nata

ttm

adweb

udgharsha

 

ಗಿರೀಶ್ ಕಾರ್ನಾಡರ ನಿರ್ದೇಶನ ಹಾಗೂ ದಿ. ಶಂಕರನಾಗ್ ಅಭಿನಯದಲ್ಲಿ, 40 ವರ್ಷಗಳ ಹಿಂದೆ ತೆರೆಕಂಡಿದ್ದ ಒಂದಾನೊಂದು ಕಾಲದಲ್ಲಿ ಚಿತ್ರದ ಹೆಸರು ಈಗ ಮತ್ತೆ ಕೇಳಿಬರುತ್ತಿದೆ. ಅದೇ ಹೆಸರಿಟ್ಟುಕೊಂಡು ಹೊಸಬರ ತಂಡವೊಂದು ಸಿನಿಮಾ ಆರಂಭಿಸಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‍ನ ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮುಹೂರ್ತ ದೃಷ್ಯಕ್ಕೆ ಹಿರಿಯ ನಿರ್ದೇಶಕ ಭಗವಾನ್ ಅವರು ಆರಂಭ ಫಲಕ ತೋರಿದರೆ, ನಟಿ ಸಂಗೀತಾ ಕ್ಯಾಮೆರಾ ಆನ್ ಮಾಡಿದರು.
.

ಮುನಿಲಕ್ಷ್ಮಿವೆಂಕಟೇಶ್ವರ ಕ್ರಿಯೇಶನ್ಸ್ ಲಾಂಛನದಲ್ಲಿ ವೈ. ನಾರಾಯಣಸ್ವಾಮಿ, ಮುನೇಶ್, ಅಕ್ಷಿತ್ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜುನಾಥ ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಕೇಶ್ ಸಿ.ತಿಲಕ್ ಚಿತ್ರದ ಕ್ಯಾಮೆರಾವರ್ಕ್ ಮಾಡಿದರೆ, ಯಶವಂತ್ ಭೂಪತಿ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ನಾಯಕನಾಗುವ ಮೂಲಕ ಗಜ ಎಂಬ ಮತ್ತೊಂದು ಯುವ ಪ್ರತಿಭೆ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದೆ.
.

ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಂಜುನಾಥ್ ಶಂಕರ್‍ನಾಗ್ ಅವರ ಒಂದಾನೊಂದು ಕಾಲ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಶೀರ್ಷಿಕೆ ಬಿಟ್ಟರೆ ಮತ್ಯಾವುದೇ ರೀತಿಯ ಸಂಬಂಧವಿಲ್ಲ. 1980ರ ದಶಕದಲ್ಲಿ ನಡೆಯುವ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದರಿಂದ ಈ ಚಿತ್ರಕ್ಕೆ ಒಂದಾನೊಂದು ಕಾಲದಲ್ಲಿ ಎಂದು ಹೆಸರಿಟ್ಟಿದ್ದೇವೆ. ಒಂದು ಕರ್ಚೀಫ್(ಕರವಸ್ತ್ರ) ಮೇಲೆ ನಡೆಯುವ ಲವ್‍ಸ್ಟೋರಿ ಈ ಚಿತ್ರದಲ್ಲಿದೆ. ರೆಟ್ರೋ ಸ್ಟೈಲ್‍ನಲ್ಲಿ ಇಡೀ ಚಿತ್ರವನ್ನು ಮಾಡುತ್ತಿದ್ದೇವೆ. ಆಗಿನ ಕಾಲದ ಹಳೇ ಕಟ್ಟಡ, ಜನರ ಜೀವನ ಶೈಲಿ, ಹಳ್ಳಿ ಪರಿಸರ ಇಂಥವುಗಳನ್ನು ಮರುಸೃಷ್ಟಿ ಮಾಡಬೇಕಿದೆ. ಒಂದು ಕರವಸ್ತ್ರದಿಂದಲೇ ಚಿತ್ರದ ಕಥೆ ಆರಂಭವಾಗುತ್ತದೆ. ಬನ್ನೇರುಗಟ್ಟ, ಬನವಾಸಿ, ಪಾಂಡವಪುರ, ಸಕಲೇಶಪುರ ಸುತ್ತಮುತ್ತ ಈ ಚಿತ್ರಕ್ಕೆ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
.

ನಂತರ ಚಿತ್ರದ ನಾಯಕನಟ ಗಜ ಮಾತನಾಡಿ ನಿರ್ದೇಶಕ ಮಂಜು ನನ್ನ ಸ್ನೇಹಿತರು. ರೆಟ್ರೋಸ್ಟೈಲ್‍ನಲ್ಲಿ ಮೂಡಿಬರುವ ಒಂದು ಲವ್‍ಸ್ಟೋರಿ ಈ ಚಿತ್ರದಲ್ಲಿದೆ. ಆಗಿನ ಕಾಲದ ಹುಡುಗರು ಹೇಗಿದ್ದರು ಎಂದು ತಿಳಿದುಕೊಂಡಿದ್ದೇನೆ. ಅಭಿನಯದ ಬಗ್ಗೆ ನಿರ್ದೇಶಕರು ಹೇಳಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನೊಬ್ಬ ಡೈರೆಕ್ಟರ್ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಂತರ ಚಿತ್ರದ ನಾಯಕಿ ಜಾಹ್ನವಿ ಮಾತನಾಡಿ ನಾಟಕಗಳಲ್ಲಿ ಅಭನಯಿಸಿದ ಅನುಭವವಿದೆ. ಚಿತ್ರರಂಗ ಹೊಸದು, ಹಳೇಕಾಲದ ಹುಡುಗಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ನೀನಾಸಂ ಅಶ್ವತ್ ಈ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರ ಮಾಡುತ್ತಿದ್ದಾರೆ. ನಟಿ ಸಂಗೀತ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top