Dhwaja Release anigif

Running succ

adweb

anigif seizer

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಹೊಸಬರ ಕಾರಣದಿಂದಲೇ ಹೆಚ್ಚು ಪ್ರಕಾಶಮಾನವಾಗುತ್ತಿದೆ. ಹೊಸಬರ ಚಿತ್ರಗಳಲ್ಲಿ ಹೊಸತನದ ಸ್ಪರ್ಶವಿರುತ್ತದೆ ಅಂತಹ ಚಿತ್ರಗಳ ಸಾಲಿಗೆ ಸೇರಲಿರುವ ಮೊತ್ತೊಂದು ಚಿತ್ರ ಬ್ರಹ್ಮರಾಕ್ಷಸ, ಕನ್ನಡ ಚಿತ್ರರಂಗದಲ್ಲಿ ಲೈಕ್ ಮ್ಯಾನ್ ಆಗಿ ಹಲವಾರು ವರ್ಷಗಳಿಂದ ಕೆಲಸ ಮಾಡಿದ ಶಂಕರ್.ವಿ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ರಾಕೇಶ್ ಎತ್ತೂರ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರೇಮ್, ಖುಷಿ, ಅರುಣ್ ಕುಮಾರ್ ಹಾಗೂ ರಾಮಲಿಂಗ ಎಂಬ ಮೂವರು ಪ್ರಮುಖ ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ ಎಂಬ ರಾಮನಗರ ಮೂಲಕ ನಟಿ ನಾಯಕಿ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ.
.
ಚಿತ್ರದ ಮುಹೂರ್ತದ ದೃಶ್ಯಕ್ಕೆ ನಿರ್ಮಾಪಕ ಪಿ.ಮೂರ್ತಿ ಆರಂಭ ಫಲಕ ತೋರಿಸಿದರು. ಕಾರ್ಥಿಕ್.ಜಿ. ಕಿರಣ್ ಅವರ ಕ್ಯಾಮರಾ ಚಿತ್ರದಲ್ಲಿದ್ದು ಎಂ.ಎಸ್.ತ್ಯಾಗರಾಜ್ ಸಂಯುಕ್ತ ಸಂಯೋಜನೆ ಮಾಡುತ್ತಿದ್ದಾರೆ. ನಿರ್ದೇಶಕ ಶಂಕರ್ ಮಾತನಾಡುತ್ತ ಸೃಷ್ಟಿಕರ್ತನಾದ ಬ್ರಹ್ಮನ ಮೂರು ಮುಖಗಳನ್ನು ಮಾತ್ರ ನೋಡುತ್ತೇವೆ. ಆದರೆ ಆತನ ನಾಲ್ಕನೇ ಮುಖ ಯಾರಿಗೂ ಕಾಣುವುದಿಲ್ಲ ಆ ಕಾಣದ ಮುಖವನ್ನು ನಮ್ಮ ಚಿತ್ರದಲ್ಲಿ ಅನಾವರಣಗೊಳಿಸುತ್ತಿದ್ದೇವೆ. ಆದರೆ ಮನುಷ್ಯ ಹಾಕಿದ ಮುಖವಾಡವನ್ನು ತೆಗೆದು ತೋರಿಸುವ ಪ್ರಯತ್ನ ಚಿತ್ರದಲ್ಲಿ 70% ರಿಯಲ್ ಕಥೆಯಿದ್ದರೆ 30% ಸಿನಿಮಾಟಿಕ್ ಆಗಿರುತ್ತದೆ. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಈ ಚಿತ್ರದಲ್ಲಿ ಮೂಡಿಬರಲಿದೆ.
.
ಅಲೋಕ್ ಅಭಿನಯದ 12 ಎಂ.ಎಂ.ಚಿತ್ರದಿಂದ ಲೈಕ್ ಮ್ಯಾನ್ ಆಗಿ ನಂತರ ಅಧ್ಯಕ್ಷ ಮಾಣಿಕ್ಯ ಮೊದಲಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಮಂಗಳೂರು ಸಕಲೇಶಪುರ ಹಾಗೂ ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಸುವ ಪ್ಲಾನ್ ಹಾಕಿಕೊಂಡಿದ್ದೇವೆ. ಕ್ರೈಮ್, ಮರ್ಡರ್ ಮಿಸ್ಟರಿ ಜೊತೆಗೆ ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ ಇದಾಗಿದೆ. ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಯಾರು ರಾಕ್ಷಸ ಯಾರು ಮನುಷ್ಯ ಎನ್ನುವುದು ಅನಾವರಣಗೊಳ್ಳಲಿದೆ ಎಂದು ಹೇಳಿದರು.
.
ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿರುವ ಚಾಣಕ್ಯ 5 ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ನಿರ್ಮಾಪಕರಾಗಿ ಮೊದಲಬಾರಿಗೆ ಗಾಂಧಿನಗರಕ್ಕೆ ಕಾಲಿಟ್ಟಿರುವ ರಾಕೇಶ್ ಮಾತನಾಡಿ ಶಂಕರ್ ಒಂದು ಕಥೆ ಹೇಳಿದಾಗ ನನಗೆ ಇಷ್ಟವಾಯಿತು. ಬ್ರಹ್ಮನ 4ನೇ ಮುಖ್ಯ ರಾಕ್ಷಸ ರೂಪದಲ್ಲಿ ಇರುತ್ತದೆ. ಮನುಷ್ಯನಿಗೂ ಅದೇ ರೀತಿ ಕಾಣದ ಇನ್ನೊಂದು ಮುಖವಿರುತ್ತದೆ. ಅದನ್ನು ತೋರಿಸುವ ಕಥೆ ನಮ್ಮ ಸಿನಿಮಾದಲ್ಲಿದೆ ಎಂದು ಹೇಳಿದರು. ನಿರ್ಮಾಪಕ ರಾಕೇಶ್‍ರವರೇ ಈ ಚಿತ್ರದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
.
ನಾಯಕಿ ರಕ್ಷಿತಾ ಈ ಹಿಂದೆ ಆನೇಬಲ ಎಂಬ ಚಿತ್ರದಲ್ಲಿ ನಟಿಸಿದ್ದು ಇದು ಅವರ 2ನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ಒಬ್ಬ ಗೃಹಿಣಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಛಾಯಾಗ್ರಾಹಕ ಕಾರ್ತಿಕ್ ಕಿರಣ್ ಈ ಹಿಂದೆ ಅಶೋಕ್ ಕಶ್ಯಪ್ ಬಳಿ ಕೆಲಸ ಮಾಡಿದ್ದರು.
.
#BramhaRakshasa #Cineloka
 
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಸತ್ಯಕಥೆಗಳನ್ನು ಆಧರಿಸಿದ ಚಿತ್ರಗಳು ಹೆಚ್ಚಾಗಿ ತೆರೆಗೆ ಬರುತ್ತಿವೆ. ಇದೀಗ ಅದೇ ಸಾಲಿನಲ್ಲಿ 'ಎಟಿಎಂ' ಚಿತ್ರ ಕೂಡಾ ಸೇರುತ್ತದೆ. ಈ ಚಿತ್ರದ ಇದೇ 20 ಕ್ಕೆ ಬಿಡುಗಡೆಯಾಗಲಿದೆ.
.
ಅಮರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿರ್ದೇಶಕರು ಸತ್ಯಕಥೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಹಾಡುಗಳು ಜನರನ್ನು ಸೆಳೆದಿದೆ.
.
ಕೆಲವು ವರ್ಷಗಳ ಹಿಂದೆ ಹಿಂದೆ ಬೆಂಗಳೂರಿನ ಕಾಪೋರೇಷನ್‌ ವೃತ್ತದಲ್ಲಿನ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆದು ದೇಶದ ಗಮನ ಸೆಳೆದಿತ್ತು. ಇದೇ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಕಮರ್ಷಿಯಲ್‌ ಅಂಶಗಳನ್ನು ತುಂಬಿ ನಿರ್ಮಾಣ ಮಾಡಲಾಗಿದೆ.
.
ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಈ ನೈಜ ಘಟನೆಗೆ ಸಿನಿಮಾ ಟಚ್‌ ನೀಡಿದ್ದಾರೆ ನಿರ್ದೇಶಕ ಅಮರ್‌. ವಿನಯ್ ಈ ಚಿತ್ರದ ಮೂಲಕ ನಾಯಕರಾಗಿ ನಟಿಸುತ್ತಿದ್ದಾರೆ. ಚಂದು ಗೌಡ, ಶೋಭಿತಾ, ಆ್ಯಂಕರ್‌ ಹೇಮಾ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.
.
#AttemptToMurder #Cineloka

ರಾಘವೇಂದ್ರ ರಾಜ್‌ಕುಮಾರ್‌ ನಾಯಕರಾಗಿದ್ದ ಹಳೇ ನಂಜುಂಡಿ ಕಲ್ಯಾಣದಲ್ಲಿ ಮದುವೆಯ ಬಗೆಗಿನ ಸರ್ಕಸ್‌ ನಡೆಯುತ್ತದೆ, ಈ ವಾರ ಬಿಡುಗಡೆಯಾಗುತ್ತಿರುವ ನಂಜುಂಡಿ ಕಲ್ಯಾಣದಲ್ಲಿಯೂ ಮದುವೆ ಬಗೆಗಿನ ಸರ್ಕಸ್‌ ನಡೆಯುತ್ತದೆ.

 

ತಾನು ಇಷ್ಟಪಟ್ಟವರ ಜತೆ ಮದುವೆಯಾಗಲು ಸಿನಿಮಾದ ನಾಯಕ ಮಾಡುವ ನಾನಾ ವಿಧದ ಸರ್ಕಸ್ಸೇ ಈ ಚಿತ್ರದ ಕಥೆ. ಬಹಳ ಗಂಭೀರ ವಿಷಯವನ್ನು ಈ ಚಿತ್ರದಲ್ಲಿ ಹಾಸ್ಯದೊಂದಿಗೆ ಹೇಳಲಾಗಿದೆ. ಈ ಕಾರಣಕ್ಕಾಗಿ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ.

 

 ಸಲಿಂಗಿಗಳು ಮದುವೆಯಾಗುವುದು ನಮ್ಮ ದೇಶದಲ್ಲಿ ನಡೆಯುವುದು ಬಹಳ ಕಡಿಮೆ. ಆದರೆ ವಿದೇಶದಲ್ಲಿ ಇದೆಲ್ಲ ಕಾಮನ್‌, ಹೀಗೆ ವಿದೇಶದಲ್ಲಿ ಸಲಿಂಗಿಯನ್ನು ಮದುವೆಯಾಗಿ ಬಂದು ನಮ್ಮ ದೇಶದಲ್ಲಿ ಏನು ಕಷ್ಟ ಪಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿನಿರ್ದೇಶಕರು ಹೇಳಿದ್ದಾರೆ. ನಿರ್ದೇಶಕರಿಗೆ ಈ ಸಿನಿಮಾವನ್ನು ನಮ್ಮ ಜನ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲವಾಗಿದೆಯಂತೆ. ಈ ಚಿತ್ರದಲ್ಲಿ ಎಲ್ಲ ಕಮರ್ಷಿಯಲ್‌ ಅಂಶಗಳು ಇವೆ.

  

ಮಡಮಕ್ಕಿ ಖ್ಯಾತಿಯ ತನುಷ್‌ ಶಿವಣ್ಣ ಚಿತ್ರದ ನಾಯಕ. ಮೊದಲ ಬಾರಿಗೆ ಅವರು ಹೊಸರೀತಿಯ ಪಾತ್ರವನ್ನು ಮಾಡಿದ್ದಾರೆ. ಶ್ರವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕುರಿ ಪ್ರತಾಪ್‌ ಗೇ ಪಾತ್ರ ನಿರ್ವಹಿಸಿದ್ದಾರೆ. 

ನಿರ್ದೇಶಕ ದಯಾಳ್‌ ಒಟ್ಟೊಟ್ಟಿಗೆ 'ಆ ಕರಾಳ ರಾತ್ರಿ' ಮತ್ತು 'ಪುಟ 109' ಎಂಬ ಎರಡು ಚಿತ್ರಗಳ ಮುಹೂರ್ತವನ್ನು ಒಟ್ಟಿಗೆ ಮಾಡಿದ್ದರು. ಈಗ ಎರಡೂ ಚಿತ್ರಗಳ ಚಿತ್ರೀಕರಣವನ್ನು ಅವರು ಮುಗಿಸಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

 


ಜಯರಾಮ್‌ ಕಾರ್ತಿಕ್‌, ಅನುಪಮಾ ಗೌಡ, ಜಯ ಶ್ರೀನಿವಾಸನ್‌ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರನ್ನು ಇಟ್ಟುಕೊಂಡು 'ಆ ಕರಾಳ ರಾತ್ರಿ' ಸಿನಿಮಾವನ್ನು ಮಲೆನಾಡಲ್ಲಿ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್‌ ಮಾಡಿ ಮುಗಿಸಿದ್ದರು. ಇದಾದ ನಂತರ ಅಂದರೆ ಯುಗಾದಿ ಹಬ್ಬದ ದಿನ 'ಪುಟ 109'ಕ್ಕೆ ಪೂಜೆ ಮಾಡಿ ಅಂದೇ ಆ ಚಿತ್ರದ ಶೂಟಿಂಗ್‌ ಆರಂಭಿಸಿದ್ದರು. ಈಗ ಅದರ ಶೂಟಿಂಗ್‌ ಸಹ ಕಂಪ್ಲೀಟ್‌ ಆಗಿದೆ.

 


'ಪುಟ 109'ರಲ್ಲಿ ಜೆಕೆ ಮತ್ತು ನವೀನ್‌ ಕೃಷ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನವೀನ್‌ ಕೃಷ್ಣ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ದಯಾಳ್‌ ಅಂದುಕೊಂಡಂತೆ ಎರಡು ಚಿತ್ರಗಳ ಶೂಟಿಂಗ್‌ ಕಂಪ್ಲೀಟ್‌ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಈ ಎರಡೂ ಚಿತ್ರಗಳನ್ನು ತೆರೆ ಮೇಲೆ ಕಾಣಬಹುದು.

 

 
 ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಜಾನಿ ಜಾನಿ ಎಸ್ ಪಾಪಾ' ಸಿನಿಮಾದಲ್ಲಿ ದುನಿಯಾ ವಿಜಯ್ ರಾಮನಾಗಿದ್ದಾರೆ, ರಂಗಾಯಣ ರಘು ಹನುಮಂತನ ಅವತಾರವೆತ್ತಿದ್ದಾರೆ.
 
ಇದೇ 30ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್‌ ಸಿಕ್ಸ್ ಪ್ಯಾಕ್ ರಾಮನಾಗಿದ್ದಾರೆ. ಚಿತ್ರದಲ್ಲಿ ಬರುವ ಒಂದು ಸಣ್ಣ ದೃಶ್ಯದಲ್ಲಿ ವಿಜಯ್‌ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನವಮಿ ಹಬ್ಬದ ದಿನ ಈ ರಾಮನ ಅವತಾರದ ಟೀಸರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
 
 WhatsApp Image 2018 03 25 at 3.04.09 PM
ಈ ಹಿಂದೆ ಪ್ರೀತಮ್‌ ಗುಬ್ಬಿ ಮತ್ತು ದುನಿಯಾ ವಿಜಯ್‌ ಜತೆಯಾಗಿ 'ಜಾನಿ ಮೇರಾ ನಾಮ,ಪ್ರೀತಿ ಮೇರಾ ಕಾಮ್' ಮಾಡಿದ್ದರು. ಈಗ ಅದರ ಮುಂದುವರೆದ ಭಾಗವಾಗಿ 'ಜಾನಿ ಜಾನಿ ಎಸ್ ಪಾಪ' ಸಿನಿಮಾ ಮಾಡಿದ್ದಾರೆ . ಕಳೆದ ಬಾರಿಯಂತೆ ಈ ಬಾರಿಯೂ ಕಾಮಿಡಿ ಇಟ್ಟುಕೊಂಡು ಜನರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಲು ಬರುತ್ತಿದ್ದಾರಂತೆ.
 
ಈ ಸಿನಿಮಾದಲ್ಲಿ ರಾಮನ ಅವತಾರ ಯಾಕೆ ಬರುತ್ತದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಅಂತಾರೆ ನಿರ್ದೇಶಕ ಪ್ರೀತಂ ಗುಬ್ಬಿ.
'ಜಾನಿ....'ಯನ್ನು ದುನಿಯಾ ವಿಜಯ್‌ ಅವರು ತಮ್ಮ ಹೋಮ್‌ ಬ್ಯಾನರ್‌ ಆದ ದುನಿಯಾ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ.
#JohnnyJohnnyYesPapa #Cineloka #DuniyaVijay
 
ರಾಜೇಶ್ ವೇಣೂರು ನಿರ್ದೇಶನದಲ್ಲಿ ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ “ಅಸತೋಮ ಸದ್ಗಮಯ” ಚಿತ್ರದ ಟ್ರೇಲರ್ ಮಾರ್ಚ್ 23ರಂದು, ದುಬೈನ ಹೋಟೇಲ್ ಫಾರ್ಚೂನ್ ಪ್ಲಾಜಾದಲ್ಲಿ ಬಿಡುಗಡೆಗೊಂಡಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್‍ನ ಮಾಲಕರಾದ ಪ್ರವೀಣ್ ಶೆಟ್ಟಿಯವರು ಈ ಟ್ರೇಲರನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕನ್ನಡದ ಚಿತ್ರವನ್ನು ದುಬೈಗೆ ತಂದು ಟ್ರೇಲರ್ ರಿಲೀಸ್ ಮಾಡ್ತಾ ಇರೋದು ಕನ್ನಡಿಗರಾದ ನಮಗೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಈ ಚಿತ್ರ ಮನರಂಜನೆ ಜೊತೆಗೆ ಉತ್ತಮ ಮೆಸೇಜ್ ಇರುವಂತಹ ಚಿತ್ರ ಎಂದು ಟ್ರೇಲರ್ ನೋಡುವಾಗ ಅರ್ಥವಾಗುತ್ತದೆ. ಈ ಚಿತ್ರ ಯಶಸ್ವಿಯಾಗಿ, ಕರ್ನಾಟಕದಾದ್ಯಂತ ಮನೆಮಾತಾಗಲಿ ಎಂದು ಹಾರೈಸಿದರು.
 
ನಂತರ ಮಾತನಾಡಿದ ಜೈನ್ ಮಿಲನ್ ಅದ್ಯಕ್ಷರಾದ ದೇವ್ ಕುಮಾರ್ ಕಾಂಬ್ಳಿಯವರು, ಚಿತ್ರದ ಹೆಸರು ತುಂಬಾ ಅರ್ಥಗರ್ಬಿತವಾಗಿದೆ, ಟ್ರೇಲರ್ ನೋಡುವಾಗ ಇದರಲ್ಲಿ ಸರಕಾರಿ ಶಾಲೆಗಳ ಅವನತಿ ಬಗ್ಗೆ ಪ್ರಸ್ತಾಪವಿರುವುದು ಗೋಚರಿಸುತ್ತದೆ, ನಾನು ಕೂಡಾ ಸರ್ಕಾರಿ ಶಾಲೆಯಲ್ಲೇ ಓದಿರೋನು ಆದರೆ ದೇವರು ನನಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ, ಈ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಶುಭ ಹಾರೈಸಿದರು.
 
ಅರುಣ್ ಮುತುಗಡೂರ್ ಮಾತನಾಡಿ, “ಅಸತೋಮ ಸದ್ಗಮಯ” ಎನ್ನುವ ಶಬ್ದ ಕೇಳುವಾಗಲೇ ನಮ್ಮ ನೆನಪು ಶಾಲದಿನಗಳೆಡೆಗೆ ಜಾರುತ್ತದೆ. ಯಾಕೆಂದರೆ ಓದುವಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದೇ ಅಸತೋಮ ಸದ್ಗಮಯ ಮಂತ್ರದಿಂದ, ಈ ಚಿತ್ರದಲ್ಲಿ ಕೂಡ ಸರ್ಕಾರಿ ಶಾಲೆಯ ಪ್ರಸ್ತಾಪವಿರುವುದರಿಂದ, ಈ ಟೈಟಲ್ ಸೂಕ್ತವಾಗಿದೆ ಎಂದರು.
 
ಚಿತ್ರದ ನಿರ್ಮಾಪಕರಾದ ಅಶ್ವಿನ್ ಪಿರೇರಾ ಮಾತನಾಡಿ, ಕನ್ನಡ ಚಿತ್ರಗಳಾಗಲೀ ಅಥವಾ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ನೀವು ನೀಡಿದ ಪ್ರೋತ್ಸಾಹ, ನಮ್ಮನ್ನು ಟ್ರೇಲರ್ ಬಿಡುಗಡೆಗೆ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ನಮ್ಮ ಚಿತ್ರಕ್ಕೂ ಇದೇ ತರಹ ಪ್ರೋತ್ಸಾಹ ನೀಡಬೇಕಾಗಿ ಕೇಳಿಕೊಂಡರು.
 
#AsathomaSadgamaya #Cineloka
ಟೈಟಲ್‌ಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾಗಳ ಸಾಲಿಗೆ ಸೇರಿರುವ ಪ್ರಯಾಣಿಕರ ಗಮನಕ್ಕೆ ಸಿನಿಮಾದಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರ ನಡುವೆ ನಡೆಯುವ ಘಟನೆಗಳೇ ಕಥೆಯಾಗಿದೆಯಂತೆ.
 
ಈ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಯಶಸ್ವಿ ಎ ಪಿ ಅರ್ಜುನ್‌ ಮತ್ತು ಭರ್ಜರಿ ಚೇತನ್‌ ಅತಿಥಿಗಳಾಗಿ ಆಗಮಿಸಿದ್ದರು.
 
ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎ ಪಿ ಅರ್ಜುನ್‌ ಮತ್ತು ಭರ್ಜರಿ ಚೇತನ್‌ಕುಮಾರ್‌ ಬರೆದಿದ್ದಾರೆ. ರಾತ್ರಿ 6.30 ರಿಂದ 10.30ರ ಒಂದು ಬಸ್‌ನಲ್ಲಿ ಈ ಕಥೆ ನಡೆಯುತ್ತದೆ. ಕತ್ತಲಾದ ಮೇಲೆ ಬೆಂಗಳೂರು ಜಗತ್ತು ಹೇಗಿರುತ್ತೆ ಎಂಬುದನ್ನು ತೋರಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರಕ್ಕೆ ಮನೋಹರ್‌ ಎಂಬುವವರು ನಿರ್ದೇಶನ ಮಾಡಿದ್ದು, ಇದು ಇವರಿಗೆ ಮೊದಲ ಸಿನಿಮಾವಾಗಿದೆ.
 
ಪ್ರಯಾಣಿಕರ ಗಮನಕ್ಕೆ ಸಿನಿಮಾದಲ್ಲಿ ಏಳು ಪ್ರಮುಖ ಪಾತ್ರಗಳಿವೆ. ಈಗಾಗಲೇ ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದೆ.
 
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವು ಈ ಚಿತ್ರದಲ್ಲಿ ಚಾಲಕನಾಗಿ ಭರತ್‌, ಕಾಮಿಡಿ ಕಿಲಾಡಿಗಳು ಖ್ಯಾತಿ ಲೋಕೇಶ್‌ ಕಂಡಕ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಮಿತಾರಂಗನಾಥ್‌ ,ಪವಿತ್ರಾ, ನಿನಾದ್‌ ಹರೀಶ್‌ ಷಾ, ದೀಪಕ್‌ ಶೆಟ್ಟಿ, ಅಮಿತಾ, ಗೋಪಾಲ್‌ಕೃಷ್ಣ ದೇಶಪಾಂಡೆ, ಪ್ರಣಯಮೂರ್ತಿ ನಟಿಸಿದ್ದಾರೆ.
 
3 ಪೆಗ್ ಖ್ಯಾತಿಯ ವಿಜೇತ್‌ ಕೃಷ್ಣ ಸಂಗೀತ ಒದಗಿಸಿದ್ದಾರೆ. ಸುರೇಶ್‌ ಮತ್ತು ವಕೀಲರಾಗಿರುವ ಮೋಹನ್‌ಕುಮಾರ್‌ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.
#PrayanikaraGamanakke #Cineloka

 

18 ವರ್ಷಗಳ ಹಿಂದೆ ವಿ ರವಿಚಂದ್ರನ್ ಅಭಿನಯಿಸಿದ ‘ಓ ಪ್ರೇಮವೇ ಬಿಡುಗಡೆಗೊಂಡಿತ್ತು. ಅದೇ ಶೀರ್ಷಿಕೆ ಹೊಂದಿರುವ ಮತ್ತೊಂದು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 

ಲಂಡನ್ ಫಿಲ್ಮ್ ಅಕಾಡೆಮಿಯಲ್ಲಿ ಡೈರೆಕ್ಷನ್‌ ಕೋರ್ಸ್‌ ಮಾಡಿರುವ ಮನೋಜ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿ ಸ್ವತಃ ನಾಯಕರಾಗಿದ್ದಾರೆ. ಶ್ರೀಮತಿ ಸಿ ಟಿ ಚಂಚಲ ಕುಮಾರಿ ಅವರು ಬಂಡವಾಳ ಹಾಕಿದ್ದಾರೆ.

 

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಂದ ಸ್ಪೂರ್ತಿಗೊಂಡಿದ್ದ ಮನೋಜ್ ತ್ರಿಕೋನ ಪ್ರೇಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ನಿಜ ಜೀವನದಲ್ಲಿ ಸಂಭವಿಸಿದ ಘಟನೆಯೊಂದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ಈ ಚಿತ್ರ ಮಾಡಲಾಗಿದೆಯಂತೆ.

 

ಮನೋಜ್‌ ಈ ಮುಂಚೆ ಮೊಗ್ಗಿನ ಮನಸು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮನೋಜ್ ಕುಮಾರ್ಗೆಜೋಡಿಯಾಗಿ ನಿಕ್ಕಿ ಗರ್ಲಾನಿ ಹಾಗೂ ಅಪೂರ್ವ ನಟಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಪ್ರಶಾಂತ್ ಸಿದ್ದಿ ಹಾಗೂ ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಿದ್ದಾರೆ.

 

ಈ ಚಿತ್ರಕ್ಕೆ ಆನಂದ್ ರಾಜ ವಿಕ್ರಮ್ ಹಾಗೂ ರಾಹುಲ್ ದೇವ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು ಎರಡು ಹಾಡುಗಳನ್ನು ಸ್ವಿಟ್ಜರ್ ಲ್ಯಾಂಡ್ ಅಲ್ಲಿ ಚಿತ್ರೀಕರಿಸಲಾಗಿದೆ

ಮಫ್ತಿ ಚಿತ್ರದ ನಂತರ ಶ್ರೀಮುರುಳಿ ನಟಿಸುತ್ತಿರುವ ಚಿತ್ರಕ್ಕೆ ಭರ್ಜರಿ ಚೇತನ್‌ಕುಮಾರ್‌ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

 

ಮಫ್ತಿಯ ಯಶಸ್ಸಿನ ನಂತರ ಶ್ರೀಮುರಳಿ ಸಾಕಷ್ಟು ಕಥೆಗಳನ್ನು ಕೇಳಿದ್ದರು. ಆದರೆ ಅದಾವುದು ಫೈನಲ್‌ ಆಗಿಲ್ಲ. ಮೂಲಗಳ ಪ್ರಕಾರ ರೋರಿಂಗ್ ಸ್ಟಾರ್ ಮುರಳಿ ಅವರು ಬಹದ್ದೂರ್,ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಹೇಳಿರುವ ಕಥೆಯನ್ನು ಓಕೆ ಮಾಡಿದ್ದು, ಯುಗಾದಿ ಹಬ್ಬದಂದು (ಮಾರ್ಚ್ 18) ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ.

 

ಹಿಂದೊಮ್ಮೆ ಪತ್ರಕರ್ತರಿಗೆ ಸಿಕ್ಕಾಗ ನನ್ನ ಮುಂದಿನ ಚಿತ್ರ ಫ್ಯಾಮಿಲಿ ಎಂಟರ್‌ಟೇನರ್ ಆಗಿರತ್ತದೆಂದು ಶ್ರೀಮುರಳಿಯವರು ಹೇಳಿಕೊಂಡಿದ್ದರು. ಹೇಳಿ ಕೇಳಿ ಚೇತನ್ ಕೂಡ ಮಾಸ್ ಕಂ ಫ್ಯಾಮಿಲಿ ಎಂಟರ್‌ಟೇನರ್ ಗಳನ್ನು ನೀಡಿ ಗೆದ್ದಿರುವುದರಿಂದ ಸಹಜವಾಗಿ ಶ್ರೀ ಮುರಳಿ ಅವರತ್ತ ಒಲವು ತೋರಿದ್ದಾರೆನ್ನಲಾಗಿದೆ.

 

ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸುತ್ತಿರುವ `ತಾರಾಕಾಸುರ` ಚಿತ್ರಕ್ಕಾಗಿ ಚೇತನ್ ಕುಮಾರ್ ಅವರು ಬರೆದಿರುವ `ಚಂದಮಾಮ ಕಥೆ ಕೇಳಿದ್ದೆ, ಲೈನು ಹಾಕೋರನ್ನ ನೋಡಿದ್ದೆ, ಲವ್ವು ಮಾಡೋರನ್ನ ಬೈತಿದ್ದೆ, ಈಗ ನಾನೇ ಲವ್ವಲ್ ಬಿದ್ದು ಮಕ್ಕರ್ ಆಗೋದೆ` ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಬೆಟ್ಟದಲ್ಲಿ ಮೂರುದಿನಗಳ ಕಾಲ ನಡೆದಿದೆ.

 

ಮಾನ್ವಿತ ಹರೀಶ್, ವೈಭವ್, ಕರಿಸುಬ್ಬು, ಎಂ.ಕೆ.ಮಠ ಅಭಿನಯಿಸಿದ ಈ ಹಾಡಿನ ಚಿತ್ರೀಕರಣದಲ್ಲಿ 500ಕ್ಕೂ ಹೆಚ್ಚು ಸಹ ಕಲಾವಿದರು, 200ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗವಹಿಸಿದ್ದರು. ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.

 

ಹಿಂದೆ `ರಥಾವರ` ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ `ತಾರಾಕಾಸುರ` ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

ವೈಭವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‍ನ ನಟ ಡ್ಯಾನಿ ಸ¥sóÁನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  •  Start 
  •  Prev 
  •  1  2 
  •  Next 
  •  End 
Page 1 of 2

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top