IB anigif

Ayugya Gif

adweb

udgharsha

 
Road trip movies with a tinge of suspense and comedy are rare combo and are seldom tried out in Kannada movies. One such movie which belongs to the above genre is ‘Kannadakkagi ondannu otti’.
.
Going by the name of the movie one might think that this movie is something to do with Kannada Patriotism, though this movie touches that subject through chikkanna who plays a very important role alongside the hero Avinash. However it solely doesn’t embark on only Kannada related issues.
.
This is a journey film, when two childhood friends(Avinash & Chikanna) meets accidently after years and goes on a road trip and then the story unfolds once they reveal their flashbacks which has a emotional connect in the climax.
.
The Love Story of Avinash is bit stretched though the songs are pleasing in his episode. Director could have chopped some scenes to make it a pacy one. Chikkanna Episode is actually the real winner of the film. Chikkanna has just carried the film throughout on his shoulder. Krishi Thapanda has some good scenes to score as an actor, especially the climax part, she is too good.Dattanna as a journalist has done a commendable job.
.
The comedy scenes of the film are good. The one liners penned by Kushal adds value to the film.
Director Kushal has done good job overall. Since it is his debut film we can excuse few flaws of him. Arjun Janya has given some fantastic tunes. The background score suits the mood of the film. The cinematography is excellent. Some of the shots are very fresh. Editing at places could have been more crispier.
.
Watch this film to remember your Teenage crushes and for some entertainment.
3.75/5
#Cineloka
 
24ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ನಂದಿನಿ, ಕಾವೇರಿ, ಮಾನಸ ಸರೋವರ,ಜೋಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನರೀತಿಯಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
.
"ಪುನರಪಿ ಮರಣಂ.. ಪುನರಪಿ ಜನನಂ" ಎನ್ನುವುದು ನಮ್ಮ ಭಾರತೀಯ ಸಂಸ್ಕøತಿಯಲ್ಲಿನ ಆಳವಾದ ನಂಬಿಕೆ. ದೇಹ ನಾಶವಾದರೂಆತ್ಮಕ್ಕೆ ವಿನಾಶವಿಲ್ಲಾ ಎನ್ನುವುದು ಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ "ಮಾಯಾ" ಧಾರಾವಾಹಿಯ ಮೂಲ.
ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ. ಅವನ ಆಸೆ ನೆರವೇರದೆ ದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವರಣ ಮಾಯಾ.
ಇಂದಿನ ಜನ್ಮದಲ್ಲಿ ಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರುಜನರೇಈ ಕಥೆಯಕೇಂದ್ರ ಬಿಂದುಗಳು. ಯಾರ ಜೊತೆಗೆ ಯಾರು ಸೇರಿದರೆ ಒಳ್ಳೆಯದನ್ನು ಸಾಧಿಸಬಹುದು? ಯಾರನ್ನ ಯಾರಿಂದ ದೂರಾ ಮಾಡಬೇಕು? ಯಾರಿಂದ ಯಶಸ್ಸು ದೊರೆಯುತ್ತದೆ?ಎನ್ನುವ ಹೋರಾಟವೇ ಕಾಲದ ಹಾಗೂ ಕಾಲಾಂತಕನ ಮಾಯೆ.
.
ಈ ಧಾರಾವಾಹಿಯ ಕಥೆಯೇ ಹೊಸ ರೀತಿಯ ಹಂದರವಾಗಿರುವುದಲ್ಲದೇ..ಅದಕ್ಕೆ ಪೂರಕವಾದ ಜಾಗಗಳು, ಮನಸೆಳೆಯುವ ಗ್ರಾಫಿಕ್ಸ್.. ನವೀನ ಮಾದರಿಯ ತಂತ್ರಜ್ಞಾನದ ಉಪಯೋಗ ಎಲ್ಲವೂ ವೀಕ್ಷಕರನ್ನು ಆಶ್ವರ್ಯಗೊಳ್ಳುವಂತೆ ಮಾಡುತ್ತದೆ. ಪ್ರೀತಿ, ಪ್ರೇಮ ಮತ್ಸರ,ಹಗೆ, ಹಾಸ್ಯ ಹೀಗೆ ಮನರಂಜಿಸಲು ಬೇಕಾಗುವ ಎಲ್ಲ ಅಂಶಗಳೂ ಈ ಧಾರಾವಾಹಿಯಲ್ಲಿ ಅಡಕವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ "ನಂದಿನಿ" ಧಾರಾವಾಹಿಯನ್ನು ನಿರ್ಮಾಣ ಮಾಡುತ್ತೀರುವಅವ್ನಿಟೆಲಿ ಮೀಡಿಯ ಈ "ಮಾಯಾ" ಧಾರಾವಾಹಿಯನ್ನುತಯಾರಿಸುತ್ತಿದ್ದಾರೆ.ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
.
ತಾರಾಗಣದಲ್ಲಿ ಸರಯೂ ಧಾರಾವಾಹಿಯ ಮೂಲಕ ಹೆಸರಾದ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೊರ್ವ ನಾಯಕಿಯಾಗಿ,ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ.ಹಿರಿಯಯ ನಟ ಉಮೇಶ್, ವಿನಯರಾಮ್ ಪ್ರಸಾದ್,ಮೋಹನ್ ಶರ್ಮ, ಅಶೋಕ್ ಮುಂತಾದವರು ಈ ಧಾರಾವಾಹಿಗೆ ಸಾಥ್ ನೀಡಿದ್ದಾರೆ.
.
ಶೀರ್ಷಿಕೆ ಸಂಗೀತ ವನ್ನು ಸತ್ಯ,ಸಂಕಲನವನ್ನು ಶ್ರೀಕಾಂತ್,ಸಾಹಿತ್ಯ-ಸಂಭಾಷಣೆಯನ್ನು ಉದಯ್ ಮತ್ತು ಛಾಯಾಗ್ರಹಣ-ನಿರ್ದೇಶನ: ಭಾನು ಅವರು ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ-ಚಿತ್ರಕತೆ, ಸಲಹೆ-ನಿರ್ಮಾಣ ಸುಂದರ್ ಸಿ ನಿರ್ವಹಿಸುತ್ತಿದ್ದಾರೆ.
ಫ್ಯಾಂಟಸಿ, ಸಾಮಾಜಿಕ ಮೆಗಾಧಾರಾವಾಹಿ "ಮಾಯಾ" ಜುಲೈ 9ರಿಂದ ರಾತ್ರಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
#Maaya #UdayaTv #Cineloka
 
ತನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರುವ ಸಂಕಷ್ಟಕರ ಗಣಪತಿ ಸಿನಿಮಾದಲ್ಲಿ ನಾಯಕನ ಎಡಗೈ ಅವನನ್ನು ಸಂಕಷ್ಟಕ್ಕೆ ದೂಡುತ್ತದಂತೆ.
.
ಹೌದು ಅರ್ಜುನ್‌ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆಯಿಂದ ನಾಯಕ ಬಳಲುತ್ತಿರುತ್ತಾನೆ. ಈ ಖಾಯಿಲೆಯಿಂದಾಗಿ ಆತ ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಾನಂತೆ.
ನಿರ್ದೇಶಕ ಅರ್ಜುನ್‌ಕುಮಾರ್‌ ಈ ಹಿಂದೆ ಪನ್ಮಂಡ್ರಿ ಕ್ರಾಸ್‌ ಎಂಬ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದರು.
.
’ಈ ಚಿತ್ರದಲ್ಲಿ ನಾಯಕ ಕಾರ್ಟೂನಿಸ್ಟ್‌ ಆಗಬೇಕು ಎಂಬ ಕನಸು ಕಂಡಿರುತ್ತಾನೆ. ಅವನ ವೃತ್ತಿ ಬದುಕು ಸೆಟಲ್‌ ಆಗುತ್ತಿದೆ ಎನ್ನುವ ಹೊತ್ತಿಗೆ ಅವನಿಗೆ ಏಲಿಯನ್‌ ಹ್ಯಾಂಡ್‌ ಡಿಸಾಡರ್‌ ಆಗುತ್ತದೆ. ಈ ಖಾಯಿಲೆ ಪ್ರಪಂಚದಲ್ಲಿ ನೂರು ಜನಕ್ಕೆ ಮಾತ್ರ ಬರುತ್ತದೆ. ಇದಕ್ಕೆ ತುತ್ತಾದ ನಾಯಕನಿಗೆ ಆತನ ಎಡಗೈ ಸಂಪೂರ್ಣ ಹಿಡಿತ ತಪ್ಪುತ್ತದೆ. ಬೇರೆ ಏನೇ ಕೆಲಸ ಮಾಡುತ್ತಿದ್ದರೂ, ಎಡಗೈ ಮಾತ್ರ ಇನ್ನೆನೋ ಕೆಲಸ ಮಾಡುತ್ತಿರುತ್ತದೆ. ಇದರಿಂದ ಆತ ಒಂದಷ್ಟು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾನೆ. ಇದನ್ನೆ ನಾನು ಕಾಮಿಡಿಯಾಗಿ ಹೇಳಿದ್ದೇನೆ ಎನ್ನುತ್ತಾರೆ ಅರ್ಜುನ್‌ ಕುಮಾರ್‌.
.
ನಾಯಕ ಲಿಖಿತ್‌ ಮತ್ತು ನಿರ್ದೇಶಕ ಅರ್ಜುನ್‌ಕುಮಾರ್‌ ಈ ಸ್ಕ್ರಿಪ್ಟ್‌ಗಾಗಿ, ಈ ಖಾಯಿಲೆಗೆ ತುತ್ತಾದವರನ್ನು ಮತ್ತು ಅದಕ್ಕೆ ಚಿಕಿತ್ಸೆ ನೀಡುವ ವೈದ್ಯರನ್ನು ಭೇಟಿ ಮಾಡಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದಾರೆ. ಡೈನಮೇಟ್‌ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ರಾಜೇಶ್‌ಬಾಬು, ಫೈಜಾನ್‌ ಖಾನ್‌, ಜೊಡಿದಾರ್‌ ಬಿ.ಎಸ್‌.ಹೇಮಂತ್‌ಕುಮಾರ್‌, ಪ್ರಮೋದ್‌ ನಿಂಬಾಳ್ಕರ್‌, ಎ ಚೆಲುವರಾಜ ನಾಯ್ಡು ಮಾಡಿದ್ದಾರೆ.
 
ಇದೆ ಜುಲೈ ತಿಂಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.
.
#SankashtaKaraGanapati #Cineloka
ಹೊಸ ಪ್ರತಿಭೆ ಕುಶಾಲ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ತನ್ನ ಮೇಕಿಂಗ್‌ ಸ್ಟೈಲ್‌ನಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆಯುತ್ತಿದೆ.
.
ಹೌದು, ಸಂಪೂರ್ಣ ಹೊಸಬರನ್ನಿಟ್ಟುಕೊಂಡು ವಿಶಿಷ್ಟ ಟೈಟಲ್‌ ಇಟ್ಟು ಸಿನಿಮಾ ಮಾಡಿರುವ ಕುಶಾಲ್‌, ಮೇಕಿಂಗ್‌ ಸ್ಟೈಲ್‌ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪತ್ರಕರ್ತ ಮತ್ತು ಕನ್ನಡ ಹೋರಾಟಗಾರನ ನಡುವಿನ ಸ್ನೇಹದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.
.
ಕನ್ನಡಕ್ಕಾಗಿ ಒಂದನ್ನು ಒತ್ತಿ ಪೋಸ್ಟರ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ, ಜತೆಗೆ ಯೋಗರಾಜ್‌ಭಟ್‌ ಬರೆದಿರುವ ಟೈಟಲ್‌ ಟ್ರ್ಯಾಕ್‌ನ ವಿಡಿಯೋ ಬಿಡುಗಡೆಯಾಗಿದ್ದು,ಅದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.
.
ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಇದೇ ಶುಕ್ರವಾರ ರಾಜ್ಯದ್ಯಾಂತ ತೆರೆಗೆ ಬರುತ್ತಿದೆ. ಎಡ್‌ಬಿಡಂಗಿ ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ.
.
#KannadakkagiOndannuOtti #Cineloka
 
ಇತ್ತೀಚಿನ ದಿನಗಳಲ್ಲಿ ಹಾರರ್‌ ಸಿನಿಮಾಗಳು ಹೆಚ್ಚಾಗಿವೆ, ಆ ಸಾಲಿಗೆ ಇದು ಸೇರ್ಪಡೆಯಾದರೂ, ಇದರಲ್ಲಿ ಸುಂದರವಾದ ದೆವ್ವವಿದೆ.ಚಿಟ್ಟೆ ಸಿನಿಮಾದಲ್ಲಿ ಒಂದು ಕೊಲೆ ಅದರ ಸುತ್ತ ನಡೆಯುವ ಅಂಶಗಳನ್ನು ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರಸನ್ನ.
.
ಹಾರರ್‌ ಸಿನಿಮಾಗಳಲ್ಲಿ ದೆವ್ವಗಳು ಬಹಳ ಹೆದರಿಸುತ್ತವೆ, ಆದರೆ ಚಿಟ್ಟೆ ಸಿನಿಮಾ ಕೂಡಾ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದೆ, ಆದರೆ ಇಲ್ಲಿನ ದೆವ್ವ ನೋಡಿದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದು ಸುಂದರವಾದ ದೆವ್ವ. ಈ ದೆವ್ವಕ್ಕೆ ಚಿತ್ರದ ಕಥಾನಾಯಕಿ ಮೇಲೆ ಕೋಪ.
.
ನಾಯಕ ಮನು ಮತ್ತು ಸೋನು ಮದುವೆಯಾಗಿ ಒಂದು ಮನೆಯಲ್ಲಿ ಸಂಸಾರ ಆರಂಭಿಸುತ್ತಾರೆ, ಆದರೆ ಇವರು ಜೀವನ ಮಾಡಲು ಆರಂಭಿಸಿದ ಕೆಲವು ದಿನಗಳಲ್ಲಿ, ಅವರಿದ್ದ ಮನೆಯಲ್ಲಿ ಕೆಲ ಘಟನೆಗಳು ನಡೆಯಲು ಆರಂಭಿಸುತ್ತವೆ, ಈ ಘಟನೆಗಳನ್ನು ಬೆನ್ನತ್ತಿದಾಗ ಚಿಟ್ಟೆಯ ಕಥೆ ಓಪನ್‌ ಆಗುತ್ತದೆ. ಅದೇನು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.
.
ನಿರ್ದೇಶಕ ಪ್ರಸನ್ನ ಆರಿಸಿಕೊಂಡಿರುವ ಸಬ್ಜೆಕ್ಟ್‌ ಚೆನ್ನಾಗಿದೆ, ಆದರೆ ಅದನ್ನು ಇನ್ನಷ್ಟು ರೋಚಕ ಅಂಶಗಳನ್ನು ತುಂಬಿ ಚಿತ್ರಿಸಬೇಕಿತ್ತು. ಈ ಸಿನಿಮಾದಲ್ಲಿ ದೆವ್ವ ಬಹಳ ಪೆದ್ದು ಪೆದ್ದಾಗಿ ಆಡುತ್ತದೆ, ನಮ್ಮ ಪ್ರೇಕ್ಷಕರು ದೆವ್ವವನ್ನು ಯಾವಾಗಲೂ ಹೆದರಿಕೊಂಡೇ ನೋಡುತ್ತಾರೆ, ಹಾಗಾಗಿ ಪೆದ್ದು ಪೆದ್ದಾದ ದೆವ್ವವನ್ನು ಅವರು ಇಷ್ಟಪಡುವುದು ಕಷ್ಟವೇ ಸರಿ.
.
ಆದರೂ ನಿರ್ದೇಶಕರ ಈ ಥಾಟ್‌ನ್ನು ನಾವು ಮೆಚ್ಚಲೇ ಬೇಕು. ಮುದ್ದಾದ ದೆವ್ವವಾಗಿ ದೀಪಿಕಾ ಇಷ್ಟವಾಗುತ್ತಾರೆ. ಇನ್ನು ನಿರ್ದೇಶಕ ಬಿ ಎಂ ಗಿರಿರಾಜ್‌ ಆಗಾಗ ಬಂದು ನಕ್ಕು ನಗಿಸಿ ಹೋಗುತ್ತಾರೆ. ನಾಯಕ ಯಶಸ್ ಸೂರ್ಯ ಮತ್ತು ಹರ್ಷಿಕಾ ಪೂಣಚ್ಚ ತಮ್ಮ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ನೂರಕ್ಕೆ ನೂರು ಅಂಕಗಳನ್ನು ಗಳಿಸುತ್ತಾರೆ.
.
ಸಿನಿಮಾಟೋಗ್ರಫರ್‌ ವಿಶ್ವಜಿತ್‌ ತಮ್ಮ ಸೂಕ್ಷ್ಮ ಕೆಲಸದಿಂದ ಗಮನ ಸೆಳೆಯುತ್ತಾರೆ, ನಿರ್ದೇಶಕರೇ ಕಂಪೋಸ್‌ ಮಾಡಿರುವ ಎರಡು ಹಾಡುಗಳು ಇಷ್ಟವಾಗುವುದರ ಜತೆಗೆ ಗುನುಗುವಂತೆ ಮಾಡುತ್ತದೆ. ಉಳಿದಂತೆ ಚಿತ್ರಕ್ಕೆ ಸ್ವಲ್ಪ ರೋಚಕತೆಯ ಅವಶ್ಯಕತೆ ಇತ್ತು, ಅದನ್ನು ಬಿಟ್ಟರೆ ಚಿಟ್ಟೆವನ್ನು ಒಮ್ಮೆ ನೋಡಿಕೊಂಡು ಬರಲು ಯಾವುದೇ ಸಮಸ್ಯೆ ಇಲ್ಲ.
.
ರೇಟಿಂಗ್ - 3/5.
#Chitte #Cineloka
ಸಿನಿಮಾ ಅಂದರೆ ಒಂದು ಲವ್‌ಸ್ಟೋರಿ, ಆ ಲವ್ ಸ್ಟೋರಿಯನ್ನು ಉಳಿಸಿಕೊಳ್ಳಲು ನಾಯಕ ಪಡುವ ಕಷ್ಟ. ಇದು ಸಾಮಾನ್ಯ ಕಥಾ ಹಂದರವಾಗಿದೆ. ಈ ವಾರ ಬಿಡುಗಡೆಯಾಗಿರುವ ಹೈಪರ್‌ ಚಿತ್ರದಲ್ಲಿ ಸೇಮ್‌ ಸ್ಟೋರಿಯಿದ್ದರೂ ಅದರ ಜತೆಗೆ ಪರಿಸರ ಕಾಳಜಿ, ಅಪ್ಪ ಮಗಳ ಬಾಂಧವ್ಯವನ್ನು ಹೇಳಲಾಗಿದೆ. ಈ ಕಾರಣಕ್ಕಾಗಿ ಗಣೇಶ್‌ ವಿನಾಯಕ್‌ ನಿರ್ದೇಶನದ ಹೈಪರ್‌ ಚಿತ್ರ ಗಮನ ಸೆಳಯುತ್ತದೆ.
.
ಸೂರ್ಯ (ಅರ್ಜುನ್‌ ಆರ್ಯ). ಕಾಲೇಜು ವಿದ್ಯಾರ್ಥಿ. ಓದುವುದರ ಜತೆಗೆ ಗಿಡಗಳನ್ನು ಬೆಳೆಸುವುದು ಮತ್ತು ತನ್ನ ಸುತ್ತ ಮುತ್ತ ಇರುವವರಿಗೂ ಗಿಡ ಮರಗಳ ಪ್ರಾಮುಖ್ಯತೆಯನ್ನು ಹೇಳಿ ಅವರು ಬೆಳೆಸುವಂತೆ ಮಾಡುವುದು ಅವನ ಕೆಲಸ. ನಾಯಕಿ ಸ್ವಪ್ನಾ [ ಶೀಲಾ] ಇದನ್ನು ನೋಡಿ ಸೂರ್ಯನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆದರೆ ಯಾವುದೋ ಕಾರಣಕ್ಕೆ ಇಬ್ಬರೂ ದೂರವಾಗುತ್ತಾರೆ. ಈ ಪ್ರೇಮಿಗಳು ಮತ್ತೆ ಒಂದಾಗುತ್ತಾರಾ, ನಾಯಕನ ಪರಿಸರ ಪ್ರೇಮ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಿನಿಮಾವನ್ನೇ ನೋಡಬೇಕು.
.
ತನ್ನ ಪ್ರೇಮವನ್ನು ಪಡೆಯುತ್ತಾನಾ ಎಂದು ಪ್ರೇಕ್ಷಕ ಯೋಚನೆ ಮಾಡುತ್ತಿರುವ ಹೊತ್ತಿನಲ್ಲಿ, ಸೂರ್ಯನ ಮಾವನ ಸಂಸಾರದಲ್ಲಿ ಕೆಲ ಘಟನೆಗಳು, ಒಂದಷ್ಟು ಜನ ರೌಡಿಗಳು, ತನ್ನ ಹುಡುಗಿಗು ಆಕೆಯ ತಂದೆಯ ನಡುವೆ ಬಾಂಧವ್ಯ ಸರಿ ಇಲ್ಲ ಎಂಬ ವಿಷಯ ಹೀಗೆ ಚಿತ್ರಕಥೆಯಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ಗಳು ತೆಗೆದುಕೊಳ್ಳುತ್ತದೆ.
.
ಈ ಎಲ್ಲ ಟ್ವಿಸ್ಟ್‌ಗಳ ನಡುವೆಯೂ ನಿರ್ದೇಶಕರು ಪ್ರೇಕ್ಷಕರಿಗೆ ಒಂದು ಸಂದೇಶ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಥೆಯ ವಿಚಾರದಲ್ಲಿ ನಿರ್ದೇಶಕರು ಗೆದ್ದಿದ್ದಾರೆ, ಆದರೆ ಅದನ್ನು ಸಿನಿಮಾಗೆ ಇಳಿಸುವಾಗ ಅಲ್ಲಲ್ಲಿಸಣ್ಣ ಪುಟ್ಟ ಲೋಪಗಳು ಕಾಣುತ್ತವೆ. ಸುಖಾ ಸುಮ್ಮನೆ ಆಗುವ ಫೈಟ್‌ಗಳು . ಅಬ್ಬರದ ಮಾತುಗಳು ಕಡಿಮೆ ಆಗಬೇಕಿತ್ತು.
.
ನಾಯಕ ಅರ್ಜುನ್‌ ಆರ್ಯ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಚೆನ್ನಾಗಿ ನಟಿಸಿದ್ದಾರೆ. ಶೀಲಾ ನಟನೆ ಪಾತ್ರಕ್ಕೆ ತಕ್ಕಂತೆ ಇದೆ. ಡಿ.ಇಮಾನ್‌ ಕಂಪೋಸಿಶನ್ ನಲ್ಲಿ ಬಂದಿರುವ ‘ಸ್ವಪ್ನ ಸುಂದರಿ’ ಹಾಡು ಇಷ್ಟವಾಗುತ್ತದೆ. ಶಕ್ತಿವೇಲು ಅವರ ಕ್ಯಾಮೆರಾ ಕೆಲಸವನ್ನು ಮೆಚ್ಚಿಕೊಳ್ಳಬಹದು ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮತ್ತು ವೀಣಾ ಸುಂದರ್‌ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
.
ರೇಟಿಂಗ್ - 2.75/5
.
#Hyper #Cineloka
 
ಇತ್ತೀಚಿನ ದಿನಗಳಲ್ಲಿ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಕನ್ನಡದಲ್ಲಿ ಜಾಸ್ತಿಯಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ 6 ನೇ ಮೈಲಿ.
.
ಸಂಚಾರಿ ವಿಜಯ್‌ ಮುಖ್ಯ ಭೂಮಿಕೆಯ ‘6ನೇ ಮೈಲಿ’ ಚಿತ್ರ ತನ್ನ ಟ್ರೇಲರ್‌ ಮತ್ತು ಒಂದೇ ಒಂದು ಹಾಡಿನಿಂದಾಗಿ ಗಮನ ಸೆಳೆದಿದೆ. ಸಿನಿಮಾದ ಫಸ್ಟ್‌ಲುಕ್‌ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಜಯ್‌ ಮೊದಲ ಬಾರಿಗೆ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
.
ನಡು ರಾತ್ರಿಯಲ್ಲಿ ಪಶ್ಚಿಮ ಘಟ್ಟಗಳಿಗೆ ಟ್ರೆಕ್ಕಿಂಗ್‌ ಹೋಗಿ ಕಾಣೆಯಾಗುವ ಎರಡು ತಂಡಗಳ ಕಥೆಯನ್ನು ನಿರ್ದೇಶಕ ಸೀನಿ ಇಲ್ಲಿ ಹೇಳುತ್ತಿದ್ದಾರಂತೆ. ಈ ಸಿನಿಮಾದಲ್ಲಿ ನಕ್ಸಲ್‌, ಡಕಾಯಿತರು ಹೀಗೆ ಅನೇಕ ಪಾತ್ರಗಳು ಬಂದು ಹೋಗುತ್ತವೆ.
.
ಸಂಚಾರಿ ವಿಜಯ್‌ ಜತೆ ಆರ್‌ಜೆ ನೇತ್ರ, ಹೇಮಂತ್‌ಕುಮಾರ್‌, ಮೈತ್ರಿ ಜಗ್ಗಿ, ಜಾನ್ಹವಿ ಹೀಗೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಆರು ಮಂದಿ ಕನ್ನಡದ ರೇಡಿಯೋ ಆರ್‌ಜೆಗಳು ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಕೂಡ ಇದಾಗಿದೆ. ಡಾ. ಶೈಲೇಶ್‌ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
.
 
ಚಿತ್ರ ಇದೇ ಜುಲೈ 6 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
.
#6neMaili #Cineloka #SanchariVijay

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ `ಗೀತಾ’. ಎಸ್.ಎಸ್.ಫಿûಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಜನಮನಸೂರೆಗೊಂಡ `ಮುಗುಳುನಗೆ’ ಚಿತ್ರ ಇವರ ನಿರ್ಮಾಣದಲ್ಲೇ ಮೂಡಿಬಂದಿತ್ತು.

.

`ಮಿಸ್ಟರ್ & ಮಿಸ್ಸಸ್ ರಾಮಾಚಾರಿ’ ಹಾಗೂ `ರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

.

ಜುಲೈ 2 ಗಣೇಶ್ ಅವರ ಹುಟ್ಟಿದ ದಿನಕ್ಕಾಗಿ ಈ ಚಿತ್ರದ ವಿಶೇಷ ಫೋಟೋಶೂಟ್ ಕೂಡ ಮಾಡಲಾಗಿದೆ. ಸೆಪ್ಟಂಬರ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ನಾಯಕಾರಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಹೆಸರಾಂತ ನಟ - ನಟಿಯರ ತಾರಾಬಳಗವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

.

ವಿ.ಹರಿಕೃಷ್ಣ ಅವರು `ಗೀತಾ’ಗೆ ಸಂಗೀತ ನೀಡುತ್ತಿದ್ದಾರೆ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ ನಿರ್ದೆಶಕ ವಿಜಯ್ ನಾಗೇಂದ್ರ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದ ಹಾಗೂ ತಂತ್ರಜû್ಞರ ಆಯ್ಕೆ ನಡೆಯುತ್ತಿದೆ.

.

#Cineloka #Geetha

ಸಾಮಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ದೀಪಕ್‍ ಸಾಮಿ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ "ಪ್ರೊಡಕ್ಷನ್ ನಂ.1" ಚಿತ್ರದ ಚಿತ್ರೀಕರಣ ಇದೇ 25 ರಂದು ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ನಿಮಿಷಾಂಭ ದೇವಸ್ಥಾನದಲ್ಲಿ ಆರಂಭವಾಯಿತು.
.
ಚಿತ್ರದ ಮುಹೂರ್ತ ದೃಶ್ಯಕ್ಕೆ ಮೊದಲ ಬಾರಿಗೆ ಹಾರರ್‍ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಗೋಲ್ಡನ್ ಸ್ಟಾರ್‍ ಗಣೇಶ್‍ ಕ್ಯಾಮರಾ ಎದುರಿಸಿದರು. ಯಶಸ್ವಿ ನಿರ್ದೇಶಕ ನಾಗಣ್ಣ ಮೊದಲ ಬಾರಿಗೆ ಗಣೇಶ್‍ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
.
ಚಿತ್ರದ ಮುಹೂರ್ತ ದೃಶ್ಯಕ್ಕೆ ವಿತರಕ ಹೆಚ್.ಡಿ. ಗಂಗರಾಜ್‍ ಕ್ಯಾಮರಾ ಚಾಲೂ ಮಾಡಿದರೆ ಶ್ರೀ ಅರ್ಜುನ್‍ ಗುರೂಜಿ ಆರಂಭ ಫಲಕ ತೋರಿಸಿದರು.
.
ಚಿತ್ರಕ್ಕೆ ನಂಜುಂಡ ಸಂಭಾಷಣೆ, ವಿಘ್ನೇಶ್‍ಛಾಯಾಗ್ರಹಣ, ಅರ್ಜುನ್‍ಜನ್ಯಾ ಸಂಗೀತ, ರವಿವರ್ಮ ಸಾಹಸ, ಸುರೇಶ್‍ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರವಿದ್ದು, ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ ಯಶಸ್ವಿ ನಿರ್ದೇಶಕ ನಾಗಣ್ಣ ಮೊಟ್ಟ ಮೊದಲ ಬಾರಿಗೆ ಗಣೇಶ್‍ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.
.
ತಾರಾಗಣದಲ್ಲಿ ಗಣೇಶ್, ರೋನಿಕ ಸಿಂಗ್, ಸುಂದರ್‍ ರಾಜ್ ಶೋಭರಾಜ್, ಚಿ. ಗುರುದತ್, ರವಿಶಂಕರ್‍ ಗೌಡ, ಸಾಧುಕೋಕಿಲ ಮುಂತಾದವರಿದ್ದಾರೆ.
.
#GoldenStarGanesh #Cineloka

'ಚಮಕ್‌' ಚಿತ್ರದ ಚಿತ್ರದ ನಂತರ ಸಿಂಪಲ್‌ ಸುನಿ , ನವ ನಟ ಧನ್ವೀರ್‌ಗಾಗಿ 'ಬಜಾರ್‌' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ನಟ ಧನ್ವೀರ್‌ ತಮ್ಮ ದೇಹವನ್ನು ಹುರಿಗೊಳಿಸಿದ್ದು, ಖಡಕ್‌ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ.

.

ಕೆಲ ದಿನಗಳ ಹಿಂದೆ 'ಬಜಾರ್‌' ಚಿತ್ರದ ಟೀಸರ್‌ ಬಿಡುಗಡೆಯಾದಾಗ ಧನ್ವೀರ್‌ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಮಾತುಗಳು ಕೇಳಿ ಬಂದಿದ್ದವು. ಈ ಸಿನಿಮಾದಲ್ಲಿನ ಒಂದು ಫೈಟ್‌ ಸೀನ್‌ಗಾಗಿ ನಾಯಕ ಧನ್ವೀರ್‌ ದೇಹವನ್ನು ಹುರಿಗೊಳಿಸಿ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ. ಈ ಸಿಕ್ಸ್‌ ಪ್ಯಾಕ್‌ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತಿದ್ದು, ಸ್ಯಾಂಡಲ್ವುಡ್‌ಗೆ ಮತ್ತೊಬ್ಬ ಸಿಕ್ಸ್ ಪ್ಯಾಕ್‌ ಹೀರೋ ಬಂದಂತಾಗಿದೆ.
.

'ಬಜಾರ್‌' ಚಿತ್ರ ಸುನಿಯವರ ಹಿಂದಿನ ಸಿನಿಮಾಗಳಿಗಿಂತಲೂ ಬಹಳ ವಿಭಿನ್ನವಾಗಿದ್ದು, ದೊಡ್ಡ ಮಟ್ಟದ ಮಾಸ್‌ ಸಿನಿಮಾ ಇದಾಗುತ್ತದೆ ಎನ್ನುತ್ತಿದೆ ಚಿತ್ರತಂಡ.
.
#Bazaar #Cineloka

Page 10 of 20

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top