದು, ನೈಟ್‌ ಔಟ್‌ ಎಂಬ ಸಿನಿಮಾ ಮಾಡುತ್ತಿದ್ದಾರೆ.
.
ಈಗಾಗಲೇ ಸಿನಿಮಾದ ಮೊದಲ ಹಂತ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್‌ ಮತ್ತು ಭರತ್‌ ನಟಿಸುತ್ತಿದ್ದಾರೆ.ಇವರ ಜತೆ ‘ಸಂಕಷ್ಟಕರ ಗಣಪತಿ’ ಚಿತ್ರದ ನಾಯಕಿ ಶ್ರುತಿ ಗೊರಾಡಿಯ ನಟಿಸುತ್ತಿದ್ದಾರೆ. ಶ್ರುತಿ ಈ ಸಿನಿಮಾದಲ್ಲಿ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಮೆರಿಕ ಮೂಲದ ನವೀನ್‌ ಕೃಷ್ಣ ಎಂಬುವರು ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.
.
ಇಬ್ಬರು ಸ್ನೇಹಿತರ ನಡುವೆ ನಡೆಯುವ ‘ನೈಟ್‌ ಔಚ್‌’ ಜರ್ನಿ ಹೇಗಿರುತ್ತೆ, ಏನೆಲ್ಲ ನಡೆಯುತ್ತದೆ ಅನ್ನುವುದೇ ಸಿನಿಮಾದ ಕಥೆ.

 

ತರುಣ್ ಟಾಕೀಸ್ ಲಾಂಛನದಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಿಸಿರುವ `ವಿಕ್ಟರಿ 2` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಗುರು ಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಧನು, ಭೂಷಣ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.
.
ಶರಣ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಪೂರ್ವ, ಅಸ್ಮಿತ ಸೂದ್, ರವಿಶಂಕರ್, ಅವಿನಾಶ್, ಸಾಧುಕೋಕಿಲ, ಅರಸು, ನಾಜಿರ್, ತಬಲಾನಾಣಿ, ಸುಂದರ್, ಮಂಜುನಾಥ್ ಹೆಗಡೆ, ಮಿಮಿಕ್ರಿ ದಯಾನಂದ್, ರಾಜಶೇಖರ್, ಕೀರ್ತಿರಾಜ್, ಕುರಿ ಪ್ರತಾಪ್, ಲಹರಿ ವೇಲು, ಮಂಜುನಾಥ್, ಎಂ.ಎನ್.ಲಕ್ಷ್ಮೀದೇವಮ್ಮ ಮುಂತಾದವರಿದ್ದಾರೆ.

 

ಸ್ಯಾಂಡಲ್‌ವುಡ್‌ನಲ್ಲೀಗ ಐತಿಹಾಸಿಕ ಸಿನಿಮಾಗ ಅಬ್ಬರ ಜೋರಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ಕ್ರಾಂತಿಕಾರಿ, ಜನಪ್ರಿಯ ಬಂಡಾಯ ನಾಯಕ ’ಶೂರ ಸಿಂಧೂರ ಲಕ್ಷ್ಮಣ’ ಸಿನಿಮಾ ಸೆಟ್ಟೇರುತ್ತಿದೆ.
.

Shura Sindura Lakshmana 127

ಈ ಸಿನಿಮಾದಲ್ಲಿ ಮೊದಲು ಸುದೀಪ್‌ ನಟಿಸಬೇಕಿತ್ತು. ಆದರೆ ಅವರು ಮದಕರಿ ನಾಯಕ ಸಿನಿಮಾ ಮಾಡುತ್ತಿರುವುದರಿಂದ ಶೂರ ಸಿಂಧೂರ ಲಕ್ಷ್ಮಣ ಪಾತ್ರವನ್ನು ಬಹುಭಾಷಾ ನಟ ಕಿಶೋರ್‌ ಮಾಡ್ತಾರಂತೆ.
ಪಲ್ಲಕ್ಕಿ ರಾಧಾಕೃಷ್ಣ ಸುದೀಪ್‌ಗಾಗಿಯೇ ಈ ಕಥೆ ಮಾಡಿದ್ದರಂತೆ. ಅಲ್ಲದೇ ಚಿತ್ರತಂಡದ ಅಭಿಲಾಶೆ ಕೂಡಾ ಆಗಿತ್ತಂತೆ. ಆದರೆ ಅವರ ಬಿಝಿ ಇದ್ದ ಕಾರಣ ಕಿಶೋರ್‌ ಆ ಪಾತ್ರವನ್ನು ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ಮಾಧ್ಯಮದವರೊಂದಿಗೆ ಹಂಚಿಕೊಂಡರು.
.

1920ರ ಆಸುಪಾಸಿನಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದ ಲಕ್ಷ್ಮಣ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು. ಜಾನಪದ ಗೀತೆಗಳಲ್ಲೂ ಲಕ್ಷ್ಮಣನ ಸಾಹಸದ ಉಲ್ಲೇಖ ಇದೆ. ಸಿಂಧೂರ ಲಕ್ಷ್ಮಣನ ಬಗ್ಗೆ ನಿರ್ದೇಶಕು ತಂಡ ಕಟ್ಟಿಕೊಂಡು ಸಿಕ್ಕಾಪಟ್ಟೆ ಓಡಾಡಿ ವಿಷಯ ಸಂಗ್ರಹಿಸಿದ್ದಾರೆ. ಅವರ ಬದುಕನ್ನು ನೈಜವಾಗಿ ತೆರೆ ಮೇಲೆ ತರಲು ಅವರು ಹೊರಟಿದ್ದಾರಂತೆ. ಈಗಾಗಲೇ ಕಿಶೋರ್‌ಗೆ ಲುಕ್‌ ಟೆಸ್ಟ್‌ ಸಹ ಮಾಡಲಾಗಿದೆ ಎಂಬುದನ್ನು ನಿರ್ದೇಶಕರು ಹೇಳಿದ್ದಾರೆ.

Page 7 of 27

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top