nata

ttm

adweb

udgharsha

ರಾಕಿಂಗ್ ಸ್ಟಾರ್ ಯಶ್‌ ನಟನೆಯ "ಕೆಜಿಎಫ್‌" ಟ್ರೇಲರ್‌ನಿಂದಾಗಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.ಚಿತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ, ಸಿನಿಮಾದ ಆಡಿಯೋ ಹಕ್ಕು 3.60 ಕೋಟಿಗೆ ಲಹರಿ ಸಂಸ್ಥೆಗೆ ಮಾರಾಟವಾಗಿದೆ.

.

ಹೌದು ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿ ಕನ್ನಡ,ತೆಲುಗು,ತಮಿಳು, ಮಲಯಾಳಂ ಭಾಷೆಗಳ ಹಕ್ಕನ್ನು ಅವರು ಖರೀದಿಸಿದ್ದಾರೆ. ಈ ಮೊತ್ತಕ್ಕೆ ಕನ್ನಡ ಸಿನಿಮಾವೊಂದರ ಆಡಿಯೋ ಮಾರಾಟವಾಗಿರುವುದು ದಾಖಲೆಯಾಗಿದೆ. ಒಟ್ಟಿನಲ್ಲಿ ಯಶ್‌ ಕೆಜಿಎಫ್‌ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

.

ಡಿ. 21ಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾ ದೇಶಾದ್ಯಂತ 5 ಭಾಷೆಗಳಲ್ಲಿ ತೆರೆಕಾಣಲಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಕೆ.ಜಿ.ಎಫ್‌'ನಲ್ಲಿ ತಾಯಿಯ ಸೆಂಟಿಮೆಂಟ್‌ ಇದೆಯಂತೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಹೇಳಿದೆ.

.

ನ.16ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಡಿ 21ಕ್ಕೆ ಮುಂದೂಡಲಾಗಿದೆ. ಈ ಸಿನಿಮಾದಲ್ಲಿ ಯುನಿವರ್ಸಲ್‌ ಸಬ್ಜೆಕ್ಟ್ ಇದೆ ತಾಯಿ ಸೆಂಟಿಮೆಂಟ್‌ ಜತೆಗೆ ಹೋರಾಟದ ಕಥೆಯಿದೆ ಎಂದು ಯಶ್‌ ಹೇಳಿದರು.
.

ಈ ಸಿನಿಮಾದ ಹಿಂದಿ ಸಿನಿಮಾದ ರೈಟ್ಸ್‌ನ್ನು ರವೀನಾ ಟಂಡನ್‌ ಪತಿ ಅನಿಲ್‌ ತದಾನಿ, ನಟ ಫರ್ಹಾನ್‌ ಆಖ್ತರ್‌ ಪಡೆದುಕೊಂಡಿದ್ದು, ಅವರು ಪ್ರಮೋಶನ್‌ಗಾಗಿ ಹೆಚ್ಚಿನ ಸಮಯ ಕೇಳುತ್ತಿದ್ದಾರೆ ಆ ಕಾರಣಕ್ಕಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಇದೇ ಸಮಯದಲ್ಲಿ ಯಶ್‌ ತಿಳಿಸಿದರು.
.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ "ಕೆಜಿಎಫ್‌" ನ್ನು ಬಾಲಿವುಡ್‌ ನಟಿ ರವೀನಾ ಟಂಡನ್‌ ಪತಿ ಅನಿಲ್‌ ತಡಾನಿ ಕೊಂಡುಕೊಂಡಿದ್ದಾರೆ.
.

ಹೌದು ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಹಿಂದಿ ಅವತರಿಣಿಕೆಯ ಡಿಸ್ಟ್ರಿಬ್ಯೂಷನ್‌ ಈಗ ಅನಿಲ್‌ ತಡಾನಿ ಪಾಲಾಗಿದೆ. 'ಕೆಜಿಎಫ್‌' ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದರ ಹಿಂದಿ ಅವತರಿಣಿಕೆಯನ್ನು ಅನಿಲ್‌ ತಡಾನಿ ಪಡೆದುಕೊಂಡಿದ್ದಾರೆ. ಈ ಅನಿಲ್‌ ತಡಾನಿ ನಟಿ ರವಿನಾ ಟಂಡನ್‌ ಅವರ ಪತಿ.
.
ಇಡೀ ಸಿನಿಮಾವನ್ನು 80ರ ದಶಕದ ವಾತಾವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೇ ಒಂದು ಟೀಸರ್‌ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಚಿತ್ರತಂಡ ನೀಡುವ ಮಾಹಿತಿ ಪ್ರಕಾರ ಕೆಜಿಎಫ್‌ ದಾಖಲೆ ಮಟ್ಟದಲ್ಲಿ ಪ್ರದರ್ಶನ ಕಾಣಲಿದೆಯಂತೆ.
.
ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉಗ್ರಂ ಖ್ಯಾತಿ ಪ್ರಶಾಂತ್‌ ನೀಲ್‌ ಇದರ ನಿರ್ದೇಶಕರು.

ಜಾಗ್ವಾರ್‌ ಸಿನಿಮಾದಲ್ಲಿ ನಿಖಿಲ್‌ಕುಮಾರ್‌ ಜತೆ ನೃತ್ಯ ಮಾಡಿದ್ದ ತಮನ್ನಾ ಈಗ 'ಕೆಜಿಎಫ್‌'ಗೆ ಬಂದಿದ್ದಾರೆ. ಅರ್ಥಾತ್‌, 'ಕೆಜಿಎಫ್‌' ಚಿತ್ರದಲ್ಲಿ ಒಂದು ಸ್ಪೇಷಲ್‌ ಹಾಡಿಗೆ ನೃತ್ಯ ಮಾಡಲು ಬಂದಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್‌' ಸಿನಿಮಾದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂಬ ಹಾಡಿನ ರೀಮಿಕ್ಸ್‌ಗೆ ಸ್ಟೆಪ್‌ ಹಾಕಲಿದ್ದಾರೆ.
.

1970ರಲ್ಲಿ ಬಿಡುಗಡೆಯಾದ ‘ಪರೋಪಕಾರಿ’ ಸಿನಿಮಾದ ಈ ಹಾಡು ಅಂದಿನಿಂದ ಇಂದಿನವರೆಗೂ ಸೂಪರ್‌ ಹಿಟ್‌ ಸಾಂಗ್‌ ಆಗಿದೆ. ತಮನ್ನಾ ಸಿನಿಮಾದಲ್ಲಿ ನೃತ್ಯ ಮಾಡುತ್ತಿರುವ ವಿಷಯವನ್ನು ಚಿತ್ರತಂಡದವರೇ ಸೋಷಿಯಲ್‌ ಮೀಡಿಯಾದಲ್ಲಿ ಕನ್‌ಫರ್ಮ್‌ ಮಾಡಿದ್ದಾರೆ. ಇದಕ್ಕೂ ಮುಂಚೆ ರಾಯ್‌ ಲಕ್ಷ್ಮೇ, ಕಾಜಲ್‌ ಅಗರ್ವಾಲ್‌, ನೊರಾ ಫತೇಹಿ ಹೆಸರುಗಳು ಕೇಳಿ ಬಂದಿದ್ದವು.
.

ಇದೀಗ ತಮನ್ನಾ ಹೆಸರು ಫೈನಲ್‌ ಆಗಿದ್ದು, ಇಂದಿನಿಂದ ಬೆಂಗಳೂರಿನಲ್ಲಿ ಹಾಡಿನ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ.
ಈ ಹಾಡಿಗೆ ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top