DKD Gif

Ayugya Gif

adweb

Raambo 2 gIF

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ವಿಚಿತ್ರ ಖಾಯಿಲೆಯನ್ನು ಇಟ್ಟುಕೊಂಡು ನವ ನಿರ್ದೇಶಕ ಅರ್ಜುನ್‌ ಸಿನಿಮಾ ಮಾಡಿದ್ದಾರೆ, ಆದರೆ ಈ ಖಾಯಿಲೆಯನ್ನು ಸಿನಿಮಾ ಮಾಡುವುದು ಬಹಳ ಕಷ್ಟವಾಯಿತು ಎನ್ನುತ್ತಾರೆ ಅವರು.

.


‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆ ಇದೆ ಎಂದು ನನಗೆ ತಿಳಿದಾಗ ಬಹಳ ಆಶ್ಚರ್ಯಪಟ್ಟಿದ್ದೆ, ಆಗ ಅದನ್ನು ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿ, ಕಥೆ ಮಾಡಲು ಕುಳಿತೆ, ಆದರೆ ಈ ಖಾಯಿಲೆಯನ್ನು ಸಿನಿಮಾ ರೂಪಕ್ಕೆ ಇಳಿಸುವುದು ಬಹಳ ಕಷ್ಟವಾಯಿತು. ಅದಕ್ಕಾಗಿ ಸಾಕಷ್ಟು ವೆಬ್‌ಸೈಟ್‌ಗಳಲ್ಲಿ ಸಂಶೋಧನೆಗಿಳಿದೆ. ಈ ವಿಷಯದ ಬಗ್ಗೆ ಸಿನಿಮಾ ಏನಾದರೂ ಬಂದಿದೆಯಾ ಎಂದು ತಿಳಿದುಕೊಳ್ಳಲು ಯತ್ನಿಸಿದೆ. ಹಾಲಿವುಡ್‌, ಅರೇಬಿಕ್‌ ಸೇರಿ ಎಲ್ಲ ಭಾಷೆಗಳಲ್ಲಿಯೂ ಹುಡುಕಿದೆ, ಆಗ ನನಗೆ ಇದರ ಬಗ್ಗೆ ತೆಲುಗಿನಲ್ಲಿ ಒಂದು ಶಾರ್ಟ್‌ ಫಿಲಂ ಮತ್ತು ಬಿಬಿಸಿಯಲ್ಲಿ ಒಂದು ಡಾಕ್ಯುಮೆಂಟರಿ ಬಂದಿರುವುದು ತಿಳಿದು, ಅದರ ಸಹಾಯದಿಂದ ಸ್ಕ್ರೀನ್‌ಪ್ಲೇ ಮಾಡಿಕೊಂಡೆ,’ಎನ್ನುತ್ತಾರೆ ಅರ್ಜುನ್‌.

.

ಈ ಚಿತ್ರದಲ್ಲಿ ನಾಯಕನಿಗೆ ಆತನ ಎಡಗೈ ವಿಲನ್‌ ಆಗಿರುತ್ತದೆ. ಹಾಗಾಗಿ ಚಿತ್ರಕ್ಕೆ ‘ಸಂಕಷ್ಟಕರ ಗಣಪತಿ’ ಎಂದು ಹೆಸರಿಡಲಾಗಿದೆಯಂತೆ. ಒಂದು ಗಂಭೀರ ಖಾಯಿಲೆಯನ್ನು ತೆರೆಗೆ ಅಳವಡಿಸುವಾಗ ಅದಕ್ಕೆ ಕಾಮಿಡಿ ಮತ್ತು ರೊಮ್ಯಾಂಟಿಕ್‌ ಅಂಶಗಳನ್ನು ಸೇರಿಸಿದ್ದಾರಂತೆ.

ಲಿಖಿತ್‌ಶೆಟ್ಟಿ ಈ ಸಿನಿಮಾದ ನಾಯಕ, ಶ್ರುತಿ ನಾಯಕಿಯಾಗಿ ನಟಿಸಿದ್ದಾರೆ.

.

#Cineloka

ತನ್ನ ಟೈಟಲ್‌ನಿಂದ ಗಮನ ಸೆಳೆದಿರುವ 'ಸಂಕಷ್ಟಕರ ಗಣಪತಿ' ಸಿನಿಮಾದ ಟ್ರೇಲರ್‌ ಈಗ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದು ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆಯನ್ನು ಆಧರಿಸಿದ ಚಿತ್ರವಾಗಿದೆ. ಈ ಹಿಂದೆ ಪನ್ಮಂಡಿ ಕ್ರಾಸ್‌ ಎಂಬ ಕಿರು ಚಿತ್ರ ಮಾಡಿ ಗಮನ ಸೆಳೆದಿದ್ದ ಅರ್ಜುನ್‌ಕುಮಾರ್‌, ಸಂಕಷ್ಟಕರ ಗಣಪತಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.


ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಲಿಖಿತ್‌ ಶೆಟ್ಟಿ ಈ ಸಿನಿಮಾದ ನಾಯಕ.ಶ್ರುತಿ ಗೋರಾಡಿಯಾ ನಾಯಕಿ.

.

ಈ ಸಿನಿಮಾದ ನಾಯಕನಿಗೆ ಏಲಿಯನ್‌ ಹ್ಯಾಂಡ್‌ ಡಿಸಾರ್ಡರ್‌ ಎಂಬ ಖಾಯಿಲೆ ಬರುತ್ತದೆ. ಈ ಖಾಯಿಲೆ ಪ್ರಪಂಚದಲ್ಲಿ ನೂರು ಜನಕ್ಕೆ ಮಾತ್ರ ಬರುತ್ತದೆ. ಇದಕ್ಕೆ ತುತ್ತಾದ ನಾಯಕನಿಗೆ ಆತನ ಎಡಗೈ ಸಂಪೂರ್ಣ ಹಿಡಿತ ತಪ್ಪುತ್ತದೆ. ಬೇರೆ ಏನೇ ಕೆಲಸ ಮಾಡುತ್ತಿದ್ದರೂ, ಎಡಗೈ ಮಾತ್ರ ಇನ್ನೇನೋ ಕೆಲಸ ಮಾಡುತ್ತಿರುತ್ತದೆ. ಇದರಿಂದ ಆತ ಒಂದಷ್ಟು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾನೆ. ಇದನ್ನೇ ಸಿನಿಮಾದಲ್ಲಿ ನಿರ್ದೇಶಕರು ಕಾಮಿಡಿಯಾಗಿ ಹೇಳಿದ್ದಾರಾಂತೆ.

.

ಮಂಗಳವಾರ ಬಿಡುಗಡೆಯಾಗಿರುವ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗ್ತಿದೆ. ಪ್ರೇಕ್ಷಕರಿಗೆ ಕುತೂಹಲ ಮೂಡಿಸುವಲ್ಲಿ ಚಿತ್ರತಂಡ ಗೆದ್ದಿದೆ.

ಡೈನಮೇಟ್‌ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ರಾಜೇಶ್‌ಬಾಬು, ಫೈಜಾನ್‌ ಖಾನ್‌, ಜೊಡಿದಾರ್‌, ಬಿ.ಎಸ್‌.ಹೇಮಂತ್‌ಕುಮಾರ್‌, ಪ್ರಮೋದ್‌ ನಿಂಬಾಳ್ಕರ್‌, ಎ ಚೆಲುವರಾಜ ನಾಯ್ಡು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top