DKD Gif

6ne maili release gif

adweb

Raambo 2 gIF

24ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ನಂದಿನಿ, ಕಾವೇರಿ, ಮಾನಸ ಸರೋವರ,ಜೋಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನರೀತಿಯಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
.
"ಪುನರಪಿ ಮರಣಂ.. ಪುನರಪಿ ಜನನಂ" ಎನ್ನುವುದು ನಮ್ಮ ಭಾರತೀಯ ಸಂಸ್ಕøತಿಯಲ್ಲಿನ ಆಳವಾದ ನಂಬಿಕೆ. ದೇಹ ನಾಶವಾದರೂಆತ್ಮಕ್ಕೆ ವಿನಾಶವಿಲ್ಲಾ ಎನ್ನುವುದು ಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ "ಮಾಯಾ" ಧಾರಾವಾಹಿಯ ಮೂಲ.
ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ. ಅವನ ಆಸೆ ನೆರವೇರದೆ ದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವರಣ ಮಾಯಾ.
ಇಂದಿನ ಜನ್ಮದಲ್ಲಿ ಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರುಜನರೇಈ ಕಥೆಯಕೇಂದ್ರ ಬಿಂದುಗಳು. ಯಾರ ಜೊತೆಗೆ ಯಾರು ಸೇರಿದರೆ ಒಳ್ಳೆಯದನ್ನು ಸಾಧಿಸಬಹುದು? ಯಾರನ್ನ ಯಾರಿಂದ ದೂರಾ ಮಾಡಬೇಕು? ಯಾರಿಂದ ಯಶಸ್ಸು ದೊರೆಯುತ್ತದೆ?ಎನ್ನುವ ಹೋರಾಟವೇ ಕಾಲದ ಹಾಗೂ ಕಾಲಾಂತಕನ ಮಾಯೆ.
.
ಈ ಧಾರಾವಾಹಿಯ ಕಥೆಯೇ ಹೊಸ ರೀತಿಯ ಹಂದರವಾಗಿರುವುದಲ್ಲದೇ..ಅದಕ್ಕೆ ಪೂರಕವಾದ ಜಾಗಗಳು, ಮನಸೆಳೆಯುವ ಗ್ರಾಫಿಕ್ಸ್.. ನವೀನ ಮಾದರಿಯ ತಂತ್ರಜ್ಞಾನದ ಉಪಯೋಗ ಎಲ್ಲವೂ ವೀಕ್ಷಕರನ್ನು ಆಶ್ವರ್ಯಗೊಳ್ಳುವಂತೆ ಮಾಡುತ್ತದೆ. ಪ್ರೀತಿ, ಪ್ರೇಮ ಮತ್ಸರ,ಹಗೆ, ಹಾಸ್ಯ ಹೀಗೆ ಮನರಂಜಿಸಲು ಬೇಕಾಗುವ ಎಲ್ಲ ಅಂಶಗಳೂ ಈ ಧಾರಾವಾಹಿಯಲ್ಲಿ ಅಡಕವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ "ನಂದಿನಿ" ಧಾರಾವಾಹಿಯನ್ನು ನಿರ್ಮಾಣ ಮಾಡುತ್ತೀರುವಅವ್ನಿಟೆಲಿ ಮೀಡಿಯ ಈ "ಮಾಯಾ" ಧಾರಾವಾಹಿಯನ್ನುತಯಾರಿಸುತ್ತಿದ್ದಾರೆ.ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
.
ತಾರಾಗಣದಲ್ಲಿ ಸರಯೂ ಧಾರಾವಾಹಿಯ ಮೂಲಕ ಹೆಸರಾದ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೊರ್ವ ನಾಯಕಿಯಾಗಿ,ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ.ಹಿರಿಯಯ ನಟ ಉಮೇಶ್, ವಿನಯರಾಮ್ ಪ್ರಸಾದ್,ಮೋಹನ್ ಶರ್ಮ, ಅಶೋಕ್ ಮುಂತಾದವರು ಈ ಧಾರಾವಾಹಿಗೆ ಸಾಥ್ ನೀಡಿದ್ದಾರೆ.
.
ಶೀರ್ಷಿಕೆ ಸಂಗೀತ ವನ್ನು ಸತ್ಯ,ಸಂಕಲನವನ್ನು ಶ್ರೀಕಾಂತ್,ಸಾಹಿತ್ಯ-ಸಂಭಾಷಣೆಯನ್ನು ಉದಯ್ ಮತ್ತು ಛಾಯಾಗ್ರಹಣ-ನಿರ್ದೇಶನ: ಭಾನು ಅವರು ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ-ಚಿತ್ರಕತೆ, ಸಲಹೆ-ನಿರ್ಮಾಣ ಸುಂದರ್ ಸಿ ನಿರ್ವಹಿಸುತ್ತಿದ್ದಾರೆ.
ಫ್ಯಾಂಟಸಿ, ಸಾಮಾಜಿಕ ಮೆಗಾಧಾರಾವಾಹಿ "ಮಾಯಾ" ಜುಲೈ 9ರಿಂದ ರಾತ್ರಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
#Maaya #UdayaTv #Cineloka

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top