nata

ttm

adweb

udgharsha

ಸಾಮಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ದೀಪಕ್‍ ಸಾಮಿ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ "ಪ್ರೊಡಕ್ಷನ್ ನಂ.1" ಚಿತ್ರದ ಚಿತ್ರೀಕರಣ ಇದೇ 25 ರಂದು ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ನಿಮಿಷಾಂಭ ದೇವಸ್ಥಾನದಲ್ಲಿ ಆರಂಭವಾಯಿತು.
.
ಚಿತ್ರದ ಮುಹೂರ್ತ ದೃಶ್ಯಕ್ಕೆ ಮೊದಲ ಬಾರಿಗೆ ಹಾರರ್‍ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಗೋಲ್ಡನ್ ಸ್ಟಾರ್‍ ಗಣೇಶ್‍ ಕ್ಯಾಮರಾ ಎದುರಿಸಿದರು. ಯಶಸ್ವಿ ನಿರ್ದೇಶಕ ನಾಗಣ್ಣ ಮೊದಲ ಬಾರಿಗೆ ಗಣೇಶ್‍ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
.
ಚಿತ್ರದ ಮುಹೂರ್ತ ದೃಶ್ಯಕ್ಕೆ ವಿತರಕ ಹೆಚ್.ಡಿ. ಗಂಗರಾಜ್‍ ಕ್ಯಾಮರಾ ಚಾಲೂ ಮಾಡಿದರೆ ಶ್ರೀ ಅರ್ಜುನ್‍ ಗುರೂಜಿ ಆರಂಭ ಫಲಕ ತೋರಿಸಿದರು.
.
ಚಿತ್ರಕ್ಕೆ ನಂಜುಂಡ ಸಂಭಾಷಣೆ, ವಿಘ್ನೇಶ್‍ಛಾಯಾಗ್ರಹಣ, ಅರ್ಜುನ್‍ಜನ್ಯಾ ಸಂಗೀತ, ರವಿವರ್ಮ ಸಾಹಸ, ಸುರೇಶ್‍ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರವಿದ್ದು, ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ ಯಶಸ್ವಿ ನಿರ್ದೇಶಕ ನಾಗಣ್ಣ ಮೊಟ್ಟ ಮೊದಲ ಬಾರಿಗೆ ಗಣೇಶ್‍ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.
.
ತಾರಾಗಣದಲ್ಲಿ ಗಣೇಶ್, ರೋನಿಕ ಸಿಂಗ್, ಸುಂದರ್‍ ರಾಜ್ ಶೋಭರಾಜ್, ಚಿ. ಗುರುದತ್, ರವಿಶಂಕರ್‍ ಗೌಡ, ಸಾಧುಕೋಕಿಲ ಮುಂತಾದವರಿದ್ದಾರೆ.
.
#GoldenStarGanesh #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top