IB anigif

Ayugya Gif

adweb

udgharsha

 
ಮೊದಲ ಸಂಚಿಕೆಯಲ್ಲಿ ಬಹದ್ದೂರ್‍ ಎಂಟ್ರಿ ಇದೇ ಭಾನುವಾರದಿಂದ ರಾತ್ರಿ 9ಕ್ಕೆ
.
ಕನ್ನಡಕಿರುತೆರೆಯಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ "ಸದಾ ನಿಮ್ಮೊಂದಿಗೆ" ಇದೇ ಭಾನುವಾರದಿಂದರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.
.
ಪ್ರತಿಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೆರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು,ಆಟೋ ಓಡಿಸುವುದು, ಗೋಲಿ ಸೋಡಾ ಮಾರುವುದು,ಸೊಪ್ಪು ಮಾರುವುದು ಪಾನಿ ಪುರಿ,ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‍ವುಡ್‍ ತಾರೆಯರು.
.
"ಸದಾ ನಿಮ್ಮೊಂದಿಗೆ" ಯ ಮುಂಚುಣಿಯನ್ನು ಪಂಚಭಾಷಾತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ “ಜೂಲಿಲಕ್ಮೀ”ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿ ತಮ್ಮ ಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆ ತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.
.
“ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆ ಆದರೆ ಯಾವುದೋ ಸಂದರ್ಭದಲ್ಲಿ ಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನು ಕೊಡುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‍ವುಡ್‍ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡ ಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನಾರ್ಹ” ಎಂದು ಜುಲಿ ಲಕ್ಷ್ಮೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
.
“ಸದಾ ನಿಮ್ಮೊಂದಿಗೆ” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗ ಧ್ರುವ ಸರ್ಜಾ. ಇವರು ನರೇಂದ್ರಕುಮಾರ್ ಎಂಬ ಒಬ್ಬ ಆಟೋ ಡ್ರೈವರ್‍ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ನರೇಂದ್ರ ಕುಮಾರ್‍ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.
.
ಅಟೋ ಓಡಿಸುವ ಮೊದಲು ಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್‍ ಗರ್ಭಿಣಿ ಅವರನ್ನು ಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರ ದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದ ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‍ಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್‍ ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆ ಆಟೋ ಹತ್ತಿದರು. ಹೀಗೆ ದಿನ ಪೂರ್ತಿಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲಕಡೆ ಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರಕುಮಾರ್‍ ಅವರ ಸ್ವಂತ ಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
.
ಈ ಶೋನಲ್ಲಿ ಪ್ರತಿ ವಾರವೂಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ, ಲವ್ಲಿ ಸ್ಟಾರ್ ಪ್ರೇಮ್, ಪ್ರೀಯಾಂಕ ಉಪೇಂದ್ರ, ಪಾರೂಲ್‍ ಯಾದವ್,ವಿಜಯರಾಘವೇಂದ್ರ, ಸೃಜನ್ ಲೋಕೇಶ್, ಮಾನ್ವಿತಾ ಹರೀಶ್,ಪ್ರೀಯಾಮಣಿ, ರಶ್ಮೀಕಾ ಮಂದಣ್ಣ, ರ್ಧನಂಜಯ್, ಚಿರಂಜೀವಿ ಸರ್ಜಾ, ಹೀಗೆ ಇನ್ನೂ ಅನೇಕರು ಭಾಗವಹಿಸಿದ್ದಾರೆ.
.
ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ"ಲೋಕೇಶ್ ಪ್ರೊಡಕ್ಷನ್" ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಆರ್ಥಿಕ ದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆ ದೈರ್ಯ ತುಂಬುವ ಶಕ್ತಿ ನೀಡುವ, ಕಷ್ಟದ ಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯ ರೀಯಾಲಿಟಿ ಅಲ್ಲ್ಲರೀಯಲ್ ಶೋ "ಸದಾ ನಿಮ್ಮೊಂದಿಗೆ" ಪ್ರತಿ ಭಾನುವಾರ(15.7.2018) 9ಕ್ಕೆ ಪ್ರಸಾರವಾಗಲಿದೆ.
#UdayaTv #Cineloka #SadaNimmondige

ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯ ಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ.

.

ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ಕಿರಿಯರವರೆಗೂ ಮನೆಮಂದಿಯೆಲ್ಲಾ ಕೂತು ನೋಡುವಂತ ಶೋ “ಸವಾಲ್ ಗೆ ಸೈ”.

.
ಹಿರಿತೆರೆ ಮತ್ತು ಕಿರುತೆರೆ, ಎರಡರಲ್ಲೂತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯರಾಂ, ಇದೇ ಮೊದಲ ಬಾರಿಗೆ “ಸವಾಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆ ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‍ ದೇಶಪಾಂಡೆ ಸಹ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯ ಆಶಯ.

24ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ನಂದಿನಿ, ಕಾವೇರಿ, ಮಾನಸ ಸರೋವರ,ಜೋಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನರೀತಿಯಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
.
"ಪುನರಪಿ ಮರಣಂ.. ಪುನರಪಿ ಜನನಂ" ಎನ್ನುವುದು ನಮ್ಮ ಭಾರತೀಯ ಸಂಸ್ಕøತಿಯಲ್ಲಿನ ಆಳವಾದ ನಂಬಿಕೆ. ದೇಹ ನಾಶವಾದರೂಆತ್ಮಕ್ಕೆ ವಿನಾಶವಿಲ್ಲಾ ಎನ್ನುವುದು ಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ "ಮಾಯಾ" ಧಾರಾವಾಹಿಯ ಮೂಲ.
ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ. ಅವನ ಆಸೆ ನೆರವೇರದೆ ದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವರಣ ಮಾಯಾ.
ಇಂದಿನ ಜನ್ಮದಲ್ಲಿ ಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರುಜನರೇಈ ಕಥೆಯಕೇಂದ್ರ ಬಿಂದುಗಳು. ಯಾರ ಜೊತೆಗೆ ಯಾರು ಸೇರಿದರೆ ಒಳ್ಳೆಯದನ್ನು ಸಾಧಿಸಬಹುದು? ಯಾರನ್ನ ಯಾರಿಂದ ದೂರಾ ಮಾಡಬೇಕು? ಯಾರಿಂದ ಯಶಸ್ಸು ದೊರೆಯುತ್ತದೆ?ಎನ್ನುವ ಹೋರಾಟವೇ ಕಾಲದ ಹಾಗೂ ಕಾಲಾಂತಕನ ಮಾಯೆ.
.
ಈ ಧಾರಾವಾಹಿಯ ಕಥೆಯೇ ಹೊಸ ರೀತಿಯ ಹಂದರವಾಗಿರುವುದಲ್ಲದೇ..ಅದಕ್ಕೆ ಪೂರಕವಾದ ಜಾಗಗಳು, ಮನಸೆಳೆಯುವ ಗ್ರಾಫಿಕ್ಸ್.. ನವೀನ ಮಾದರಿಯ ತಂತ್ರಜ್ಞಾನದ ಉಪಯೋಗ ಎಲ್ಲವೂ ವೀಕ್ಷಕರನ್ನು ಆಶ್ವರ್ಯಗೊಳ್ಳುವಂತೆ ಮಾಡುತ್ತದೆ. ಪ್ರೀತಿ, ಪ್ರೇಮ ಮತ್ಸರ,ಹಗೆ, ಹಾಸ್ಯ ಹೀಗೆ ಮನರಂಜಿಸಲು ಬೇಕಾಗುವ ಎಲ್ಲ ಅಂಶಗಳೂ ಈ ಧಾರಾವಾಹಿಯಲ್ಲಿ ಅಡಕವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ "ನಂದಿನಿ" ಧಾರಾವಾಹಿಯನ್ನು ನಿರ್ಮಾಣ ಮಾಡುತ್ತೀರುವಅವ್ನಿಟೆಲಿ ಮೀಡಿಯ ಈ "ಮಾಯಾ" ಧಾರಾವಾಹಿಯನ್ನುತಯಾರಿಸುತ್ತಿದ್ದಾರೆ.ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
.
ತಾರಾಗಣದಲ್ಲಿ ಸರಯೂ ಧಾರಾವಾಹಿಯ ಮೂಲಕ ಹೆಸರಾದ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೊರ್ವ ನಾಯಕಿಯಾಗಿ,ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ.ಹಿರಿಯಯ ನಟ ಉಮೇಶ್, ವಿನಯರಾಮ್ ಪ್ರಸಾದ್,ಮೋಹನ್ ಶರ್ಮ, ಅಶೋಕ್ ಮುಂತಾದವರು ಈ ಧಾರಾವಾಹಿಗೆ ಸಾಥ್ ನೀಡಿದ್ದಾರೆ.
.
ಶೀರ್ಷಿಕೆ ಸಂಗೀತ ವನ್ನು ಸತ್ಯ,ಸಂಕಲನವನ್ನು ಶ್ರೀಕಾಂತ್,ಸಾಹಿತ್ಯ-ಸಂಭಾಷಣೆಯನ್ನು ಉದಯ್ ಮತ್ತು ಛಾಯಾಗ್ರಹಣ-ನಿರ್ದೇಶನ: ಭಾನು ಅವರು ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ-ಚಿತ್ರಕತೆ, ಸಲಹೆ-ನಿರ್ಮಾಣ ಸುಂದರ್ ಸಿ ನಿರ್ವಹಿಸುತ್ತಿದ್ದಾರೆ.
ಫ್ಯಾಂಟಸಿ, ಸಾಮಾಜಿಕ ಮೆಗಾಧಾರಾವಾಹಿ "ಮಾಯಾ" ಜುಲೈ 9ರಿಂದ ರಾತ್ರಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
#Maaya #UdayaTv #Cineloka
 
ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ 23 ವರ್ಷಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲುಉದಯ ಟಿವಿ ಸಜ್ಜಾಗಿದೆ. ಒಂದು ರೋಮಾಂಚಕ ಪ್ರೇಮಕಥೆಯಾದ “ಕಣ್ಮಣಿ” ಮಾರ್ಚ್ 19ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 10:00ಕ್ಕೆ ಪ್ರಸಾರವಾಗಲಿದೆ.
“ಕಣ್ಮಣಿ” ಒಂದು ರೋಮಾಂಚಕ, ತ್ರಿಕೋನ ಪ್ರೇಮಕಥೆ. ಹೆಸರೇ ಹೇಳುವಂತೆ ಇದುಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರೋ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿ. ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ನೊಂದ ನಾಯಕಿತನ್ನ ಹೊಸ ಬದುಕು ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆ ಎದುರಾಗುವ ವ್ಯಕ್ತಿಗಳನ್ನು, ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಅನ್ನುವುದೇ ಈ ಕಥೆಯ ತಿರುಳು.
ಕೋಟ್ಯಾಂತರ ರೂಪಾಯಿ ಆಸ್ತಿ ಇರುವ ಒಬ್ಬ ಕಡಕ್ ಬಿಸಿನೆಸ್‍ಮ್ಯಾನ್ ದ್ವಾರಕನಾಥ್‍ಅಲಿಯಾಸ್‍ಡಿ.ಕೆ. “ತಾನುತಪ್ಪು ಮಾಡಲ್ಲ, ತಪ್ಪು ಮಾಡಿದವರನ್ನೂ ಬಿಡಲ್ಲ” ಅನ್ನೋದು ಇವನ ಘೋಷವಾಕ್ಯ. ಹೆಂಡತಿಕಾವ್ಯ ಸತ್ತು ನಾಲ್ಕು ವರ್ಷಗಳಾದರೂ ಇನ್ನೊಂದು ಮದುವೆಯಾಗದೆ ಅವಳ ನೆನಪಲ್ಲಿಇರೋಅಮರ ಪ್ರೇಮಿ. ಮಡದಿ ಮುಮತಾಜ್‍ಗಾಗಿ ಶಹಜಾನ್‍ ತಾಜ್ ಮಹಲ್ ಕಟ್ಟಿಸಿದ್ರೆ, ಡಿಕೆ ಹೆಂಡತಿ ಮೇಲಿನ ಪ್ರೀತಿಗೆಕಾವ್ಯ ಮಹಲ್ ಕಟ್ಟಿಸಿ ಇತಿಹಾಸ ಸೃಷ್ಟಿಸಲು ಹೊರಟವನು. ಅದಕ್ಕಾಗಿ ಏನೂ ಬೇಕಾದ್ರೂ ಮಾಡಲು ಸಿದ್ಧ ಇವನು. ಮುಂದೊಂದು ದಿನ ತನ್ನ ಹೆಂಡತಿಯ ರೂಪವುಳ್ಳ ಹುಡುಗಿಯೊಬ್ಬಳು ಇವನಿಗೆ ಎದುರಾಗುತ್ತಾಳೆ. ಅವಳು ಅವನ ಹೆಂಡಿತಿಯೇ, ಸತ್ತಿರುವವಳು ಎದುರಿಗೆ ಬರಲು ಹೇಗೆ ಸಾಧ್ಯಾ? ಅಥವಾ ಅವಳೇ ಬೇರೆನಾ? ಇದು ಇವನ ಕಥೆ.
ಕಣ್ಮಣಿಯ ಇನ್ನೊಬ್ಬ ನಾಯಕ ಕಿಶನ್. ತುಂಬು ಕುಟುಂಬದಲ್ಲಿ ಬೆಳದಿರೋ ಇವನು ಸಂಸ್ಕಾರವಂತನೂ, ತುಂಟನೂ ಹೌದು. ಸ್ವಂತಃ ಕಂಪನಿ ಇದ್ರೂ ಪ್ರೀತಿಗಾಗಿ ಕೂಲಿ ಕೆಲಸ ಮಾಡೋಕು ಸಿದ್ಧ. ನಾಯಕಿಯ ಒಳ್ಳೆತನಕ್ಕೆ ಮನಸೋಲುವ ಕಿಶನ್ ಅವಳ ಮುಂದೆ ಪ್ರೇಮ ಭಿಕ್ಷೆ ಬೇಡುತ್ತಾನೆ. ನಾಯಕಿ ತನ್ನ ಜೀವನದಲ್ಲಿ ನಡೆದಘಟನೆ ಹೇಳಿ ಅವನಿಂದದೂರ ಹೋಗ್ತಾಳೆ. ಕಿಶನ್‍ ತನ್ನ ಪ್ರೀತಿಯನ್ನ ಹೇಗೆ ಪಡೆಯುತ್ತಾನೆ, ನಾಯಕಿ ಅವನಿಗೆ ಸಿಗುತ್ತಾಳಾ? ಅನ್ನೋದು ಇವನ ಕಥೆ.
ಪ್ರತೀ ಸಂಚಿಕೆಯಲ್ಲೂ ಕುತುಹಲಕಾರಿ ತಿರುವುಗಳನ್ನು ಹೊಂದಿದ್ದು, ಡಿಕೆ, ಅಂಜಲಿ, ಕಿಶನ್ ಈ ಮೂವರ ನಡುವೆ ನಡೆಯುವ ರೋಮಾಂಚಕ ಪ್ರೇಮಕಥೆಯೇಕಣ್ಮಣಿ. ಇಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಔಚಿತ್ಯವನ್ನು ಹೊಂದಿರುವುದು ಈ ಕಥೆಯ ವಿಶೇಷ.
ಕಣ್ಮಣಿ “ಪಾರಿಜಾತ ಟೆಲಿ ಎಂಟರ್‍ಟ್ರೆನರ್ಸ್” ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಚಿತ್ರಕಥೆದೇವ್, ವೆಂಕಟ್‍ರಾಮ್‍ ಅವರದ್ದು, ಸಂಭಾಷಣೆರೂಪಾ ಪ್ರಭಾಕರ್, ಎಸ್. ಎಂ.ಪಾಟೀಲ್, ರಾಜಶೇಖರ್ ಬರೆಯುತ್ತಿದ್ದಾರೆ. ನಿರ್ದೇಶಕ ಪೃಥ್ವಿರಾಜ್‍ ಕುಲ್‍ಕರ್ಣಿ ಅವರು ನಿರ್ದೇಶಿಸುತ್ತಿದ್ದು, ಜೀವ ಅವರು ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ದಿವ್ಯಾ ಶೈಲೇಶ್ ನಾಯಕಿಅಂಜಲಿ ಪಾತ್ರ ನಿಭಾಯಿಸುತ್ತಿದ್ದಾರೆ, ಕಿರುತೆರೆಗೆ ಈಗ ತಾನೆ ಕಾಲಿಟ್ಟ ದರ್ಶಕ್‍ಗೌಡ ‘ಡಿ.ಕೆ’ ಪಾತ್ರ ಹಾಗೂ ಇನ್ನೊಬ್ಬ ನಾಯಕ ‘ಕಿಶನ್’ ಪಾತ್ರವನ್ನು ನಂದೀಶ್‍ ಅಂದಗಾರ ಮಾಡುತ್ತಿದ್ದಾರೆ. ಬೆಂಗಳೂರು ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ, ನಾಯಕ್, ಸುಜಾತ, ಬೇಬಿ ಶ್ರೀಲಕ್ಷ್ಮಿ, ಸಿಂಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ತಾರಾಬಳಗವೂ ಶಕ್ತವಾಗಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ನಿರೀಕ್ಷಿತ ಫಲಿತಾಂಶವೇ ಬಂದಿದ್ದು, ಕನ್ನಡ ಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು. ಹಾಗೆ ಕಣ್ಮಣಿ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಸುಕನ್ಯಾ ಹಾಸನ್ ಬರೆದಿದ್ದು, ಶ್ರೀಧರ್ ಸಂಭ್ರಮ್, ಹಿತನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ತ್ರಿಕೋನ ಕಥೆಯ “ಕಣ್ಮಣಿ” ಇದೇ ಮಾರ್ಚ್ 19ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.00ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
 
#Kanmani #Cineloka #UdayaTV

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top