ಸಂತೋಷ್ ಆನಂದ್ರಾಮ್ ಮತ್ತು ಪುನೀತ್ರಾಜ್ಕುಮಾರ್ ಕಾಂಬಿನೇಶನ್ ಸಿನಿಮಾದ ಟೈಟಲ್ ಲಾಂಚ್ ದಿನಾಂಕವನ್ನು ಅಭಿಮಾನಿಯೊಬ್ಬರು, ಅ.10ಕ್ಕೆ ಹೇಳಲಿದ್ದಾರಂತೆ.
.
ಹೌದು, ರಾಜಕುಮಾರ ನಂತರ ಈ ಜೋಡಿ ಒಂದಾಗಿದ್ದು, ಆ ಸಿನಿಮಾ ಟೈಟಲ್ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಹಾಗಾಗಿ ಟೈಟಲ್ ಯಾವಾಗ ಲಾಂಚ್ ಮಾಡುತ್ತೇನೆ ಎಂಬುದನ್ನು ಚಿತ್ರತಂಡ ಅ.10ರಂದು ಅಭಿಮಾನಿಯ ಕೈಯಲ್ಲಿ ರಿವೀಲ್ ಮಾಡುತ್ತಾರಂತೆ. ಟೈಟಲ್ ಕೂಡ ಅಭಿಮಾನಿಯೊಬ್ಬರಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ
.
ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗುತ್ತದೆ.
ರಂಜೀತ್ ಕುಮಾರ್ ಗೌಡ ಅವರ ನಿರ್ದೇಶನದ ಆಪಲ್ ಕೇಕ್ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥೀಯೇಟರಿನಲ್ಲಿ ನೆರವೇರಿತು. ವಿ.ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ಮ್ಯೂಸಿಕ್ ಬಜಾರ್ ಈ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಬೇಕರಿಯಲ್ಲಿ ಅಳಿದುಳಿದ ಕೇಕುಗಳನ್ನೆಲ್ಲ ಸೇರಿಸಿ ತಯಾರಿಸುವ ತಿನಿಸನ್ನು ಆಪಲ್ ಕೇಕ್ ಎನ್ನುತ್ತೇವೆ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ರಿಜಕ್ಟ್ ಆದಂತಹ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
.
ಈ ಚಿತ್ರದಲ್ಲಿ ಮೂರು ಹಾಡುಗಳನ್ನು ರಚಿಸಿದ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ ಒಂದಷ್ಟು ಜನ ಹೊಸ ಹುಡುಗರು ನನ್ನ ಬಳಿ ಬಂದು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಅಲ್ಲದೇ ಪ್ರತೀ ಹಂತದಲ್ಲೂ ನನ್ನಲ್ಲಿ ಚರ್ಚೆ ಮಾಡಿದ್ದಾರೆ. ರಂಜೀತ ಕುಮಾರ್ ಗೌಡ ಮೊದಲ ಚಿತ್ರದಲ್ಲೇ ತಾನೇನೆಂದು ತೊರಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡುವುದೇ ದೊಡ್ಡ ಶ್ರಮ ಅಂತಹದರಲ್ಲಿ ಇವರು ಕನ್ನಡ, ತಮಿಳು ಹಾಗು ತೆಲಗು ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ತಯಾರಿಸಿ ಸೆನ್ಸರ್ ಕೂಡ ಮಾಡಿಸಿದ್ದಾರೆ. ಹುಡುಗರು ತಮ್ಮ ಕನಸುಗಳನ್ನು ಈಡೇರಿಸಿಕೊಳಲ್ಲು ಹಾಕುವ ಎಪರ್ಟ್ ಈ ಚಿತ್ರದ ಕಥೆಯಾಗಿದೆ. ಜೀವನದಲ್ಲಿ ತುಂಬಾ ಶ್ರಮದಿಂದ ಮುಂದೆ ಬಂದಿರುವ ವಿಕ್ಟರಿ ವಾಸು, ನಾಗೇಂದ್ರ ಅರಸ್, ಕೆ.ಮಾದೇಶ್, ಅಲ್ಲದೇ ಇನ್ನೂ ಕೆಲವರ ಕೈಲಿ ಚಿತ್ರದ ಆಡಿಯೋ ರಿಲೀಸ್ ಮಾಡಿಸಬೇಕೆಂದು ಪ್ಲಾನ್ ಹಾಕಿಕೊಂಡಿದ್ದೆ. ಇಲ್ಲಿ ಈ ಮೂವರಷ್ಟೆ ಬಂದಿದ್ದಾರೆ ಎಂದು ಹೇಳಿದರು. ಅದೇ ರೀತಿ ನಿರ್ದೇಶಕರಾದ ವಿಕ್ಟರಿ ವಾಸು, ನಾಗೇಂದ್ರ ಅರಸ್ ಸೇರಿ ಚಿತ್ರದ ಆಡಿಯೊ ರಿಲೀಸ ಮಾಡಿದರು.
.
ಮೊದಲು ನಿದೇಶಕ ಮಾದೇಶ್ ಮಾತನಾಡಿ ಹೊಸಬರಾದರೂ ನಮ್ಮನ್ನು ಗುರುತಿಸಿ ನಮ್ಮಿಂದ ಆಡಿಯೊ ರಿಲೀಸ್ ಮಾಡಿಸಿದ್ದು ಖುಷಿ, ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾದ ಅರವಿಂದ ಕುಮಾರ್ ಗೌಡ ಮಾತನಾಡಿ ನಾನೂ ಕೂಡ ನಟನಾಗಿಯೇ ಚಿತ್ರರಂಗಕ್ಕೆ ಬಂದೆ, ದಾನಮ್ಮ ದೇವಿ ನನ್ನ ಮೊದಲ ಚಿತ್ರ, ಐದು ಜನ ಸ್ನೇಹಿತರು ಸೇರಿ ಒಂದು ಬ್ಯಾನರ್ ಆರಂಭಿಸಿದೆವು. ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಶ್ರೀಧರ್ ಕಷ್ಟಪಟ್ಟು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ ಎಂದರು.
.
ವಿಜಯ್ ಶಂಕರ್, ಅರವಿಂದ್ ಕುಮಾರ್, ರಂಜೀತಕುಮಾರ್, ಶುಭ ರಕ್ಷ, ಚೈತ್ರ ಶೆಟ್ಟಿ ಹಾಗು ಕೃಷ್ಣಹನಗಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ ಮೊಮ್ಮಗ, ನಟ ರಾಮ್ಕುಮಾರ್ ಪುತ್ರ ಧೀರೇನ್ ರಾಮ್ಕುಮಾರ್ ಸ್ಯಾಂಡಲ್ವುಡ್ಗೆ ಎಂಟ್ರಿಯಾಗಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ದಿಲ್ವಾಲ ಅನಿಲ್ಕುಮಾರ್ ನಿರ್ದೇಶನ ಮಾಡುತ್ತಾರಂತೆ.
.
ಈಗಾಗಲೇ ಹಬ್ಬಿರುವ ಸುದ್ದಿಗಳ ಪ್ರಕಾರ ಜಯಣ್ಣ-ಭೋಗಣ್ಣ ಜೋಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾರಂತೆ.
.
ಅನಿಲ್ಕುಮಾರ್ ಈಗ ಜಯಣ್ಣ ಫಿಲ್ಮ್ಸ್ ಗಾಗಿ "ಮೈ ನೇಮ್ ಈಸ್ ಕಿರಾತಕ" ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ರಾಮ್ಕುಮಾರ್ ಪುತ್ರನನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರಂತೆ.
.
ಕಥೆ ಈಗಾಗಲೇ ಸಿದ್ಧವಾಗಿದ್ದು, ಧೀರೇನ್ ಸಹ ನಿಧಾನವಾಗಿ ಸಿನಿಮಾಗಾಗಿ ತಯಾರಾಗುತ್ತಿದ್ದಾರೆ. ಅವರು ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿದ್ದರು.
ಚಿತ್ರ: ಆದಿ ಪುರಾಣ
ನಿರ್ದೇಶಕ: ಮೋಹನ್ ಕಾಮಾಕ್ಷಿ
ನಿರ್ಮಾಣ: ಶಮಂತ್
ನಟನೆ: ಶಶಾಂಕ್, ಅಹಲ್ಯ, ವತ್ಸಲಾ ಮೋಹನ್, ನಾಗೇಂದ್ರ ಶಾ ಮತ್ತಿತರರು
----
24ರ ಹರೆಯದ ಹುಡುಗನಿಗೆ ಮದುವೆ ಮಾಡಿ ಮೊದಲ ರಾತ್ರಿ ಮಾಡಿಕೊಳ್ಳಲು ಅವಕಾಶ ಸಿಗದೇ ಇದ್ದಾಗ ಆತ ಪಡುವ ಪಾಡೇ ಈ ಆದಿ ಪುರಣಾ. ಹಾಗಾಗಿ ಇದನ್ನು ಆದಿ ಫಸ್ಟ್ ನೈಟ್ ಪುರಾಣ ಎನ್ನಬಹುದು.
ಕಥಾನಾಯಕ ಆದಿ, ಬಹಳ ಬುದ್ದಿವಂತ ಓದು ಮುಗಿಯವುದರೊಳಗೆ ಒಳ್ಳೆ ಸಂಬಳವಿರುವ ಕೆಲಸ ಸಿಗುತ್ತದೆ. ಸುರದ್ರೂಪಿಯಾಗಿದ್ರು ಯಾವುದೇ ಹುಡುಗಿ ಆದಿಯ ಹತ್ತಿರವೂ ಸುಳಿದಿರುವುದಿಲ್ಲ.ಹಾಗಾಗಿ ಸಹಜ ಭಾವನೆ ಎಂಬಂತೆ ಮನೆಯಲ್ಲಿ ಬ್ಲೂ ಫಿಲಂ ನೋಡುವಾಗ ತಂದೆಯ ಕೈಗೆ ನೇರವಾಗಿ ಸಿಕ್ಕಿಹಾಕಿಕೊಳ್ಳುತ್ತಾನೆ. ಮಗ ಇನ್ನು ಹಾದಿ ತಪ್ಪುತ್ತಿದ್ದಾನೆ ಎಂದು ಮಗನಿ ಗೆ ಮದುವೆ ಮಾಡುತ್ತಾರೆ. ಆದರೆ ಫಸ್ಟ್ ನೈಟ್ಗೆ ಕಾಲಕೂಡಿ ಬರದ ಕಾರಣ ಅದು ಮುಂದಕ್ಕೆ ಹೋಗುತ್ತದೆ ಈ ಫಸ್ಟ್ ನೈಟ್ನ್ನು ಆದಿ ಮಾಡಿಕೊಳ್ಳುತ್ತಾನಾ ಇಲ್ಲವಾ ಎಂಬುದೇ ಸಿನಿಮಾದ ಕಥೆ.
.
ಆದರೆ ಕಥಾನಾಯಕ ಆದಿಯ ಫಸ್ಟ್ ನೈಟ್ ಪುರಾಣವನ್ನು ಎರಡೂವರೆ ಗಂಟೆ ನೋಡಬೇಕಾ ಎಂಬ ಪ್ರಶ್ನೆ ಪ್ರೇಕ್ಷಕನಿಗೆ ಎದುರಾಗುತ್ತದೆ. ಏಕೆಂದರೆ ಸಾಕಷ್ಟು ದೃಶ್ಯಗಳನ್ನು ನಿರ್ದೇಶಕರು ಎಳೆದಿದ್ದಾರೆ.ನಿರ್ದೇಶಕರು ಹೇಳುವ ವಿಷಯ ಬಹಳ ಚೆನ್ನಾಗಿದೆ. ಇಂದಿನ ಯುವಕರ ತಳಮಳವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಕಾಲೇಜ್ ಹುಡುಗರ ತುಂಟತವಿದೆ. ನಿರ್ದೇಶಕರು ಕೆಲವೊಂದು ದೃಶ್ಯಗಳನ್ನು ಫ್ರೆಶ್ ಆಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ,ಆದರೆ ಸ್ಕ್ರೀನ್ಪ್ಲೇನಲ್ಲಿ ಇನ್ನಷ್ಟು ಫಾಸ್ಟ್ ಆಗಿದ್ದರೆ ಸಿನಿಮಾ ಸಖತ್ ಆಗಿ ಮೂಡಿ ಬರುತ್ತಿತ್ತು.
.
ನಟ ಶಶಾಂಕ್ ತಮ್ಮ ನಟನೆಯಲ್ಲಿ ಭರವಸೆ ಮೂಡಿಸುತ್ತಾರೆ. ಉಳಿದಂತೆ ಇಬ್ಬರು ನಾಯಕಿಯರು ಇನ್ನಷ್ಟು ಪಳಗಬೇಕಿದೆ. ರಂಗಾಯಣ ರಘು ಅವರ ಪಾತ್ರವೇನು ಎಂದು ತಿಳಿಯಲು ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು. ಉಳಿದಂತೆ ನಾಗೇಂದ್ರ ಶಾ, ವತ್ಸಲಾ ಮೋಹನ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಸಿನಿಮಾಗೆ ಸಂಗೀತ ಸಹ ಸರಿಯಾಗಿ ಸಾಥ್ ನೀಡಿಲ್ಲ.
.
ಒಂದೊಳ್ಳೆ ಎಳೆಯನ್ನು ಇಟ್ಟುಕೊಂಡು ಮನರಂಜನೆಯ ಮೂಲಕ ಕಥೆ ಹೇಳಿರುವ ನಿರ್ದೇಶಕರು, ಇನ್ನೂ ಕೊಂಚ ಚಿತ್ರಕಥೆ ಬಿಗಿಯಾಗಿ ಹೆಣೆದಿದ್ದಾರೆ ಚೆನ್ನಾಗಿರುತಿತ್ತು. ಅಲ್ಲಲ್ಲಿ ಪಡ್ಡೆಗಳಿಗೆ ಇಷ್ಟವಾಗುವಂತೆ ಡಬ್ಬಲ್ ಮೀನಿಂಗ್ ಡೈಲಾಗ್ ಇಟ್ಟು ರಂಜಿಸುವ ಪ್ರಯತ್ನ ಮಾಡಿದ್ದಾರೆ.
ಒಟ್ಟಿನಲ್ಲಿ ಆದಿಯ ಫಸ್ಟ್ ನೈಟ್ ಕಥೆ ಪಡ್ಡೆ ಹುಡುಗರಿಗೆ ಇಷ್ಟವಾಗಬಹುದು.
.
ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾದ ವಿವಾದ ದಿನೇ ದಿನೇ ಜೋರಾಗುತ್ತಲೇ ಇದೆ. ಈ ಕಾರಣದಿಂದಾಗಿ ನಟ ಶಿವರಾಜ್ಕುಮಾರ್ ಅಭಿಮಾನಿಗಳಿಗೆ, ಸಿನಿಮಾವನ್ನು ಸಿನಿಮಾದ ರೀತಿಯಲ್ಲಿ ನೋಡಿ ಎಂದು ಹೇಳಿದ್ದಾರೆ.
.
ಮೊನ್ನೆ ದಿ ವಿಲನ್ ಸಿನಿಮಾದ ಟೀಸರ್ ಬಿಡುಗಡೆ ಮಾಡುವಾಗ ಮಾಧ್ಯಮಗಳ ಜತೆ ಮಾತನಾಡಿದ ಶಿವರಾಜ್ಕುಮಾರ್‘ಸಿನಿಮಾವನ್ನು ಸಿನಿಮಾದಂತೆ ನೋಡಿ’ ಎಂದು ಫ್ಯಾನ್ಸ್ಗೆ ಖಡಕ್ಆಗಿ ಹೇಳಿದ್ದಾರೆ.
.
ಈ ತಿಂಗಳು 18 ಕ್ಕೆ 'ದಿ ವಿಲನ್' ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಯಾವುದೇ ಗಲಾಟೆ ಮಾಡಿಕೊಳ್ಳದೆ ಸಿನಿಮಾ ನೋಡಿ ಎಂದಿದ್ದಾರೆ. "ನಾವು ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ನಾನು ಸುದೀಪ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದೇವೆ. ನಮ್ಮ ಹೀರೋ ಪಾತ್ರಕ್ಕೆ ಅದಿಲ್ಲ ಇದಿಲ್ಲ ಎಂದು ಜಗಳ ಮಾಡಬೇಡಿ, ಮಾಡಿದರೆ ನಮ್ಮ ತಾಯಾಣೆಗೂ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬರುವುದಿಲ್ಲ, ನನಗೂ ಫ್ಯಾನ್ಸ್ ವಾರ್ಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದೆ" ಎಂದು ಶಿವಣ್ಣ ಹೇಳಿದರು.
.
ಚಿತ್ರ: ನಡುವೆ ಅಂತರವಿರಲಿ
ನಿರ್ದೇಶಕ: ರವೀನ್
ನಿರ್ಮಾಣ: ಬೃಂದಾ ಪ್ರೊಡಕ್ಷನ್
ಸಂಗೀತ: ಮಣಿಕಾಂತ್ ಕದ್ರಿ
ಸಿನಿಮಾಟೋಗ್ರಫಿ: ಯೋಗಿ
ತಾರಾಗಣ: ಪ್ರಖ್ಯಾತ್, ಐಶಾನಿ ಶೆಟ್ಟಿ, ಅಚ್ಯುತ್ಕುಮಾಋ್, ತುಳಸಿ, ಅರುಣಾ ಬಾಲರಾಜ್,ಚಿಕ್ಕಣ್ಣ
---------
ಆಕರ್ಷಣೆ ಪ್ರೀತಿ ಅಲ್ಲ ಎಂದು ಹೇಳುವ "ನಡುವೆ ಅಂತರವಿರಲಿ" :
.
ಹರೆಯದಲ್ಲಿ ಹುಟ್ಟುವ ಪ್ರೀತಿ ಬರೀ ಆಕರ್ಷಣೆ ಅದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು ಎಂಬುದನ್ನುನಡುವೆ ಅಂತರವಿರಲಿ ಸಿನಿಮಾದಲ್ಲಿ ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವೀನ್.
.
ಕಾಲೇಜಿಗೆ ಆಗಷ್ಟೇ ಕಾಲಿಟ್ಟಿರುವ ಯುವಕ [ ಪ್ರಖ್ಯಾತ್] ಯವತಿ [ ಐಶಾನಿ ಶೆಟ್ಟಿ] ಒಬ್ಬರಿಗೊಬ್ಬರು ಆಕರ್ಷಿತರಾಗುತ್ತಾರೆ. ಅದನ್ನು ಪ್ರೀತಿ ಎಂದುಕೊಂಡು ಅವರು ಮಾಡಿಕೊಳ್ಳುವ ಎಡವಟ್ಟಿನಿಂದ ಮನೆಯವರಿಗೆ ದೊಡ್ಡ ತಲೆನೋವಾಗುತ್ತದೆ. ಈ ತಲೆನೋವೆ ಸಿನಿಮಾದ ಕಥೆ ಮತ್ತು ಚಿತ್ರಕಥೆ. ನಾಯಕ ಮತ್ತು ನಾಯಕಿಗೆ ಸನ್ನಿವೇಶಗಳೇ ವಿಲನ್ ಆಗಿ ಸಿನಿಮಾ ಬಹಳ ನೈಜವಾಗಿ ಮೂಡಿ ಬಂದಿದೆ.
.
ಸ್ಯಾಂಡಲ್ವುಡ್ನಲ್ಲಿ ಹದಿ ಹರೆಯದ ಪ್ರೀತಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿದ್ದರೂ, ಅವೆಲ್ಲ ಡಬಲ್ ಮೀನಿಂಗ್ ಡೈಲಾಗ್ಗಳಿಂದ ತುಂಬಿ ಅದರ ಅಂದವೇ ಕೆಟ್ಟು ಹೋಗಿತ್ತು, ಆದರೆ ನಿರ್ದೇಶಕ ರವೀನ್ ಬಹಳ ಜಾಣ್ಮೆಯಿಂದ ಈ ಸಿನಿಮಾ ಮಾಡಿದ್ದು, ಪ್ರತಿ ದೃಶ್ಯವೂ ನಮ್ಮ ಅಕ್ಕ ಪಕ್ಕ ನಡೆಯುತ್ತಿದೆಯೇನೋ ಎನ್ನುಷ್ಟು ನೈಜವಾಗಿಸಿದ್ದಾರೆ.
.
ರವೀನ್ ಅವರ ಪ್ರಯತ್ನಕ್ಕೆ ಕಲಾವಿದರು, ಸಂಗೀತ ನಿರ್ದೇಶಕರು, ಸಿನಿಮಾಟೋಗ್ರಫರ್ ಎಲ್ಲರೂ ಸಾಥ್ ನೀಡಿದ್ದಾರೆ.
ನಾಯಕ ಪ್ರಖ್ಯಾತ್ ಮುಗ್ಧವಾಗಿ ನಟಿಸಿ ಇಷ್ಟವಾದರೆ, ಐಶಾನಿ ಶೆಟ್ಟಿಯ ತಮ್ಮ ನ್ಯಾಚುರಲ್ ಆ್ಯಕ್ಟಿಂಗ್ನಿಂದ ಗಮನ ಸೆಳೆಯುತ್ತಾರೆ. ಅಚ್ಯುತ್ಕುಮಾರ್, ತುಳಸಿ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಸ್ವಲ್ಪ ಹೆಚ್ಚೇ ನ್ಯಾಯ ಸಲ್ಲಿಸಿದ್ದಾರೆ.
.
ಸಂಭಾಷಣೆ ಮತ್ತು ಸಿನಿಮಾದ ಸಂಗೀತ ಸಿನಿಮಾಗೆ ಪ್ಲಸ್ ಪಾಯಿಂಟ್. ಸಿನಿಮಾ ನೋಡುವ ಪ್ರತಿಯೊಬ್ಬನು ತನ್ನ ಹರೆಯದಲ್ಲಿ ಮಾಡಿದ ಕೆಲಸಗಳನ್ನು ಜ್ಞಾಪಿಸಿಕೊಂಡು ಚಿತ್ರವನ್ನು ಕನೆಕ್ಟ್ ಮಾಡಿಕೊಳ್ಳುತ್ತಾನೆ. ಚಿಕ್ಕಣ್ಣ ಪಾತ್ರ ಕೂಡಾ ಬಹಳ ಚೆಂದವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಎಲ್ಲವೂ ಹದವಾಗಿ ಬೆರತು ಸಿನಿಮಾ ಪಕ್ವವಾಗಿದೆ. ನಿರ್ದೇಶಕ ರವೀನ್ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ್ದಾರೆ.
.
ರೇಟಿಂಗ್ - 3.5/5
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ "ಕೆಜಿಎಫ್" ನ್ನು ಬಾಲಿವುಡ್ ನಟಿ ರವೀನಾ ಟಂಡನ್ ಪತಿ ಅನಿಲ್ ತಡಾನಿ ಕೊಂಡುಕೊಂಡಿದ್ದಾರೆ.
.
ಹೌದು ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಹಿಂದಿ ಅವತರಿಣಿಕೆಯ ಡಿಸ್ಟ್ರಿಬ್ಯೂಷನ್ ಈಗ ಅನಿಲ್ ತಡಾನಿ ಪಾಲಾಗಿದೆ. 'ಕೆಜಿಎಫ್' ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದರ ಹಿಂದಿ ಅವತರಿಣಿಕೆಯನ್ನು ಅನಿಲ್ ತಡಾನಿ ಪಡೆದುಕೊಂಡಿದ್ದಾರೆ. ಈ ಅನಿಲ್ ತಡಾನಿ ನಟಿ ರವಿನಾ ಟಂಡನ್ ಅವರ ಪತಿ.
.
ಇಡೀ ಸಿನಿಮಾವನ್ನು 80ರ ದಶಕದ ವಾತಾವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೇ ಒಂದು ಟೀಸರ್ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಚಿತ್ರತಂಡ ನೀಡುವ ಮಾಹಿತಿ ಪ್ರಕಾರ ಕೆಜಿಎಫ್ ದಾಖಲೆ ಮಟ್ಟದಲ್ಲಿ ಪ್ರದರ್ಶನ ಕಾಣಲಿದೆಯಂತೆ.
.
ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉಗ್ರಂ ಖ್ಯಾತಿ ಪ್ರಶಾಂತ್ ನೀಲ್ ಇದರ ನಿರ್ದೇಶಕರು.
ಜಾಲಿಡೇಸ್ ಮೂಲಕ ಗಮನ ಸೆಳೆದಿದ್ದ ನಿರಂಜನ್ ಶೆಟ್ಟಿ ಈಗ ಜಗತ್ ಕಿಲಾಡಿಯಾಗಿದ್ದಾರೆ.
ತಮಿಳಿನ ಸದುರಂಗ ವೆಟ್ಟೈ ಸಿನಿಮಾದ ರಿಮೇಕ್ ಆಗಿದ್ದರೂ ಇದು ಕನ್ನಡದ ನೇಟಿವಿಟಿಗೆ ತಕ್ಕಂತೆ ಇದೆಯಂತೆ.
.
ತನ್ನ ತಾಯಿಯ ಟ್ರಿಟ್ಮೆಂಟ್ಗೆ ಹಣ ಇಲ್ಲದೇ, ಆಕೆಯನ್ನು ಕಳೆದುಕೊಳ್ಳುವ ನಾಯಕ ಹಣಕ್ಕಾಗಿ ಏನೆಲ್ಲಾ ಮಾಡುತ್ತಾನೆ, ಅಲ್ಲದೆ ಆ ಹಣವನ್ನು ಗಳಿಸಿದ ಮೇಲೆ ಅವನಿಗೆ ಹಣದ ಹುಚ್ಚನ್ನು ಬಿಡಿಸುವವರು ಯಾರು ಎಂಬುದೇ ಸಿನಿಮಾದ ಕಥೆಯಂತೆ.
.
ಈ ಸಿನಿಮಾದಲ್ಲಿ ನಿರಂಜನ್ ಶೆಟ್ಟಿ 13 ಗೆಟಪ್ ಹಾಕಿದ್ದು, ಎಲ್ಲವೂ ಡಿಫ್ರೆಂಟ್ ಆಗಿದೆಯಂತೆ. ಅಮಿತಾ ಕುಲಾಲ್ ನಿರಂಜನ್ಗೆ ಜೋಡಿಯಾಗಿದ್ದಾರೆ.
.
ಜೈಜಗದೀಶ್, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಮೈಕೋ ನಾಗರಾಜ್, ಸೇರಿದಂತೆ ದೊಡ್ಡ ತಾರಬಳಗವೇ ಈ ಸಿನಿಮಾದಲ್ಲಿದೆ. ಈ ಸಿನಿಮಾದ ಮುಂದಿನ ತಿಂಗಳು ಬಿಡುಗಡೆಯಾಗುತ್ತದೆ. ಆರವ್ ಬಿ ಧೀರೆಂದ್ರ ನಿರ್ದೇಶಕರಾದರೆ, ಲಯನ್ ರಮೇಶ್ಬಾಬು ನಿರ್ಮಾಣ ಮಾಡಿದ್ದಾರೆ.
ಸಂಪೂರ್ಣ ಹೊಸಬರೇ ತುಂಬಿರುವ 'ಆದಿ ಪುರಾಣ' ಸಿನಿಮಾದಲ್ಲಿ ಕಾಲೇಜು ಹುಡುಗರ ಜೀವನವನ್ನು ಹೇಳಿದ್ದಾರಂತೆ ನಿರ್ದೇಶಕರು.
.
ಈಗಾಗಲೇ ಚಿತ್ರದ ಹಾಡುಗಳನ್ನು ಪ್ರೆಕ್ಷ ಕರು ಮೆಚ್ಚಿದ್ದು, ಟ್ರೇಲರ್ ಅಂತೂ ಸೂಪರ್ ಹಿಟ್ ಆಗಿದೆ. ಸೆನ್ಸಾರ್ ಮಂಡಳಿಯ ಕೆಲ ಸದಸ್ಯರು ಚಿತ್ರದ ಕಂಟೆಂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಬದುಕಿನ ಮೌಲ್ಯಗಳನ್ನು ಮನರಂಜನೆಯ ಮೂಲಕ ತೋರಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತದೆ ಚಿತ್ರತಂಡ.
.
ಈ ಸಿನಿಮಾದ ಮೂಲಕ ಶಶಾಂಕ್ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾನೆ. ಅಹಲ್ಯ ಸುರೇಶ್ ಮತ್ತು ಮೋಕ್ಷಾ ಕುಶಾಲ್ ಎಂಬ ಇಬ್ಬರು ನಾಯಕಿಯರು ಸಿನಿಮಾದಲ್ಲಿದ್ದಾರೆ.
ಈ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.
ಮನರಂಜನಾ ಕ್ಷೇತ್ರದ ಬದಲಾದ ಸನ್ನಿವೇಶದಲ್ಲಿ ಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆ ಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ.
.
ಅಕ್ಟೋಬರ್8 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ 7.30ಕ್ಕೆ ಜೈ ಹನುಮಾನ್ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುವಂಥ ಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.
.
ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಪ್ರೇಂನಲ್ಲೂ ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದ ಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಳು ಈ ಧಾರಾವಾಹಿಯ ಇನ್ನಷ್ಟು ವಿಶೇಷಗಳಾಗಿವೆ ಎನ್ನುತ್ತಾರೆ ನಿರ್ಮಾಣ ಸಂಸ್ಥೆಯವರು.
ಹದಿನಾಲ್ಕು ಲೋಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದ ರಾವಣ ತನ್ನ ಅಧಿಕಾರ ಲಾಲಸೆಯಿಂದ ಇತರ ಜೀವಿಗಳ ಮೇಲೆ ಕ್ರೌರ್ಯ ಎಸಗುತ್ತಿದ್ದ. ಅವನನ್ನು ಸದೆಬಡಿಯಲು ಹನುಮಂತಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆ ಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆ ಜೈ ಹನುಮಾನ್.
.
ಅದ್ಧೂರಿ ಸೆಟ್ ಜತೆಗೆ ಪೂರಕವಾದ ಗ್ರಾಫಿಕ್ಸ್ಗಳು ಗತವೈಭವವನ್ನು ಮತ್ತೆತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆ ಇಡೀ ಧಾರಾವಾಹಿಯನ್ನು ಮತ್ತೊಂದು ಎತ್ತರಕ್ಕೇ ಕೊಂಡೊಯುತ್ತದೆ. ಅದರಲ್ಲೂಇಲ್ಲಿನ ವೇಷ ಭೂಷಣಗಳು, ಚಿತ್ರ ವಿಚಿತ್ರ ಹೆಸರುಗಳು ಎಲ್ಲ ವರ್ಗಗಳ ವೀಕ್ಷಕರನ್ನೂ, ಮಕ್ಕಳನ್ನೂ ಹಿಡಿದಿಟ್ಟುಕೊಳ್ಳುತ್ತವೆ ಎನ್ನುತ್ತಾರೆ ನಿರ್ದೇಶಕ ವಾಸು.
.
ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವವರು ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು. ಕಿರುತೆರೆಯ ನುರಿತ ನರ್ದೇಶಕ, ಬರಹಗಾರ ಬ. ಲ. ಸುರೇಶ್ ‘ಜೈ ಹನುಮಾನ್’ ಗೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕಥೆ ನೀರಜ್ ಮತ್ತುತಂಡ ಮಾಡುತ್ತಿದ್ದರೆ, ನಿಷಿನ್ ಚಂದ್ರ ಡಿಓಪಿ ಆಗಿದ್ದಾರೆ. ಸಂತೋಷ್ ಸಂಕಲನದ ಜವಾಬ್ಧಾರಿ ಹೊತ್ತಿದ್ದಾರೆ. ಕಾಂಟಿಲೋ ಪ್ರೊಡಕ್ಷನ್ಸ್ನ ಮುಖ್ಯಸ್ಥ ಅಭಿಮನ್ಯು ಸಿಂಗ್ ಜತೆ ಯಶಸ್ವಿ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಹಿಮಾನಿ, ಗೌತಮ್, ಮನಿಷ್ ಪೋಪಟ್ ಮುಂತಾದವರ ತಂಡ ಇದೆ.
.
ತಾರಾಗಣದಲ್ಲಿ ಬಾಲಕ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದಾನೆ. ಅಂಜನಾ ಪಾತ್ರವನ್ನು ಪ್ರಿಯಾಂಕಾ ಚಿಂಚೋಳಿ, ಕೇಸರಿಯಾಗಿ ಪ್ರಸನ್ನ, ಶಿವನಾಗಿ ಮಧು, ರಾವಣನಾಗಿ ವಿನಯ್ಗೌಡ, ಕೈಕಸಿಯಾಗಿ ರಂಜಿತಾ ಸೂರ್ಯವಂಶಿ, ಪಾರ್ವತಿಯಾಗಿ ನಾಗಶ್ರಿ ವೀಕ್ಷಕರನ್ನು ರಂಜಿಸಲಿದ್ದಾರೆ.
.
ದುಷ್ಟರ ಸಂಹಾರಕ್ಕಾಗಿ ಅವತರಿಸಿದ “ಜೈ ಹನುಮಾನ” ಇದೇ ಅಕ್ಟೋಬರ್ 8ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
Total Votes: | |
First Vote: | |
Last Vote: |