chamak running success

anigif

adweb

raju

ಯೋಗರಾಜ್‌ಭಟ್ಟರ ಶಿಷ್ಯ ಮಹೇಶಕುಮಾರ್‌ ನಿರ್ದೇಶನದ ಅಯೋಗ್ಯ ಚಿತ್ರ ಮಂಡ್ಯ ಸುತ್ತಮುತ್ತ ಶೂಟಿಂಗ್‌ ಕಂಪ್ಲೀಟ್‌ ಮಾಡಿದೆ.ಸತತವಾಗಿ 38 ದಿನಗಳ ಕಾಲ ಚಿತ್ರೀಕರಣ ನಡೆಸಿದ ನಿರ್ದೇಶಕ ಮಹೇಶ್‌, ಹಾಡುಗಳು ಮತ್ತು ನಾಯಕಿಯ ಎಂಟ್ರಿ ಸೀನ್‌ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.

 

ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯನ ನಡುವೆ ನಡೆಯುವ ಜಿದ್ದಾಜಿದ್ದಿಯನ್ನು ಕಾಮಿಡಿಯಾಗಿ ತೋರಿಸಲು ಮಹೇಶ್‌ ಈ ಕಥೆಯನ್ನು ಹೆಣೆದಿದ್ದಾರೆ. ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಈ ಚಿತ್ರಕ್ಕೆ ನಾಯಕ ನಾಯಕಿ, ರವಿಶಂಕರ್‌, ಶಿವರಾಜ್‌ ಕೆ ಆರ್‌ ಪೇಟೆ, ಸಾಧುಕೋಕಿಲಾ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ.

 

 

ಚಮಕ್‌ ಚಿತ್ರವನ್ನು ನಿರ್ಮಾಣ ಮಾಡಿದ್ದ ಟಿ ಆರ್‌ ಚಂದ್ರಶೇಖರ್‌ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣದಲ್ಲಿ ತೆಗೆದ ಕೆಲ ಫೋಟೋಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸದ್ದು ಮಾಡಿದ್ದವು.

 
ಪುನೀತ್‌ ರಾಜ್‌ಕುಮಾರ್‌ ಅವರ 28 ನೇ ಚಿತ್ರದ ನಾಯಕಿ ಬದಲಾಗಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಆರಂಭಿಸಿರುವ ಚಿತ್ರಕ್ಕೆ ಈ ಮೊದಲು ತೆಲುಗಿನ ಪ್ರಿಯಾಂಕ ಜ್ವಾಲಾಕರ್‌ ನಾಯಕಿಯಾಗಿದ್ದರು. ಈಗ ಅದೇ ಜಾಗಕ್ಕೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಎಂಟ್ರಿ ಕೊಟ್ಟಿದ್ದಾರೆ.
 
ಪವನ್‌ ಒಡೆಯರ್ ನಿರ್ದೇಶನದ ರಾಕ್‌ಲೈನ್‌ ವೆಂಕಟೇಶ್‌ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರು ಈ ಚಿತ್ರಕ್ಕೆ ಮೊದಲು ಪ್ರಿಯಾಂಕ ಜ್ವಾಲಕರ್‌ ಆಯ್ಕೆಯಾಗಿದ್ದರು. ಆದರೆ ಡೇಟ್ಸ್‌ ಕ್ಲಾಶ್‌ ಆಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ರಚಿತಾ ರಾಮ್‌ ಮೊರೆ ಹೋಗಿದೆ.
 
ಮಂಗಳವಾರದಿಂದ ರಚಿತಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು, ಅಪ್ಪು ಮತ್ತು ರಚಿತಾ ಕಾಂಬಿನೇಶನ್‌ನ ಒಂದಷ್ಟು ದೃಶ್ಯಗಳನ್ನು ಯಲಹಂಕ ಬಳಿ ಶೂಟಿಂಗ್‌ ಮಾಡಿಕೊಂಡಿದ್ದಾರೆ ನಿರ್ದೇಶಕ ಪವನ್‌ ಒಡೆಯರ್‌. ರಚಿತಾ ರಾಮ್‌ ಈ ಹಿಂದೆ ಚಕ್ರವ್ಯೂಹದಲ್ಲಿ ಪುನೀತ್‌ ಜತೆ ರೊಮ್ಯಾನ್ಸ್‌ ಮಾಡಿದ್ದರು.
 
ರಚಿತಾ ರಾಮ್‌ ನಟನೆಯ 'ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರೀಕರಣ ಇತ್ತೀಚೆಗೆ ಕಂಪ್ಲೀಟ್‌ ಆಯಿತು. ಇನ್ನು ನೀನಾಸಂ ಸತೀಶ್‌ ನಾಯಕರಾಗಿರುವ 'ಅಯೋಗ್ಯ'ದಲ್ಲಿಯೂ ರಚಿತಾ ರಾಮ್‌ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಅಪ್ಪು ಮತ್ತು ರಚಿತಾ ಮತ್ತೆ ಒಂದಾಗಿರುವು ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ.

anigif sam

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top